ರಾಜಕೀಯ ಸಮಯ ಹಾಗು ಗುಣಮಟ್ಟದ ಪರಿಶ್ರಮವನ್ನು ಮೀಸಲಿಟ್ಟು, ಆರೋಗ್ಯ ಹಾಗಯ ಶೌಚದ ಕುರಿತಂತೆ ದೊಡ್ಡ ಮಟ್ಟದ ಅಭಿಯಾನವನ್ನೇ ಆರಂಭಿಸಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿರನ್ನು ವಿಶ್ವ ಸಂಸ್ಥೆಯ ಅಂಗವಾದ ಯುನಿಸೆಫ್ ಶ್ಲಾಘಿಸಿದೆ.
ಈ ಕುರಿತು ಮಾತನಾಡಿದ ಯುನಿಸೆಫ್ ಕಾರ್ಯನಿರ್ವಾಹಕ ನಿರ್ದೇಶಕಿ ಹೆನ್ರಿಯೆಟ್ಟಾ ಫೋರೆ, “ಶೌಚ ಹಾಗು ಸ್ವಾಸ್ಥ್ಯದ ಮೇಲೆ ಒಂದು ಡಾಲರ್ ಹೂಡಿಕೆ ಮಾಡಿದಲ್ಲಿ, ಆರೋಗ್ಯ ಸುಧಾರಿಸುವ ಮೂಲಕ ವೈದ್ಯಕೀಯ ವೆಚ್ಚದಲ್ಲಿ ನಾಲ್ಕು ಡಾಲರ್‌ಗಳಷ್ಟು ಉಳಿತಾಯ ಮಾಡಬಹುದಾಗಿದೆ” ಎಂದು ಹೇಳಿದ್ದಾರೆ.
ಯುನಿಸೆಫ್ ಹಾಗು ರಾಷ್ಟ್ರೀಯ ಶೇರು ಪೇಟೆ ಆಯೋಜಿಸಿದ್ದ ಜಂಟಿ ಕಾರ್ಯಕ್ರಮದಲ್ಲಿ ಫೋರೆ ಭಾಗವಹಿಸಿ ಮಾತನಾಡಿ, “ರಾಜಕೀಯ ಸಮಯ ಹಾಗು ಶ್ರಮದಾನವನ್ನು ಪ್ರಧಾನ ಮಂತ್ರಿ ಹೂಡಿದ್ದಾರೆ. ಸ್ವಚ್ಛ ಭಾರತ ಅಭಿಯಾನವನ್ನು ಮಹಾತ್ಮಾ ಗಾಂಧಿ ಹೆಸರಿನಲ್ಲಿ ಮಾಡುವ ಮೂಲಕ ಇನ್ನಷ್ಟು ಹೆಮ್ಮೆಪಡುವ ಕೆಲಸಕ್ಕೆ ಮುಂದಾಗಿದ್ದಾರೆ” ಎಂದು ಸ್ವಚ್ಛ ಭಾರತ ಅಭಿಯಾನದ ಕುರಿತಾಗಿ ಮಾತನಾಡಿದ್ದಾರೆ.
ರಸ್ತೆಗಳು, ಬೀದಿಗಳು ಸೇರಿದಂತೆ ದೇಶದ ಮೂಲಸೌಕರ್ಯಗಳನ್ನು ಸ್ವಚ್ಛವಾಗಿಡುವ ಉದ್ದೇಶದಿಂದ 2014ರಲ್ಲಿ ಸ್ವಚ್ಛ ಭಾರತ ಅಭಿಯಾನಕ್ಕೆ ಮುನ್ನುಡಿ ಬರೆಯಲಾಗಿದೆ. ಆರೋಗ್ಯಕರ ಭಾರತ ನಿರ್ಮಾಣದಲ್ಲಿ ಮಹತ್ವದ ಪಾತ್ರ ನಿರ್ವಹಿಸಿರುವ ಸ್ವಚ್ಛ ಭಾರತ ಅಭಿಯಾನದ ಮೂಲಕ ದೇಶದಲ್ಲಿ 38%ನಷ್ಟಿದ್ದ ಶೌಚಾಲಯದ ಲಭ್ಯತೆ ಇಂದು 80%ಗೆ ಏರಿಕೆ ಕಂಡಿದೆ.
ಪರಿಸರ ರಕ್ಷಣೆಗಾಗಿ ಸೋಲಾರ್ ಸೇರಿದಂತೆ ಇತರ ಶುದ್ಧ ಮೂಲಗಳಿಂದ ಇಂಧನ ಉತ್ಪಾದನೆ ಮಾಡುವ ನಿಟ್ಟಿನಲ್ಲಿ ಭಗೀರಥ ಯತ್ನಕ್ಕೆ ಮುಂದಾಗಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗು ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್‌ಗೆ ” ಚಾಂಪಿಯನ್ಸ್ ಆಫ್ ಅರ್ಥ” ಗೌರವ ನೀಡುವ ಮೂಲಕ ಸನ್ಮಾನಿಸಿದೆ.
No comments:
Post a Comment