ಜೂನ್ ನಲ್ಲಿ ನಡೆದ ಕೆ.ಎ.ಎಸ್. ಪರೀಕ್ಷೆಯ ಎರಡು ಪ್ರಶ್ನೆಪತ್ರಿಕೆಗಳಿಗೆ ಮಾತ್ರ ಉತ್ತರಗಳನ್ನ ನೀಡಲಾಗಿದ್ದು, ಇನ್ನುಳಿದ ಪ್ರಶ್ನೆಪತ್ರಿಕೆಗಳನ್ನ ಬೆರಳಚ್ಚಿಸುವ ಕಾರ್ಯ ಭರದಿಂದ ಸಾಗಿದೆ.. ಶೀಘ್ರದಲ್ಲೇ ಈ ತಾಣ ಸಮಗ್ರವಾಗಲಿದೆ. ನಿಮ್ಮ ಸಹಕಾರ, ಪ್ರೋತ್ಸಾಹಕ್ಕೆ ಪ್ರಶ್ನೋತ್ತರ ತಂಡ ಕೃತಜ್ಞತೆ ಸಲ್ಲಿಸುತ್ತದೆ.

ಆತ್ಮೀಯ ಸ್ಪರ್ಧಾರ್ಥಿಗಳೇ, ಎಲ್ಲ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವಂತೆ ಮಾಹಿತಿ ನೀಡಲಾಗುತ್ತಿದೆ.https://t.me/kpsc2019 ಭಾರತೀಯ ವಾಯುಪಡೆಗೆ 86ನೇ ವಾರ್ಷಿಕೋತ್ಸವ | General Knowledge in Kannada
https://www.highrevenuegate.com/dst1z9b3?key=96fa453e5c910a6715da3b114f6d9e35

RECENT POSTS

6

https://www.videosprofitnetwork.com/watch.xml?key=35286665df409d9f630563e3a619eb10

ಇತ್ತೀಚಿನ ಸುದ್ದಿ...Recent Notes

8

https://www.highrevenuegate.com/his7kbtc7?key=50a282e312a45be4aa549d301f853be2

Monday, October 08, 2018

ಭಾರತೀಯ ವಾಯುಪಡೆಗೆ 86ನೇ ವಾರ್ಷಿಕೋತ್ಸವ

  Pundalik       Monday, October 08, 2018
೧೯೩೨ ರಲ್ಲಿ ಅಸ್ತಿತ್ವಕ್ಕೆ ಬ೦ದ ವಾಯುಸೇನೆಯ ನ೦. ಸ್ಕ್ವಾಡ್ರನ್ ೧೯೩೩ ರಲ್ಲಿ ಕರಾಚಿಯಲ್ಲಿ ಕಾರ್ಯಸ್ಥಿತಿಗೆ ಬ೦ದಿತು. ಆಗ ಇದ್ದದ್ದು ಕೇವಲ ಐದು ಪೈಲಟ್ ಗಳು! ಕೇವಲ ನಾಲ್ಕು ವಪೀಟೀ ವಿಮಾನಗಳನ್ನು ಹೊ೦ದಿದ್ದ ವಾಯುಸೇನೆ ಇ೦ದು ೨೦೦೦ ಕ್ಕೂ ಹೆಚ್ಚು ಯುದ್ಧವಿಮಾನಗಳನ್ನು ಹೊಂದಿದೆ.
ಮೊದಲ ಪೈಲಟ್ ಗಳು
ಭಾರತೀಯ ವಾಯುಸೇನೆಯ ಮೊದಲ ಐದು ಪೈಲಟ್ಗಳು ಹೆ ಸಿ ಸರ್ಕಾರ್, ಸುಬ್ರೊತೊ ಮುಖರ್ಜೀ, ಭೂಪೇ೦ದ್ರ ಸಿ೦ಗ್, ಬ್ ಅವನ್ ಮತ್ತು ಅಮರ್ಜೀತ್ ಸಿ೦ಗ್. ೧೯೩೩ ರಲ್ಲಿ ಸೇರಿದ ಐವರಲ್ಲಿ ಭೂಪೇ೦ದ್ರ ಸಿ೦ಗ್ ಮತ್ತು ಅಮರ್ಜೀತ್ ಸಿ೦ಗ್ ವಿಮಾನ ಅಪಘಾತಗಳಲ್ಲಿ ಮೃತರಾದರು. ಸರ್ಕಾರ್ ಒಂದು ವರ್ಷದೊಳಗೇ ವಾಯುಸೇನೆಯನ್ನು ಬಿಟ್ಟರು. ಬಿ ಅವನ್ ಭಾರತದ ವಿ೦ಗಡಣೆಯ ನಂತರ ಪಾಕಿಸ್ತಾನವನ್ನು ಸೇರುವುದಾಗಿ ನಿರ್ಧರಿಸಿದರು. ಸುಬ್ರೊತೊ ಮುಖರ್ಜಿ ಮುಂದೆ ಭಾರತೀಯ ಸೇನೆಯ ಮೊದಲ ಮುಖ್ಯಸ್ಥರಾದರು.
ಎರಡನೆಯ ಮಹಾಯುದ್ಧದ ಮೊದಲು ಇನ್ನಷ್ಟು ವಿಮಾನಗಳು ಮತ್ತು ಪೈಲಟ್ಗಳು ವಾಯುಸೇನೆಯನ್ನು ಸೇರಿದರು.
ಎರಡನೇ ಮಹಾಯುದ್ಧ
ಭಾರತೀಯ ಸೈನ್ಯ ಎರಡನೇ ಮಹಾಯುದ್ಧದಲ್ಲಿ ಅತಿ ದೊಡ್ಡ ಸ್ವಯಂಸೇವಕ ಪಡೆ ಎಂಬುದು ಹೆಚ್ಚು ಜನರಿಗೆ ತಿಳಿದಿಲ್ಲ. ಒಟ್ಟು ಕೋಟಿ ಭಾರತೀಯ ಸೈನಿಕರು ಪಾಲ್ಗೊಂಡ ಯುದ್ಧದಲ್ಲಿ ಭಾರತೀಯ ವಾಯುಸೇನೆಯೂ ಪಾಲ್ಗೊಂಡಿತು.
೧೯೪೭-೪೮ ಕಾಶ್ಮೀರ ಯುದ್ಧ
ಅಕ್ಟೋಬರ್ ೨೦, ೧೯೪೭ ರಲ್ಲಿ ಪಾಕಿಸ್ತಾನದಿ೦ದ ಸಹಾಯ ಪಡೆದ ಪಠಾಣರ ದಳವೊ೦ದು ಕಾಶ್ಮೀರದೊಳಕ್ಕೆ ನುಗ್ಗಿತು. ಕಾಶ್ಮೀರದ ಮಹಾರಾಜರಾದ ಹರಿ ಸಿ೦ಗ್ ಭಾರತದ ಸಹಾಯ ಕೋರಿದರು. ಕಾಶ್ಮೀರ ಭಾರತಕ್ಕೆ ಸೇರಬೇಕೆ೦ಬ ಶರತ್ತಿನ ಸಹಾಯ ನೀಡಿದ ಭಾರತ, ವಾಯುಸೇನಯ ವಿಮಾನಗಳ ಮೂಲಕ ತನ್ನ ಸೈನಿಕರನ್ನು ಕಾಶ್ಮೀರಕ್ಕೆ ಸಾಗಿಸಿತು. ಡಿಸ೦ಬರ್ ೩೧, ೧೯೪೮ ರಲ್ಲಿ ಯುದ್ಧ ಕೊನೆಗೊ೦ಡಿತು. ವಾಯುಸೇನೆ ನೇರವಾಗಿ ಯುದ್ಧದಲ್ಲಿ ಪಾಲ್ಗೊಳ್ಳುವ ಸಂದರ್ಭ ಯುದ್ಧದಲ್ಲಿ ಉ೦ಟಾಗಲಿಲ್ಲ.
೧೯೬೧ ಕಾ೦ಗೋ
ಜೂನ್ ೩೦, ೧೯೬೦ ರಲ್ಲಿ ಕಾ೦ಗೋ ದೇಶದ ಮೇಲಿನ ಬೆಲ್ಜಿಯಮ್ ಆಡಳಿತ ಹಠಾತ್ತಾಗಿ ಕೊನೆಗೊ೦ಡಿತು. ಆಗ ಅಲ್ಲಿ ಶಾ೦ತಿ ನಿರ್ವಹಣಾ ಕಾರ್ಯಕ್ಕೆ ವಿಶ್ವಸ೦ಸ್ಥೆ ಸಹಾಯವನ್ನು ಕೋರಿತು. ಭಾರತದ ಪ್ರಧಾನಿ ಜವಾಹರಲಾಲ್ ನೆಹರು ಭಾರತೀಯ ವಾಯುಸೇನೆಯ ವಿಮಾನಗಳು ಮತ್ತು ಸೈನಿಕರನ್ನು ಒದಗಿಸಿದರು. ಕೆನ್ಬೆರ್ರಾ ಯುದ್ಧವಿಮಾನ ಕಾಲದಲ್ಲಿ ಉಪಯೋಗಿತವಾಯಿತು.
ವಾಯು ಸೇನೆ ಮುಖ್ಯಸ್ಥರು
·         31 Dec, 2016
·         ವಾಯುಪಡೆಯ ಮುಖ್ಯಸ್ಥರಾಗಿ ಬೀರೇಂದರ್ ಸಿಂಗ್ ಧನೋವಾ ಅವರು 31 Dec, 2016 ಶನಿವಾರ ಅಧಿಕಾರ ಸ್ವೀಕರಿಸಿದರು. ಬಿಪಿನ್ ಅವರು ಸೇನೆಯ 27ನೇ ಮುಖ್ಯಸ್ಥರಾಗಿದ್ದರೆ, ಧನೋವಾ ಅವರು ವಾಯುಪಡೆಯ 25ನೇ ಮುಖ್ಯಸ್ಥರಾಗಿದ್ದಾರೆ. ವಾಯುಪಡೆ, ಸೇನೆಯ ಹೊಸ ಮುಖ್ಯಸ್ಥರ ಅಧಿಕಾರ ಸ್ವೀಕಾರ;ಪಿಟಿಐ;1 Jan, 2017]
೧೯೬೫ ಭಾರತ-ಪಾಕಿಸ್ತಾನ ಯುದ್ಧ
೧೯೭೧ ಭಾರತ ಪಾಕಿಸ್ತಾನ ಯುದ್ಧ
ವಾಯುಸೇನೆಯ ವಿಮಾನಗಳು
ತೇಜಸ್ -HAL Tejas
ಬಾ೦ಬರ್ ಗಳು
·         ಲಿಬರೇಟರ್
·         ಕೆನ್ಬೆರ್ರಾ
ಫೈಟರ್ ಗಳು
·         ಸುಖೋಯಿ Su-30MKI
·         ಮಿರಾಜ್ 2000H
·         ಜಾಗ್ವಾರ್ IS
·         ಜಾಗ್ವಾರ್ IM
·         ಮಿಗ್-೨೯ (Fulcrum)
·         ಮಿಗ್-೨೭ ML (Flogger)
·         ಮಿಗ್-೨೫ U (Foxbat)
·         ಮಿಗ್-೨೫ R (Foxbat)
·         ಮಿಗ್-೨೩ MF (Flogger)
·         ಮಿಗ್-೨೩ BN (Flogger)
·         ಮಿಗ್-೨೧ Bison (Fishbed)
·         ಮಿಗ್-೨೧ Bis (Fishbed)
·         ಮಿಗ್-೨೧ M (Fishbed)
·         ಮಿಗ್-೨೧ MF(Fishbed)
·         ಮಿಗ್-೨೧ FL(Fishbed)
·         ಮಿಗ್-೨೧ PF(Fishbed)
·         ಮಿಗ್-೨೧ F-13(Fishbed)
ಹೆಲಿಕಾಪ್ಟರ್ ಗಳು
·         HAL ಧ್ರುವ
·         HAL ಚೀತಾ
·         HAL ಚೇತಕ್
ತರಬೇತಿ ವಿಮಾನಗಳು
·         BAE Hawk
·         HAL HJT-16 ("ಕಿರಣ್")
·         HAL HPT-32 ("ದೀಪಕ್")
ಬರಲಿರುವ ವಿಮಾನಗಳು
·         HAL ತೇಜಸ್ (ಹಗುರ ಯುದ್ಧ ವಿಮಾನ)
·         HAL ಹೆಚ್-ಜೆ-ಟಿ ೩೬ (ತರಬೇತಿ ವಿಮಾನ)
ಮಿಗ್21 ಯುದ್ಧ ವಿಮಾನ ಅಪಘಾತ
ಮಿಗ್ 21 ಎಂ.ಎಫ್
·         ಭಾರತೀಯ ವಾಯುಪಡೆಯಲ್ಲಿ ಬಳಸಿದ ಮೊದಲ ಸೂಪರ್ಸಾನಿಕ್ಜೆಟ್ಯುದ್ಧ ವಿಮಾನ. 1971 ಬಾಂಗ್ಲಾ ವಿಮೋಚನಾ ಯುದ್ಧ ಮತ್ತು 1999 ಕಾರ್ಗಿಲ್ಯುದ್ಧಗಳ ಗೆಲುವಿನಲ್ಲಿ ವಿಮಾನಗಳು ಮಹತ್ವದ ಪಾತ್ರ ವಹಿಸಿವೆ.
·         ವಿಶ್ವದಲ್ಲೇ ಹೆಚ್ಚಿನ ಸಂಖ್ಯೆಯಲ್ಲಿರುವ ಯುದ್ಧ ವಿಮಾನಗಳ ಪೈಕಿ ಸೋವಿಯತ್ ರಷ್ಯಾದ ಮಿಗ್‌–21 ವಿಮಾನಕ್ಕೆ ಅಗ್ರ ಸ್ಥಾನ. 1955ರಲ್ಲಿ ತಯಾರಾದ ವಿಮಾನ ಈಗಲೂ ಬೇರೆ ಬೇರೆ ರಾಷ್ಟ್ರಗಳ ವಾಯುಪಡೆಗಳಲ್ಲಿ ಸೇವೆ ಸಲ್ಲಿಸುತ್ತಿವೆ. ಭಾರತೀಯ ವಾಯುಪಡೆಯಲ್ಲೂ ಮಿಗ್‌–21 ತುಕಡಿಗಳಿವೆ.
·         ನಿವೃತ್ತಿಯ ಅಂಚಿನಲ್ಲಿರುವ ವಿಮಾನಗಳು ಪದೇ ಪದೇ ಅಪಘಾತಕ್ಕೆ ಈಡಾಗುತ್ತಿವೆ. ಅವಧಿ ಮುಗಿದ ನಂತರವೂ ಅವನ್ನು ಬಳಸುತ್ತಿರುವುದು ಅಪಘಾತಕ್ಕೆ ಪ್ರಮುಖ ಕಾರಣ ಎಂಬ ಅಭಿಪ್ರಾಯ ತಜ್ಞರಿಂದ ವ್ಯಕ್ತವಾಗಿದೆ.
ಭಾರತೀಯ ಸೇನೆಯಲ್ಲಿ ಸೇವೆ
ಯುದ್ಧವಿಮಾನ ಎಂ.ಎಫ್ ಬೈಸನ್ (Sheeju mig21)
·         ಭಾರತೀಯ ವಾಯುಪಡೆಯಲ್ಲಿ ಬಳಸಿದ ಮೊದಲ ಸೂಪರ್ಸಾನಿಕ್ಜೆಟ್ಯುದ್ಧ ವಿಮಾನ. 1971 ಬಾಂಗ್ಲಾ ವಿಮೋಚನಾ ಯುದ್ಧ ಮತ್ತು 1999 *ಕಾರ್ಗಿಲ್ಯುದ್ಧಗಳ ಗೆಲುವಿನಲ್ಲಿ ವಿಮಾನಗಳು ಮಹತ್ವದ ಪಾತ್ರ ವಹಿಸಿವೆ. 1990 ದಶಕದಲ್ಲೇ ಇವುಗಳನ್ನು ಸೇವೆಯಿಂದ ನಿವೃತ್ತಿಗೊಳಿಸಬೇಕಾಗಿತ್ತು. ಆದರೆ ಇವುಗಳಿಗೆ ಸರಿಸಮನಾದ ಯುದ್ಧ ವಿಮಾನ ವಾಯುಪಡೆಯಲ್ಲಿ ಇಲ್ಲದ ಕಾರಣ ಇವುಗಳ ಸೇವೆಯನ್ನು ಮುಂದುವರೆಸಲಾಗಿದೆ.
·         ಮಿಗ್‌–21 ಎಂಎಫ್ಮತ್ತು ಮಿಗ್ –21 ಬಿಸನ್ಎಂಬ ಎರಡು ಅವತರಣಿಕೆಯ ವಿಮಾನಗಳು ಸೇವೆಯಲ್ಲಿದ್ದವು. ಈಗ ಎಂಎಫ್ಸರಣಿಯ ವಿಮಾನಗಳನ್ನು ನಿವೃತ್ತಿ ಮಾಡಲಾಗಿದೆ. ಎಚ್ಎಎಲ್ತಯಾರಿಸಿದ ಎಚ್ಎಎಲ್ ತೇಜಸ್ ಲಘು ಯುದ್ಧ ವಿಮಾನಗಳು ಸೇವೆಗೆ ಲಭ್ಯವಾದ ನಂತರ ಬಿಸನ್ಸರಣಿಯ ಮಿಗ್‌–21ಗಳನ್ನೂ ಸೇವೆಯಿಂದ ನಿವೃತ್ತಿಗೊಳಿಸಲಾಗುತ್ತದೆ.ಶ್ರೀನಗರ: (ತಾಂತ್ರಿಕ ಸಮಸ್ಯೆಯಿಂದ ಮಿಗ್–21 ಯುದ್ಧ ವಿಮಾನವು ತುರ್ತು ಭೂಸ್ಪರ್ಶ ಮಾಡಿರುವ ಘಟನೆ ಮಂಗಳವಾರ 20 Sep, 2016 ನಂದು ಶ್ರೀನಗರ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಘಟನೆಯಲ್ಲಿ ಫೈಲಟ್ ಸೇರಿದಂತೆ ಯಾರಿಗೂ ಅಪಾಯ ಆಗಿಲ್ಲ ಎಂದು ಮೂಲಗಳು ತಿಳಿಸಿವೆ.
ವಿವರ
·         ತಯಾರಿಕಾ ಸಂಸ್ಥೆ: ಸೋವಿಯತ್ಒಕ್ಕೂಟದ ಮಿಕೊಯಾನ್ ಗೌರೆವಿಚ್
·         ತಾಂತ್ರಿಕ ವಿವರ
·         15.7 ಮೀಟರ್ ಉದ್ದ
·         4.5 ಮೀಟರ್ ಎತ್ತರ
·         7.15 ಮೀಟರ್ ರೆಕ್ಕೆಗಳ ಅಗಲ
·         6,050 ಕೆ.ಜಿ ಖಾಲಿ ತೂಕ
·         10,050 ಕೆ.ಜಿ ಭರ್ತಿ ತೂಕ
·         14 ಸಾವಿರಕ್ಕಿಂತ ಹೆಚ್ಚು ವಿಮಾನ ತಯಾರಿ
·         2,050 ಕಿ.ಮೀ ವೇಗ
·         54,500 ಅಡಿ ಎತ್ತರದಲ್ಲಿ ಹಾರಾಟ ನಡೆಸುವ ಸಾಮರ್ಥ್ಯ
·         54,500 ಅಡಿ ಎತ್ತರದಲ್ಲಿ ಹಾರಾಟ ನಡೆಸುವ ಸಾಮರ್ಥ್ಯ
ಸೇರ್ಪಡೆ ಮತ್ತು ಸೇವೆಯಿಂದ ನಿವೃತ್ತಿ
·         1963ರಲ್ಲಿ ಭಾರತೀಯ ವಾಯುಪಡೆಗೆ ಮಿಗ್ಯುದ್ಧವಿಮಾನಗಳ ಸೇರ್ಪಡೆ
·         872 ಮಿಗ್–21 ಎಂಎಫ್ಮತ್ತು ಮಿಗ್‌–21 ಬಿಸನ್ವಿಮಾನಗಳ ಸಂಖ್ಯೆ
·         485 ಈವರೆಗೆ ಪತನವಾಗಿರುವ ಎರಡೂ ಅವತರಣಿಕೆಯ ವಿಮಾನಗಳ ಸಂಖ್ಯೆ
·         171 ಪತನಗಳಲ್ಲಿ ಮೃತಪಟ್ಟಿರುವ ಪೈಲಟ್ಗಳ ಸಂಖ್ಯೆ
·         2013 ಡಿಸೆಂಬರ್ಮಿಗ್‌–21 ಎಂಎಫ್ವಿಮಾನಗಳು ಸೇವೆಯಿಂದ ನಿವೃತ್ತಿ
·         8 ಪತನ ಸಂಬಂಧಿ ಘಟನೆಗಳಲ್ಲಿ ಮೃತಪಟ್ಟ ತುರ್ತು ಸೇವೆಗಳ ಸಿಬ್ಬಂದಿ
·         40 ಪತನಗಳಲ್ಲಿ ಮೃತಪಟ್ಟ ನಾಗರಿಕರು
·         150 ಈಗ ಸೇವೆಯಲ್ಲಿರುವ ಮಿಗ್–21 ಬಿಸನ್ ವಿಮಾನಗಳ ಸಂಖ್ಯೆ
·         2022‌ ಮಿಗ್‌–21 ವಿಮಾನಗಳು ಸಂಪೂರ್ಣವಾಗಿ ಸೇವೆಯಿಂದ ನಿವೃತ್ತಿಯಾಗಲಿವೆ
ದಸ್ಸಾಲ್ಟ ರಾಫೇಲ್ ಯುದ್ಧವಿಮಾನ ೨೦೧೧ರ ಪ್ರದರ್ಶನದಲ್ಲಿ (at Aero India 2011 -8th edition of Aero India)
·         ಫೇಲ್ ಯುದ್ಧ ವಿಮಾನಗಳ ಖರೀದಿಗೆ ರೂ.59 ಸಾವಿರ ಕೋಟಿ ಮೊತ್ತದ ಒಪ್ಪಂದಕ್ಕೆ ಭಾರತ ಮತ್ತು ಫ್ರಾನ್ಸ್ದಿ.23 Sep 2016:ಶುಕ್ರವಾರ ಸಹಿ ಮಾಡಿದವು. ಅತ್ಯಾಧುನಿಕ ಕ್ಷಿಪಣಿ ಹಾಗೂ ಶಸ್ತ್ರಾಸ್ತ್ರ ಹೊತ್ತೊಯ್ಯುವ ಸಾಮರ್ಥ್ಯ ಇರುವ ಯುದ್ಧ ವಿಮಾನ, ಭಾರತೀಯ ವಾಯುಪಡೆಗೆ ಪಾಕಿಸ್ತಾನಕ್ಕಿಂತ ಹೆಚ್ಚಿನ ಸಾಮರ್ಥ್ಯವನ್ನು ನೀಡಲಿದೆ ಎನ್ನಲಾಗಿದೆ. ಭಾರತದ ರಕ್ಷಣಾ ಸಚಿವ ಮನೋಹರ ಪರಿಕ್ಕರ್ ಮತ್ತು ಫ್ರಾನ್ಸ್ ರಕ್ಷಣಾ ಸಚಿವ ಜೀನ್ ಯವೆಸ್ಲೆ ಡ್ರಿಯಾನ್ ಅವರ ಸಮ್ಮುಖದಲ್ಲಿ ಒಪ್ಪಂದ ನಡೆದಿದೆ. 16 ತಿಂಗಳ ಹಿಂದೆ ಫ್ರಾನ್ಸ್ಗೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, 36 ರಫೇಲ್ ಯುದ್ಧ ವಿಮಾನಗಳನ್ನು ಖರೀದಿಸಲಾಗುವುದು ಎಂದು ಘೋಷಿಸಿದ್ದರು.[]
·         ಫ್ರೆಂಚ್ ರಕ್ಷಣಾ ಸಚಿವ ಜೀನ್ ಯೆಸ್ ಲೆ ಡ್ರಿಯಾನ್ ಅವರು ನವದೆಹಲಿಗೆ ಆಗಮಿಸುತ್ತಿದ್ದು ಬಹುನಿರೀಕ್ಷಿತ ರಫೆಲ್ ಜೆಟ್ ಒಪ್ಪಂದಕ್ಕೆ ಭಾರತದ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಸಹಿಹಾಕಿದ್ದಾರೆ. ಫ್ರಾನ್ಸ್ ನೊಂದಿಗೆ ಚೌಕಾಶಿ ಮೂಲಕ ಭಾರತ 7.8 ಬಿಲಿಯನ್ ಯುರೋಗಳಿಗೆ 36 ರಾಫೆಲ್ ಜೆಟ್ ಗಳನ್ನು ಖರೀದಿಸುವುದು ಅಂತಿಮವಾಗಿದ್ದು, ಒಪ್ಪಂದ ಪ್ರಕ್ರಿಯೆಯಲ್ಲಿ ರಾಫೆಲ್ ಜೆಟ್ ತಯಾರಕ ಸಂಸ್ಥೆ ಡಸ್ಸಾಲ್ಟ್ ಏವಿಯೇಷನ್ ಸೇರಿದಂತೆ ಫ್ರೆಂಚ್ ಹಲವು ಸಂಸ್ಥೆಗಳ ಸಿಇಒ ಗಳು ಭಾಗಿಯಾಗಲಿದ್ದಾರೆ.
·         ಯುಪಿಎ ಸರ್ಕಾರದ ಅವಧಿಯಲ್ಲಿ ಮಾಡಿಕೊಳ್ಳಲಾಗಿದ್ದ ಒಪ್ಪಂದವನ್ನು ಮೋದಿ ಸರ್ಕಾರ ರದ್ದುಗೊಳಿಸಿ ಹೊಸ ಒಪ್ಪಂದಕ್ಕೆ ಮುಂದಾಗಿದ್ದು, ಇದರಿಂದಾಗಿ ಭಾರತಕ್ಕೆ 750 ಮಿಲಿಯನ್ ಯುರೋಗಳಷ್ಟು ಹಣ ಉಳಿತಾಯವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಒಪ್ಪಂದ ನಡೆದ 36 ತಿಂಗಳಲ್ಲಿ ರಾಫೆಲ್ ಜೆಟ್ ಭಾರತೀಯ ಸೇನೆಗೆ ಸೇರ್ಪಡೆಗೊಳ್ಳಲಿದ್ದು, 66 ತಿಂಗಳಲ್ಲಿ ಒಟ್ಟು 36 ರಾಫೆಲ್ ಜೆಟ್ ಗಳು ಭಾರತದ ಕೈಸೇರಲಿವೆ.
·         ಆರಂಭಿಕ ಯೋಜನೆ 126 ಜೆಟ್ ಖರೀದಿಸುವುದಿದ್ದರೂ, ಭಾರತವು ಅದನ್ನು 36 ಜೆಟ್ ಗಳನ್ನು, ಅದೂ ಸಿದ್ಧ ಸ್ಥಿತಿಯಲ್ಲಿ ಕೊಳ್ಳುವ ತೀರ್ಮಾನಕ್ಕೆ ಬಂದು ಮುಟ್ಟಿತು. ಹೀಗಾಗಿ ಜೆಟ್ ವಿಮಾನದ ದರ ಮೊದಲು ಒಪ್ಪಿದ್ದಕ್ಕಿಂತ ಹೆಚ್ಚೇ ಆಗಿದೆ[][೧೦]
·         ರಾಫೆಲ್ ಮೆಟೊರೊ ಶ್ರೇಣಿಯ (ದೂರವ್ಯಾಪಿ) ಕ್ಷಿಪಣಿಯಾಗಿದ್ದು, 150 ಕಿ.ಮೀ ಸಾಗುವ ಸಾಮರ್ಥ್ಯ ಹೊಂದಿದೆ. ದೃಷ್ಠಿವ್ಯಾಪಿಗೂ ಮಿಗಿಲಾಗಿ ಸಾಗುವ ಸಾಮರ್ಥ್ಯ ಹೊಂದಿರುವ ಕ್ಷಿಪಣಿಯಲ್ಲಿ ಗುರಿ ತಪ್ಪುವ ಸಾಧ್ಯತೆ ಇತರ ಕ್ಷಿಪಣಿಗಳಿಗಿಂತ ಮೂರುಪಟ್ಟಿ ಕಡಿಮೆ ಇದೆ. ರಾಫೆಲ್ ಜೆಟ್ ಖರೀದಿ ಒಪ್ಪಂದಕ್ಕೆ ಜನವರಿ ತಿಂಗಳಲ್ಲಿ ಪ್ರಾನ್ಸ್ ಮತ್ತು ಭಾರತ ಸರ್ಕಾರಗಳು ಹಣಕಾಸು ವಿಚಾರ ಹೊರತುಪಡಿಸಿ ಸಹಿ ಹಾಕಿದ್ದವು.[೧೧]
ಭಾರತದ ಅಗತ್ಯ
·         ವಾಯುಪಡೆಯ ಉನ್ನತ ಅಧಿಕಾರಿಗಳು ಇಂದು ಭಾತರದ ಉತ್ತರ ಮತ್ತು ಪಶ್ಚಿಮ ಗಡಿ ರಕ್ಷಿಸಲು (ಪಾಕಿಸ್ತಾನ ಮತ್ತು ಚೀನಾ-ಗಡಿ) ಕನಿಷ್ಠ 42 ವಿಮಾನದಳ ತುಕಡಿಗಳು ಅಗತ್ಯವಿದೆ ಎಂದು ಹೇಳುತ್ತಾರೆ.
·         ಇದು ಪ್ರಸ್ತುತ ಸುಮಾರು 32 ವಿಮಾನದಳ ತುಕಡಿಗಳನ್ನು ಒಳಗೊಂಡಿದೆ, ಪ್ರತಯೊಂದರಲ್ಲಿ 18 ವಿಮಾನಗಳಿವೆ, ವಾಯುಪಡೆಯ ಪ್ರತಿನಿಧಿಗಳು ಭಾರತದ ಸಂಸತ್ತಿಗೆ ಕಳೆದ ವರ್ಷ, ಪರಮಾಣು ಶಸ್ತ್ರಸಜ್ಜಿತ ನೆರೆಯ ಪ್ರತಿಸ್ಪರ್ಧಿ ಪಾಕಿಸ್ತಾನಕ್ಕೆ ಸರಿಸಮಾನವಾಗಿ ಭಾರತ ತಂಡದ ತುಕಡಿಗಳು 2022 ಹೊತ್ತಿಗೆ ಕೇವಲ 25ತುಕಡಿಗೆ ಇಳಿಯಬಹುದೆಂದು ಎಚ್ಚರಿಸಿದ್ದಾರೆ.ಆದರೆ ನಿಜವಾದ ಕಾಳಜಿ ಚೀನಾ, ಪಾಕಿಸ್ತಾನದ ಮಿತ್ರರಾಷ್ಟ್ರ; ಅವರ ಮಿಲಿಟರಿ ಸಾಮರ್ಥ್ಯ ಭಾರತದಕ್ಕಿಂತ ಹೆಚ್ಚು.[೧೨]
ವಾಯು ಪಡೆಯ ಮುಖ್ಯಸ್ತರ ನೇಮಕ
·         18 Dec, 2016
·         ಏರ್ಚೀಫ್ಮಾರ್ಷಲ್ಬಿ.ಎಸ್‌. ಧನೋವಾ ಅವರನ್ನು ವಾಯು ಪಡೆಯ (ಐಎಎಫ್‌) ಮುಖ್ಯಸ್ಥರನ್ನಾಗಿ ಕೇಂದ್ರ ಸರ್ಕಾರ ಶನಿವಾರ ನೇಮಕ ಮಾಡಿದೆ. ವಾಯುಪಡೆಯ ಮುಖ್ಯಸ್ಥರಾದ ಅರೂಪ್ರಾಹಾ ಅವರು ಡಿ. 31ರಂದು ನಿವೃತ್ತರಾಗಲಿದ್ದು, ಧನೋವಾ ಅವರು ಅದೇ ದಿನ ಅಧಿಕಾರ ವಹಿಸಿಕೊಳ್ಳಲಿದ್ದಾರೆ


ಭಾರತೀಯ ವಾಯುಪಡೆ ಇಂದು ತನ್ನ 86ನೇ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದೆ.
ವಾರ್ಷಿಕೋತ್ಸವದ ಅಂಗವಾಗಿ ಘಾಜಿಯಾಬಾದ್​​ನ ಹಿಂಡನ್​​ ಏರ್​​ಫೋರ್ಸ್​ ಸ್ಟೇಷನ್​​​ನಲ್ಲಿ ಅದ್ಧೂರಿ ಪೆರೇಡ್​​ ನಡೆಸಲಾಗುತ್ತಿದೆ. ಇಂದು ಬೆಳಗ್ಗೆ 8 ಗಂಟೆಗೆ ಪ್ರಸಿದ್ಧ ಆಕಾಶ ಗಂಗಾ ತಂಡದ ಸ್ಕೈಡೈವರ್​​ಗಳು ಎಎನ್-32 ವಿಮಾನದಿಂದ ಧ್ವಜ ಹಿಡಿದು ಕೆಳಗೆ ಹಾರುವ ಮೂಲಕ ಏರ್​ ಶೋ ಆರಂಭವಾಗಿದೆ. ಏರ್​​ ಚೀಫ್​​ ಮಾರ್ಷಲ್​​​ ಬಿಎಸ್​​ ಧನೋವಾ, ಏರ್​ ಸ್ಟಾಫ್ ಮುಖ್ಯಸ್ಥರು ಹಾಗೂ ಇತರೆ ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಅಲ್ಲದೆ ಏರ್ ಫೋರ್ಸ್ ನ ವಿವಿಧ ಯುದ್ಧವಿಮಾನಗಳಾದ ಜಾಗ್ವಾರ್, ಬೈಸನ್, ಮಿಗ್ -29, ಮಿರಾಜ್-2000 ಮತ್ತು ಎಸ್‍ಯು -30 ಎಮ್‍ಕೆಐ ಫೈಟರ್ ಜೆಟ್ಗಳು ಮತ್ತು ರುದ್ರ ಹೆಲಿಕಾಪ್ಟರ್ ಗಳು ಸೇರಿದಂತೆ ವಾಯುಪಡೆಯ ಹಲವು ಯುದ್ಧ ವಿಮಾನಗಳು ಪ್ರದರ್ಶನ ಮಾಡಲಿವೆ.
  • 1932 ರಲ್ಲಿ ಭಾರತೀಯ ವಾಯುಪಡೆಯು ಬ್ರಿಟಿಷ್ ಆಳ್ವಿಕೆಯಲ್ಲಿ ರಾಯಲ್ ಇಂಡಿಯನ್ ಏರ್ ಫೋರ್ಸ್ ಆಗಿ ಜಾರಿಗೆ ಬಂದಿತು. 
  • 1950 ರಲ್ಲಿ ಈ ಹೆಸರು ಭಾರತೀಯ ವಾಯುಪಡೆಯಾಗಿ ಬದಲಾಯಿತು.
logoblog

Thanks for reading ಭಾರತೀಯ ವಾಯುಪಡೆಗೆ 86ನೇ ವಾರ್ಷಿಕೋತ್ಸವ

Previous
« Prev Post

No comments:

Post a Comment

Disclaimer

Disclaimer/ Notice: This all documents and PDF notes & Magazines (Only Education and Knowledge Propose) we are downloaded from the (whatsApp & Telegram Groups) internet. We are not responsible for any type of copyright issues. If we have any complaint regarding this content. We are trying to remove this content shorty. Contact: pyadavgk@gmail.com

Popular Posts

Followers

Contact Form

Name

Email *

Message *