ಜಲಂಧರ್: ಯುದ್ಧ ವಿಮಾನಗಳ ಕೊರತೆ ಅನುಭವಿಸುತ್ತಿರುವ ಭಾರತೀಯ ವಾಯುಪಡೆಯ ಮಿಗ್-29 ಯುದ್ಧ ವಿಮಾನಗಳಿಗೆ ಮಹತ್ವದ ಪರಿಷ್ಕರಣೆ ಮಾಡಲಾಗಿದೆ.
ಈ ಮೂಲಕ ರಷ್ಯಾ ಮೂಲದ ಯುದ್ಧ ವಿಮಾನಗಳ ಸೇವಾಯುಷ್ಯದಲ್ಲಿ ಇನ್ನಷ್ಟು ವೃದ್ಧಿಯಾಗಲಿದ್ದು, ಹಾರುತ್ತಲೇ ಇಂಧನ ತುಂಬಿಕೊಳ್ಳುವ ಸಾಮರ್ಥ್ಯವಲ್ಲದೇ ಅತ್ಯಾಧುನಿಕ ಕ್ಷಿಪಣಿಗಳನ್ನು ಅಳವಡಿಸುವ ಮೂಲಕ ಬಹು ಆಯಾಮಗಳಲ್ಲಿ ದಾಳಿ ಮಾಡಬಲ್ಲ ಸಾಮರ್ಥ್ಯವನ್ನು ಮಿಗ್-29ಕ್ಕೆ ಒದಗಿಸಲಾಗಿದೆ.
1999ರ ಕಾರ್ಗಿಲ್ ಯುದ್ಧದಲ್ಲಿ ಮಿಗ್-29 ಯುದ್ದವಿಮಾನಗಳು ಮಹತ್ವದ ಪಾತ್ರ ನಿರ್ವಹಿಸಿವೆ. ಸೋಮವಾದಂದು ವಾಯು ಪಡೆ ದಿನಾಚರಣೆ ಆಚರಿಸಲಾಗುವುದು.
ಈ ಮಿಗ್-29 ಯುದ್ಧ ವಿಮಾನಗಳನ್ನು 1980ರ ದಶಕದಲ್ಲಿ ತುರ್ತು ಖರೀದಿಯಡಿ ಖರೀದಿ ಮಾಡಲಾಗಿದ್ದು, ಪರಿಷ್ಕರಣೆ ಮುಖಾಂತರ ಇನ್ನಷ್ಟು ಪ್ರಭಾವಶಾಲಿಯನ್ನಾಗಿ ಮಾಡಬಹುದಾಗಿದೆ.
ಏಕಕಾಲದಲ್ಲಿ ಪಾಕ್ ಹಾಗು ಚೀನಾಗಳ ಸಂಭವನೀಯ ದಾಳಿಯನ್ನು ಎದುರಿಸಲು ಭಾರತೀಯ ವಾಯುಪಡೆ ಬಳಿ 42 ಸ್ಕ್ವಾಡರ್ನ್‌ಳ ಇರಬೇಕಾದ ಅಗತ್ಯವಿದೆ. ಆದರೆ ಸದ್ಯ ಕೇವಲ 31 ಸ್ಕ್ವಾಡರ್ನ್‌ಗಳು ಮಾತ್ರವೇ ಇವೆ.
ಮಿಗ್-29
No comments:
Post a Comment