ಸ್ಟಾಕ್‌ಹೋಮ್: ಜಾಗತಿಕ ತಾಪಮಾನ ಏರಿಕೆ ಹಾಗೂ ಮ್ಯಾಕ್ರೋ ಎಕನಾಮಿ ವಿಶ್ಲೇಷಣೆಯ ಮೂಲಕ ತಾಂತ್ರಿಕ ಅನ್ವೇಷಣೆಗಾಗಿ ಅಮೆರಿಕಾದ ವಿಲಿಯಂ ನಾರ್ಡಸ್ ಹಾಗೂ ಪಾಲ್ ರೂಮರ್ ಅವರಿಗೆ 2018ನೇ ಸಾಲಿನ ಅರ್ಥಶಾಸ್ತ್ರದ ನೊಬೆಲ್ ಪ್ರಶಸ್ತಿ ಲಭಿಸಿದೆ.

ರಾಯಲ್ ಸ್ವೀಡಿಶ್ ಅಕಾಡೆಮಿ ಆಫ್ ಸೈನ್ಸ್, ಸೋಮವಾರ ಪ್ರಶಸ್ತಿಗಳನ್ನು ಘೋಷಣೆ ಮಾಡಿದ್ದು, ಈ ಇಬ್ಬರು ಆರ್ಥಿಕ ತಜ್ಞರು ಮಾರುಕಟ್ಟೆ ಏರಿಳಿತದಿಂದ ನಿಸರ್ಗದ ಮೇಲಾಗುವ ಆರ್ಥಿಕ ಪರಿಣಾಮಗಳ ಬಗ್ಗೆ ವಿಶ್ಲೇಷಣೆ ಪ್ರಶಂಸನೀಯ ಎಂದು ಅಕಾಡೆಮಿ ಹೇಳಿದೆ.
1968ರಿಂದ ಈ ಪ್ರಶಸ್ತಿಯನ್ನು ಕೊಡಮಾಡಲಾಗುತ್ತಿದ್ದು, 10 ಲಕ್ಷ ಅಮೆರಿಕನ್ ಡಾಲರ್ ಬಹುಮಾನ ಕೂಡ ಇದೆ.
No comments:
Post a Comment