ಭಾರತದ ಶಕ್ತಿ ಎಂಥದ್ದು ಎನ್ನುವುದು ಅಮೆರಿಕಕ್ಕೆೆ ಮಾತ್ರವಲ್ಲ ಈಗ ವಿಶ್ವಕ್ಕೇ ಪರಿಚಯವಾಗಿದೆ. ಅಮೆರಿಕದ ಬೆದರಿಕೆಗೆ ಬಗ್ಗಿ ನಡೆಯುವ ಸರಕಾರಗಳು ಆಡಳಿತ ನಡೆಸಿದ್ದರಿಂದ ನಮ್ಮ ದೇಶದ ಮಿಲಿಟರಿ ಶಕ್ತಿ, ಇಲ್ಲಿನ ಆರ್ಥಿಕ ಶಕ್ತಿಯ ಬಗ್ಗೆೆ ಎಲ್ಲರಿಗೂ ಅನುಮಾನಗಳಿದ್ದವು. ಇದನ್ನೇ ಅಸ್ತ್ರ ಮಾಡಿಕೊಂಡಿದ್ದ ಅಮೆರಿಕ ಆರ್ಥಿಕ ದಿಗ್ಬಂಧನದಂಥ ಬೆದರಿಕೆಗಳನ್ನೊಡ್ಡುತ್ತ ತಾನೇ ಸೂಪರ್ ಎಂದುಕೊಂಡಿತ್ತು. ಬಹುಶಃ ಅದರ ಶಕ್ತಿ ಕ್ಷೀಣಿಸುತ್ತದೆ ಎನ್ನುವುದು ಅದಕ್ಕೂ ಮನವರಿಕೆಯಾದರೆ ಒಳ್ಳೆೆಯದು.
ಶಸ್ತ್ರಾಸ್ತ್ರಗಳನ್ನು ಪೂರೈಸಿ ಆ ಮೂಲಕವೇ ಇತರ ದೇಶಗಳನ್ನು ತನ್ನ ಅಂಕೆಯಲ್ಲಿ ಇಟ್ಟುಕೊಳ್ಳಲು ಮುಂದಾಗುವ ದೇಶ ಅಮೆರಿಕ ಎನ್ನುವುದು ಹಲವಾರು ಬಾರಿ ವಿಶ್ವಕ್ಕೆೆ ಮನವರಿಕೆಯಾಗಿದೆ. ತನ್ನೆೆದುರು ಮತ್ತೊಂದು ಶಕ್ತಿ ತಲೆ ಎತ್ತುತ್ತದೆ ಎಂದರೆ ಬಲಾಢ್ಯ ಅಮೆರಿಕ ತಕ್ಷಣ ಅದರ ನಿಯಂತ್ರಣಕ್ಕೆೆ ಸಂಚು ರೂಪಿಸುತ್ತದೆ. ತಾನು ಹೇಳಿದಂತೆ ಕೇಳಬೇಕು ಎಂದು ತಾಕೀತು ಮಾಡುತ್ತದೆ.
ಸುಮಾರು 40 ಸಾವಿರ ಕೋಟಿ ರುಪಾಯಿ ವೆಚ್ಚದಲ್ಲಿ ‘ಎಸ್-400 ಟ್ರಯಂಫ್’ ವಾಯು ರಕ್ಷಣಾ ಸಾಮಗ್ರಿ
ಖರೀದಿಸಲು ಭಾರತ ಅಧಿಕೃತವಾಗಿ ರಷ್ಯಾದೊಂದಿಗೆ ಒಪ್ಪಂದಕ್ಕೆೆ ಸಹಿ ಹಾಕಿದೆ. ಇದರಿಂದ ಭಾರತದ ರಕ್ಷಣಾ ವ್ಯವಸ್ಥೆೆಗೆ ಹೊಸ ಬಲ ಬಂದಿರುವುದರ ಜತೆಗೆ ತನ್ನ ಶಕ್ತಿಯನ್ನು ಅಮೆರಿಕಕ್ಕೆೆ ಅದು
ಪರಿಚಯಿಸಿದೆ.
ಖರೀದಿಸಲು ಭಾರತ ಅಧಿಕೃತವಾಗಿ ರಷ್ಯಾದೊಂದಿಗೆ ಒಪ್ಪಂದಕ್ಕೆೆ ಸಹಿ ಹಾಕಿದೆ. ಇದರಿಂದ ಭಾರತದ ರಕ್ಷಣಾ ವ್ಯವಸ್ಥೆೆಗೆ ಹೊಸ ಬಲ ಬಂದಿರುವುದರ ಜತೆಗೆ ತನ್ನ ಶಕ್ತಿಯನ್ನು ಅಮೆರಿಕಕ್ಕೆೆ ಅದು
ಪರಿಚಯಿಸಿದೆ.
ರಷ್ಯಾದ ಅಧ್ಯಕ್ಷ ಪುಟಿನ್ ಜತೆಗೆ ಮಾತುಕತೆ ನಡೆಸಿದ ಪ್ರಧಾನಿ ಮೋದಿ ‘ಎಸ್-400 ಟ್ರಯಂಫ್’ ಒಪ್ಪಂದಕ್ಕೆೆ ಸಹಿ ಹಾಕಿದ್ದಾರೆ. ಅಲ್ಲದೆ, ಉಭಯ ರಾಷ್ಟ್ರಗಳು ಇನ್ನಿತರೆ ಮಹತ್ವದ ಒಪ್ಪಂದಕ್ಕೂ ಸಹಿ ಹಾಕಿವೆ. ರಷ್ಯಾದ ಸೈಬೀರಿಯಾ ಬಳಿಯಿರುವ ನೊವೊಸಿಬಿರ್ಸಕ್‌ನಲ್ಲಿ ಭಾರತೀಯ ಮೇಲ್ವಿಚಾರಣಾ ಕೇಂದ್ರ ನಿರ್ಮಿಸುವ ಕುರಿತಂತೆಯೂ ಉಭಯ ನಾಯಕರು ಮಾತುಕತೆ ನಡೆಸಿದ್ದಾರೆ.
ರಷ್ಯಾದಿಂದ ಸಮರ ಸಾಮಗ್ರಿಗಳನ್ನು ಖರೀದಿಸಿದ ಕಾರಣಕ್ಕೆೆ ಕೆಲ ದಿನಗಳ ಹಿಂದಷ್ಟೇ ಚೀನಾ ಮೇಲೆ ಅಮೆರಿಕ ದಿಗ್ಬಂಧನ ವಿಧಿಸಿತ್ತು. ಒಂದು ವೇಳೆ ರಷ್ಯಾಾದಿಂದ ಎಸ್-400 ಟ್ರಯಂಫ್ ವ್ಯವಸ್ಥೆೆ ಖರೀದಿಗೆ ಭಾರತ ಮುಂದಾದಲ್ಲಿ ಅದರ ಮೇಲೂ ದಿಗ್ಬಂಧನ ಹೇರುವ ಬೆದರಿಕೆ ಹಾಕಿತ್ತು. ಅಮೆರಿಕದ ಬೆದರಿಕೆಗೆ ಕೇರ್ ಮಾಡದೆ ರಷ್ಯಾ ಮತ್ತು ಭಾರತದ ನಡುವೆ ಈ ಒಪ್ಪಂದವಾಗಿರುವುದು ಮಹತ್ವದ ಬೆಳವಣಿಗೆ.
ಮಾತುಕತೆ ವೇಳೆ ಉಭಯ ರಾಷ್ಟ್ರಗಳು ಐಎನ್‌ಎಸ್ ಚಕ್ರ ಜಲಾಂತರ್ಗಾಮಿ ನೌಕೆ ಜಾಗಕ್ಕೆೆ, ಮರು ನಿರ್ಮಾಣಗೊಂಡಿರುವ, ಪರಮಾಣು ಇಂಧನ ಚಾಲಿತ ಅಕುಲಾ ದರ್ಜೆ ಸಬ್ ಮರೀನ್ ಖರೀದಿಗೆ 14 ಸಾವಿರ ಕೋಟಿ ರೂ., ಕ್ರಿವಾಕ್ ದರ್ಜೆಯ ಲಘು ನೌಕೆಗಳನ್ನು 14 ಸಾವಿರ ಕೋಟಿ ರು. ವೆಚ್ಚದಲ್ಲಿ ಖರೀದಿ, ದೇಶದ ಒಂದು ಶಸ್ತ್ರಾಸ್ತ್ರ ಕಾರ್ಖಾನೆಯಲ್ಲಿ ಏಕೆ-103 ರೈಫಲ್ ಉತ್ಪಾಾದನೆಗೆ ಒಪ್ಪಂದ ಮಾಡಿಕೊಂಡವು. ಈ ಎಲ್ಲ ಬೆಳವಣಿಗೆಗಳೂ ಅಮೆರಿಕಕ್ಕೆೆ ಅಚ್ಚರಿ ಮೂಡಿಸಿವೆ. ಕಾರಣ, ಅಮೆರಿಕ ತಾನೇ ಯಾವತ್ತೂ ಸೂಪರ್ ಪವರ್ ಎಂದುಕೊಂಡಿದೆ. ತನ್ನೆೆದುರು ಭಾರತ ಮತ್ತು ರಷ್ಯಾದೇಶಗಳು ಒಂದಾದರೆ ತನ್ನ ‘ಸೂಪರ್’ ಪಟ್ಟ ಹೋಗಬಹುದು ಎನ್ನುವ ಆತಂಕವೂ ಅದಕ್ಕೆೆ ಕಾಡಿರಬಹುದು. ಕಾಲ ಉರುಳುತ್ತದೆ ಅಲ್ಲವೆ? ಹಾಗೆಯೇ ಅಮೆರಿಕದ ಪಟ್ಟವೂ ಇಳಿಯಬಹುದು.
No comments:
Post a Comment