ಜಮ್ಮು: ಪಾಕಿಸ್ತಾನಿ ಉಗ್ರರು ಹಾಗೂ ಯೋಧರಿಗೆ ಗಡಿಯಲ್ಲೇ ತಡೆಯೊಡ್ಡುವ ಉದ್ದೇಶದಿಂದ ನಿರ್ವಿುಸಲಾಗಿರುವ ‘ಸ್ಮಾರ್ಟ್ ಬೇಲಿ’ಯನ್ನು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಉದ್ಘಾಟಿಸಿದರು.
ಜಮ್ಮು ಸೆಕ್ಟರ್ನ ಅಂತಾರಾಷ್ಟ್ರೀಯ ಗಡಿಯಲ್ಲಿ ಸಮಗ್ರ ಸಂಯೋಜಿತ ಗಡಿ ನಿರ್ವಹಣಾ ಯೋಜನೆ (ಸಿಐಬಿಎಂಎಸ್) ಎರಡು ಪ್ರಾಯೋಗಿಕ ಯೋಜನೆಯಡಿ ತಲಾ 5.5 ಕಿ.ಮೀ. ಉದ್ದದ ‘ಸ್ಮಾರ್ಟ್ ಬೇಲಿ’ ನಿರ್ವಿುಸಲಾಗಿದೆ. ಸೋಮವಾರ ಸ್ಮಾರ್ಟ್ ಬೇಲಿಯನ್ನು ಉದ್ಘಾಟಿಸಿದ ನಂತರ ಮಾತನಾಡಿದ ಸಚಿವರು ಸ್ಮಾರ್ಟ್ ಬೇಲಿಯನ್ನು ಅಳವಡಿಸಿದ ನಂತರ ಪಾಕಿಸ್ತಾನ ಗಡಿ ಮತ್ತಷ್ಟು ಸದೃಢವಾಗಲಿದೆ ಎಂಬ ನಂಬಿಕೆ ಇದೆ. ಪಾಕಿಸ್ತಾನ ಗಡಿಯುದ್ದಕ್ಕೂ ಸುಮಾರು 2026 ಕಿ.ಮೀ. ಉದ್ದದ ಸ್ಮಾರ್ಟ್ ಬೇಲಿ ನಿರ್ಮಿಸಲಾಗುವುದು ಎಂದು ತಿಳಿಸಿದರು.
ಗಡಿ ಭದ್ರತೆಗೆ ಕೇಂದ್ರ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತದೆ. ಗಡಿಯಲ್ಲಿ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಲು ಹೆಚ್ಚಿನ ಗಮನ ನೀಡಲಾಗಿದೆ. ಗಡಿ ಭಾಗದಲ್ಲಿ ಸುಮಾರು 600 ಕಿ.ಮೀ. ಉದ್ದದ ರಸ್ತೆ ನಿರ್ಮಿಸಲಾಗಿದೆ. ನೂರಾರು ಬಾರ್ಡರ್ ಔಟ್ ಪೋಸ್ಟ್ಗಳನ್ನು ನಿರ್ಮಿಸಲಾಗಿದೆ ಎಂದು ತಿಳಿಸಿದರು.
ಏನಿದು ಸ್ಮಾರ್ಟ್ ಬೇಲಿ?
ಸಮಗ್ರ ಸಂಯೋಜಿತ ಥರ್ಮಲ್ ಇಮೇಜಿಂಗ್, ಇನ್ಪ್ರಾ-ರೆಡ್ ಮತ್ತು ಲೇಸರ್ ಬೀಮ್ಗಳ ಅಗೋಚರ ತಡೆಬೇಲಿ ಇದಾಗಿದ್ದು, ಈ ಬೇಲಿಯನ್ನು ಯಾವುದೇ ರೀತಿಯಲ್ಲಿ (ಜಲ, ವಾಯು, ಸುರಂಗ ಮಾರ್ಗ) ಉಲ್ಲಂಘಿಸಲು ಪ್ರಯತ್ನಿಸಿದ ಕೂಡಲೇ ಎಚ್ಚರಿಕೆ ಗಂಟೆ ಮೊಳಗುತ್ತದೆ. ಯೋಧರನ್ನು ನಿಯೋಜಿಸಲಾಗದಂತಹ ಕಠಿಣ ಭೌಗೋಳಿಕ ಸನ್ನಿವೇಶ, ಗಿರಿ, ಕಂದರ, ಕೂಡಿದ ಗಡಿ ಪ್ರದೇಶದಲ್ಲಿ ಈ ಬೇಲಿಯನ್ನು ಅಳವಡಿಸಬಹುದಾಗಿದೆ.
Friends,
If you like this post,kindly comment below the post and do share your
Response,
(Thanks for Reading....)
No comments:
Post a Comment