ವಿಶ್ವಾಸಾರ್ಹ ಸೇವೆ ಮೂಲಕವೇ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿರುವ ‘ಜೋಯಾಲುಕ್ಕಾಸ್’ ಗ್ರೂಪ್ ಇದೀಗ ಕೇರಳದಲ್ಲಿ ಜಲಪ್ರವಾಹಕ್ಕೆ ಒಳಗಾದ ಸಂತ್ರಸ್ತರ ನೆರವಿಗೆ ನಿಂತಿದ್ದು, 250 ಮನೆಗಳನ್ನು ನಿರ್ವಿುಸಿಕೊಡಲು ಮುಂದಾಗಿದೆ.
ಕೇರಳದಲ್ಲಿ ಸುರಿದ ಧಾರಾಕಾರ ಮಳೆಗೆ ಶತಮಾನದ ಪ್ರವಾಹ ಉಂಟಾದ ಪರಿಣಾಮ ಸಾವಿರಾರು ಮಂದಿ ಮನೆ ಕಳೆದುಕೊಂಡಿದ್ದಾರೆ. ಪುನಃ ಕೇರಳವನ್ನು ಕಟ್ಟುವ ಸಂಕಲ್ಪಕ್ಕೆ ಜೋಯಾಲುಕ್ಕಾಸ್ ಕೈ ಜೋಡಿಸಿದ್ದು, ಪ್ರವಾಹ ಸಂತ್ರಸ್ತರಿಗೆ ಮನೆ ನಿರ್ವಿುಸಿಕೊಡಲು ಈಗಾಗಲೇ 15ಕೋಟಿ ರೂ. ಬಿಡುಗಡೆ ಮಾಡಿದೆ. ಈ ಕಾರ್ಯಕ್ಕೆ ಜೋಯಾಲುಕ್ಕಾಸ್ನ ಎಲ್ಲ ಸಿಬ್ಬಂದಿಗಳು ಸ್ವ ಇಚ್ಛೆಯಿಂದ ಬೆಂಬಲ ನೀಡುವ ಮೂಲಕ ಸಾಮಾಜಿಕ ಕಳಕಳಿ ಮೆರೆದಿದ್ದಾರೆ. ಜೋಯಾಲುಕ್ಕಾಸ್ ಗ್ರೂಪ್ ಅಧ್ಯಕ್ಷ ಜಾಯ್ ಅಲುಕ್ಕಾಸ್ ಹಾಗೂ ಜೋಯಾಲುಕ್ಕಾಸ್ ಫೌಂಡೇಶನ್ ನಿರ್ದೇಶಕಿ ಜಾಲಿ ಜಾಯ್ ತಲಾ 6 ಲಕ್ಷ ರೂ. ಮೌಲ್ಯದ ಮನೆ ನಿರ್ವಿುಸಿಕೊಡಲು ಯೋಜನೆ ರೂಪಿಸಿದ್ದಾರೆ.
- ‘ಪ್ರವಾಹ ಸಂತ್ರಸ್ತರಿಗೆ ಮನೆ ನಿರ್ವಿುಸಿ ಕೊಡುವುದು ನಮ್ಮ ಕನಸಾಗಿದೆ.
- ಪ್ರತಿ ಮನೆ 600ಚ.ಅಡಿ ಪ್ರದೇಶದಲ್ಲಿ ನಿರ್ವಣವಾಗಲಿದೆ.
- ತಲಾ ಎರಡು ಬೆಡ್ರೂಮ್ ಲಿವಿಂಗ್ ರೂಮ್ ಹಾಗೂ ಕಿಚನ್ ರೂಮ್ ಹೊಂದಿರುವ ಮನೆ ಹೊಂದಿರಲಿದೆ.
- ತಜ್ಞರೊಂದಿಗೆ ಸಮಾಲೋಚನೆ ನಡೆಸಿ, ಅತ್ಯಾಧುನಿಕ ವಿನ್ಯಾಸ ನಿರ್ವಿುಸಲಾಗಿದೆ. ಅಷ್ಟೇ ಅಲ್ಲ, ವೈಜ್ಞಾನಿಕತೆಗೆ ಸಹ ಒತ್ತು ನೀಡುವ ಮೂಲಕ ಭವಿಷ್ಯದಲ್ಲಿ ಅವಘಡಗಳಿಗೆ ಮನೆ ತುತ್ತಾಗದಂತೆ ಎಚ್ಚರಿಕೆ ವಹಿಸಲಾಗುತ್ತದೆ’ ಎಂದು ಜೋಯಾಲುಕ್ಕಾಸ್ ಗ್ರೂಪ್ ಅಧ್ಯಕ್ಷ ಜಾಯ್ ಅಲುಕ್ಕಾಸ್ ಮಾಹಿತಿ ನೀಡಿದ್ದಾರೆ.
ಸಾಮಾಜಿಕ ಕಳಕಳಿ
ಪ್ರವಾಹದಿಂದ ಮನೆ ಕಳೆದುಕೊಂಡವರು ಸ್ಥಳೀಯ ಜೋಯಾಲುಕ್ಕಾಸ್ ಮಳಿಗೆಗೆ ಭೇಟಿ ನೀಡಿ, ಅರ್ಜಿ ಪಡೆಯಬಹುದಾಗಿದೆ. ಭರ್ತಿ ಮಾಡಿದ ಅರ್ಜಿಯನ್ನು ಜೋಯಾಲುಕ್ಕಾಸ್ ಫೌಂಡೇಶನ್ಗೆ ಸಲ್ಲಿಕೆ ಮಾಡಿದ ಬಳಿಕ ಜೋಯಾಲುಕ್ಕಾಸ್ ಫೌಂಡೇಶನ್ನ ವಿಶೇಷ ಸಮಿತಿ ಅರ್ಜಿ ಪರಿಶೀಲಿಸಿ, ಸ್ಥಳೀಯ ಸರ್ಕಾರಿ ಸಂಸ್ಥೆ ಜತೆಗೆ ಮಾತುಕತೆ ನಡೆಸುವ ಮೂಲಕ ಕಾನೂನಿನ ತೊಡಕನ್ನು ನಿವಾರಿಸಿಕೊಳ್ಳಲಿದೆ. ಬಳಿಕ ಮನೆ ನಿರ್ವಿುಸಿ, ಸಂತ್ರಸ್ತರಿಗೆ ಹಸ್ತಾಂತರಿಸಲಾಗುತ್ತದೆ. ಜೋಯಾಲುಕ್ಕಾಸ್ ಫೌಂಡೇಶನ್ ಸದಾ ಸಾಮಾಜಿಕ ಕಾರ್ಯ ಕೈಗೊಳ್ಳುವ ಮೂಲಕ ಜನರ ಸಮಸ್ಯೆಗೆ ಮಿಡಿಯುತ್ತಿದೆ. ರಕ್ತದಾನ ಶಿಬಿರ, ಪರಿಸರ ಸಂರಕ್ಷಣೆ, ಆರೋಗ್ಯ ಕಾರ್ಯಕ್ರಮವನ್ನೂ ಜೋಯಾಲುಕ್ಕಾಸ್ ಫೌಂಡೇಶನ್ ನಡೆಸಿದೆ.
Friends,
If you like this post,kindly comment below the post and do share your
Response,
(Thanks for Reading....)
No comments:
Post a Comment