ನಕ್ಸಲರ ಹಿತೈಷಿಗಳ ವಿರುದ್ಧದ ಪ್ರಕರಣವನ್ನು ಉದ್ದೇಶಪೂರ್ವಕವಾಗಿ ಸೃಷ್ಟಿಸಿರುವುದು ಮೇಲ್ನೋಟಕ್ಕೆ ಕಂಡುಬಂದರೆ ಎಸ್ಐಟಿ ತನಿಖೆಗೆ ಆದೇಶಿಸಲಾಗುವುದು ಎಂದು ಸುಪ್ರೀಂ ಕೋರ್ಟ್ ಎಚ್ಚರಿಸಿದೆ. ಹೋರಾಟಗಾರರ ಗೃಹ ಬಂಧನವನ್ನು ಸತತ 4ನೇ ಬಾರಿಗೆ ವಿಸ್ತರಿಸಿದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ನ್ಯಾಯಪೀಠ, ಐವರ ಬಂಧನಕ್ಕೆ ಸೂಕ್ತ ದಾಖಲೆಗಳಿವೆಯೇ ಎನ್ನುವುದನ್ನು ಸೆ.19ಕ್ಕೆ ಪರಾಮಶಿಸಲಾಗುವುದು. ಪ್ರತಿ ಅಪರಾಧಗಳ ತನಿಖೆಯು ಆರೋಪಗಳನ್ನು ಆಧರಿಸಿಯೇ ನಡೆಯುತ್ತದೆ. ಹೀಗಾಗಿ ಈ ಬಂಧನಕ್ಕೆ ಪೂರಕವಾಗಿ ಆರೋಪಿಗಳ ವಿರುದ್ಧ ಸೂಕ್ತ ದಾಖಲೆಗಳಿವೆಯೇ ಎನ್ನುವುದನ್ನು ಬುಧವಾರದ ವಿಚಾರಣೆಯಲ್ಲಿ ಪರಿಶೀಲಿಸಲಾಗುವುದು ಎಂದು ತಿಳಿಸಿದೆ. ಪ್ರಧಾನಿ ನರೇಂದ್ರ ಮೋದಿ ಹತ್ಯೆ ಸಂಚು ಮತ್ತು ಇತರೆ ಆರೋಪಗಳಿಗೆ ಸಂಬಂಧಿಸಿ ಆ.28ರಂದು ವರವರ ರಾವ್, ಅರುಣ್ ಫೆರಿರಾ, ವರ್ಣನ್ ಗೊನ್ಸಾಲ್ವೆಸ್, ಸುಧಾ ಭಾರದ್ವಾಜ್ ಹಾಗೂ ಗೌತಮ್ ನವ್ಲಾಖರನ್ನು ಬಂಧಿಸಲಾಗಿತ್ತು.
Friends,
If you like this post,kindly comment below the post and do share your
Response,
(Thanks for Reading....)
No comments:
Post a Comment