ಕರ್ನಾಟಕ ಮೂಲದ ವಿಜಯಾ ಬ್ಯಾಂಕ್, ಮಹಾರಾಷ್ಟ್ರದ ದೇನಾ ಬ್ಯಾಂಕ್ ಮತ್ತು ಗುಜರಾತ್ ಮೂಲದ ಬ್ಯಾಂಕ್ ಆಫ್ ಬರೋಡಾ (ಬಿಒಬಿ)ಗಳನ್ನು ವಿಲೀನಗೊಳಿಸುವುದಾಗಿ ಕೇಂದ್ರ ಸರ್ಕಾರ ಸೋಮವಾರ ಅಧಿಕೃತವಾಗಿ ಘೋಷಿಸಿದೆ. ಈ ಮೂರೂ ಬ್ಯಾಂಕ್ಗಳ ವಿಲೀನದ ನಂತರ ದೇಶದ ಮೂರನೇ ಅತಿ ದೊಡ್ಡ ಬ್ಯಾಂಕ್ ಎಂಬ ಶ್ರೇಯಕ್ಕೆ ಪಾತ್ರವಾಗಲಿದೆ. ಮೂರೂ ಬ್ಯಾಂಕ್ಗಳ ಒಟ್ಟಾರೆ ವಹಿವಾಟು -ಠಿ; 14.82 ಲಕ್ಷ ಕೋಟಿ ಆಗಲಿದೆ.
ಮೂರೂ ಬ್ಯಾಂಕ್ಗಳ
- ಕರ್ನಾಟಕ ಮೂಲದ - ವಿಜಯಾ ಬ್ಯಾಂಕ್,
- ಮಹಾರಾಷ್ಟ್ರದ - ದೇನಾ ಬ್ಯಾಂಕ್ ಮತ್ತು
- ಗುಜರಾತ್ ಮೂಲದ - ಬ್ಯಾಂಕ್ ಆಫ್ ಬರೋಡಾ
ಜಾಗತಿಕ ಬ್ಯಾಂಕಿಂಗ್ ಸ್ಪರ್ಧೆಯಲ್ಲಿ ಭಾರತ ಪೈಪೋಟಿ ನೀಡಬೇಕಿದ್ದರೆ ಸಾರ್ವಜನಿಕ ಬ್ಯಾಂಕ್ಗಳ ವಿಲೀನ ಅನಿವಾರ್ಯ. ಇದನ್ನು ಬಜೆಟ್ನಲ್ಲೂ ಪ್ರಸ್ತಾಪಿಸಲಾಗಿದ್ದು, ಇದರ ಭಾಗವಾಗಿ ಈ ಮೂರು ಬ್ಯಾಂಕ್ಗಳ ವಿಲೀನಕ್ಕೆ ಸಮ್ಮತಿಸಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ತಿಳಿಸಿದರು.
ಬ್ಯಾಂಕ್ಗಳ ವೀಲಿನದಿಂದ ದೇಶದ ಆರ್ಥಿಕ ಪ್ರಗತಿ ಹೆಚ್ಚಲಿದೆ, ಬ್ಯಾಂಕ್ಗಳು ಆರ್ಥಿಕವಾಗಿ ಸುಸ್ಥಿರವಾಗಲಿವೆ. ಇದರಿಂದ ಸಾಲ ವಿತರಣೆಯ ಸಾಮರ್ಥ್ಯ ಕೂಡ ಹೆಚ್ಚಲಿದೆ. ಈ ಮೂರೂ ಬ್ಯಾಂಕ್ಗಳ ವಿಲೀನ ಪ್ರಕ್ರಿಯೆ ಹೇಗೆ, ಏನು ಎಂಬುದರ ಮಾರ್ಗದರ್ಶಿಯನ್ನು ಈ ಬ್ಯಾಂಕ್ಗಳ ಆಡಳಿತ ಮಂಡಳಿಗಳು ನಿರ್ಧರಿಸಲಿವೆ ಎಂದು ಹೇಳಿದರು.
ಸಂಪುಟ ಉಪಸಮಿತಿಯಲ್ಲಿ ನಿರ್ಧಾರ: ಹಣಕಾಸು ಸಚಿವ ಅರುಣ್ ಜೇಟ್ಲಿ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಸಂಪುಟ ಉಪ ಸಮಿತಿ ಸಭೆಯಲ್ಲಿ ವಿಲೀನದ ಈ ನಿರ್ಧಾರ ಕೈಗೊಳ್ಳಲಾಗಿದೆ. ಸಚಿವರಾದ ಪಿಯೂಷ್ ಗೋಯಲ್ (ರೈಲ್ವೆ) ಮತ್ತು ನಿರ್ಮಲಾ ಸೀತಾರಾಮನ್ (ರಕ್ಷಣೆ) ಸಭೆಯಲ್ಲಿ ಭಾಗವಹಿಸಿದ್ದರು.
ವಸೂಲಾಗದ ಸಾಲ, ಅನುತ್ಪಾದಕ ಆಸ್ತಿ (ಎನ್ಪಿಎ)ಗಳಿಂದ ಬಸವಳಿದಿರುವ ದೇಶದ ಸಾರ್ವಜನಿಕ ವಲಯದ ಬ್ಯಾಂಕಿಂಗ್ ವಲಯಕ್ಕೆ ಪುನಶ್ಚೇತನ ನೀಡಲು ಬ್ಯಾಂಕ್ಗಳ ವಿಲೀನ ಪ್ರಕ್ರಿಯೆ ಆರಂಭಿಸಲಾಗಿದೆ. ಇದರಿಂದ ಬ್ಯಾಂಕ್ಗಳಿಗೆ ಆರ್ಥಿಕ ಚೈತನ್ಯ ಒದಗಲಿದೆ
| ಅರುಣ್ ಜೇಟ್ಲಿ ಕೇಂದ್ರ ಹಣಕಾಸು ಸಚಿವ
ನೌಕರಿಗೆ ಕುತ್ತಿಲ್ಲ
ಬ್ಯಾಂಕ್ ವೀಲಿನದಿಂದ ನೌಕರಿ ಹೋಗುತ್ತದೆ ಎಂಬ ಭಯ ಬೇಡ. ಈ ಮೂರೂ ಬ್ಯಾಂಕ್ಗಳ ಯಾವೊಬ್ಬ ನೌಕರರನ್ನೂ ಕೆಲಸದಿಂದ ತೆಗೆಯುವುದಿಲ್ಲ. ಮೂರೂ ಬ್ಯಾಂಕ್ಗಳ ಸೇವಾ ನಿಯಮದಲ್ಲಿ ಯಾವುದು ಉತ್ತಮ ಅಂಶದಿಂದ ಕೂಡಿದೆಯೋ ಅದನ್ನು ಅನುಸರಿಸಲಾಗುವುದು ಎಂದು ಜೇಟ್ಲಿ ಹೇಳಿದರು.
ಎಸ್ಬಿಐ ದೇಶದ ಅತಿ ದೊಡ್ಡ ಬ್ಯಾಂಕ್
ಐದು ಸ್ಟೇಟ್ ಬ್ಯಾಂಕ್ ಮತ್ತು ಭಾರತೀಯ ಮಹಿಳಾ ಬ್ಯಾಂಕ್ಗಳು ಎಸ್ಬಿಐನಲ್ಲಿ ವಿಲೀನವಾಗುವುದರ ಮೂಲಕ ಎಸ್ಬಿಐ ದೇಶದ ಅತಿ ದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಎಂಬ ಖ್ಯಾತಿ ಪಡೆದಿದೆ. ಆರ್ಬಿಐ ಕೂಡ 21 ಬ್ಯಾಂಕ್ಗಳನ್ನು ವಿಲೀನ ಮಾಡಿ ಮೂರ್ನಾಲ್ಕು ದೊಡ್ಡ ಬ್ಯಾಂಕ್ಗಳನ್ನು ರಚಿಸಬಹುದು ಎಂದು ಶಿಫಾರಸು ಮಾಡಿದೆ.
Friends,
If you like this post,kindly comment below the post and do share your
Response,
(Thanks for Reading....)

No comments:
Post a Comment