ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟು ಹಬ್ಬಕ್ಕೆ ಭಾರತೀಯ ಸ್ಕೈ ಡೈವರ್ ಒಬ್ಬರು ವಿಭಿನ್ನವಾಗಿ ಶುಭಾಶಯ ಕೋರಿದ ವಿಡಿಯೋ ಇದೀಗ ವೈರಲ್ ಆಗಿದೆ.
ಸೋಮವಾರ ಅಮೆರಿಕಾದ ಷಿಕಾಗೊವಿನಲ್ಲಿ 13,000 ಅಡಿ ಎತ್ತರದಲ್ಲಿ ಹಾರಾಡುತ್ತಿದ್ದ ವಿಮಾನದಿಂದ ಸ್ಕೈ ಡೈವ್ ಮಾಡಿದ ಶೀತಲ್ ಮಹಾಜನ್ (35)ಆಕಾಶದಿಂದಲೇ ಮೋದಿಯವರಿಗೆ ಶುಭಾಶಯ ಕೋರಿದ್ದಾರೆ. ನಂತರ ಈ ವಿಡಿಯೋವನ್ನು ಫೇಸ್ ಬುಕ್ ನಲ್ಲಿ ಆಕೆ ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ.
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಶೀತಲ್ ಮಹಾಜನ್ ಅವರು ಮೋದಿ ಅವರನ್ನು ಭೇಟಿಯಾಗಲು ನಾಲ್ಕು ವರ್ಷದಿಂದ ಪ್ರಯತ್ನಿಸಿ, ವಿಫಲರಾಗಿದ್ದಾರೆ.
ನಾನು ನಾಲ್ಕು ವರ್ಷದಿಂದ ಪ್ರಧಾನಿ ಮೋದಿಯವರನ್ನು ಭೇಟಿಯಾಗಲು ಪ್ರಯತ್ನಿಸುತ್ತಿದ್ದೇನೆ. ಆದರೆ ಅವರ ಕಚೇರಿಯಿಂದ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ. ಸ್ಕೈ ಡೈವ್ ಮಾಡಿದ ನಂತರವಾದರೂ ನನಗೆ ಪ್ರಧಾನಿ ಭೇಟಿಗೆ ಅವಕಾಶ ಸಿಗಬಹುದು ಎಂಬ ನಿರೀಕ್ಷೆಯಿದೆ ಎಂದು ಮಹಾಜನ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
Friends,
If you like this post,kindly comment below the post and do share your
Response,
(Thanks for Reading....)
No comments:
Post a Comment