ಔಷಧ ಮತ್ತು ಸೌಂದರ್ಯವರ್ಧಕ ಅಧಿನಿಯಮಕ್ಕೆ ತಿದ್ದುಪಡಿ ತಂದು,
ಇ-–ಫಾರ್ಮಸಿಗೆ ಸಂಬಂಧಿಸಿದ ಕರಡು ನಿಯಮಗಳನ್ನು ಪ್ರಕಟಿಸಲಾಗಿದೆ

ಆನ್‍ಲೈನ್ ಔಷಧ ಮಾರಾಟಕ್ಕೆ ಕಡಿವಾಣ
ವೈ.ಜಿ.ಮುರಳೀಧರನ್
ಆನ್‍ಲೈನ್ ಮೂಲಕ ಔಷಧ ಮಾರಾಟಕ್ಕೆ ಒಪ್ಪಿಗೆ ಸೂಚಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಮೊದಲ ಹೆಜ್ಚೆಯನ್ನಿಟ್ಟಿದ್ದು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಔಷಧ ಮತ್ತು ಸೌಂದರ್ಯವರ್ಧಕ ಅಧಿನಿಯಮಕ್ಕೆ ತಿದ್ದುಪಡಿ ಮಾಡಿ, ಇ-ಫಾರ್ಮಸಿಗೆ ಸಂಬಂಧಿಸಿದ ಕರಡು ನಿಯಮ ಪ್ರಕಟಿಸಿದೆ. ಅದರಲ್ಲಿ ಇ-ಫಾರ್ಮಸಿಗಳ ನೋಂದಣಿ, ಕಾರ್ಯಾಚರಣೆ, ನೀಡಬೇಕಾದ ಮಾಹಿತಿ, ಗ್ರಾಹಕರ ಕುಂದುಕೊರತೆಗಳ ನಿವಾರಣೆಗೆ ಅವಕಾಶ ಮತ್ತು ಔಷಧಗಳ ವಿತರಣೆಗೆ ಸಂಬಂಧಿಸಿದ ಅಂಶಗಳನ್ನು ಸ್ಪಷ್ಟಪಡಿಸಲಾಗಿದೆ.
ಆನ್‍ಲೈನ್ ಶಾಪಿಂಗ್ ಈಗ ಬೃಹತ್ ಉದ್ಯಮ. ಇದನ್ನು
ನಿಷೇಧಿಸುವ ಬದಲು ನಿಯಂತ್ರಿಸುವುದೇ ಸರಿಯಾದ ಮಾರ್ಗ. ಈ ಹಿನ್ನೆಲೆಯಲ್ಲಿ ಆನ್‍ಲೈನ್ ಮೂಲಕ ನಡೆಯು
ತ್ತಿರುವ ಔಷಧ ಮಾರಾಟವನ್ನು ನಿಯಂತ್ರಿಸಲು ಸರ್ಕಾರ
ಚಿಂತನೆ ನಡೆಸಿರುವುದು ಸ್ವಾಗತಾರ್ಹ. ಪ್ರಸಕ್ತ ಯಾವುದೇ ನಿಯಂತ್ರಣವಿಲ್ಲದೆ ಆನ್‍ಲೈನ್ ಮೂಲಕ ಔಷಧಗಳನ್ನು ಮಾರಾಟ ಮಾಡುತ್ತಿರುವ ಸಂಸ್ಥೆಗಳು ಹೊಸ ನಿಯಮಾವಳಿ ಜಾರಿಯಾದ ನಂತರ ಗ್ರಾಹಕರ ಇಷ್ಟದಂತೆ ಔಷಧಗಳನ್ನು ವಿತರಿಸುವಂತಿಲ್ಲ.

ಕರಡು ನಿಯಮದ ಪ್ರಕಾರ ಇ-ಫಾರ್ಮಸಿಗಳು ತಮ್ಮದೇ ಇ-ಪೋರ್ಟಲ್ ಹೊಂದಿರಬೇಕು. ಕೇಂದ್ರ ಅಥವಾ ರಾಜ್ಯ ಔಷಧ ನಿಯಂತ್ರಣ ಇಲಾಖೆಯಲ್ಲಿ ₹ 50
ಸಾವಿರ ಶುಲ್ಕ ಮತ್ತು ಇತರೆ ದಾಖಲೆಗಳನ್ನು ಸಲ್ಲಿಸಿ ಇ-ಫಾರ್ಮಸಿಗಳನ್ನು ನೋಂದಾಯಿಸಿಕೊಳ್ಳುವುದು
ಕಡ್ಡಾಯ. ಆನ್‍ಲೈನ್ ಮೂಲಕ ಔಷಧ ಮಾರಾಟ ಮಾಡಲು ಸ್ಥಾಪಿಸಬೇಕಾದ ಇ-ಪೋರ್ಟಲ್ ಭಾರತ
ದಲ್ಲೇ ಇರಬೇಕು. ಔಷಧಗಳನ್ನು ಸಾಮಾನ್ಯ ಬಳಕೆದಾರರಿಗಲ್ಲದೆ ಆಸ್ಪತ್ರೆ, ನರ್ಸಿಂಗ್ ಹೋಮ್, ವೈದ್ಯಕೀಯ ಕಾಲೇಜು ಮತ್ತು ವೈದ್ಯಕೀಯ ಅಧ್ಯಯನ ಸಂಸ್ಥೆಗಳಿಗೂ ಸರಬರಾಜು ಮಾಡಬಹುದು.

‘ಆನ್‍ಲೈನ್ ಸಂಸ್ಥೆಗಳು ವೈದ್ಯರ ಚೀಟಿ ಇಲ್ಲದೆ ಔಷಧ ವಿತರಿಸುತ್ತವೆ, ಯಾರು ಯಾವುದೇ ಔಷಧ
ವನ್ನು ತಮಗಿಷ್ಟ ಬಂದಷ್ಟು ಪ್ರಮಾಣದಲ್ಲಿ ಖರೀದಿಸಬ
ಹುದು’ ಎಂಬ ಆರೋಪವಿದೆ. ಇದರಲ್ಲಿ ಸತ್ಯಾಂಶ ಇಲ್ಲ
ದಿಲ್ಲ. ಸಾಂಪ್ರದಾಯಿಕ ಅಂಗಡಿಗಳಲ್ಲೂ ಇಂಥ ಖರೀದಿ
ನಡೆಯುತ್ತಿರುವುದು ವಾಸ್ತವ ಸಂಗತಿ. ಬಳಕೆದಾರರು ತಮ್ಮ ಮನೆಯ ಪಕ್ಕದ ಔಷಧ ಅಂಗಡಿಗೆ ಹೋಗಿ ವೈದ್ಯರ
ಚೀಟಿ ಇಲ್ಲದೆಯೇ ಔಷಧ ಖರೀದಿಸುತ್ತಿಲ್ಲವೇ? ಅಂಗಡಿ
ಯವರು ಸಹ ಔಷಧ ನೀಡುತ್ತಿಲ್ಲವೇ? ಅಪಾಯಕಾರಿ
ಯಾದ ಈ ಪದ್ಧತಿಯನ್ನು ತಪ್ಪಿಸಲು ಕರಡು ನಿಯಮದಲ್ಲಿ ಕೆಲವು ಅಂಶಗಳನ್ನು ಸೇರಿಸಲಾಗಿದೆ.

ಇ-ಫಾರ್ಮಸಿ ಮೂಲಕ ಮಾರಾಟ ಮಾಡುವ ಪ್ರತಿಯೊಂದು ಔಷಧದ ವಿವರವನ್ನೂ ಇ-ಪೋರ್ಟಲ್
ನಲ್ಲಿ ದಾಖಲಿಸಬೇಕಾದ್ದು ಕಡ್ಡಾಯ. ವೈದ್ಯರ ಪ್ರಿಸ್‍ಕ್ರಿ
ಪ್ಷನ್ ಇಲ್ಲದೆ ಔಷಧ ವಿತರಿಸುವಂತಿಲ್ಲ. ವೈದ್ಯರು ಸೂಚಿ
ಸಿದ್ದಕ್ಕಿಂತ ಹೆಚ್ಚು ಅಥವಾ ಕಡಿಮೆ ಪ್ರಮಾಣದಲ್ಲಿಯೂ
ಔಷಧ ಮಾರಾಟ ಮಾಡುವಂತಿಲ್ಲ. ಇದರ ಪೂರ್ಣ ವಿವರ ಇ-ಪೋರ್ಟಲ್‍ನಲ್ಲಿ ಅಡಕವಾಗಿರುತ್ತದೆ.
ಇ-ಪೋರ್ಟಲ್‍ನಲ್ಲಿ ಯಾವೆಲ್ಲ ಮಾಹಿತಿಯನ್ನು ದಾಖಲಿ
ಸಬೇಕೆಂದು ಕರಡು ನಿಯಮದಲ್ಲಿ ಪಟ್ಟಿಮಾಡಲಾಗಿದೆ.
ಉದಾಹರಣೆಗೆ, ಔಷಧ ಮಾರಾಟ ಮಾಡುವವರ ಪರ
ವಾನಗಿ, ಅವರ ಹೆಸರು, ವಿಳಾಸ, ಔಷಧಿಯ ಹೆಸರು,
ಪ್ರಮಾಣ... ಇತ್ಯಾದಿ. ಔಷಧ ವಿತರಿಸುವ ಫಾರ್ಮಾಸಿಸ್ಟ್‌ನ ಹೆಸರಿನ ಜೊತೆಗೆ ಔಷಧ ವಿಜ್ಞಾನ ಪರಿಷತ್ತು ನೀಡುವ ನೋಂದಣಿ ಸಂಖ್ಯೆಯನ್ನೂ ಇ-ಪೋರ್ಟಲ್‌ನಲ್ಲಿ ಸೇರಿಸಬೇಕಾಗುತ್ತದೆ. ಈ ಅಂಶ
ವನ್ನು ಔಷಧ ವಿಜ್ಞಾನ ಪರಿಷತ್ತು ಸ್ವಾಗತಿಸಬಹುದು.
ಯಾಕೆಂದರೆ, ಔಷಧ ವಿಜ್ಞಾನ ಪರಿಷತ್ತು ನೀಡುವ ನೋಂದಣಿ ಹೊಂದಿರುವವರು ಅದನ್ನು ಮತ್ತೊಬ್ಬರಿಗೆ ಮಾರಾಟ ಮಾಡಿಕೊಂಡಿರುವ ಪ್ರಕರಣಗಳು ಸಾಕಷ್ಟು ಇವೆ. ಔಷಧ ಮಳಿಗೆಗೆ ಪರವಾನಗಿ ಪಡೆಯುವವರು ಒಬ್ಬರು, ಅಂಗಡಿ ನಡೆಸುವವರು ಮತ್ತೊಬ್ಬರು... ಇದು ಸಾಮಾನ್ಯ ಎಂಬಂತಾಗಿದೆ. ಔಷಧ ಮತ್ತು ಸೌಂದರ್ಯವರ್ಧಕ ಅಧಿನಿಯಮ ಮತ್ತು ಇತರ ಕಾನೂನುಗಳಡಿ ನಿಷೇಧಕ್ಕೊಳಗಾದ ಔಷಧಗಳನ್ನು ಇ-ಫಾರ್ಮಸಿಗಳು ಮಾರಾಟ ಮಾಡುವಂತಿಲ್ಲ. ಒಂದು ಪ್ರಿಸ್‍ಕ್ರಿಪ್ಷನ್‍ಗೆ ವಿತರಿಸಿದ ಔಷಧಿಯನ್ನು ಮತ್ತೊಮ್ಮೆ ವಿತರಿಸುವಂತಿಲ್ಲ. ಅದೇ ಔಷಧ ಮತ್ತೊಮ್ಮೆ ಪಡೆಯಬೇಕಾದರೆ ಪ್ರತ್ಯೇಕ ಪ್ರಿಸ್‍ಕ್ರಿಪ್ಷನ್ ಅಗತ್ಯ.

ಇ-ಫಾರ್ಮಸಿಗಳು ಮಾಹಿತಿ ತಂತ್ರಜ್ಞಾನ ಅಧಿನಿ
ಯಮ, ಗ್ರಾಹಕ ಸಂರಕ್ಷಣಾ ಅಧಿನಿಯಮ ಮತ್ತು ಔಷಧ
ಮತ್ತು ಸೌಂದರ್ಯವರ್ಧಕ ಅಧಿನಿಯಮದಲ್ಲಿರುವ ಗ್ರಾಹಕಸ್ನೇಹಿ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಉದಾಹರಣೆಗೆ ಪ್ರಿಸ್‍ಕ್ರಿಪ್ಷನ್‍ನಲ್ಲಿರುವ ಮಾಹಿತಿಯನ್ನು ಅಥವಾ ಗ್ರಾಹಕರು ಸಲ್ಲಿಸುವ ಇನ್ಯಾವುದೇ ಮಾಹಿತಿ
ಯನ್ನು ಕೇಂದ್ರ ಅಥವಾ ರಾಜ್ಯ ಸರ್ಕಾರವನ್ನು ಹೊರತು
ಪಡಿಸಿ ಇತರರಿಗೆ ನೀಡುವಂತಿಲ್ಲ. ಗ್ರಾಹಕರ ಖಾಸಗಿತನವನ್ನು ಕಾಪಾಡುವ ನಿಟ್ಟಿನಲ್ಲಿ ಈ ಅಂಶ ಮುಖ್ಯವಾಗುತ್ತದೆ. ಆದರೆ ಮಾಹಿತಿ ಸೋರಿಕೆಯನ್ನು ತಡೆಗಟ್ಟುವುದು ಹೇಗೆ ಮತ್ತು ಹಾಗೊಮ್ಮೆ ಸೋರಿಕೆಯಾದಲ್ಲಿ ಗ್ರಾಹಕರು ಯಾವ ಕ್ರಮ ಕೈಗೊಳ್ಳಬಹುದು ಎಂಬುದು ಕರಡು ನಿಯಮದಲ್ಲಿ ಸ್ಪಷ್ಟವಾಗಿಲ್ಲ.

ಇ-ಫಾರ್ಮಸಿಗಳು ಕಾನೂನಿನ ಚೌಕಟ್ಟಿನಲ್ಲಿ ಕಾರ್ಯ
ನಿರ್ವಹಿಸುತ್ತಿವೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳುವ ಜವಾಬ್ದಾರಿಯನ್ನು ಕೇಂದ್ರ ಅಥವಾ ರಾಜ್ಯ ಔಷಧ ನಿಯಂತ್ರಕರು ಅಥವಾ ರಾಜ್ಯ ಪರವಾನಗಿ ಪ್ರಾಧಿಕಾರಕ್ಕೆ ನೀಡಲಾಗಿದೆ. ಇ-ಫಾರ್ಮಸಿಗಳು ನಿಯಮಿತವಾಗಿ ಮಾಹಿತಿಯನ್ನು ಸಲ್ಲಿಸುತ್ತಿರಬೇಕು. ಔಷಧಗಳ ಲಭ್ಯತೆ, ವಿತರಿಸುವ ವಿಧಾನ, ನೋಂದಾಯಿತ ಫಾರ್ಮಾಸಿಸ್ಟ್
ಗಳ ವಿವರ... ಇತ್ಯಾದಿಯನ್ನು ಈ ಪ್ರಾಧಿಕಾರ ಪರೀಕ್ಷಿಸು
ತ್ತಿರಬೇಕು. ಕರಡು ನಿಯಮದಲ್ಲಿ ‘ವ್ಯವಹಾರ ಪರಿಶೋ
ಧನೆ’ ಎಂಬ ಹೊಸ ಪರಿಕಲ್ಪನೆಯನ್ನು ಸೇರಿಸಲಾಗಿದೆ. ಇ-ಫಾರ್ಮಸಿ ಸ್ವೀಕರಿಸುವ ವೈದ್ಯರ ಪ್ರಿಸ್‍ಕ್ರಿಪ್ಷನ್ ಮತ್ತು ಅದಕ್ಕೆ ಸಂಬಂಧಪಟ್ಟಂತೆ ವಿತರಿಸಿರುವ ಔಷಧ ಒಂದೇ ಆಗಿದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳುವುದೇ ವ್ಯವಹಾರ ಪರಿಶೋಧನೆ.

ಔಷಧ ವಿತರಣೆಯಲ್ಲಿ ತಡವಾದರೆ ಅದನ್ನು ಗಂಭೀರ
ವಾಗಿ ಪರಿಗಣಿಸಲಾಗುವುದು. ಗ್ರಾಹಕರ ಕುಂದುಕೊರತೆ ಸ್ವೀಕರಿಸಿ ಅವರಿಗೆ ಮಾಹಿತಿ ಒದಗಿಸಲು ಪ್ರತಿಯೊಂದು ಇ-ಫಾರ್ಮಸಿಯೂ ಸಹಾಯವಾಣಿಯನ್ನು ಸ್ಥಾಪಿಸಬೇಕು ಮತ್ತು ಕರೆಗಳಿಗೆ ಉತ್ತರಿಸಲು ಒಬ್ಬ ನೋಂದಾಯಿತ ಫಾರ್ಮಸಿಸ್ಟ್ ಅನ್ನು ನೇಮಕ ಮಾಡಬೇಕೆಂದು ನಿಯಮ ಹೇಳುತ್ತದೆ. ಇ-ಫಾರ್ಮಸಿಗಳು ಯಾವುದೇ ಔಷಧಿಯ ಬಗ್ಗೆ ಜಾಹೀರಾತು ನೀಡುವಂತಿಲ್ಲ. ಇ-ಫಾರ್ಮಸಿ ಮೂಲಕ ವಿತರಿಸಿದ ಔಷಧ ನಕಲಿ ಅಥವಾ ಸರಿಯಾದ ಗುಣಮಟ್ಟದ್ದಲ್ಲ ಎಂಬ ಅನುಮಾನ ಬಂದರೆ ಗ್ರಾಹಕರು ರಾಜ್ಯ ಔಷಧ ನಿಯಂತ್ರಕರಿಗೆ ಅಥವಾ ರಾಜ್ಯ ಪರವಾ
ನಗಿ ಪ್ರಾಧಿಕಾರಕ್ಕೆ ದೂರು ಸಲ್ಲಿಸಬಹುದು. ಗ್ರಾಹಕ ಸಂರಕ್ಷಣಾ ಅಧಿನಿಯಮದ ಅಡಿಯಲ್ಲೂ ದೂರು ಸಲ್ಲಿಸಲು ಅವಕಾಶವಿದೆ.

Friends, If you like this post,kindly comment below the post and do share your Response, (Thanks for Reading....)
No comments:
Post a Comment