ಬ್ಯಾಂಕುಗಳ ವಸೂಲಾಗದ ಸಾಲ ಸಮಸ್ಯೆ ಕಡಿವಾಣಕ್ಕೆ ಹೊಸ ಮಂತ್ರ

ರಘುರಾಂ ರಾಜನ್
ಪ್ರಜಾವಾಣಿ ವಾರ್ತೆ
ನವದೆಹಲಿ: ಬೇಕಾಬಿಟ್ಟಿ ಸಾಲ ವಿತರಣೆ ಮತ್ತು ಸಾಲಮನ್ನಾದಂತಹ ವಿವೇಚನಾರಹಿತ ನಿರ್ಧಾರಗಳಿಂದ ವಸೂಲಾಗದ ಸಾಲದ (ಎನ್‌ಪಿಎ) ಸಮಸ್ಯೆ ಮತ್ತಷ್ಟು ಹೆಚ್ಚಲಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್‌ನ ಮಾಜಿ ಗವರ್ನರ್ ರಘುರಾಮ್ ರಾಜನ್ ಅವರು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ದೇಶದ ಬ್ಯಾಂಕಿಂಗ್ ವಲಯ ಎದುರಿಸುತ್ತಿರುವ ‘ಎನ್‌ಪಿಎ’ ಸಮಸ್ಯೆಗೆ ಆರ್‌ಬಿಐ ಕಾರಣವಲ್ಲ. ಸರ್ಕಾರದ ವಿವೇಚನಾರಹಿತ ನೀತಿ ಮತ್ತು ನಿರ್ಧಾರ ಕಾರಣ ಎಂದು ಅವರು ನೇರವಾಗಿ ಆರೋಪಿಸಿದ್ದಾರೆ. ‘ಎನ್‌ಪಿಎ’ದ ಹೊಸ ಬಿಕ್ಕಟ್ಟಿನ ಮೂಲಗಳ ಬಗ್ಗೆ ಸರ್ಕಾರ ಗಮನ ಹರಿಸಬೇಕು. ಮಹತ್ವಾಕಾಂಕ್ಷೆಯ ಸಾಲ ವಿತರಣೆಯ ಗುರಿ ಬಗ್ಗೆ ಸರ್ಕಾರ ಸಂಯಮ ತೋರಬೇಕು ಎಂದು ಸಲಹೆ ನೀಡಿದ್ದಾರೆ.
ಬ್ಯಾಂಕ್‌ಗಳ ಅತಿಯಾದ ವಿಶ್ವಾಸ, ಆರ್ಥಿಕ ಅಭಿವೃದ್ಧಿಗೆ ಪೂರಕವಲ್ಲದ ಸರ್ಕಾರದ ಮಂದಗತಿಯ ನೀತಿ ಕೂಡ ಈ ಸಮಸ್ಯೆ ಉಲ್ಬಗೊಳ್ಳಲು ಕಾರಣವಾಗಿವೆ. ಯುಪಿಎ ಮತ್ತು ಎನ್‌ಡಿಎ ಸರ್ಕಾರದ ಅವಧಿಯಲ್ಲಿ ತೆಗೆದುಕೊಂಡ ಅನೇಕ ತಪ್ಪು ನಿರ್ಧಾರಗಳು ಕೂಡ ಕೊಡುಗೆ ನೀಡಿವೆ ಎಂದು ಹೇಳಿದ್ದಾರೆ.
ಆರ್‌ಬಿಐ ಹೊಣೆಯಲ್ಲ:
‘ಈ ಸಮಸ್ಯೆಗೆ ಆರ್‌ಬಿಐ ಮೇಲೆ ಗೂಬೆ ಕೂರಿಸುವ ಕೆಲಸವನ್ನು ಸರ್ಕಾರ ಮಾಡಬಾರದು. ವಾಣಿಜ್ಯ ಸಾಲ ವಿತರಣೆ ಪ್ರಕ್ರಿಯೆಯಲ್ಲಿ ಆರ್‌ಬಿಐ ಆಟಗಾರನಲ್ಲ, ಕೇವಲ ತೀರ್ಪುಗಾರ’ ಎಂದು ಸಂಸತ್ ಅಂದಾಜು ಸಮಿತಿಗೆ ಸಲ್ಲಿಸಿದ ಟಿಪ್ಪಣಿಯಲ್ಲಿ ರಾಜನ್ ತಿಳಿಸಿದ್ದಾರೆ.
ಬಿಜೆಪಿ ಹಿರಿಯ ಮುಖಂಡ ಮುರುಳಿ ಮನೋಹರ ಜೋಷಿ ನೇತೃತ್ವದ ಸಂಸತ್ತಿನ ಅಂದಾಜು ಸಮಿತಿಯು ಎನ್‌ಪಿಎ ಸಮಸ್ಯೆ ಬಗ್ಗೆ ರಾಜನ್ ಅವರ ಅಭಿಪ್ರಾಯ ಕೇಳಿತ್ತು. ಆರ್‌ಬಿಐ ಹೆಚ್ಚೆಂದರೆ ಬ್ಯಾಂಕ್‌ಗಳ ಸಾಲ ವಿತರಣೆಯ ವಿಧಾನದ ಬಗ್ಗೆ ಎಚ್ಚರಿಕೆ ನೀಡಬಹುದಷ್ಟೇ. ಬ್ಯಾಂಕ್
ಗಳು ವಾಣಿಜ್ಯ ಸಾಲ ವಿತರಣೆ ಮತ್ತು ತನಿಖೆಯಂತಹ ವಿಷಯಗಳಲ್ಲಿ ಆರ್‌ಬಿಐ ಮೂಗು ತೂರಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಗಳು ವಾಣಿಜ್ಯ ಸಾಲ ವಿತರಣೆ ಮತ್ತು ತನಿಖೆಯಂತಹ ವಿಷಯಗಳಲ್ಲಿ ಆರ್‌ಬಿಐ ಮೂಗು ತೂರಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
‘ಎನ್‌ಡಿಎ ಸರ್ಕಾರದ ಕಿಸಾನ್ ಕ್ರೆಡಿಟ್ ಕಾರ್ಡ್ ಮತ್ತು ಮುದ್ರಾ ಯೋಜನೆ ಜನಪ್ರಿಯವಾಗಿರಬಹುದು. ಆದರೆ, ಯೋಜನೆ ಅಡಿ ವಿತರಿಸುತ್ತಿರುವ ಸಾಲ ಮತ್ತು ರಾಜ್ಯಗಳ ಸಾಲಮನ್ನಾ ನಿರ್ಧಾರಗಳು ಭವಿಷ್ಯದಲ್ಲಿ ಆರ್ಥಿಕ ಅಪಾಯ ತಂದೊಡ್ಡಲಿವೆ’ ಎಂದು ಎಚ್ಚರಿಸಿದ್ದಾರೆ.
ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮ ವಲಯಕ್ಕೆ (ಎಂಎಸ್‌ಎಂಇ) ಭಾರತೀಯ ಸಣ್ಣ ಉದ್ದಿಮೆಗಳ ಅಭಿವೃದ್ಧಿ ಬ್ಯಾಂಕ್ (ಎಸ್‌ಐಡಿಬಿಐ) ನೀಡುತ್ತಿರುವ ಸಾಲಖಾತ್ರಿ ಯೋಜನೆ ಬಗ್ಗೆಯೂ ಅವರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಇದು ಸಾಲದ ಹೊರೆಯನ್ನು ಮತ್ತಷ್ಟು ಹೆಚ್ಚಿಸಲಿದೆ ಎಂದು ಹೇಳಿದ್ದಾರೆ.
ನಾಯಕತ್ವದ ಕೊರತೆ:
ಬ್ಯಾಂಕಿಂಗ್ ವಲಯ ನಾಯಕತ್ವದ ಕೊರತೆ ಎದುರಿಸುತ್ತಿದೆ ಎಂದೂ ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಬ್ಯಾಂಕ್ ನಿರ್ದೇಶಕರ ಮಂಡಳಿಯಲ್ಲಿ ವೃತ್ತಿಪರರ ಕೊರತೆ ತೀವ್ರವಾಗಿ ಕಾಡುತ್ತಿದೆ. ಬ್ಯಾಂಕ್ ನಿರ್ದೇಶಕ ಮಂಡಳಿಗೆ ಸದಸ್ಯರ ನಾಮನಿರ್ದೇಶನದಲ್ಲಿ ರಾಜಕೀಯ ಕಂಡುಬರುತ್ತಿದೆ. ಈ ಸದಸ್ಯರಿಗೆ ಸಾಲ ವಿತರಣೆ ಸೇರಿದಂತೆ ಬ್ಯಾಂಕಿಂಗ್ ವಲಯದ ಅನುಭವ ಇರುವುದಿಲ್ಲ ಎಂದು ಆರೋಪಿಸಿದ್ದಾರೆ.
ಯುಪಿಎ ಅವಧಿಯಲ್ಲಿಯೇ ಹೆಚ್ಚಿನ ಸಾಲ
ದೇಶದ ಆರ್ಥಿಕತೆ ಉತ್ತಮ ಸ್ಥಿತಿಯಲ್ಲಿದ್ದ ಯುಪಿಎ ಆಡಳಿತ ಅವಧಿಯಲ್ಲಿ 2006–2008 ಹೆಚ್ಚಿನ ಸಾಲ ವಿತರಿಸಲಾಗಿದೆ. ಎನ್‌ಪಿಎ ಸಮಸ್ಯೆ ಹೆಚ್ಚಳಕ್ಕೆ ಈ ಅವಧಿಯಲ್ಲಿ ವಿತರಿಸಲಾದ ಸಾಲಗಳು ಪ್ರಮುಖ ಕಾರಣವಾಗಿವೆ. ಈ ಅವಧಿಯಲ್ಲಿ ಬ್ಯಾಂಕ್‌ಗಳೂ ಕೂಡ ತಪ್ಪು ಎಸಗಿವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಸಾಲ ವಿತರಣೆ, ಮನ್ನಾದಂತಹ ಯೋಜನೆಗಳ ಬಗ್ಗೆ ಎಚ್ಚರಿಕೆಯ ಹೆಜ್ಜೆ ಇಡಬೇಕು. ಭವಿಷ್ಯದಲ್ಲಿ ಎನ್‌ಪಿಎ ಹೆಚ್ಚಲು ಸರ್ಕಾರದ ಇಂತಹ ನಿರ್ಧಾರಗಳು ನಾಂದಿ ಹಾಡುತ್ತವೆ
ರಘುರಾಂ ರಾಜನ್
ಆರ್‌ಬಿಐ ಮಾಜಿ ಗವರ್ನರ್
Friends, If you like this post,kindly comment below the post and do share your Response, (Thanks for Reading....)
No comments:
Post a Comment