ಜಲಮೂಲ ಪರಿಶುದ್ಧವಾಗಿರಲಿ ‘ಪಿಒಪಿ ಮೂರ್ತಿ’ ತಂದರೆ ಶಿಕ್ಷಿಸಿ

SAMPADAKIYA-12-09-18.jpg
POP
ನದಿ ಹಾಗೂ ಕೆರೆಗಳಂತಹ ಜಲಮೂಲಗಳ ರಕ್ಷಣೆಗೆ ರಾಜ್ಯದ ಬದ್ಧತೆ ಎಂತಹದ್ದು ಎನ್ನುವುದು ಈ ಸಲದ ಗಣೇಶೋತ್ಸವದಲ್ಲಿ ಮತ್ತೊಮ್ಮೆ ಪರೀಕ್ಷೆಗೆ ಒಳಗಾಗಲಿದೆ. ಮಾರುಕಟ್ಟೆಯಲ್ಲಿ ಖರೀದಿಸಿ ತಂದು ಪ್ರತಿಷ್ಠಾಪಿಸಿದ ಗಣೇಶನ ಮೂರ್ತಿಯನ್ನು ಕೊನೆಗೆ ನೀರಿನಲ್ಲೇ ವಿಸರ್ಜಿಸುವುದು ಸಂಪ್ರದಾಯ. ಆದರೆ, ಪ್ಲಾಸ್ಟರ್ ಆಫ್ ಪ್ಯಾರಿಸ್‌ನಿಂದ (ಪಿಒಪಿ) ತಯಾರಿಸಿದ ಮೂರ್ತಿಗಳು ನೀರನ್ನು ಸಂಪೂರ್ಣವಾಗಿ ಕಲುಷಿತಗೊಳಿಸುತ್ತವೆ.
ಪಿಒಪಿ ನೀರಿನಲ್ಲಿ ಸುಲಭವಾಗಿ ಕರಗುವುದಿಲ್ಲ. ಅಲ್ಲದೆ, ಅದು ಬಿಡುಗಡೆ ಮಾಡುವ ವಿಷಕಾರಿ ರಾಸಾಯನಿಕ ಪದಾರ್ಥಗಳು ನೀರನ್ನು ಬಳಕೆಗೆ ಯೋಗ್ಯವಿಲ್ಲದಂತೆ ಮಲಿನಗೊಳಿಸುತ್ತವೆ. ಪಿಒಪಿ ಮೂರ್ತಿಗಳಿಂದ ಜಲಮೂಲಗಳು ಹಾಳಾಗದಂತೆ ತಡೆಗಟ್ಟಲು ಹಲವು ಸ್ವಯಂಸೇವಾ ಸಂಸ್ಥೆಗಳು ಹತ್ತಾರು ವರ್ಷಗಳಿಂದ ಜನಜಾಗೃತಿ ಮೂಡಿಸುತ್ತಲೇ ಬಂದಿವೆ. ಆದರೆ, ಪರಿಸರ ಕಾಳಜಿಯ ಈ ಧ್ವನಿಗಳು ಕೇಳಿಸದಷ್ಟು ನಮ್ಮ ಸಮುದಾಯದ ಕಿವಿಗಳು ಕಿವುಡಾಗಿವೆ. ಕೊನೆಯ ಅಸ್ತ್ರ ಎಂಬಂತೆ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ), ಪಿಒಪಿ ಮೂರ್ತಿಗಳ ತಯಾರಿಕೆ ಮತ್ತು ಮಾರಾಟದ ಮೇಲೆ 2014ರಿಂದಲೇ ನಿಷೇಧ ಹೇರಿದೆ. ಆದರೆ, ನಿಷೇಧ ಜಾರಿಯಾಗಿ ನಾಲ್ಕು ವರ್ಷಗಳೇ ಆಗಿದ್ದರೂ ಪಿಒಪಿ ಮೂರ್ತಿಗಳ ತಯಾರಿಕೆ, ಮಾರಾಟ ಹಾಗೂ ಖರೀದಿ ಇನ್ನೂ ನಿಂತಿಲ್ಲ. ತಮ್ಮ ಕಣ್ಣೆದುರೇ ಇಂತಹ ಮೂರ್ತಿಗಳ ಮಾರಾಟ ರಾಜಾರೋಷವಾಗಿ ನಡೆದರೂ ಕಂಡೂ ಕಾಣದಂತೆ ಕೆಎಸ್‌ಪಿಸಿಬಿ ಮತ್ತು ಸ್ಥಳೀಯ ಆಡಳಿತ ಸಂಸ್ಥೆಗಳು ಜಾಣಕುರುಡು ಪ್ರದರ್ಶಿಸುತ್ತಿವೆ. ಕ್ರಮ ಕೈಗೊಳ್ಳದೆ ‘ಧರ್ಮಸಂಕಟ’ದ ನೆಪ ಹೇಳುತ್ತಿರುವ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳ ಧೋರಣೆಯಂತೂ ಹೊಣೆಗೇಡಿತನದಿಂದ ಕೂಡಿದೆ.

‘ಹಲವು ವರ್ಷಗಳಿಂದ ಪಿಒಪಿ ಮೂರ್ತಿಗಳನ್ನು ತಯಾರು ಮಾಡಿದ್ದರಿಂದ ಅವುಗಳ ಸಂಗ್ರಹ ಭಾರಿ ಪ್ರಮಾಣದಲ್ಲಿದೆ. ಆ ಸಂಗ್ರಹ ಖಾಲಿಯಾದ ಮೇಲೆ ಪಿಒಪಿ ಬದಲು ಪರಿಸರಸ್ನೇಹಿ ಮೂರ್ತಿಗಳನ್ನು ತಯಾರಿಸುತ್ತೇವೆ’ ಎಂದು ಅವುಗಳ ತಯಾರಕರು, ವಹಿವಾಟಿಗೆ ಚ್ಯುತಿ ಬರದಂತೆ, ಕೆಲವು ವರ್ಷಗಳನ್ನು ತಳ್ಳಿದ್ದಾಯಿತು. ಅವರಿಂದ ಈಗಲೂ ಅದೇ ರಾಗ ಕೇಳಿಬರುತ್ತಿದೆ. ಇಲ್ಲಿಯತನಕ ಅವರಿಗೆ ಕೊಟ್ಟ ಅವಕಾಶವೇ ಹೆಚ್ಚಾಗಿದೆ. ಅದೇ ಬೇಡಿಕೆಯನ್ನು ಮತ್ತೆ ಮುಂದಿಡುತ್ತಿರುವವರಿಗೆ
ಸ್ವಹಿತ ಮುಖ್ಯವಾಗಿದೆಯೇ ವಿನಾ ಪರಿಸರದ ಕುರಿತು ಒಂದಿನಿತೂ ಕಾಳಜಿಯಿಲ್ಲ. ಈಗೀಗ ಎಲ್ಲೆಡೆ ಪರಿಸರಸ್ನೇಹಿ ಮೂರ್ತಿಗಳು ಬೇಕಾದಷ್ಟು ಸಿಗುತ್ತಿವೆ. ರಾಜಧಾನಿಯಲ್ಲಿ ಹಲವು ಸಂಘಟನೆಗಳು ಮಣ್ಣಿನ ಮೂರ್ತಿಗಳನ್ನು ಉಚಿತವಾಗಿಯೂ ಹಂಚಿಕೆ ಮಾಡಿವೆ. ಮೂರ್ತಿಯನ್ನು ವಿಸರ್ಜಿಸಿದ ಮಣ್ಣಿನಲ್ಲೇ ಸಸಿಗಳನ್ನು ಬೆಳೆಸುವ ಅವಕಾಶಗಳನ್ನೂ ಸೃಷ್ಟಿಸಲಾಗಿದೆ. ಈಗಲೂ ಜನ ಪಿಒಪಿ ಮೂರ್ತಿಯನ್ನೇ ಖರೀದಿಸಲು ಹೊರಟರೆ ಅವರ ಮನೋಭಾವಕ್ಕೆ ಏನು ಹೇಳಬೇಕು? ಇಂತಹ ಮೂರ್ತಿಗಳನ್ನು ಮಾರಾಟ ಮಾಡುವವರು ಮಾತ್ರವಲ್ಲದೆ ಕೊಳ್ಳುವವರ ವಿರುದ್ಧವೂ ಕೆಎಸ್‌ಪಿಸಿಬಿ, ಬಿಬಿಎಂಪಿ ಹಾಗೂ ಪೊಲೀಸ್ ಅಧಿಕಾರಿಗಳು ಒಟ್ಟಾಗಿ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಹಲವು ಸಾರ್ವಜನಿಕ ಉತ್ಸವ ಸಮಿತಿಗಳು ಪಿಒಪಿ ಮೂರ್ತಿಯನ್ನೇ ಕೂರಿಸುತ್ತೇವೆ ಎಂದು ಪಟ್ಟು ಹಿಡಿದಿರುವುದು ಕುಚೋದ್ಯ. ಪರಿಸರಸ್ನೇಹಿ ಮೂರ್ತಿ ಕೂರಿಸದ ಸಮಿತಿಗಳನ್ನು ಪತ್ತೆ ಹಚ್ಚಿ, ಶಿಕ್ಷಿಸುವುದು ಆಡಳಿತ ವ್ಯವಸ್ಥೆಗೆ ಕಷ್ಟದ ಕೆಲಸವೇನಲ್ಲ. ರಾಜಕೀಯ ಮುಖಂಡರು ಇಂತಹ ಸಮಿತಿಗಳಿಗೆ ಬೆಂಬಲವಾಗಿ ನಿಲ್ಲಬಾರದಷ್ಟೆ. ಪಿಒಪಿ ಗಣೇಶ ಮೂರ್ತಿಯನ್ನು ಕೂರಿಸುವಂತಿಲ್ಲ ಎನ್ನುವುದು ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುತ್ತದೆ ಎಂಬ ವಾದವನ್ನೂ ತೇಲಿಬಿಡಲಾಗಿದೆ. ಆದರೆ, ದಿಕ್ಕು ತಪ್ಪಿಸುವಂತಹ ವಾದವಿದು. ಅದ್ಯಾವ ಧಾರ್ಮಿಕ ಗ್ರಂಥದಲ್ಲಿ ಪಿಒಪಿ ಗಣೇಶನ ಮೂರ್ತಿಯನ್ನು ಕೂರಿಸುವಂತೆ ಹೇಳಲಾಗಿದೆ? ಪ್ರಸಕ್ತ ವರ್ಷ ಈಗಾಗಲೇ ದೊಡ್ಡ ಸಂಖ್ಯೆಯಲ್ಲಿಯೇ ಪಿಒಪಿ ಮೂರ್ತಿಗಳು ಮಾರಾಟವಾಗಿರುವುದು ಮುಚ್ಚಿಡಲಾಗದ ಸತ್ಯ. ಅಂತಹ ಮೂರ್ತಿಗಳನ್ನು ವಿಸರ್ಜಿಸಲು ಬಂದವರಿಗೆ ಭಾರಿ ಮೊತ್ತದ ದಂಡವನ್ನು ವಿಧಿಸುವ ಮೂಲಕ ತಕ್ಕಪಾಠ ಕಲಿಸಬೇಕು. ಮುಂದಿನ ವರ್ಷಗಳಲ್ಲಿ ಅಂತಹ ಮೂರ್ತಿಗಳತ್ತ ಕಣ್ಣೆತ್ತಿ ನೋಡುವ ಧೈರ್ಯವನ್ನೂ ಮಾಡದಂತೆ ಅವರಲ್ಲಿ ಭಯ ಹುಟ್ಟಿಸಬೇಕು.

Friends, If you like this post,kindly comment below the post and do share your Response, (Thanks for Reading....)
No comments:
Post a Comment