ನವದೆಹಲಿ (ಪಿಟಿಐ): ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳನ್ನು (ಆರ್‌ಆರ್‌ಬಿ) ವಿಲೀನಗೊಳಿಸುವ ಮೂಲಕ ಅವುಗಳ ಸಂಖ್ಯೆಯನ್ನು 56 ರಿಂದ 36ಕ್ಕೆ ತಗ್ಗಿಸಲು ಕೇಂದ್ರ ಸರ್ಕಾರ ಮುಂದಾಗಿದೆ.
ಈ ಕುರಿತು ರಾಜ್ಯಗಳ ಸಲಹೆ ಕೇಳಲಾಗಿದೆ ಎಂದು ಹಣಕಾಸು ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಗ್ರಾಮೀಣ ಪ್ರದೇಶಕ್ಕೆ ಹೆಚ್ಚಿನ ಸಾಲ ಸಿಗುವಂತೆ ಮಾಡಲು ಕೇಂದ್ರ ಸರ್ಕಾರ ಈ ವಿಲೀನಕ್ಕೆ ಮುಂದಾಗಿದೆ. ಇದರಿಂದ ಈ ಬ್ಯಾಂಕ್‌ಗಳ ವೆಚ್ಚದ ಪ್ರಮಾಣ ತಗ್ಗ
ಲಿದ್ದು, ಮೂಲ ಬಂಡವಾಳ ವೃದ್ಧಿಯಾಗಲಿದೆ. ಕಾರ್ಯಾಚರಣೆ ವ್ಯಾಪ್ತಿಯೂ ಹಿಗ್ಗಲಿದೆ ಎಂದು ಹೇಳಿದ್ದಾರೆ
ಲಿದ್ದು, ಮೂಲ ಬಂಡವಾಳ ವೃದ್ಧಿಯಾಗಲಿದೆ. ಕಾರ್ಯಾಚರಣೆ ವ್ಯಾಪ್ತಿಯೂ ಹಿಗ್ಗಲಿದೆ ಎಂದು ಹೇಳಿದ್ದಾರೆ
ಆರ್‌ಆರ್‌ಬಿಗಳಲ್ಲಿ ಕೇಂದ್ರ ಸರ್ಕಾರ ಶೇ 50ರಷ್ಟು, ಪ್ರಾಯೋಜಿತ ಬ್ಯಾಂಕ್‌ಗಳು ಶೇ 35 ಹಾಗೂ ರಾಜ್ಯ ಸರ್ಕಾರಗಳು ಶೇ 15 ರಷ್ಟು ಪಾಲು ಹೊಂದಿವೆ.
ಈ ಬ್ಯಾಂಕ್‌ಗಳ ಹಣಕಾಸು ಸ್ಥಿತಿ ಸುಧಾರಿಸಲು ಕೇಂದ್ರ ಸರ್ಕಾರ 2005ರಲ್ಲಿ ಹಂತ ಹಂತವಾಗಿ ವಿಲೀನ ಪ್ರಕ್ರಿಯೆಗೆ ಚಾಲನೆ ನೀಡಿತ್ತು. 2005ರಲ್ಲಿ ಇವುಗಳ ಸಂಖ್ಯೆ 196 ಇತ್ತು. ಸದ್ಯ 56 ಬ್ಯಾಂಕ್‌ಗಳು ಕಾರ್ಯನಿರ್ವಹಿಸುತ್ತಿವೆ.
Friends, If you like this post,kindly comment below the post and do share your Response, (Thanks for Reading....)
No comments:
Post a Comment