ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಗರ್ಗ್
ನವದೆಹಲಿ (ಪಿಟಿಐ): ‘ರೂಪಾಯಿ ಕುಸಿತ ತಡೆಯಲು ಅನಗತ್ಯ ವಸ್ತುಗಳ ಆಮದು ನಿರ್ಬಂಧವು ಶೀಘ್ರದಲ್ಲಿಯೇ ಜಾರಿಗೆ ಬರಲಿದೆ’ ಎಂದು ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಸುಭಾಷ್ ಚಂದ್ರ ಗರ್ಗ್ ತಿಳಿಸಿದ್ದಾರೆ.
ವಾಣಿಜ್ಯ ಕಾರ್ಯದರ್ಶಿಯ ನೇತೃತ್ವದ ತಂಡವು ಅನಗತ್ಯ ವಸ್ತುಗಳ ಪಟ್ಟಿ
ಯನ್ನು ಅಂತಿಮಗೊಳಿಸುತ್ತಿದೆ. ಶೀಘ್ರವೇ ಈ ಬಗ್ಗೆ ಪ್ರಕಟಣೆ ಹೊರಬೀಳಲಿದೆ’ ಎಂದು ಹೇಳಿದ್ದಾರೆ.
ಯನ್ನು ಅಂತಿಮಗೊಳಿಸುತ್ತಿದೆ. ಶೀಘ್ರವೇ ಈ ಬಗ್ಗೆ ಪ್ರಕಟಣೆ ಹೊರಬೀಳಲಿದೆ’ ಎಂದು ಹೇಳಿದ್ದಾರೆ.
ಅಸಹಾಯಕ ಅಲ್ಲ: ‘ರೂಪಾಯಿ ಮೌಲ್ಯ ಕುಸಿತ ನಿಯಂತ್ರಿಸಲು ಕೇಂದ್ರ ಸರ್ಕಾರ ಅಸಹಾಯಕವಾಗಿದೆ ಎಂದು ಭಾವಿಸುವ ಅಗತ್ಯ ಇಲ್ಲ. ಮೌಲ್ಯ
ವರ್ಧನೆಯ ಕ್ರಮಗಳು ಹಂತ ಹಂತ
ವಾಗಿ ಜಾರಿಗೊಳ್ಳುತ್ತಿವೆ.
ವರ್ಧನೆಯ ಕ್ರಮಗಳು ಹಂತ ಹಂತ
ವಾಗಿ ಜಾರಿಗೊಳ್ಳುತ್ತಿವೆ.
‘ರೂಪಾಯಿ ಕುಸಿತದಿಂದ ಚಾಲ್ತಿ ಖಾತೆ ಕೊರತೆ ಮೇಲಾಗುತ್ತಿರುವ ಪರಿಣಾಮಗಳನ್ನು ಸರ್ಕಾರ ಗಮನಿಸುತ್ತಿದೆ. ಹೀಗಾಗಿಯೇ ಪ್ರಧಾನಿ ನರೇಂದ್ರ ಮೋದಿ ಅವರು ಸಭೆ ನಡೆಸಿ, ಆರ್ಥಿಕ ಪುನಶ್ಚೇತನ ಕ್ರಮಗಳನ್ನು ಪ್ರಕಟಿಸಿ
ದ್ದಾರೆ. ಅವುಗಳಲ್ಲಿ ಕೆಲವು ಜಾರಿಯಾಗಿವೆ. ಇನ್ನೂ ಕೆಲವು ಜಾರಿ ಹಂತದಲ್ಲಿವೆ’ ಎಂದು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ದ್ದಾರೆ. ಅವುಗಳಲ್ಲಿ ಕೆಲವು ಜಾರಿಯಾಗಿವೆ. ಇನ್ನೂ ಕೆಲವು ಜಾರಿ ಹಂತದಲ್ಲಿವೆ’ ಎಂದು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
‘ಈ ವರ್ಷದಲ್ಲಿ ರೂಪಾಯಿ
ಶೇ 12ರಷ್ಟು ಕುಸಿತ ಕಂಡಿದೆ. ಇದು ತಾತ್ಕಾಲಿಕ ಬೆಳವಣಿಗೆಯಷ್ಟೆ. ಆರ್ಥಿಕ ಸುಧಾರಣಾ ಕ್ರಮಗಳಿಂದ 68 ರಿಂದ 70ರ ಮಟ್ಟದಲ್ಲಿ ನಿಯಂತ್ರಿಸುವ ವಿಶ್ವಾಸವಿದೆ.
ಶೇ 12ರಷ್ಟು ಕುಸಿತ ಕಂಡಿದೆ. ಇದು ತಾತ್ಕಾಲಿಕ ಬೆಳವಣಿಗೆಯಷ್ಟೆ. ಆರ್ಥಿಕ ಸುಧಾರಣಾ ಕ್ರಮಗಳಿಂದ 68 ರಿಂದ 70ರ ಮಟ್ಟದಲ್ಲಿ ನಿಯಂತ್ರಿಸುವ ವಿಶ್ವಾಸವಿದೆ.
‘ತಯಾರಿಕಾ ಕಂಪನಿಗಳಿಗೆ ಬಾಹ್ಯ ವಾಣಿಜ್ಯ ಸಾಲದ (ಇಸಿಬಿ) ನಿಯಮ ಸರಳಗೊಳಿಸ
ಲಾಗಿದೆ. ಕಾರ್ಪೊರೇಟ್ ಬಾಂಡ್ಗಳಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆಗೆ ಇದ್ದ ನಿರ್ಬಂಧ ಸಡಿಲಿಸಲಾಗಿದೆ. ಮಸಾಲಾ ಬಾಂಡ್ಗಳ ಮೇಲೆ ಇದ್ದ ತೆರಿಗೆಯನ್ನೂ ಕೈಬಿಡಲಾಗಿದೆ’ ಎಂದು ಅವರು ವಿವರಿಸಿದ್ದಾರೆ.
ಲಾಗಿದೆ. ಕಾರ್ಪೊರೇಟ್ ಬಾಂಡ್ಗಳಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆಗೆ ಇದ್ದ ನಿರ್ಬಂಧ ಸಡಿಲಿಸಲಾಗಿದೆ. ಮಸಾಲಾ ಬಾಂಡ್ಗಳ ಮೇಲೆ ಇದ್ದ ತೆರಿಗೆಯನ್ನೂ ಕೈಬಿಡಲಾಗಿದೆ’ ಎಂದು ಅವರು ವಿವರಿಸಿದ್ದಾರೆ.
‘ಅಗತ್ಯ ಬಿದ್ದರೆ ಕ್ರಮ’
ಹಣಕಾಸು ಮಾರುಕಟ್ಟೆಯ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ಅಗತ್ಯ ಬಿದ್ದರೆ ಸೂಕ್ತ ಕ್ರಮ ಕೈಗೊಳ್ಳಲು ಸಜ್ಜಾಗಿದ್ದೇವೆ ಎಂದು ಆರ್ಬಿಐ ಮತ್ತು ಸೆಬಿ ಪ್ರಕಟಣೆಯಲ್ಲಿ ತಿಳಿಸಿವೆ.
ಶುಕ್ರವಾರ, ಸಂವೇದಿ ಸೂಚ್ಯಂಕ ಒಂದು ಹಂತದಲ್ಲಿ ದಿಢೀರನೆ 1,127 ಅಂಶಗಳಷ್ಟು ಕುಸಿತ ಕಂಡು, 35,993ರ ಕನಿಷ್ಠ ಮಟ್ಟಕ್ಕೆ ತಲುಪಿತ್ತು. ನಂತರ ಚೇತರಿಸಿಕೊಂಡರೂ ಇಳಿಮುಖವಾಗಿಯೇ ವಹಿವಾಟು ಅಂತ್ಯಕಂಡಿದೆ.
ಈ ಬೆಳವಣಿಗೆಯ ಕುರಿತು ಆರ್ಬಿಐ ಮತ್ತು ಸೆಬಿ ಪ್ರತಿಕ್ರಿಯೆ ನೀಡಿವೆ.
Friends, If you like this post,kindly comment below the post and do share your Response, (Thanks for Reading....)
No comments:
Post a Comment