ಹೊಸದಿಲ್ಲಿ: ದೇಶದ ಜನರಿಗೆ ಆರೋಗ್ಯ ರಕ್ಷೆ ನೀಡುವ 'ಆಯುಷ್ಮಾನ್ ಭಾರತ್' ಯೋಜನೆಯ ಫಲಾನುಭವಿಗಳಿಗಾಗಿ ವೆಬ್‌ಸೈಟ್ ಮತ್ತು ಸಹಾಯವಾಣಿಯನ್ನು ರೂಪಿಸಲಾಗಿದೆ.
ಆಯುಷ್ಮಾನ್ ಭಾರತ್ ಆರೋಗ್ಯ ರಕ್ಷೆ ಮಿಷನ್(ಎಬಿ-ಎನ್‌ಎಚ್‌ಪಿಎಂ) ಅನ್ನು ಜಾರಿಗೊಳಿಸುವ ನ್ಯಾಷನಲ್ ಹೆಲ್ಟ್ ಏಜೆನ್ಸಿ(ಎನ್‌ಎಚ್‌ಎ) ಹೊಸ ವೆಬ್‌ಸೈಟ್‌ಗೆ ಚಾಲನೆ ನೀಡಿದೆ. ತಮ್ಮ ಹೆಸರು ಅಂತಿಮ ಪಟ್ಟಿಯಲ್ಲಿದೆಯೇ ಇಲ್ಲವೇ ಅಥವಾ ಇತರೆ ಸಂದೇಹಗಳ ಬಗ್ಗೆ ವೆಬ್‌ಸೈಟ್ ಮತ್ತು ಸಹಾಯವಾಣಿಯಿಂದ ಫಲಾನುಭವಿಗಳು ಉತ್ತರ ಪಡೆಯಬಹುದಾಗಿದೆ.
ಕುಟುಂಬಕ್ಕೆ 5 ಲಕ್ಷ ರೂ. ವಿಮೆ ಸೌಲಭ್ಯ ಕಲ್ಪಿಸುವ ಮಹತ್ವಾಕಾಂಕ್ಷೆಯ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯು(ಪಿಎಂಜೆಎವೈ) 10 ಕೋಟಿ ಬಡ ಕುಟುಂಬಗಳ 50 ಕೋಟಿ ಜನರಿಗೆ ಅನ್ವಯವಾಗಲಿದೆ.
https://mera.pmjay.gov.in ಅಥವಾ ಸಹಾಯವಾಣಿಗೆ(14555) ಕರೆ ಮಾಡಿ ತಮ್ಮ ಹೆಸರು ನೋಂದಣಿಯಾಗಿದೆಯೇ ಇಲ್ಲವೇ ಅನ್ನುವುದನ್ನು ಫಲಾನುಭವಿಗಳು ತಿಳಿಯಬಹುದಾಗಿದೆ. ಪಿಎಂಜೆಎವೈಗೆ ನೋಂದಣಿ ಮಾಡಿಕೊಡುವುದಾಗಿ ಭರವಸೆ ನೀಡುವ ಹಲವು ನಕಲಿ ವೆಬ್‌ಸೈಟ್‌ಗಳನ್ನು ನಿಯಂತ್ರಿಸಲು ಅಧಿಕೃತ ವೆಬ್‌ಸೈಟ್ ಅನ್ನು ಸರಕಾರ ರೂಪಿಸಿದೆ.
Friends,
If you like this post,kindly comment below the post and do share your
Response,
(Thanks for Reading....)
No comments:
Post a Comment