ಇನ್ನೂ ಸರಿಯಾಗಿ ಮಳೆಗಾಲ ಮುಗಿದಿಲ್ಲ, ಆದರೆ ನಿಗಿನಿಗಿ ಕೆಂಡದಂತೆ ಉರಿಯುತ್ತಿದ್ದಾನೆ ಸೂರ್ಯ. ರಾತ್ರಿಯ ಹೊತ್ತಿನಲ್ಲೂ ಉಷ್ಣತೆ ಮಿತಿ ಮೀರುತ್ತಿದೆ. ಈ ಅನುಭವ ನಿಮಗೊಬ್ಬರಿಗೆ ಮಾತ್ರವಲ್ಲ, ವಿಶ್ವದ ಎಲ್ಲರಿಗೂ ಈ ಅನುಭವವಾಗುತ್ತಿದೆ. ಇಷ್ಟು ಪ್ರಮಾಣದ ಗರಿಷ್ಠ ಉಷ್ಣತೆ 1 ಲಕ್ಷಕ್ಕೂ ಹೆಚ್ಚಿನ ವರ್ಷಗಳ ಇತಿಹಾಸದಲ್ಲಿ ಕಂಡುಬಂದಿಲ್ಲ ಎಂದು ನಾಸಾ ತಿಳಿಸಿದೆ.
ನಾಸಾ ವರದಿ ಮಾಡಿದಂತೆ ಈ ವರ್ಷದ ಜುಲೈ ತಿಂಗಳು ಅತ್ಯಂತ ಗರಿಷ್ಠ ತಾಪಮಾನ ಹೊಂದಿತ್ತು. ತಾಪಮಾನ ಏರಿಕೆಯ ದಾಖಲೆ 1880ರಿಂದಲೇ ಆರಂಭಗೊಂಡಿದೆ. ಹವಮಾನ ತಜ್ಞರ ಪ್ರಕಾರ ಹಿಂದೆಂದೂ ಕಂಡರಿಯದ ಉಷ್ಣತೆಯನ್ನು ಭೂಮಿ ಅನುಭವಿಸುತ್ತಿದೆ.
ಜಾಗತಿಕ ತಾಪಮಾನ ಅಪಾಯದ ಮಟ್ಟಕ್ಕೆ ತಲುಪುತ್ತಿದ್ದು, 1,20,000 ವರ್ಷಗಳ ಅವಧಿಯಲ್ಲಿ ಈ ಪ್ರಮಾಣದ ಉಷ್ಣತೆ ಏರಿಕೆಯಾಗಿಲ್ಲ.
ಉಷ್ಣತೆ ಏರಿಕೆಗೆ ಪ್ರಮುಖ ಕಾರಣ ಎಲ್ಲರಿಗೂ ಗೊತ್ತಿರುವಂತೆ ನಿಯಂತ್ರಣವಿಲ್ಲದ ಹಸಿರುಮನೆ ಅನಿಲ ಬಿಡುಗಡೆ. ತಾಪಮಾನ ಏರಿಕೆ ತಡೆಯುವ ನಿಟ್ಟಿನಲ್ಲಿ ಏನಾದರೂ ಮಾಡಲೇಬೇಕಿದೆ ಎನ್ನುತ್ತಾರೆ ತಜ್ಞರು
Friends,
If you like this post,kindly comment below the post and do share your
Response,
(Thanks for Reading....)
No comments:
Post a Comment