ಅಮೆರಿಕದ ಮಹತ್ವದ ಇಲಾಖೆಗಳಲ್ಲಿ ಭಾರತೀಯ ಮೂಲದ ಮಹಿಳೆಯರ ಪ್ರಾಬಲ್ಯ ಮುಂದುವರಿದಿದೆ. ಇಂಧನ ಇಲಾಖೆಯ ಪರಮಾಣು ಶಕ್ತಿ ವಿಭಾಗಕ್ಕೆ ಭಾರತೀಯ ಸಂಜಾತೆ ರೀಟಾ ಬರನ್ವಾಲಾ ಅವರನ್ನು ಮುಖ್ಯಸ್ಥರನ್ನಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇಮಕ ಮಾಡಿದ್ದಾರೆ.
- ಇಂಧನ ಇಲಾಖೆಯ ನ್ಯೂಕ್ಲಿಯರ್ ಎನರ್ಜಿ ವಿಭಾಗದಲ್ಲಿ ಸಹಾಯಕ ಕಾರ್ಯದರ್ಶಿಯಾಗಿ ರೀಟಾ ಅವರನ್ನು ಉನ್ನತ ಹುದ್ದೆಗೆ ನೇಮಕ ಮಾಡಲು ಸೆನೆಟ್ ಸಮ್ಮತಿ ಸೂಚಿಸಿದೆ.
- ರೀಟಾ ಅವರು ಪರಮಾಣು ತಂತ್ರಜ್ಞಾನ ಮತ್ತು ಅಭಿವೃದ್ದಿ ಹಾಗೂ ಇಲಾಖೆಯ ಅಣು ತಂತ್ರಜ್ಞಾನ ಮೂಲಸೌಕರ್ಯಾಭಿವೃದ್ಧಿಯ ದೊಡ್ಡ ಜವಾಬ್ದಾರಿಯನ್ನು ನಿಭಾಯಿಸಲಿದ್ದಾರೆ ಎಂದು ಶ್ವೇತಭವನ ಪ್ರಕಟಣೆಯಲ್ಲಿ ತಿಳಿಸಿದೆ.
- ರೀಟಾ ಅವರು ಪ್ರಸ್ತುತ ಪರಮಾಣುವಿನಲ್ಲಿ ವೇಗೋತ್ಕರ್ಷ ಅನ್ವೇಷಣೆ ವಿಭಾಗ(ಗೈನ್)ದ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
Source : ಈ ಸಂಜೆ’
No comments:
Post a Comment