ಸ್ಕಾಟ್ಲೆಂಡ್ನ ಈಶಾನ್ಯ ಕರಾವಳಿಯಲ್ಲಿರುವ ತ್ರಿಕೋನ ಆಕಾರದ ಮ್ಯೂಸಿಯಂನಲ್ಲಿ ಈಗ ಪ್ರಾಚೀನ ನಗರಿಯ ವೈಭವ ಮರುಸೃಷ್ಟಿಯಾಗುತ್ತಿದೆ. ಇಷ್ಟಕ್ಕೂ ಅಲ್ಲಿ ರೂಪುಗೊಳ್ಳುತ್ತಿ ರುವುದಾದರೂ ಏನು..? ಎಂಬ ಕುತೂಹಲವೇ…? ಅದನ್ನು ತಿಳಿ ಯಲು ನೀವೇ ಇದನ್ನು ನೋಡಿ. ಸ್ಕಾಟ್ಲೆಂಡ್ನ ಈಶಾನ್ಯ ಕರಾವಳಿ ಪ್ರದೇಶದ ಮ್ಯೂಸಿಯಂ ವಿ ಅಂಡ್ ಎ ಡಂಡೀ ವಿಶಿಷ್ಟ ವಾಸ್ತು ಶಿಲ್ಪದ ತಾಣ. ಅದು ಈಗ ಪ್ರಾಚೀನ ನಗರಿಯ ಗತ ವೈಭವ ಮರುಕಳಿಸುತ್ತಿದೆ.
ಟೋಕಿಯೋದಲ್ಲಿ 2020ರಲ್ಲಿ ನಡೆಯುವ ಒಲಿಂಪಿಕ್ ಕ್ರೀಡಾಕೂಟಕ್ಕಾಗಿ ಕ್ರೀಡಾಂಗಣವನ್ನು ವಿಶೇಷವಾಗಿ ವಿನ್ಯಾಸಗೊಳಿಸಿದ ಜಪಾನಿನ ಖ್ಯಾತ ವಾಸ್ತುಶಿಲ್ಪಿ ಕೆಂಗೋ ಕುಮಾ, ಡಂಡೀ ಮ್ಯೂಸಿಯಂನನ್ನು ಈಗ ಪುರಾತನ ನಗರ ಹೋಲುವ ರಚನೆ ಸೃಷ್ಟಿಸಿ ಬೆರಗು ಮೂಡಿಸಿದ್ದಾರೆ. ಡಂಡೀ ಸ್ಕಾಟ್ಲೆಂಡ್ನ ಹಳೆ ಕರಾವಳಿ ಪಟ್ಟಣ. ಇದು ನೌಕೆ ನಿರ್ಮಾಣದ ಕೇಂದ್ರವಾಗಿ ಮತ್ತು ರೇವು ಪಟ್ಟಣವಾಗಿ ಗುರುತಿಸಿಕೊಂಡಿತ್ತು. ಈಗ ಹೊಸ ಸ್ಪರ್ಶದೊಂದಿಗೆ ಇತಿಹಾಸ ಮರುಕಳಿಸುವ ಪ್ರಯತ್ನ ನಡೆದಿದೆ.
ಟಾಯ್ ನದಿ ದಂಡೆಯ ಅಕ್ಕಪಕ್ಕದಲ್ಲಿ ಎರಡು ನೌಕೆಗಳ ಮಾದರಿಯಲ್ಲಿ ವಸ್ತುಪ್ರದರ್ಶನ ಕೇಂದ್ರಕ್ಕೆ ಹೊಸ ವಿನ್ಯಾಸ ನೀಡಲಾಗಿದೆ. ಇದು ಡಂಡೀ ಪಟ್ಟಣದ ಆಗಿನ ಚಟುವಟಿಕೆಗಳ ನೆನಪು ಮರುಕಳಿಸುತ್ತದೆ. ಈ ವಿನ್ಯಾಸ ಕಾಂಕ್ರೀಟ್ ಗೋಡೆಗಳನ್ನು ಸದೃಢ ಶಿಲೆ ಚಪ್ಪಡಿಗಳಿಂದ ಮುಚ್ಚಲಾಗಿದೆ. ಇದು ಸ್ಕಾಟ್ಲೆಂಡ್ನ ಒರಟು ಕಡಿದಾದ ಬಂಡೆಯನ್ನು ಹೋಲುತ್ತದೆ. ಅಲ್ಲದೇ ರಸ್ತೆಯಿಂದ ನದಿಗೆ ಸಂಪರ್ಕ ಕಲ್ಪಿಸುವ ಅವಳಿ ಸೌಧಗಳ ನಡುವೆ ಕಮಾನು ಸೃಷ್ಟಿಸಲಾಗಿದೆ. ಇದು ಸಮುದ್ರದೊಂದಿಗೆ ನಗರವನ್ನು ಸಂಪರ್ಕಿಸುವ ವಾಸ್ತುಶಿಲ್ಪಿಯ ಉದ್ದೇಶವನ್ನು ಪ್ರತಿಬಿಂಬಿಸುತ್ತದೆ.
ಇಲ್ಲಿನ ವಿನ್ಯಾಸವು ಮಕ್ಕಳ ಕಾಮಿಕ್ ಪುಸ್ತಕದಲ್ಲಿರುವ ಚಿತ್ರಗಳ ತದ್ರೂಪಿನಂತಿವೆ. ಈ ಮ್ಯೂಸಿಯಂ ನಲ್ಲಿ ಸ್ಟಾರ್ವಾರ್ಸ್ : ಆಟ್ಯಾಕ್ ಆಫ್ ದಿ ಕ್ಲೋನ್ಸ್ ಸಿನಿಮಾದ ನಟಿ ನಟಾಲೀ ಫೋರ್ಟ್ಮ್ಯಾನ್ ಧರಿ ಸಿದ ಗೌನ್ನನ್ನು ಸಹ ಪ್ರದರ್ಶನಕ್ಕೆ ಇಡಲಾಗಿದೆ. ಇಂಗ್ಲೆಂಡ್ನ ನಾರ್ಥ್ ಎಡಿನ ಬರ್ಗ್ನಿಂದ ಒಂದು ಗಂಟೆ ಕಾಲ ಪ್ರಯಾಣದ ನಂತರ ಇಲ್ಲಿಗೆ ತಲುಪಿ ಪ್ರಾಚೀನ ಡಂಡೀ ವೈಭವವನ್ನು ಕಣ್ಣಾರೆ ನೋಡಬಹುದು. ಇದು ಪ್ರವಾಸಿಗರ ಅಚ್ಚುಮೆಚ್ಚಿನ ತಾಣಗಳಲ್ಲಿ ಒಂದಾಗಲಿದ್ದು, ವಿವಿಧ ದೇಶಗಳ ಪ್ರಸಿದ್ಧ ಬಂದರು ನಗರಿಗಳನ್ನು ನೆನಪಿಸುತ್ತದೆ ಎನ್ನು ತ್ತಾರೆ ಮ್ಯೂಸಿಯಂನ ಕ್ಯೂರೇಟರ್. ಸೆಪ್ಟೆಂಬರ್ 15ರಂದು ಈ ಕೇಂದ್ರ ಉದ್ಘಾಟನೆಯಾಗಿದ್ದು, ಮುಂದಿನ ವರ್ಷದಲ್ಲಿ ಐದು ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ಮತ್ತು ವೀಕ್ಷಕರು ಇಲ್ಲಿಗೆ ಬೇಟಿ ನೀಡುವ ನಿರೀಕ್ಷೆ ಇದೆ.
Source : ಈ ಸಂಜೆ’
Source : ಈ ಸಂಜೆ’
No comments:
Post a Comment