ಮನ್ನಾ; ಬೆಳೆ ವಿಮೆ ಮೊತ್ತಕ್ಕೆ ಕನ್ನ
ಒಂದನೇ ಪುಟದಿಂದ
ಸುಸ್ತಿ ಅಲ್ಲದ ಬೆಳೆ ಸಾಲಗಳನ್ನು ಹೊಂದಿರುವ ಹಾಗೂ ಹಿಂದಿನ ಸಾಲಿನ ಬೆಳೆ ಸಾಲಗಳನ್ನು ನಿಯಮಿತವಾಗಿ ಮರುಪಾವತಿಸಿದ ರೈತ ಕುಟುಂಬಕ್ಕೆ ಅವರು ಪಡೆದ ಬೆಳೆ ಸಾಲದ ಮೊತ್ತ ಅಥವಾ ₹ 25 ಸಾವಿರ ಈ ಎರಡರಲ್ಲಿ ಯಾವುದು ಕಡಿಮೆಯೋ ಆ ಮೊತ್ತವನ್ನು ಪ್ರೋತ್ಸಾಹ ಧನವಾಗಿ ನೀಡಲಾಗುವುದು.
ಕೃಷಿ, ತೋಟಗಾರಿಕೆ ಮತ್ತು ಪ್ಲಾಂಟೇಷನ್ ಬೆಳೆ ಬೆಳೆಯಲು ಗರಿಷ್ಠ 12ರಿಂದ 18 ತಿಂಗಳ ಒಳಗೆ ಮರು ಪಾವತಿಸಬೇಕಾದ ಅಲ್ಪಾವಧಿ ಸಾಲಗಳನ್ನು ಈ ಯೋಜನೆಯಡಿ ‘ಬೆಳೆ ಸಾಲ’ ಎಂದು ಪರಿಗಣಿಸಲಾಗಿದೆ. ಸಾಲ ತೆಗೆದುಕೊಂಡಿರುವ ರೈತ, ಆತನ ಭೂಮಿ ಮತ್ತು ಸಾಲ ಪಡೆದ ಬ್ಯಾಂಕಿನ ಶಾಖೆ ಕರ್ನಾಟಕ ರಾಜ್ಯದಲ್ಲಿ ಇರಬೇಕು ಎಂಬ ಷರತ್ತು ವಿಧಿಸಲಾಗಿದೆ.
ಬ್ಯಾಂಕುಗಳೇ ಹೊಣೆ: ರೈತರು ಸಲ್ಲಿಸಿದ ಅಗತ್ಯ ವಿವರಗಳನ್ನು (ಆಧಾರ್ ಸಂಖ್ಯೆ, ರೇಷನ್ ಕಾರ್ಡ್ ಸಂಖ್ಯೆ, ಸರ್ವೆ ಸಂಖ್ಯೆ) ಕ್ರೋಡೀಕರಿಸಿದ ನಂತರ
ಮಾಹಿತಿಗಳನ್ನು ಬ್ಯಾಂಕುಗಳು ತಮ್ಮ ಕೋರ್ ಬ್ಯಾಂಕಿಂಗ್ ವ್ಯವಸ್ಥೆಯ ಮೂಲಕ ಸರ್ಕಾರಕ್ಕೆ ಸಲ್ಲಿಸಬೇಕು. ಈ ಮಾಹಿತಿಗಳ ನಿಖರತೆಗಳಿಗೆ ಸಾಲ
ನೀಡಿದ ಬ್ಯಾಂಕುಗಳೇ ಜವಾಬ್ದಾರಿ. ಬ್ಯಾಂಕುಗಳು ಸಲ್ಲಿಸಿದ ಎಲ್ಲ ದಾಖಲೆ
ಗಳನ್ನು ಮಾಹಿತಿ ತಂತ್ರಜ್ಞಾನ ವ್ಯವಸ್ಥೆ
ಯಡಿ ಪರಿಶೀಲಿಸಿ ಯೋಜನೆಗೆ ಅರ್ಹರಾ
ದವರನ್ನು ಗುರುತಿಸಲಾಗುವುದು.
ಯಾವ ಸಾಲಗಳಿಗೆ ಯೋಜನೆ ಅನ್ವಯ
l 2009ರ ಏ. 1ರ ನಂತರ ಮಂಜೂರಾದ, 2017ರ ಡಿ. 31ಕ್ಕೆ ಬಾಕಿ ಇರುವ ವಸೂಲಾಗದ ಸಾಲಗಳು (ಎನ್‌ಪಿಎ)
l ಮರುವರ್ಗೀಕರಿಸಿದ ಅಂದರೆ, ನೈಸರ್ಗಿಕ ವಿಕೋಪಗಳಿಂದ ಮಧ್ಯಮಾವಧಿ ಸಾಲಗಳಾಗಿ ಪರಿವರ್ತಿಸಿದ ಮತ್ತು 5 ವರ್ಷಗಳ ಅವಧಿಯಲ್ಲಿ ಮರುಪಾವತಿಸಬಹುದಾದ ಸಾಲಗಳು
l 2017ರ ಡಿ. 31ರಂದು ಅವಧಿ ಮೀರಿದ (ಸುಸ್ತಿ) ಬೆಳೆ ಸಾಲಗಳು
No comments:
Post a Comment