ರಾಜ್ಯದ ಗರ್ಭಿಣಿಯರು, ಬಾಣಂತಿಯರಿಗೆ ಮಾಸಿಕ ಒಂದು ಸಾವಿರ ರೂ.ನಂತೆ ಹೆರಿಗೆಪೂರ್ವ ಹಾಗೂ ಹೆರಿಗೆನಂತರ ತಲಾ 3 ತಿಂಗಳಿನಿಂದ 6 ತಿಂಗಳ ಕಾಲ 6 ಸಾವಿರ ರೂ. ನೀಡುವ ‘ಮುಖ್ಯಮಂತ್ರಿಗಳ ಮಾತೃಶ್ರೀ’ ಯೋಜನೆ ನ. 1ರಿಂದ ಅನುಷ್ಠಾನಗೊಳ್ಳಲಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಜಯಮಾಲಾ ತಿಳಿಸಿದರು.
ವಿಕಾಸಸೌಧದಲ್ಲಿ ಮಂಗಳವಾರ ಪೋಷಣೆ ಅಭಿಯಾನ-ಪೌಷ್ಟಿಕ ಕರ್ನಾಟಕ ಯೋಜನೆಗೆ ಚಾಲನೆ ನೀಡಿದ ಅವರು, ರಾಜ್ಯದಲ್ಲಿ ಇಂದಿಗೂ ಶೇ.46 ಮಹಿಳೆಯರಲ್ಲಿ ಹಿಮೋಗ್ಲೋಬಿನ್ ಕೊರತೆ ಇದೆ. ಅಪೌಷ್ಟಿಕತೆಯಿಂದ ಬಳಲುತ್ತಿರುವ ತಾಯಂದಿರಿಗೆ ಎಲ್ಲ ಹಂತದಲ್ಲೂ ಬೆನ್ನೆಲುಬಾಗಿ ನಿಲ್ಲಲು ಪೌಷ್ಟಿಕ ಕರ್ನಾಟಕದ ಗುರಿ ಹೊಂದಲಾಗಿದೆ ಎಂದರು.
ಯುನಿಸೆಫ್ನ ದಕ್ಷಿಣ ಭಾರತ ಪ್ರಾಂತ ಮುಖ್ಯಸ್ಥೆ ಮಿಥೆಲ್ ರಸ್ದಿಯಾ, ಕೇಂದ್ರ ಸರ್ಕಾರದ ಪೋಷಕಾಂಶಗಳ ಸಲಹೆಗಾರ್ತಿ ಮೀನಾ ಜೇಥಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾ ಮಹದೇವನ್, ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಜಾವೇದ್ ಅಖ್ತರ್, ಆರೋಗ್ಯ ಇಲಾಖೆ ಆಯುಕ್ತ ಪಂಕಜ್ಕುಮಾರ್ ಪಾಂಡೆ ಇದ್ದರು.
ಪೌಷ್ಟಿಕ ಕರ್ನಾಟಕ ಪೋಷಣೆ ಅಭಿಯಾನ ಪ್ರಕಾರ ಮಾತೃಪೂರ್ಣ, ಮಾತೃಶ್ರೀ, ಸೃಷ್ಟಿ ಯೋಜನೆ, ಕ್ಷೀರಭಾಗ್ಯ, ಜನನಿ ಸುರಕ್ಷಾ ಯೋಜನೆ, ಜನನಿ ಶಿಶು ಸುರಕ್ಷಾ ಯೋಜನೆ ಬಗ್ಗೆ ಜಾಗೃತಿ ಮೂಡಿಸಿ, ಅರ್ಹ ಫಲಾನು ಭವಿಗಳಿಗೆ ಎಲ್ಲ ಯೋಜನೆಗಳನ್ನು ಮನೆ ಬಾಗಿಲಿಗೆ ತಲುಪಿಸಲಾಗುವುದು| ಜಯಮಾಲಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ
ಯೋಜನೆ ಯಶಸ್ವಿ
ಗರ್ಭಿಣಿಯರು, ಬಾಣಂತಿಯರು ಹಾಗೂ ವಿವಿಧ ಹಂತದ ಶಿಶುಗಳಲ್ಲಿ ಕಂಡುಬರುವ ಬೆಳವಣಿಗೆ ಕುಂಠಿತ, ತೂಕದ ಕೊರತೆ, ತೀವ್ರ ಅಪೌಷ್ಟಿಕತೆ, ರಕ್ತಹೀನತೆ, ಕಡಿಮೆ ತೂಕದ ಶಿಶು ಜನನ ಹೀಗೆ ಎಲ್ಲ ಬಗೆಯ ಆರೋಗ್ಯ ಸಂಬಂಧಿ ಸಮಸ್ಯೆಗಳನ್ನು ಬಗೆ ಹರಿಸಲು ಇಲಾಖೆ ಕೆಲಸ ಮಾಡುತ್ತಿವೆ ಎಂದು ಸಚಿವೆ ಜಯಮಾಲಾ ತಿಳಿಸಿದರು. ಅಂಗನವಾಡಿಗಳಲ್ಲಿ ಗರ್ಭಿಣಿಯರಿಗೆ ಒಂದು ಪೂರ್ಣ ಊಟ ಕೊಡುವ ಮಾತೃಪೂರ್ಣ ಯೋಜನೆ ಜಾರಿಗೊಳಿಸಿದಾಗ ಅನೇಕರು ವಿರೋಧಿಸಿದ್ದರು. ಸುಡುಬಿಸಿಲಿನಲ್ಲಿ ಗರ್ಭಿಣಿಯರು ನಡೆದುಕೊಂಡು ಅಂಗನವಾಡಿಗೆ ಹೇಗೆ ಬರಬೇಕು ಎಂದು ಪ್ರಶ್ನಿಸಿದ್ದರು. ಆದರೆ ಈ ಯೋಜನೆ ರೈತ ಹಾಗೂ ಕಾರ್ವಿುಕ ಮಹಿಳೆಯರಿಗೆ ಆಗಿರುವುದರಿಂದ ಯಶಸ್ವಿಯಾಗಿ ನಡೆಯುತ್ತಿದೆ. ಹಸಿವಿನಿಂದ ತೊಂದರೆಯಲ್ಲಿರುವವರು ಬರುತ್ತಿದ್ದಾರೆ ಎಂದು ಯೋಜನೆಯ ಯಶೋಗಾಥೆ ವಿವರಿಸಿದರು.
Telegram Link
https://t.me/joinchat/AAAAAE9lq2X6z4BbgUUCnw
Friends, If you like this post,kindly comment below the post and do share your
Response,
(Thanks for Reading....)
No comments:
Post a Comment