ಪ್ರಶಸ್ತಿ ಗೆದ್ದ ನಂತರ ಟೈಗರ್ ವುಡ್ಸ್ ಸಂಭ್ರಮಿಸಿದರು ಎಎಫ್ಪಿ ಚಿತ್ರ
ಪ್ರಶಸ್ತಿ ಗೆದ್ದ ನಂತರ ಟೈಗರ್ ವುಡ್ಸ್ ಸಂಭ್ರಮಿಸಿದರು ಎಎಫ್ಪಿ ಚಿತ್ರ
ಅಟ್ಲಾಂಟ (ಎಎಫ್ಪಿ): ಅಮೆರಿ
ಕದ ಟೈಗರ್ ವುಡ್ಸ್ ಅವರು ಮಂಗಳ
ವಾರ ಮುಕ್ತಾಯಗೊಂಡ ಟೂರ್ ಚಾಂಪಿ
ಯನ್ಷಿಪ್ ಗಾಲ್ಫ್ ಟೂರ್ನಿಯಲ್ಲಿ ಚಾಂಪಿ
ಯನ್ ಆಗಿದ್ದಾರೆ. ಈ ಮೂಲಕ
ಐದು ವರ್ಷಗಳ ನಂತರ ಪ್ರಶಸ್ತಿ ಜಯಿಸಿದ್ದಾರೆ.
42 ವರ್ಷದ ಟೈಗರ್, ಟೂರ್ನಿಯಲ್ಲಿ ಒಟ್ಟು 269 ಸ್ಕೋರ್ ಸಂಗ್ರಹಿಸಿ ವೃತ್ತಿ ಜೀವನದ 80ನೇ ಪ್ರಶಸ್ತಿ ತಮ್ಮದಾಗಿಸಿಕೊಂಡರು. 2013ರ ಡಬ್ಲ್ಯುಜಿಸಿ ಬ್ರಿಜ್ಸ್ಟೋನ್ ಇನ್ವಿಟೇಷನಲ್ ಟೂರ್ನಿ
ಯಲ್ಲಿ ಅವರು ಕೊನೆಯ ಬಾರಿ ಪ್ರಶಸ್ತಿ ಗೆದ್ದಿದ್ದರು.
ಪ್ರಶಸ್ತಿ ಪ್ರದಾನ ಸಮಾರಂಭದ ವೇಳೆ ಮಾತನಾಡಿದ ವುಡ್ಸ್, ‘ವರ್ಷಗಳ ನಂತರ ಪ್ರಶಸ್ತಿ ಗೆದ್ದೆ. ನಿಜಕ್ಕೂ ಇದು ಸಂತಸದ ವಿಷಯ. ಈ ಟೂರ್ನಿಯಲ್ಲಿ ತೋರಿದ ಸಾಮರ್ಥ್ಯ ಅವಿಸ್ಮರಣೀಯ. ಇದೊಂದು ವಿಶೇಷ ಅನುಭವ’ ಎಂದು ಹೇಳಿದರು.
ಅಮೆರಿಕದವರೇ ಆದ ಬಿಲ್ಲಿ ಹಾರ್ಷೆಲ್ ಹಾಗೂ ಡಸ್ಟಿನ್ ಜಾನ್ಸ್ನ ಅವರು ಕ್ರಮವಾಗಿ ಎರಡು
ಹಾಗೂ ಮೂರನೇ ಸ್ಥಾನ ಪಡೆದರು. ಇಂಗ್ಲೆಂಡ್ನ ಒಲಿಂಪಿಕ್ ಚಾಂಪಿಯನ್ ಜಸ್ಟಿನ್ ರೋಸ್ ಅವರು ಜಂಟಿ ನಾಲ್ಕನೇ ಸ್ಥಾನಪಡೆದರು. ಇವರೊಂದಿಗೆ ಜಪಾನ್ನ ಹಿಡೆಕಿ ಮಟ್ಸು ಯಮಾ ಹಾಗೂ ಅಮೆರಿಕದ ವೆಬ್ ಸಿಮ್ಸನ್ ಅವರು ನಾಲ್ಕನೇ ಸ್ಥಾನ ಹಂಚಿಕೊಂಡರು.
Friends, If you like this post,kindly comment below the post and do share your
Response,
(Thanks for Reading....)
No comments:
Post a Comment