ರೋಹಿತ್ ಶರ್ಮಾ
ರೋಹಿತ್ ಶರ್ಮಾ
ದುಬೈ (ಪಿಟಿಐ): ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ಸೂಪರ್ ಫೋರ್ ಹಂತದ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಅಮೋಘ ಜಯ ಗಳಿಸಿದ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ಏಳು ಸಾವಿರ ರನ್ ಪೂರೈಸಿದರು.
210 ಗುರಿ ಬೆನ್ನಟ್ಟಿದ ಸಂದರ್ಭದಲ್ಲಿ ಭಾರತದ ದಾಖಲೆಯ ಮೊದಲ ವಿಕೆಟ್ (ರೋಹಿತ್ ಶರ್ಮಾ–ಶಿಖರ್ ಧವನ್) ಜೊತೆಯಾಟ. 2009ರಲ್ಲಿ ನ್ಯೂಜಿಲೆಂಡ್ ವಿರುದ್ಧ ಹ್ಯಾಮಿಲ್ಟನ್‌ನಲ್ಲಿ ವೀರೇಂದ್ರ ಸೆಹ್ವಾಗ್–ಗೌತಮ್ ಗಂಭೀರ್ ಜೊತೆಯಾಗಿ
201 ರನ್ ಗಳಿಸಿದ್ದರು.
159ಪಾಕಿಸ್ತಾನ ವಿರುದ್ಧ ಈ ಹಿಂದೆ ಭಾರತ ಮೊದಲ ವಿಕೆಟ್‌ಗೆ ಸೇರಿಸಿದ್ದ ರನ್. ಸೌರವ್ ಗಂಗೂಲಿ–ಸಚಿನ್ ತೆಂಡೂಲ್ಕರ್ 1998ರಲ್ಲಿ ಢಾಕಾದಲ್ಲಿ ಈ ಸಾಧನೆ ಮಾಡಿದ್ದರು.
7ಬಾರಿ ಭಾರತದ ಆರಂಭಿಕ ಜೋಡಿ ಶತಕ ಗಳಿಸಿದೆ. ಗುರಿ ಬೆನ್ನಟ್ಟಿದಾಗ ಈ ಸಾಧನೆ ಮಾಡಿದ ಎರಡನೇ ಜೋಡಿ ರೋಹಿತ್ ಮತ್ತು ಶಿಖರ್. 2002ರ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಸೌರವ್ ಗಂಗೂಲಿ–ಸೆಹ್ವಾಗ್ ಶತಕ ಬಾರಿಸಿದ್ದರು.
13
ರೋಹಿತ್ ಶರ್ಮಾ–ಶಿಖರ್ ಧವನ್ ನಡುವಿನ ಶತಕದ ಜೊತೆಯಾಟಗಳ ಸಂಖ್ಯೆ. ಇದು ಭಾರತದ ಜೋಡಿಯೊಂದರ ಎರಡನೇ ಗರಿಷ್ಠ ಸಾಧನೆ. ಸಚಿನ್ ತೆಂಡೂಲ್ಕರ್–ಸೌರವ್ ಗಂಗೂಲಿ ನಡುವೆ 21 ಶತಕದ ಜೊತೆಯಾಟ ಮೂಡಿಬಂದಿದೆ.
ಏಕದಿನ ಕ್ರಿಕೆಟ್‌ನಲ್ಲಿ ಅತೀವೇಗದ 7000 ರನ್ ಗಳಿಸಿದವರು
161 ಇನಿಂಗ್ಸ್
ವಿರಾಟ್ ಕೊಹ್ಲಿ
ಭಾರತ
174ಇನಿಂಗ್ಸ್
ಸೌರವ್ ಗಂಗೂಲಿ
ಭಾರತ
166 ಇನಿಂಗ್ಸ್
ಎಬಿ ಡಿವಿಲಿಯರ್ಸ್
ದಕ್ಷಿಣ ಆಫ್ರಿಕಾ
181 ಇನಿಂಗ್ಸ್
ರೋಹಿತ್ ಶರ್ಮಾ
ದಕ್ಷಿಣ ಆಫ್ರಿಕಾ
150 ಇನಿಂಗ್ಸ್
ಹಾಶಿಂ ಆಮ್ಲಾ
ದಕ್ಷಿಣ ಆಫ್ರಿಕಾ
ಪಾಕಿಸ್ತಾನ ಎದುರಿನ ಪಂದ್ಯದಲ್ಲಿ ಜಯ ಗಳಿಸಿದ್ದರ ಶ್ರೇಯ ಬೌಲರ್‌ಗಳಿಗೆ ಸಲ್ಲಬೇಕು. ತಂಡದ ಬೌಲಿಂಗ್ ವಿಭಾಗದವರು ಎದುರಾಳಿಗಳಿಗೆ ಕಡಿವಾಣ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ನಮ್ಮ ಬೌಲರ್‌ಗಳು ಆರಂಭದಿಂದಲೇ ಶಿಸ್ತಿನ ದಾಳಿ ನಡೆಸುತ್ತ ಬಂದಿದ್ದು ಅವರ ಸಾಮರ್ಥ್ಯಕ್ಕೆ ತಕ್ಕಂತೆ ಯೋಜನೆಗಳನ್ನು ಹಾಕಿದ್ದೆವು. ಇದು ಫಲ ನೀಡಿತು.
ರೋಹಿತ್ ಶರ್ಮಾ, ಭಾರತ ತಂಡದ ನಾಯಕ
ಪಾಕಿಸ್ತಾನ ಎದುರಿನ ಪಂದ್ಯದಲ್ಲಿ ಜಯ ಗಳಿಸಿದ್ದರ ಶ್ರೇಯ ಬೌಲರ್‌ಗಳಿಗೆ ಸಲ್ಲಬೇಕು. ತಂಡದ ಬೌಲಿಂಗ್ ವಿಭಾಗದವರು ಎದುರಾಳಿಗಳಿಗೆ ಕಡಿವಾಣ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ನಮ್ಮ ಬೌಲರ್‌ಗಳು ಆರಂಭದಿಂದಲೇ ಶಿಸ್ತಿನ ದಾಳಿ ನಡೆಸುತ್ತ ಬಂದಿದ್ದು ಅವರ ಸಾಮರ್ಥ್ಯಕ್ಕೆ ತಕ್ಕಂತೆ ಯೋಜನೆಗಳನ್ನು ಹಾಕಿದ್ದೆವು. ಇದು ಫಲ ನೀಡಿತು.
ರೋಹಿತ್ ಶರ್ಮಾ, ಭಾರತ ತಂಡದ ನಾಯಕ
Friends, If you like this post,kindly comment below the post and do share your
Response,
(Thanks for Reading....)
No comments:
Post a Comment