ಡೀ ಪ್ರಪಂಚದ ಶೇಕಡಾ 10 ಭಾಗ ಜನ ಸಲಿಂಗಿಗಳಿದ್ದಾರೆ.ಸಲಿಂಗಾಕರ್ಷಣೆ ಪುರಾಣಗಳ ಕಾಲದಷ್ಟು ಹಳೆಯದು.ನೆಪೋಲಿಯನ್‌ನಂಥ ಚಾರಿತ್ರಿಕ ವ್ಯಕ್ತಿ ಸಲಿಂಗಿ. ಆದರೂ ಇದು ಸಹಜ,ನೈಸರ್ಗಿಕ ಸಾಬೀತುಪಡಿಸಲು ವಿಜ್ಞಾನ ಹಲವು ಆಯಾಮದಲ್ಲಿಪ್ರಯತ್ನಪಟ್ಟಿದೆ. ಉದಾಹರಣೆಗೆ, ಸಲಿಂಗ ಆಕರ್ಷಣೆಯನ್ನು ಉತ್ಕರ್ಷಿಸುವ‘ಜೀನ್’ ಇದೆಯಾ ಎಂಬುದರ ಅನ್ವೇಷಣೆ. ವೈದ್ಯಕೀಯ ವಿಜ್ಞಾನದಲ್ಲಿ ಇದರಬಗ್ಗೆ ಮಿಶ್ರ ಅಭಿಪ್ರಾಯಗಳಿವೆ. 1993ರಲ್ಲಿ ಮೊದಲ ಬಾರಿಗೆ ಗಂಡುಸಲಿಂಗಾಕರ್ಷಣೆ ಘಿ28 ಜೆನೆಟಿಕ್ ಮಾರ್ಕರ್ ಇದ್ದವರಲ್ಲಿ ಹೆಚ್ಚಿನ ಪ್ರಮಾಣದಲ್ಲಿದೆ ಎಂಬ ಪ್ರಮೇಯ ಸೃಷ್ಟಿಯಾಯಿತು. ಆದರೆ,ಅದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲದೇ ಹೋದರೂ ಸಲಿಂಗಾಕರ್ಷಣೆಯ ಬಹುತೇಕ ವೈದ್ಯಕೀಯ ಲೇಖನಗಳಲ್ಲಿ ಈ ‘ಗೇಜೀನ್’ ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತದೆ. ತರ ಅರ್ಬನ್ ಲೆಜೆಂಡ್, ಈಗ. ಹಾಗೆಯೇ ಸುಮಾರು 1500 ಬೇರೆ ಬೇರೆಪ್ರಾಣಿವರ್ಗಗಳಲ್ಲಿ ಕೂಡ ಸಲಿಂಗಾಕರ್ಷಣೆ ಕಾಣಿಸುತ್ತದೆ. ಆದರೆ ಬಹುತೇಕ ವಿಜ್ಞಾನಿಗಳು ಒಪ್ಪಿಕೊಳ್ಳುವುದು ಪ್ರಾಣಿಗಳಲ್ಲಿನಸಲಿಂಗಾಕರ್ಷಣೆ ವಿಕಾಸವಾದದ ಯಾವುದೇ ನಿಯಮಗಳಿಗೆ ಬದ್ಧವಾಗಿ ಇವಾಲ್‌ವ್ ಆದದ್ದಲ್ಲ. ಮಂಗನಿಂದ ಮಾನವ ಆದದ್ದುಒಂದಾನೊಂದು ಕಾಲದಲ್ಲಿ ಜೀನುಗಳ ಬಟವಾಡೆಯಾದುದಕ್ಕೆ. ಸಲಿಂಗ ಸಂಬಂಧದಿಂದ ಮಕ್ಕಳಾಗುವ ಸಾಧ್ಯತೆಯಿಲ್ಲವಾದ್ದರಿಂದಇದು ವಿಕಾಸವಾದದ ಪ್ರಕಾರ, ಡೈನಾಸರ್ಗಳು ಹಕ್ಕಿಗಳಾದ ಪ್ರಾಕೃತಿಕ ರೂಪಾಂತರವಲ್ಲ.
ಕೆಲವೊಂದು ಸಮೀಕ್ಷೆಗಳ ಪ್ರಕಾರ ಲೈಂಗಿಕ ಕ್ರಿಯೆಯಲ್ಲಿ ಒಮ್ಮೆಯೂ ಕೆಲ ಪ್ರಾಣಿಗಳನ್ನು ಬಿಟ್ಟು ಸಲಿಂಗ ಸಂಬಂಧವಿಲ್ಲದ ಪ್ರಾಣಿಸಂತತಿಯೇ ಇಲ್ಲ. ಆದರೆ ಪ್ರಾಣಿಗಳಲ್ಲಿ ಈ ಸಂಬಂಧಕ್ಕೆ ಕಾರಣಗಳು ಹಲವಾರಿರಬಹುದು. ಎಷ್ಟೋ ಪ್ರಾಣಿಗಳಲ್ಲಿ ಗಂಡು ಹೆಣ್ಣುಗಳಸ್ಥೂಲ ಹೊರ ರಚನೆಯಲ್ಲಿ ವ್ಯತ್ಯಾಸವಿರುವುದಿಲ್ಲ. ಹಾಗಾಗಿ ಗಂಡು ಹೆಣ್ಣುಗಳ ವ್ಯತ್ಯಾಸವನ್ನು ಪರಿಗಣಿಸದೆ ಆ ಸಂದರ್ಭದತೃಷೆಯನ್ನು ತೀರಿಸುವ ಕ್ರಿಯೆಯಾಗಿ ಮಾತ್ರ ಸಲಿಂಗಾಕರ್ಷಣೆ ಇದೆ ಎಂಬ ವಾದವು ಇದೆ. ಇದಕ್ಕೆ ಪೂರಕವಾದ ವಿಚಾರವೆಂದರೆ,ಬಹಳ ಪ್ರಾಣಿ ಸಂಕುಲಗಳಲ್ಲಿ ಸಲಿಂಗಿಗಳಲ್ಲಿ ಯಾವುದೋ ಸಾಂಘಿಕ ವ್ಯವಸ್ಥೆಯನ್ನು ನಾವು ಸಿಂಹ, ಆನೆ ಮುಂತಾದ ಪ್ರಾಣಿಗಳುಗಂಡು, ಹೆಣ್ಣು, ಮತ್ತು ಮಕ್ಕಳು ಎಂಬಂತೆ ಸಂಸಾರ ಕಟ್ಟಿಕೊಂಡು ಓಡಾಡುತ್ತವೆ. ಆದರೆ ಈ ಪ್ರಾಣಿಗಳಲ್ಲಿ ಕಾಣುವ ಸಲಿಂಗಸಂಬಂಧ ಆ ಕ್ರಿಯೆಯನ್ನು ಮೀರಿ ಬೇರೆ ಯಾವುದೇ ಚಟುವಟಿಕೆಗಳಿಗೆ ದಾಟಿಲ್ಲ.
ಕೆನಡಾದ ಪಾಲ್ ವಾಸಿ ಎಂಬ ಸಂಶೋಧಕನೊಬ್ಬ ‘ಜಪಾನೀಸ್ ಮಕಾಕಿ’ ಎಂಬ ಕೋತಿಗಳ ತಳಿಯಲ್ಲಿ ಸಲಿಂಗಾಕರ್ಷಣೆಯನ್ನುಅಭ್ಯಸಿಸಿ ಹೇಳುತ್ತಾನೆ: ‘ಈ ತಳಿಗಳಲ್ಲಿ ಸಲಿಂಗಾಕರ್ಷಣೆ ಬರೀ ಸಾಮಾನ್ಯ ಮಾತ್ರವಲ್ಲ, ಅತಿ ಸಹಜ. ಅವುಗಳನ್ನು ಈ ಸಮಯದಲ್ಲಿಅವು ಲೈಂಗಿಕ ಕಾಮನೆಗಳಿಗಾಗಿ ಮಾತ್ರ ಒಂದಾಗುವ ಹತಾಶ ಜೋಡಿಗಳಂತೆ ಕಾಣುವುದಿಲ್ಲ. ಕೆಲವೊಮ್ಮೆ ವಾರಗಟ್ಟಲೆಒಟ್ಟೊಟ್ಟಾಗಿ ಓಡಾಡುತ್ತವೆ. ಅವುಗಳು ಪರಸ್ಪರ ಕಣ್ಣಲ್ಲಿ ಕಣ್ಣಿಟ್ಟು ನೋಡುವುದನ್ನು ನೋಡಿದಲ್ಲಿ ಅದು ಯಾವುದೇ ಪ್ರೇಮಿಗಳಕಣ್ಣೋಟಕ್ಕಿಂತ ಭಿನ್ನವಾಗಿರುವುದಿಲ್ಲ’.
ಆನುವಂಶಿಕತೆ, ಪರಿಸರ, ಅಮ್ಮನ ಹೊಟ್ಟೆಯಲ್ಲಿದ್ದಾಗ ಅಮ್ಮ ಟೆಸ್ಟೋಸ್ಟೀರಾನ್ ಇತರೇ ಹಾರ್ಮೋನುಗಳನ್ನು ತೆಗೆದುಕೊಂಡಿದ್ದಳೇಇಲ್ಲವೇ? ಇತ್ಯಾದಿ ಕಾರಣಗಳನ್ನು ಸಲಿಂಗಾಕರ್ಷಣೆಯ ಕಾರಣಗಳಿರಬಹುದಾ ಎಂದು ಸಹ ವಿಜ್ಞಾನ ಪರೀಕ್ಷಿಸಿದೆ. ಅದಕ್ಕೂಸರಿಯಾದ ಉತ್ತರ ಸಿಕ್ಕಿಲ್ಲ. ಇನ್ನೂ ಕೆಲವು ವಿಜ್ಞಾನ ಒಪ್ಪದ ವೈಜ್ಞಾನಿಕ ಜರ್ನಲುಗಳಲ್ಲಿ ಮತ್ತೆ ಮತ್ತೆ ಕಾಣುವ ಲೆಜೆಂಡುಗಳಿವೆ.ಉದಾಹರಣೆಗೆ, ನಿಮ್ಮ ತೋರುಬೆರಳು ನಿಮ್ಮ ಉಂಗುರದ ಬೆರಳಿಗಿಂತ ಉದ್ದವಾಗಿದ್ದರೆ ಅದು ಗಂಡು ಸಲಿಂಗಿ ಗುಣವೆಂದೂಉಂಗುರದ ಬೆರಳು ಉದ್ದವಿದ್ದಲ್ಲಿ ಅದು ಹೆಣ್ಣು ಸಲಿಂಗೀ ಗುಣವೆಂದೂ, ಶೇಕಡಾ 31 ಗಂಡು ಸಲಿಂಗಿಗಳು ಎಡಚರೆಂದೂ, ಶೇಕಡಾ91 ಭಾಗ ಹೆಣ್ಣು ಸಲಿಂಗಿಗಳು ಎಡಚರೆಂದೂ (ಗಮನಿಸಿ ಎಲ್ಲ 91ಶೇಕಡಾ ಎಡಚರು ಸಲಿಂಗಿಗಳಲ್ಲ), ಮೊದಲ ಮಗ ಗಂಡಾಗಿಹುಟ್ಟಿದಲ್ಲಿ ಎರಡನೇ ಮಗನಿಗೆ ಅಮ್ಮನಿಂದ ‘ಫೆಮಿನೈಜಿಂಗ್’ ಜೀನುಗಳು ಹರಿದುಬರುವುದೆಂದೂ ಮತ್ತೆ ಮತ್ತೆ ಕೇಳಿಬರುತ್ತದೆ.ಆದರೆ ಇವ್ಯಾವುದಕ್ಕೂ ಯಾವುದೇ ಅಪ್ಪಟ ವೈಜ್ಞಾನಿಕ ವಿವರಣೆಗಳಿಲ್ಲ. ಉತ್ತಮ ರೀತಿಯ ಸಂಶೋಧನೆಯಿಂದ ಯಾವುದೇ ಪುರಾವೆಸಿಕ್ಕಿಲ್ಲ.
ಇದು ಏನನ್ನು ತೋರಿಸುತ್ತದೆ? ಸಲಿಂಗಾಕರ್ಷಣೆ ಅನೈಸರ್ಗಿಕ ಎಂಬ ಭಾವನೆ ಸಮಾಜದಲ್ಲಿ ಬೇರೂರಿದ್ದಾಗ ವಿಜ್ಞಾನ ಅದುನೈಸರ್ಗಿಕ ಮತ್ತು ಸಲಿಂಗಿಗಳು ಯಾವುದೇ ತಪ್ಪನ್ನು ಮಾಡುತ್ತಿಲ್ಲ ಎಂಬುದನ್ನು ಋಜುವಾತುಪಡಿಸಲು ಪ್ರಯತ್ನಿಸಿದೆ. ಸನ್ನಿವೇಶದವ್ಯಂಗ್ಯವೆಂದರೆ ‘ಸಲಿಂಗಾಕರ್ಷಣೆ ಸಹಜ’ ಎಂಬುದನ್ನು ಸಾಬೀತುಪಡಿಸಲು ಹೆಚ್ಚು ಸಂಶೋಧನೆಗಳಾಗಿದ್ದು 1980ರ ದಶಕದ ಎಚ್ಐ ವಿ ಸಾಂಕ್ರಾಮಿಕವಾದಾಗ. ಅಲ್ಲಿಯತನಕ ಗುಟ್ಟಾಗಿ ಸಂಬಂಧ ಬೆಳೆಸುತ್ತಿದ್ದ ಸಲಿಂಗಿಗಳು ಕಾಯಿಲೆ ಹರಡತೊಡಗಿದಾಗ ತಮ್ಮಲೈಂಗಿಕಾಸಕ್ತಿಯನ್ನು ತಮ್ಮ ವೈದ್ಯರ ಬಳಿ ಹೇಳಲೇ ಬೇಕಾಯಿತು. ಏಕೆಂದರೆ ಕೆಲವೊಂದು ಎಚ್ ಐ ವಿ ಗೆ ಸಂಬಂಧಪಟ್ಟಖಾಯಿಲೆಗಳು (ಕಪೋಸಿ ಸಾರ್ಕೋಮಾ) ಬರೇ ಗಂಡು ಸಲಿಂಗ ಸಂಬಂಧದಿಂದ ಎಚ್ ಐ ವಿ ಕಾಯಿಲೆ ಹತ್ತಿಸಿಕೊಂಡವರಿಗೆ ಮಾತ್ರಬರುತ್ತಿತ್ತು. ಹಾಗೆ ಎಚ್ ಐ ವಿ ರೋಗ ಬಂದವರಲ್ಲಿ ಅನೇಕ ಖ್ಯಾತನಾಮರೂ (ರಾಕ್ ಹಡ್ಸನ್) ಇದ್ದರು.
ಎಚ್ ಐ ಸರಿಯಾದ ಔಷಧ ಸಿಗಬೇಕಾದರೆ ಮತ್ತು ಆ ರೋಗವನ್ನು, ರೋಗಿಗಳನ್ನು ಹ್ಯೂಮನೈಜ್ ಮಾಡಲು– ಅದನ್ನು ಸಿಫಿಲಿಸ್,ಗೊನೊರಿಯಾ ಇತರೇ ಎಲ್ಲ ಸಾಮಾನ್ಯ ಲೈಂಗಿಕ ಖಾಯಿಲೆಯಂತೆ ನೋಡುವ ಅವಶ್ಯಕತೆಯಿತ್ತು. ಹಾಗಾಗಿ ಸಲಿಂಗಾಕರ್ಷಣೆಸಹಜ ಎನ್ನುವುದು ಚಳವಳಿಯೋಪಾದಿಯಲ್ಲಿ ಹಾಲಿವುಡ್ಡಿನಲ್ಲಿ, ಸ್ಯಾನ್ಫ್ರಾನ್ಸಿಸ್ಕೋ ಮುಂತಾದ ಸಲಿಂಗ ಸ್ನೇಹೀ ನಗರಗಳಲ್ಲಿಹರಡತೊಡಗಿತು. ಗಮನಿಸಿ, 1962ರಲ್ಲಿ ಇಲಿನಾಯ್ ರಾಜ್ಯದಲ್ಲಿ ಸಲಿಂಗಾಕರ್ಷಣೆ ಅಪರಾಧವಲ್ಲ ಎಂದು ನ್ಯಾಯಾಧೀಶರುತೀರ್ಪನ್ನು ಕೊಟ್ಟಿಯಾಗಿತ್ತು. 1980ರ ಹೊತ್ತಿಗೆ ಕಾನೂನಿನ ಪ್ರಕಾರ ಸುಮಾರು ಅಮೆರಿಕದ 27 ರಾಜ್ಯಗಳಲ್ಲಿ ಸಮ್ಮತವಾದಸಲಿಂಗರತಿ ಅಪರಾಧವಲ್ಲ ಎಂಬ ತೀರ್ಮಾನವನ್ನು ಕೋರ್ಟುಗಳು ನೀಡಿದವು.
ಆದರೆ, ಕಾನೂನು ಬೇರೆ, ಸಮಾಜ ಬೇರೆ. ಕಾನೂನು ಮಾನ್ಯ ಮಾಡಿದ್ದರೂ ಸಮಾಜ ಇದನ್ನು ಒಪ್ಪಿರಲಿಲ್ಲ. ಆದರೆ ತಮ್ಮ ಮೆಚ್ಚಿನಹೀರೋಗಳು, ತಮ್ಮ ಕುಟುಂಬದ ಸದಸ್ಯರು, ಸ್ನೇಹಿತರು ಎಚ್ ಐ ವಿ ಪಿಡುಗಿನಿಂದ ಸಾಯುತ್ತಿದ್ದಾಗ ಬಹಳಷ್ಟು ಜನಕ್ಕೆ ಈ ಕಾಯಿಲೆತಮ್ಮ ಗುಪ್ತ ಸಲಿಂಗ ಸಂಬಂಧದ ಕಾರಣ ಬಂದಿದೆಯೆಂದು ಗೊತ್ತಾದಾಗ ಈ ಕಾಯಿಲೆಯಿದ್ದವರನ್ನು ಸಹಾನುಭೂತಿಯಿಂದನೋಡಲಿಕ್ಕೆ ಅದರ ಮೂಲವಾದ ಸಲಿಂಗರತಿಯನ್ನೂ ಎಂದು ನೋಡಲೇಬೇಕಾಯಿತು.
ಭಾರತೀಯ ಮೂಲದ ವೈದ್ಯ ಲೇಖಕ ಡಾ. ಅಬ್ರಹಾಮ್ ವರ್ಗೀಸ್ ಎಂಬಾತ ‘ಮೈ ಓನ್ ಕಂಟ್ರಿ’ ಎಂಬ ಪುಸ್ತಕದಲ್ಲಿ ಹೀಗೆಬರೆದಿದ್ದಾರೆ: ಮೊಟ್ಟಮೊದಲು ಟೆನಿಸ್ಸೀ ರಾಜ್ಯದ ಸಣ್ಣ ಪಟ್ಟಣವೊಂದರಲ್ಲಿ ಸಲಿಂಗಿಯೊಬ್ಬ ಏಡ್‌ಸ್ ಕಾಯಿಲೆ ಸಂಬಂಧೀನ್ಯುಮೋನಿಯಾ ರೋಗ ಉಲ್ಬಣವಾದಾಗ ಆತನನ್ನು ವೆಂಟಿಲೇಟರ್ಗೆ ಹಾಕುವ ಪರಿಸ್ಥಿತಿ ಬಂತಂತೆ. ಯಾವ ಚಿಕಿತ್ಸೆಯೂಫಲವಾಗದೇ ಆತ ಸತ್ತಾಗ, ಅವನಿಗೆ ಉಪಯೋಗಿಸಿದ ವೆಂಟಿಲೇಟರ್ ಅನ್ನು ಬೇರೆ ಯಾರಿಗೂ ಉಪಯೋಗಿಸಬಾರದು ಎಂಬಒತ್ತಡ ಆ ಜನರಿಂದ ಬಂತಂತೆ. ಆಸ್ಪತ್ರೆಯ ಆಡಳಿತಾಧಿಕಾರಿಗಳು ಇದನ್ನು ಮನ್ನಿಸದಿದ್ದಾಗ ಜನ ಹುಚ್ಚೆದ್ದು ಬಂದು ಆವೆಂಟಿಲೇಟರ್ನನ್ನೇ ಸುಟ್ಟುಹಾಕಿದರಂತೆ. ಇದು ನಡೆದದ್ದು ಕೇವಲ ಮೂವತ್ತು ವರ್ಷದ ಹಿಂದೆ.
ಆ ಊರಿನ ಸಮಾಜ, ಜನರು ಸಲಿಂಗಿಳನ್ನು ಪಾಪಿಗಳೆಂದು ದೇವರ ನಿಯಮವನ್ನು ಉಲ್ಲಂಘಿಸಿದವರೆಂದು ಬಗೆದಿದ್ದರು.
ಎಲ್ಲಕ್ಕೂ ವಿಜ್ಞಾನದಲ್ಲಿ ಉತ್ತರವಿರುವುದಿಲ್ಲ. ಉತ್ತರವಿರಬಾರದು. ಸಲಿಂಗ ಸಂಬಂಧ ಉಸಿರು, ಹಸಿವಿನಷ್ಟೇ ಸಹಜ. ಅದನ್ನುಕಾನೂನುಬದ್ಧಮಾಡುವುದು ಈ ಸಹಜತೆಯನ್ನು ಸಮಾಜ ಒಪ್ಪಿಕೊಳ್ಳುವ ಅತೀ ಪ್ರಾಥಮಿಕ ಹೆಜ್ಜೆ. ಏಕೆಂದರೆ ಚರಿತ್ರೆಯನ್ನು ಒಮ್ಮೆನಮಗೆ ಗೊತ್ತಾಗುತ್ತದೆ. 1962 ರಲ್ಲಿ ಮೊಟ್ಟ ಮೊದಲ ಬಾರಿಗೆ ಅಮೆರಿಕದಲ್ಲಿ ಒಂದು ರಾಜ್ಯ ಸಲಿಂಗಾಕರ್ಷಣೆ ಮತ್ತು ದೇಹಸಂಬಂಧಅಪರಾಧವಲ್ಲ ಎಂಬ ತೀರ್ಪು ಕೊಟ್ಟಿದ್ದರೂ, ಸಲಿಂಗಿಗಳ ನಡುವಿನ ಕಾಮನ್ ಲಾ, ಮದುವೆ, ಜೀವವಿಮೆ, ಆರೋಗ್ಯವಿಮೆ, ಇವೆಲ್ಲಾಇತ್ತೀಚಿನ ಬೆಳವಣಿಗೆಗಳು. ಅಂದರೆ ಸಮಾಜ ಈ ಸಂಬಂಧವನ್ನು ಮಾನ್ಯಮಾಡಿದಾಗ ಮಾತ್ರ ಆದದ್ದು. ಎಚ್ಐವಿ ಪಿಡುಗಿನನಂತರದ ಬೆಳವಣಿಗೆ.
ಈ ನಿಟ್ಟಿನಲ್ಲಿ ಗಮನಿಸಿದರೆ ಭಾರತದಲ್ಲಿ ನಾವು ಇನ್ನೂ ಬಹಳ ದೂರ ಸಾಗಬೇಕಾಗಿದೆ. ಏನೇ ಕಾನೂನು ಅದನ್ನು ಸಮಾಜಒಪ್ಪಬೇಕು. ಇಲ್ಲದಿದ್ದಲ್ಲಿ ಸಲಿಂಗಿಗಳ ಸಂಬಂಧಕ್ಕೆ ಕಾನೂನಿನ ಮಾನ್ಯತೆ ಮಾತ್ರ ಸಿಕ್ಕಲ್ಲಿ ಸ್ವಚ್ಛಂದ, ಸ್ವೇಚ್ಛೆಗಷ್ಟೇ ಲೈಸೆನ್ಸ್ಸಿಕ್ಕಂತಾಗಿ, ಆರೋಗ್ಯಕಾರಿ ಸಲಿಂಗಿ ಸಮಾಜದ ಬೆಳವಣಿಗೆಗೆ ಇದೇ ಕಾನೂನು ಮಾರಕವಾಗಬಹುದು.
ಮೊದಲೇ ಹೇಳಿದ ಹಾಗೆ ಈ ವಿಷಯದಲ್ಲಿ ಸಂಶೋಧನೆ ಮಾಡಿರುವ ಬಹುಜನರ ಅಭಿಪ್ರಾಯವೆಂದರೆ ಡಾರ್ವಿನ್‌ನ ವಿಕಾಸವಾದದಪ್ರಕಾರ ಜೀನುಗಳ ‘ನೈಸರ್ಗಿಕ ಆಯ್ಕೆಯ’ ಪ್ರಕ್ರಿಯೆಯಲ್ಲಿ ಈ ಜೀನುಗಳು ಒಂದು ಪೀಳಿಗೆಯಿಂದ ಇನ್ನೊಂದು ಪೀಳಿಗೆಗೆವರ್ಗವಾಗಬೇಕಾಗಿರುವುದರಿಂದ ಅಪ್ಪಟ ಸಲಿಂಗ ಸಂಬಂಧದಲ್ಲಿ ಇದು ಅಸಾಧ್ಯ. ಇದು ಆನುವಂಶಿಕವೇ ಆಗಿದ್ದಲ್ಲಿ ಪೀಳಿಗೆಯಿಂದಪೀಳಿಗೆಗೆ ಸಲಿಂಗಾಕರ್ಷಣೆ ಕಡಿಮೆಯಾಗಬೇಕು.
ಆದರೆ ಎಲ್ಲ ಕಾಲದಲ್ಲಿಯೂ ಎಲ್ಲ ಪ್ರಾಣಿಸಂತತಿಗಳಲ್ಲಿಯೂ ಸಲಿಂಗಾಕರ್ಷಣೆ ಸಮಾನವಾಗಿರುವುದರಿಂದ ಬರಿಯ ಜೀನು ಹಾಗೂಆನುವಂಶಿಕತೆಯ ಆಧಾರದ ಮೇಲೆ ಸಲಿಂಗಾಕರ್ಷಣೆಯನ್ನು ಸಹಜ ಇಲ್ಲವೇ ಅಸಹಜ ಎಂದು ಹೇಳುವುದು ತಪ್ಪಾಗುತ್ತದೆ.
Friends, If you like this post,kindly comment below the post and do share your Response, (Thanks for Reading....)
No comments:
Post a Comment