ಮಾನ್ಸೂನ್ ಮಾಸದಲ್ಲಿ ಮಳೆ ಅಭಾವದ ಕಾರಣ ರಾಜ್ಯದ 23 ಜಿಲ್ಲೆಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ.
“ಕರಾವಳಿ ದಕ್ಷಿಣ ಒಳನಾಡು ಹಾಗು ಮಲೆನಾಡು ಪ್ರದೇಶಗಳಲ್ಲಿ ಅಧಿಕ ಮಳೆಯಾಗಿ ಪ್ರವಾಹ ಉಂಟಾದರೂ ರಾಜ್ಯದ 23 ಜಿಲ್ಲೆಗಳಲ್ಲಿ ಮಳೆ ಅಭಾವದಿಂದ ಬರಪೀಡಿತ ಎಂದು ಘೋಷಿಸಲಾಗಿದೆ” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಉತ್ತರ ಒಳನಾಡಿನಲ್ಲಿ 26% ನಷ್ಟು ಮಳೆಯ ಅಭಾವವಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಒಣಹವೆ ಕಾರಣ ಬಾಂಬೆ ಹಾಗು ಹೈದರಾಬಾದ್ ಕರ್ನಾಟಕಗಳ 86 ತಾಲ್ಲೂಕುಗಳನ್ನು ಬರಪೀಡಿತ ಎಂದು ಹೇಳಲಾಗಿರುವ ವರದಿಯನ್ನು ಮುಖ್ಯಮಂತ್ರಿಗಳ ಕಚೇರಿಗೆ ಸಲ್ಲಿಸಲಾಗಿದೆ.
ಮೂರು ವಾರಗಳ ಕಾಲ 60% ಮಳೆ ಅಭಾವ ಹಾಗು 33% ನಷ್ಟು ಬೆಳೆ ನಷ್ಟವಾದಲ್ಲಿ ತಾಲ್ಲೂಕನ್ನು ಬರಪೀಡಿತ ಎಂದು ಘೋಷಿಸಬಹುದಾಗಿದೆ.
“ರಾಜ್ಯದ 75 ಲಕ್ಷ ಹೆಕ್ಟೇರ್ ಕೃಷಿ ಭೂಮಿಯಲ್ಲಿ 63 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ಖಾರಿಫ್ ಸಂದರ್ಭ ಮಳೆ ಅಭಾವದಿಂದ 8000 ಕೋಟಿ ರುಗಳಷ್ಟು ನಷ್ಟವಾಗಿದೆ” ಎಂದು ಪ್ರಾಥಮಿಕ ವರದಿಯಲ್ಲಿ ತಿಳಿದುಬಂದಿದೆ.
ಕೃಷಿ, ತೋಟಗಾರಿಕೆ ಹಾಗು ರೇಷ್ಮೆ ಇಲಾಖೆಗಳು ಒಟ್ಟಾಗಿ ಬರಪೀಡಿತ ಜಿಲ್ಲೆಗಳಲ್ಲಿ ಜಂಟಿ ಸವೇ ನಡೆಸಿ ಕೇಂದ್ರ ವಿಪತ್ತು ಪರಿಹಾರ ನಿಧಿಯಿಂದ ನೆರವು ಪಡೆಯಲು ವರದಿ ಸಲ್ಲಿಸಲಾಗುವುದು.
“ರಾಜ್ಯದ ಏಳು ಪ್ರವಾಹಪೀಡಿತ ಜಿಲ್ಲೆಗಳ ಅಧ್ಯಯನ ನಡೆಸಲು ಕೇಂದ್ರದ ಎರಡು ತಂಡಗಳು ದಕ್ಷಿಣ ಕನ್ನಡ, ಹಾಸನ, ಕೊಡಗು ಹಾಗು ಚಿಕ್ಕಮಗಳೂರು ಜಿಲ್ಲೆಗಳಿಗೆ ಆಗಮಿಸಿದ್ದು, ಆಸ್ತಿ ಪಾಸ್ತಿಗೆ ಆಗಿರುವ ಹಾನಿಯ ಅಂದಾಜು ಮಾಡುತ್ತಿವೆ” ಎಂದು ಅಧಿಕಾರಿ ತಿಳಿಸಿದ್ದಾರೆ.
ಬರದ ಅಧ್ಯಯನ ಮಾಡಲು ಮತ್ತೊಂದು ತಂಡವನ್ನು ಕಳುಹಿಸಲು ಕೇಂದ್ರವನ್ನು ರಾಜ್ಯ ಸರಕಾರ ಕೋರಿಕೊಂಡಿದೆ.
Friends,
If you like this post,kindly comment below the post and do share your
Response,
(Thanks for Reading....)
No comments:
Post a Comment