ಗುಜರಾತ್‍ನ ವಿಶ್ವವಿಖ್ಯಾತ ಗಿರ್ ಅರಣ್ಯದಲ್ಲಿ 23 ಸಿಂಹಗಳ ಸಾವಿಗೆ ಕಾರಣ ಏನೆಂಬುದು ಪತ್ತೆಯಾಗಿದೆ. ವನರಾಜನ ಮರಣಕ್ಕೆ ಕ್ಯಾನಿನ್ ಡಿಸ್ಟೆಂಪರ್ ವೈರಸ್(ಸಿಡಿವಿ) ಕಾರಣ ಎಂಬುದನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಲಿ(ಐಸಿಎಂಆರ್) ಮತ್ತು ರಾಷ್ಟ್ರೀಯ ವೈರಾಣುಶಾಸ್ತ್ರ ಸಂಸ್ಥೆ(ಎನ್‍ಐವಿ) ತಿಳಿಸಿದೆ.
ಗಿರ್ ಅರಣ್ಯದಲ್ಲಿರುವ ಸಿಂಹಗಳಿಗೆ ವೈರಾಣು ದಾಳಿ ಪ್ರತಿರೋಧಕ ಚುಚ್ಚುಮದ್ದು ನೀಡಲು ಅಮೆರಿಕದಿಂದ 300 ಲಸಿಕೆಗಳನ್ನು ತರಿಸಿಕೊಳ್ಳಲಾಗಿದೆ. ಪೂರ್ವ ಆಫ್ರಿಕಾದಲ್ಲಿನ ಸಿಂಹಗಳ ಒಟ್ಟು ಸಂಖ್ಯೆಯಲ್ಲಿ ಶೇ.30ರಷ್ಟು ವನ್ಯಜೀವಿಗಳ ಸಾವಿಗೆ ಇದೇ ವೈರಾಣು ಕಾರಣವಾಗಿದೆ ಎಂದು ಐಸಿಎಂಆರ್ ಹೇಳಿದೆ. ಗಿರ್ ವನ್ಯಧಾಮದಲ್ಲಿ ಏಷ್ಯಾ ಸಿಂಹಗಳ ಸಾವಿಗೆ ಸಿಡಿವಿ ಕಾರಣ ಎಂಬುದನ್ನು ಐಸಿಎಂಆರ್ ಮತ್ತು ಎನ್‍ಐವಿ ಖಚಿತಪಡಿಸಿದೆ.
ಗುಜರಾತ್‍ನ ಜಗತ್ಪ್ರಸಿದ್ದ ಗಿರ್ ಅರಣ್ಯದಲ್ಲಿ ಕೆಲವೇ ದಿನಗಳಲ್ಲಿ ಮರಿಗಳೂ ಸೇರಿದಂತೆ 23 ಸಿಂಹಗಳು ನಿಗೂಢವಾಗಿ ಮೃತಪಟ್ಟಿದ್ದವು. ಇದರಿಂದ ಆತಂಕಗೊಂಡ ಅರಣ್ಯಾಧಿಕಾರಿಗಳು ಸಿಂಹಗಳ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿತ್ತು. ವನರಾಜ ಮೃಗಗಳ ಸಾವು ಪರಿಸರ ಪ್ರೇಮಿಗಳು ಮತ್ತು ಪ್ರಾಣಿಪ್ರಿಯರು ಆತಂಕ ವ್ಯಕ್ತಪಡಿಸಿದ್ದರು.
No comments:
Post a Comment