ಪ್ರಾಸಿಕ್ಯೂಷನ್ ದಯನೀಯ ವೈಫಲ್ಯ: ನ್ಯಾಯಾಧೀಶರ ಅಸಮಾಧಾನ
ರಾಜ್ ಅಪಹರಣಕ್ಕಿಲ್ಲ ಶಿಕ್ಷೆ

ಅಪಹರಣ ಸಂದರ್ಭದ ಚಿತ್ರ: ರಾಜ್ ಜತೆಗೆ ನಕ್ಕೀರನ್ ಗೋಪಾಲ್, ನಾಗಪ್ಪ ಮಾರಡಗಿ ಮತ್ತು ವೀರಪ್ಪನ್
ಪ್ರಜಾವಾಣಿ ವಾರ್ತೆ
ಗೋಬಿಚೆಟ್ಟಿಪಾಳಯಂ (ತಮಿಳು ನಾಡು): ಕನ್ನಡ ಚಿತ್ರನಟ ರಾಜ್ಕುಮಾರ್ ಅವರನ್ನು ಕಾಡುಗಳ್ಳ ವೀರಪ್ಪನ್ ಅಪಹರಿಸಿದ ಪ್ರಕರಣದ ಎಲ್ಲ ಒಂಬತ್ತು ಆರೋಪಿಗಳನ್ನು ಇಲ್ಲಿನ ನ್ಯಾಯಾಲಯ ಖುಲಾಸೆ ಮಾಡಿದೆ. ಪ್ರಾಸಿಕ್ಯೂಷನ್ ವಾದ ದುರ್ಬಲವಾಗಿತ್ತು ಮತ್ತು ಬಹುತೇಕ ವಿಚಾರಗಳಲ್ಲಿ ಅದು ಎಡವಿದೆ ಎಂದು ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಕೆ. ಮಣಿ ಅಸಮಾಧಾನ
ವನ್ನೂ ವ್ಯಕ್ತಪಡಿಸಿದರು.
ವೀರಪ್ಪನ್ ಮತ್ತು ಸೇತುಕುಳಿ ಗೋವಿಂದನ್ ಜತೆಗೆ ಈ ಒಂಬತ್ತು ಮಂದಿಗೆ ನಂಟು ಇತ್ತು ಎಂಬುದನ್ನು ತೋರಿಸಲು ಒಂದು ಅಣುವಿನಷ್ಟು ಪುರಾವೆ ಹಾಜರುಪಡಿಸುವುದೂ ಪ್ರಾಸಿ
ಕ್ಯೂಷನ್ಗೆ ಸಾಧ್ಯ ವಾಗಿಲ್ಲ. ಹಾಗಾಗಿ ಅನುಮಾನದ ಲಾಭ ಆರೋಪಿಗಳಿಗೆ ದೊರೆಯುತ್ತದೆ. ಎಲ್ಲರನ್ನೂ ಆರೋಪ
ಮುಕ್ತಗೊಳಿಸಲಾಗಿದೆ ಎಂದು ನ್ಯಾಯಾಧೀಶರು ಪ್ರಕಟಿಸಿದರು.
ರಾಜ್ಕುಮಾರ್ ಮತ್ತು ಅವರ ಅಳಿಯ ಎಸ್.ಎ. ಗೋವಿಂದರಾಜ್, ಸಹಾಯಕ ನಿರ್ದೇಶಕ ನಾಗಪ್ಪ ಮಾರಡಗಿ ಮತ್ತು ಸಹಾಯಕ ನಾಗೇಶ್ ಅವರನ್ನು 2000ನೇ ಇಸವಿಯ ಜುಲೈ 30ರಂದು ಈರೋಡ್ ಜಿಲ್ಲೆಯ ತಾಳವಾಡಿ ಎಂಬಲ್ಲಿರುವ ರಾಜ್ ಅವರ ತೋಟದ ಮನೆಯಿಂದ ವೀರಪ್ಪನ್ ಅಪಹರಿಸಿದ್ದ. ಇದಾಗಿ 18 ವರ್ಷಗಳ ಬಳಿಕ ನ್ಯಾಯಾಲಯ ತೀರ್ಪು ಪ್ರಕಟವಾಗಿದೆ.
ಈ ಪ್ರಕರಣವನ್ನು ಕನ್ನಡದ ಸೂಪರ್ಸ್ಟಾರ್ ಒಬ್ಬರ ಅಪಹರಣ ಎಂಬಂತೆ ನೋಡದೆ ಭಾರತದ ಪ್ರಜೆಯೊ
ಬ್ಬರ ಅಪಹರಣ ಎಂದೇ ನೋಡಬೇಕು ಎಂದು ನ್ಯಾಯಾಧೀಶರು ಹೇಳಿದರು.
ಅಪಹರಣವಾಗಿ 108 ದಿನಗಳ ಬಳಿಕ ರಾಜ್ ಅವರನ್ನು ವೀರಪ್ಪನ್ ಹಿಡಿತದಿಂದ ಬಿಡಿಸಲಾಯಿತು. ತಮಿಳು ಪತ್ರಿಕೆ ‘ನಕ್ಕೀರನ್’ ಸಂಪಾದಕ ಆರ್.ಆರ್. ಗೋಪಾಲ್ ಅವರು ಹಲವು ಬಾರಿ ಅರಣ್ಯಕ್ಕೆ ಹೋಗಿ ವೀರಪ್ಪನ್ನನ್ನು
ಭೇಟಿಯಾಗಿ ಸಂಧಾನ ನಡೆಸಿದ್ದರು. ಗೋಪಾಲ್ ಅವರಿಗೆ ತಮಿಳು ಹೋರಾಟಗಾರ ಪಳ ನೆಡುಮಾರನ್ ಮತ್ತು ಇತರರು ಸಹಕರಿಸಿದ್ದರು.
ಈರೋಡ್ ಸಮೀಪದ ತೋಟದ ಮನೆಯಿಂದ ರಾಜ್ಕುಮಾರ್ ಅವರ ಅಪಹರಣದ ನಂತರದ ಮೂರು ತಿಂಗಳು ಕರ್ನಾಟಕ ಮತ್ತು ತಮಿಳುನಾಡು ಸರ್ಕಾರಗಳು ಭಾರಿ ತಲ್ಲಣ ಅನುಭವಿಸಿದ್ದವು.
ಬೆಂಗಳೂರಿನಲ್ಲಿ ಗಲಭೆ ಕೂಡ ನಡೆದಿತ್ತು. ಕರ್ನಾಟಕದ ಅಂದಿನ ಮುಖ್ಯಮಂತ್ರಿಯಾಗಿದ್ದ ಎಸ್.ಎಂ. ಕೃಷ್ಣ ಮತ್ತು ತಮಿಳುನಾಡು ಮುಖ್ಯಮಂತ್ರಿ
ಯಾಗಿದ್ದ ಎಂ.ಕರುಣಾನಿಧಿ ಅವರು ಪರಿಸ್ಥಿತಿಯನ್ನು ನಿಭಾಯಿಸಲು ಹರಸಾಹಸ ಪಟ್ಟಿದ್ದರು.
9 ಆರೋಪಿಗಳು
ಮಾರನ್, ಇನಿಯನ್, ಆಂಡ್ರಿಲ್, ಸತ್ಯ, ನಾಗರಾಜ್, ಪುಟ್ಟುಸ್ವಾಮಿ, ರಾಮ, ಬಸವಣ್ಣ ಮತ್ತು ಗೋವಿಂದರಾಜ್ ಅವರ ಮೇಲೆ ರಾಜ್ಕುಮಾರ್ ಅಪಹರಣಕ್ಕೆ ನೆರವಾದ ಆರೋಪ ಹೊರಿಸಲಾಗಿತ್ತು.
No comments:
Post a Comment