ಭಾರೀ ಬಂಡವಾಳ ಸೆಳೆಯುವ ದೃಷ್ಟಿಯಿಂದ ನೂತನ ದೂರ ಸಂಪರ್ಕ ನೀತಿಗೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ. ಈ ನೂತನ ನೀತಿಯಿಂದ ಸುಮಾರು 10 ಸಾವಿರ ಕೋಟಿ ಅಮೆರಿಕನ್ ಡಾಲರ್ನಷ್ಟು ಬಂಡವಾಳ ಆಕರ್ಷಿಸುವ ಹಾಗೂ 40 ಲಕ್ಷ ಉದ್ಯೋಗ ಸೃಷ್ಟಿಸುವ ಗುರಿ ಹೊಂದಿದೆ.
‘ರಾಷ್ಟ್ರೀಯ ಡಿಜಿಟಲ್ ಸಂಪರ್ಕ ನೀತಿ(ಎನ್ಡಿಸಿಪಿ) 2018’ ಸಚಿವ ಸಂಪುಟದಲ್ಲಿ ಅನುಮೋದನೆಯಾಗಿದೆ. ಈ ಕರಡಿನ ಪ್ರಕಾರ, ಅತ್ಯಾಧುನಿಕ ತಂತ್ರಜ್ಞಾನಗಳಾದ 5ಜಿ ಹಾಗೂ ಆಪ್ಟಿಕಲ್ ಫೈಬರ್ ಬಳಕೆ ಮಾಡುವ ಮೂಲಕ ದೇಶಾದ್ಯಂತ ಕಡಿಮೆ ದರದಲ್ಲಿ ಅತಿ ವೇಗದ ಬ್ರಾಡ್ಬ್ಯಾಂಡ್ ಸೇವೆ ಒದಗಿಸಲು ಸರಕಾರ ಚಿಂತನೆ ನಡೆಸಿದೆ.
ಎನ್ಡಿಸಿಪಿ ಕರಡು, ದೇಶದ ಎಲ್ಲ ಭಾಗಗಳ ಜನತೆಗೂ ಪ್ರತಿ ಸೆಕೆಂಡ್ಗೆ 50 ಎಂಬಿ ವೇಗದ ಬ್ರಾಡ್ಬ್ಯಾಂಡ್ ಸೇವೆ 5ಜಿ ಸೌಲಭ್ಯ ಹಾಗೂ 2022ರ ವೇಳೆಗೆ 40 ಲಕ್ಷ ಉದ್ಯೋಗ ಸೃಷ್ಟಿ ಮಾಡುವ ಉದ್ದೇಶ ಹೊಂದಿದೆ. ಸ್ಪೆಕ್ಟ್ರಂನ ದುಬಾರಿ ಬೆಲೆ ಮತ್ತು ಸಂಬಂಧಿತ ಸೇವೆಗಳ ವೆಚ್ಚಗಳಿಂದ ದೂರಸಂಪರ್ಕ ಸೇವಾ ಉದ್ಯಮಗಳು 7.8 ಲಕ್ಷ ಕೋಟಿ ಹೊರೆ ಅನುಭವಿಸುತ್ತಿವೆ. ಈ ಹೊರೆಯನ್ನು ತಗ್ಗಿಸಲು ಕೇಂದ್ರ ಸರಕಾರ ಪ್ರಯತ್ನ ನಡೆಸುತ್ತಿದೆ.
Telegram Link https://t.me/joinchat/AAAAAE9lq2X6z4BbgUUCnw Friends, If you like this post,kindly comment below the post and do share your Response, (Thanks for Reading....)
No comments:
Post a Comment