ರಾಷ್ಟ್ರೀಯ ವಿಪತ್ತು ಸಂದರ್ಭ ಸಾರ್ವಜನಿಕರಿಗೆ ಎಚ್ಚರಿಕೆ ಸಂದೇಶ ಕಳುಹಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಮೆರಿಕನ್ನರ ಮೊಬೈಲ್ಗೆ ‘ ಪ್ರೆಸಿಡೆನ್ಶಿಯಲ್ ಅಲರ್ಟ್ ’ ಎಸ್ಎಂಎಸ್ ಕಳುಹಿಸಲು ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ಹಲವು ದಿನಗಳಿಂದ ಬಳಕೆಯಲ್ಲಿರದ ಅಲರ್ಟ್ ವ್ಯವಸ್ಥೆಯೊಂದಕ್ಕೆ ಮರುಜೀವ ನೀಡಿ ಫೆಡರಲ್ ಎಮರ್ಜೆನ್ಸಿ ಮ್ಯಾನೇಜ್ವೆುಂಟ್ ಏಜೆನ್ಸಿ (ಎಫ್ಇಎಂಎ) ಮೂಲಕ ಎಸ್ಎಂಎಸ್ ಅಲರ್ಟ್ ಸೇವೆ ಆರಂಭಿಸಲಾಗುವುದು ಎಂದು ಸರ್ಕಾರ ತಿಳಿಸಿದೆ. ಫೋನ್ಗಳಲ್ಲಿ ಅಲರ್ಟ್ ಎಸ್ಎಂಎಸ್ ಸ್ವೀಕೃತಿಯಾದ ಕೂಡಲೇ ಜೋರಾದ ಟೋನ್ ಕೇಳಲಿದೆ. ಜತೆಗೆ ವಿಶೇಷ ರೀತಿಯಲ್ಲಿ ಫೋನ್ಗಳು ವೈಬ್ರೇಟ್ ಆಗಲಿವೆ. ಪ್ರಾಯೋಗಿಕವಾಗಿ ಸೆ.20ರ ರಾತ್ರಿ 11.48ಕ್ಕೆ (ಅಮೆರಿಕದ ಕಾಲಮಾನ ಮಧ್ಯಾಹ್ನ 2.18 ) ಪ್ರೆಸಿಡೆನ್ಶಿಯಲ್ ಅಲರ್ಟ್ ಕಳುಹಿಸಲು ನಿರ್ಧರಿಸಲಾಗಿದೆ. ಎಸ್ಎಂಎಸ್ನಲ್ಲಿ ‘ಅಲರ್ಟ್ ಎಂಬ ಶೀರ್ಷಿಕೆ ಇದ್ದು, ಇದು ರಾಷ್ಟ್ರೀಯ ವೈರ್ಲೆಸ್ ತುರ್ತು ಎಚ್ಚರಿಕೆ ವ್ಯವಸ್ಥೆಯ ಸಂದೇಶವಾಗಿದ್ದು, ಪ್ರತಿಕ್ರಿಯಿಸುವ ಅಗತ್ಯವಿಲ್ಲ’ ಎಂಬ ಒಕ್ಕಣೆ ಇರುವುದಾಗಿ ಎಫ್ಇಎಂಎ ಸ್ಪಷ್ಟನೆ ನೀಡಿದೆ
Friends,
If you like this post,kindly comment below the post and do share your
Response,
(Thanks for Reading....)
No comments:
Post a Comment