ರಾಜ್ಯದ ಸೋಲಾರ್ ವಿದ್ಯುತ್ ಉತ್ಪಾದನೆ ಸಾಮರ್ಥ್ಯ ಇನ್ನೊಂದು ವರ್ಷದಲ್ಲಿ 7 ಸಾವಿರ ಮೆಗಾವಾಟ್ಗೆ ಹಿಗ್ಗಲಿದೆ. ಸೋಲಾರ್ ಕ್ಷೇತ್ರದಲ್ಲಿ ದೇಶಕ್ಕೆ ರಾಜ್ಯವೇ ಅಗ್ರಗಣ್ಯ ಸ್ಥಾನಕ್ಕೇರಲಿದೆ. ಕಳೆದ ಸರ್ಕಾರದ ಅವಧಿಯಲ್ಲಿ ರಾಜ್ಯ ತಂದ ಸೋಲಾರ್ ನೀತಿಯಿಂದಾಗಿ ಕೇವಲ 100 ಮೆವಾ ಸಾಮರ್ಥ್ಯವಿದ್ದ ವಿದ್ಯುತ್ ಉತ್ಪಾದನೆ ಸಾಮರ್ಥ್ಯ ಹೆಚ್ಚಿಸಲು ಹತ್ತು ಹಲವು ಕ್ರಮಕೈಗೊಳ್ಳಲಾಗಿತ್ತು.
ಏಷ್ಯಾದಲ್ಲಿಯೇ ದೊಡ್ಡ ಸೋಲಾರ್ ಪಾರ್ಕ್ ಎಂದು ಗುರುತಿಸಲಾಗಿರುವ ಪಾವಗಡ ಸೋಲಾರ್ ಯೋಜನೆಯಲ್ಲಿ 2 ಸಾವಿರ ಮೆವಾ ವಿದ್ಯುತ್ ಉತ್ಪಾದನೆ ಮಾಡುವ ಗುರಿ ಇದ್ದು, ಸದ್ಯ ಅಲ್ಲಿ 600 ಮೆವಾ ವಿದ್ಯುತ್ ಉತ್ಪಾದನೆಯಾಗುತ್ತಿದೆ. ಮಲೆನಾಡು ಪ್ರದೇಶ ಹೊರತುಪಡಿಸಿದ ತಾಲೂಕುಗಳಲ್ಲಿ ಸೋಲಾರ್ ಪಾರ್ಕ್ ಯೋಜನೆಗಳು, ಸೋಲಾರ್ ಮೇಲ್ಛಾವಣಿ ಫಲಕ ಯೋಜನೆ ಫಲಪ್ರದವಾಗಿ ಅನುಷ್ಠಾನವಾಗಿದ್ದರಿಂದ ಸೋಲಾರ್ ವಿದ್ಯುತ್ ಉತ್ಪಾದನೆ ಗಣನೀಯವಾಗಿ ಹೆಚ್ಚಳವಾಗಿದೆ. ಒಟ್ಟಾರೆ 9 ಸಾವಿರ ಮೆವಾ ವಿದ್ಯುತ್ನ್ನು ಸೋಲಾರ್ ಯೋಜನೆಗಳಿಂದಲೇ ಪಡೆಯುವ ನೀಲಿನಕ್ಷೆ ತಯಾರಿಸಲಾಗಿದ್ದು, ಅದಕ್ಕಾಗಿ ಸತತ ಪ್ರಯತ್ನಗಳನ್ನು ನಡೆಯುತ್ತಿದೆ. 3500 ಮೆವಾ ಸೋಲಾರ್ ವಿದ್ಯುತ್ ಉತ್ಪಾದನೆ ಮಾಡುವ ಮೂಲಕ ನಂಬರ್ ಒನ್ ಸ್ಥಾನದಲ್ಲಿದ್ದ ತೆಲಂಗಾಣ ಈಗ 2ನೇ ಸ್ಥಾನಕ್ಕೆ ಕುಸಿದಿದೆ. ನಂತರದ ಸ್ಥಾನದಲ್ಲಿ ತಮಿಳುನಾಡು, ಆಂಧ್ರ ರಾಜ್ಯಗಳಿವೆ.
ಸೋಲಾರ್ ನೀತಿ ಎಫೆಕ್ಟ್
ದೇಶದಲ್ಲಿ ಸೋಲಾರ್ ನೀತಿ ಜಾರಿಯಾಗಿಲ್ಲ. ಆದರೆ, ರಾಜ್ಯದಲ್ಲಿ ರೈತಸ್ನೇಹಿಯಾಗಿ ಸೋಲಾರ್ ನೀತಿಯನ್ನು ಜಾರಿಗೆ ತಂದಿದ್ದರ ಪರಿಣಾಮ ಸೋಲಾರ್ ಯೋಜನೆಗಳು ವೇಗವಾಗಿ ಅನುಷ್ಠಾನಕ್ಕೆ ಬರಲು ಕಾರಣವಾಯಿತು. ತಾನೇ ಮಾಲೀಕನಾಗಿ ಕೇವಲ ಗುತ್ತಿಗೆ ಆಧಾರದ ಮೇಲೆ ವಿದ್ಯುತ್ ಉತ್ಪಾದನೆಗೆ ಭೂಮಿ ಬಿಟ್ಟುಕೊಡುವ ಯೋಜನೆ ರೈತರಿಗೆ ವರದಾಯಕವಾಯಿತು. ಮೊದಮೊದಲು ಭೂಮಿ ನೀಡಲು ಮೀನಮೇಷ ಎಣಿಸುತ್ತಿದ್ದ ರೈತರು ಪ್ರತಿ ತಿಂಗಳು ನಿಶ್ಚಿತ ವರಮಾನ ಪಡೆಯಬಹುದು ಎಂದು ಖಚಿತವಾದ ಬಳಿಕ ಸ್ವಯಃ ಪ್ರೇರಿತವಾಗಿ ಭೂಮಿ ನೀಡಲು ಸ್ಪರ್ಧಾತ್ಮಕವಾಗಿ ಮುಂದೆ ಬಂದಿದ್ದು ಐತಿಹಾಸಕ ಬೆಳವಣಿಗೆ. ಹಾಗಾಗಿಯೇ ಸೋಲಾರ್ ಯೋಜನೆಗಳು ಕಡಿಮೆ ಅವಧಿಯಲ್ಲಿ ಹೆಚ್ಚು ಜನಪ್ರಿಯ ಮತ್ತು ಲಾಭದಾಯಕವಾದವು.
ಉದ್ದೇಶಿತ ಯೋಜನೆಗಳು
ಸೋಲಾರ್ ಯೋಜನೆಗಳಿಂದ ಭವಿಷ್ಯದಲ್ಲಿ 9009 ಮೆವಾ ವಿದ್ಯುತ್ ಉತ್ಪಾದನೆ ಮಾಡುವ ಗುರಿ ಹೊಂದಲಾಗಿದೆ. ಈ ತನಕ 5172 ಮೆವಾ ವಿದ್ಯುತ್ ಉತ್ಪಾದನೆ ಸಾಮರ್ಥ್ಯದಷ್ಟು ಮಾತ್ರವೇ ಯೋಜನೆಗಳು ಕಾರ್ಯರೂಪಕ್ಕೆ ಬಂದಿದ್ದು, ಇನ್ನೊಂದು ವರ್ಷದಲ್ಲಿ ಉತ್ಪಾದನೆ ಹೆಚ್ಚಳವಾಗಲಿದೆ.
ಸರಾಸರಿ 3 ಸಾವಿರ ಮೆವಾ
ಮಳೆಗಾಲ ಹೊರತುಪಡಿಸಿ ಉಳಿದಂತೆ ಚಳಿ ಮತ್ತು ಬೇಸಿಗೆಯಲ್ಲಿ ಸೋಲಾರ್ ವಿದ್ಯುತ್ ನಿಗದಿತವಾಗಿ ಲಭ್ಯವಾಗಲಿದೆ. ಈಗಲೂ ಸರಾಸರಿಯಾಗಿ 2 ರಿಂದ 3 ಸಾವಿರ ಮೆವಾ ವಿದ್ಯುತ್ ಗ್ರಿಡ್ಗೆ ಸಿಗುತ್ತಿದೆ. ಇನ್ನೊಂದು ವರ್ಷದಲ್ಲಿ ಉದ್ದೇಶಿತ ಯೋಜನೆಗಳು ಮುಗಿಯಲಿದ್ದು, 7 ಸಾವಿರ ಮೆವಾ ವಿದ್ಯುತ್ ಗ್ರಿಡ್ಗೆ ಬರಲಿದೆ.
Friends, If you like this post,kindly comment below the post and do share your Response, (Thanks for Reading....)ರಾಜ್ಯದಲ್ಲಿ ಸದ್ಯ 5 ಸಾವಿರ ಮೆವಾ ಸಾಮರ್ಥ್ಯದ ಸೋಲಾರ್ ಯೋಜನೆಗಳು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಂಡಿವೆ. ಸದ್ಯ ಗ್ರಿಡ್ಗೆ 3 ಸಾವಿರ ಮೆವಾ ವಿದ್ಯುತ್ ಲಭ್ಯವಾಗುತ್ತಿದೆ. ಇನ್ನೊಂದು ವರ್ಷದಲ್ಲಿ ಎಲ್ಲ ಸೋಲಾರ್ ಯೋಜನೆಗಳು ಮುಗಿಯಲಿದ್ದು, 7 ಸಾವಿರ ಮೆವಾ ವಿದ್ಯುತ್ ಗ್ರಿಡ್ಗೆ ಲಭ್ಯವಾಗಲಿದೆ.| ರವಿಕುಮಾರ್ ಅಪರ ಮುಖ್ಯಕಾರ್ಯದರ್ಶಿ, ಇಂಧನ ಇಲಾಖೆ
No comments:
Post a Comment