


ಬೆಂಗಳೂರು: ಮಳೆಯ ಮಹಾ ಪೂರ ದಿಂದ ತತ್ತರಿಸಿದ್ದ ಕರಾವಳಿ ಹಾಗೂ ಮಲೆನಾಡಿನ ಏಳು ಜಿಲ್ಲೆಗಳಲ್ಲಿ ಸೆಪ್ಟೆಂಬರ್ ತಿಂಗಳಿನಲ್ಲಿ ಶೇ 75ರಷ್ಟು ಮಳೆ ಅಭಾವ ಉಂಟಾಗಿದೆ.
ಆಗಸ್ಟ್ನಲ್ಲಿ ಭೋರ್ಗರೆದು ಸುರಿದ ಮಳೆಯಿಂದಾಗಿ ಈ ಜಿಲ್ಲೆಗಳು ಭಾರಿ ಅನಾಹುತಗಳನ್ನು ಎದುರಿಸಿದ್ದವು. ಕೊಡಗು ಜಿಲ್ಲೆಯಲ್ಲಿ 118 ವರ್ಷಗಳಲ್ಲೇ ದಾಖಲೆ ಮಳೆ ಉಂಟಾಗಿತ್ತು. ಚಿಕ್ಕ ಮಗಳೂರು ಜಿಲ್ಲೆಯಲ್ಲಿ 34 ವರ್ಷಗಳ ಬಳಿಕ ಭಾರಿ ವರ್ಷಧಾರೆಯಾಗಿತ್ತು. ಏಳು ಜಿಲ್ಲೆಗಳಲ್ಲಿ ವಾಡಿಕೆಗಿಂತ ದುಪ್ಪಟ್ಟು ಮಳೆ ಸುರಿದಿತ್ತು. ಆದರೆ, ಈಗ ಬೇಸಿಗೆಯ ವಾತಾವರಣ ಸೃಷ್ಟಿಯಾಗಿದೆ. ಕೃಷಿ ಚಟುವಟಿಕೆಯ ಮೇಲೆ ಹೊಡೆತ ಬಿದ್ದಿದೆ. ಭತ್ತದ ಗದ್ದೆಗಳು ಬತ್ತಿ ಹೋಗಿವೆ. ಬೆಳೆಗೆ ಬೆಂಕಿ ರೋಗ ಕಾಣಿಸಿಕೊಂಡಿದೆ.
ಉತ್ತರದಲ್ಲಿ ಶೇ 37 ಕೊರತೆ: ಉತ್ತರ ಒಳನಾಡಿನ 12 ಜಿಲ್ಲೆಗಳಲ್ಲಿ ಮುಂಗಾರಿನಲ್ಲಿ ಶೇ 37ರಷ್ಟು ಹಾಗೂ ದಕ್ಷಿಣ ಒಳನಾಡಿನಲ್ಲಿ ಶೇ 20ರಷ್ಟು ಮಳೆ ಅಭಾವ ಉಂಟಾಗಿದೆ. ಹೀಗಾಗಿ, 16 ಜಿಲ್ಲೆಗಳ 86 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಮಳೆಯ ಕೊರತೆಯಿಂದಾಗಿ 15 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಹಾಗೂ ತೋಟಗಾರಿಕಾ ಬೆಳೆಗಳು ಒಣಗಿ ಹೋಗಿದ್ದು, ಅಂದಾಜು ₹8 ಸಾವಿರ ಕೋಟಿ ನಷ್ಟ ಸಂಭವಿಸಿದೆ. ಮುಂದಿನ ದಿನಗಳಲ್ಲಿ ಬರಪೀಡಿತ ತಾಲ್ಲೂಕುಗಳ ಸಂಖ್ಯೆ ಇನ್ನಷ್ಟು ಹೆಚ್ಚಳವಾಗಲಿದೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ಅಂದಾಜಿಸಿದ್ದಾರೆ.
No comments:
Post a Comment