ಎಲ್ ನಿನೊ ಸಾಧ್ಯತೆ ಶೇ 70
ಜಿನೀವಾ (ಎಎಫ್ಪಿ): ಜಾಗತಿಕ ತಾಪಮಾನದ ಮೇಲೆ ಪ್ರಭಾವ ಬೀರುವ ಎಲ್–ನಿನೊ ವಿದ್ಯಮಾನ ಉಂಟಾಗುವ ಸಾಧ್ಯತೆ ಈ ಬಾರಿ ಶೇ 70ರಷ್ಟಿದೆ ಎಂದು ವಿಶ್ವಸಂಸ್ಥೆ ಹೇಳಿದೆ. ಈ ವರ್ಷಾಂತ್ಯದ ವೇಳೆಗೆ ಎಲ್–ನಿನೊ ವಿದ್ಯಮಾನ ಜರುಗುವ ಸಾಧ್ಯತೆಯಿದೆ.
ಜಾಗತಿಕ ಹವಾಮಾನ ಮುನ್ಸೂಚನಾ ಸಂಸ್ಥೆ ಪ್ರಕಾರ, ಪೆಸಿಫಿಕ್ ಸಾಗರದ ಪೂರ್ವಭಾಗದಲ್ಲಿ ನಿಯಮಿತವಾಗಿ ಉಷ್ಣಾಂಶ ಹೆಚ್ಚಾಗಿದ್ದು, ಇದು ಎಲ್–ನಿನೊ ಉಂಟಾಗುವಿಕೆಗೆ ಕಾರಣವಾಗಿದೆ. ಇದರ ಪ್ರಭಾವದಿಂದ ಕೆಲವು ಪ್ರದೇಶದಲ್ಲಿ ಬರಪರಿಸ್ಥಿತಿ ತಲೆದೋರಿದರೆ, ಇನ್ನು ಕೆಲವು ಭಾಗಗಳಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ ಎಂದು ಎಚ್ಚರಿಕೆ ನೀಡಿದೆ.
ಓಂ ಪ್ರಕಾಶ್ ಮಿಶ್ರಾ ನೇಪಾಳ ಸಿ.ಜೆ
ಕಠ್ಮಂಡು(ಪಿಟಿಐ): ಓಂ ಪ್ರಕಾಶ್ ಮಿಶ್ರಾ ಅವರು ನೇಪಾಳದ ನೂತನ ಮುಖ್ಯ ನ್ಯಾಯಮೂರ್ತಿಯಾಗಲಿದ್ದಾರೆ. ಈ ಹುದ್ದೆಗೆ ಓಂ ಪ್ರಕಾಶ್ ಅವರ ಹೆಸರನ್ನು ಸಂಸತ್ ಸಮಿತಿಯು ಸೋಮವಾರ ಅನುಮೋದಿಸಿದೆ. ಓಂ ಪ್ರಕಾಶ್ ಭಾರತ ದಲ್ಲಿ ಕಾನೂನು ಅಧ್ಯಯನ ನಡೆಸಿದ್ದರು. ಅಧ್ಯಕ್ಷೆ ಬಿದ್ಯಾ ದೇವಿ ಭಂಡಾರಿ ಅಧಿಕೃತವಾಗಿ ನೇಮಕ ಮಾಡಿದ ನಂತರ ಅಧಿಕಾರ ಸ್ವೀಕರಿಸಲಿದ್ದಾರೆ.
ಅವಶೇಷಗಳ ಹುಡುಕಾಟ
ನ್ಯೂಯಾರ್ಕ್ (ಎಎಫ್ಪಿ): ಅಮೆರಿಕದ ವಿಶ್ವ ವಾಣಿಜ್ಯ ಕಟ್ಟಡದ ಮೇಲೆ ಅಲ್ಕೈದಾ ಉಗ್ರರು ದಾಳಿ ನಡೆಸಿ ಮಂಗಳವಾರಕ್ಕೆ 17 ವರ್ಷ. ಆದರೆ, ಇದೇ ಜಾಗದಲ್ಲಿ ಈಗಲೂ ಮಾನವನ ಅವಶೇಷಗಳ ಹುಡುಕಾಟ ಮುಂದುವರಿದಿದೆ. ಕುಸಿದು ಬಿದ್ದ ಜಾಗದ ದೂಳಿನಲ್ಲಿ ಹುದುಗಿರುವ ಮೂಳೆಯ ಅವಶೇಷಗಳನ್ನು ನ್ಯೂಯಾರ್ಕ್ನ
ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು ತಂತ್ರಜ್ಞಾನದ
ಸಹಾಯದಿಂದ ಪತ್ತೆ
ಹಚ್ಚುತ್ತಿದ್ದಾರೆ.
ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು ತಂತ್ರಜ್ಞಾನದ
ಸಹಾಯದಿಂದ ಪತ್ತೆ
ಹಚ್ಚುತ್ತಿದ್ದಾರೆ.
ಸೇನಾ ಪ್ರದರ್ಶನಕ್ಕೆ ರಷ್ಯಾ ಸಜ್ಜು
ಮಾಸ್ಕೊ (ಎಎಫ್ಪಿ): ಇತಿಹಾಸದಲ್ಲೇ ಬೃಹತ್ ಎನ್ನಲಾದ ಸೇನಾ ಕವಾಯತು ನಡೆಸಲು ರಷ್ಯಾ ಸಜ್ಜಾಗಿದೆ. ಮಂಗಳವಾರ (ಸೆ.11) ಪೂರ್ವ ಸೈಬೀರಿಯಾದಲ್ಲಿ ಚೀನಾ, ಮಂಗೋಲಿಯ ಸೈನಿಕರನ್ನೂ ಒಳಗೊಂಡಂತೆ ದೊಡ್ಡ ಮಟ್ಟ ದಲ್ಲಿ ತನ್ನ ಸೇನಾ ಸಾಮರ್ಥ್ಯವನ್ನು ರಷ್ಯಾ ಪ್ರದರ್ಶಿಸಲಿದೆ.
‘ವೊಸ್ಟೊಕ್–2018’ ಹೆಸರಿನ ಈ ಕಾರ್ಯಾಚರಣೆಯನ್ನು ನ್ಯಾಟೊ ಟೀಕಿಸಿದೆ. ‘ದೊಡ್ಡ ಪ್ರಮಾಣದಲ್ಲಿ ಸಂಘರ್ಷ ಸೃಷ್ಟಿಸುವ ಯತ್ನ’ ಎಂದು ಅದು ಕರೆದಿದೆ. ಆದರೆ ಈ ಆರೋಪವನ್ನು ರಷ್ಯಾ ನಿರಾಕರಿಸಿದೆ.
Friends, If you like this post,kindly comment below the post and do share your Response, (Thanks for Reading....)
No comments:
Post a Comment