ವಾರಾಣಾಸಿ, ಸೆ.18 (ಪಿಟಿಐ)- ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಲೋಕಸಭಾ ಕ್ಷೇತ್ರ ವಾರಣಾಸಿಯಲ್ಲಿ ಇಂದು 550 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ವಿದ್ಯುಕ್ತ ಚಾಲನೆ ನೀಡಿದರು. ಪುರಾಣಿ ಕಾಶಿಗಾಗಿ ಸಮಗ್ರ ಇಂಧನ ಅಭಿವೃದ್ದಿ ಯೋಜನೆ(ಐಪಿಡಿಎಸ್) ಮತ್ತು ಬನಾರಸ್ ಹಿಂದು ವಿಶ್ವವಿದ್ಯಾಲಯದಲ್ಲಿ(ಬಿಎಚ್‍ಯು) ಅಟಲ್ ಇನ್‍ಕ್ಯೂಬೇಷನ್(ಪೋಷಣಾ) ಕೇಂದ್ರ ಸೇರಿದಂತೆ ವಿವಿಧ ಯೋಜನೆಗಳನ್ನು ಮೋದಿ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಬಿಎಚ್‍ಯುನಲ್ಲಿ ಪ್ರಾದೇಶಿಕ ನೇತ್ರಶಾಸ್ತ್ರ ಅಧ್ಯಯನ ಕೇಂದ್ರಕ್ಕೆ ಪ್ರಧಾನಿ ಶಿಲಾನ್ಯಾಸ ನೆರವೇರಿಸಿದರು.
ನಂತರ ಹರ ಹರ ಮಹಾದೇವ್ ಎಂಬ ಜಯಘೋಷದಿಂದಿಗೆ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಳೆದ ನಾಲ್ಕು ವರ್ಷಗಳಲ್ಲಿ ವಾರಣಾಸಿ ಮತ್ತು ಅದಕ್ಕೆ ಹೊಂದಿಕೊಂಡ ಪ್ರದೇಶಗಳಲ್ಲಿ ಮಹತ್ವದ ಪರಿವರ್ತನೆಯೊಂದಿಗೆ ಅಭಿವೃದ್ದಿ ಕಾರ್ಯಕ್ರಮಗಳು ಅನುಷ್ಠಾನಗೊಂಡಿವೆ ಎಂದರು.
ಅನೇಕ ಮೂಲಸೌಕರ್ಯಾಭಿವೃದ್ದಿ ಯೋಜನೆಗಳು ಮುಕ್ತಾಯದ ಹಂತಗಳಲ್ಲಿದ್ದು, ಯುವ ಜನಾಂಗದ ಉದ್ಯೋಗ ಸೃಷ್ಟಿಗೆ ನೆರವಾಗುತ್ತಿವೆ ಎಂದು ನರೇಂದ್ರ ಮೋದಿ ಹೇಳಿದರು. ಪುರಾಣ ಪ್ರಸಿದ್ಧ ವಾರಣಾಸಿಯ ಪ್ರಾಚೀನ ಮಹತ್ವವನ್ನು ಉಳಿಸಿಕೊಳ್ಳುವ ಜೊತೆ ಈ ನಗರಿಯಲ್ಲಿ ಅತ್ಯಾಧುನಿಕರಣಗೊಳಿಸಲು ತಮ್ಮ ಸರ್ಕಾರ ಆದ್ಯತೆ ನೀಡಿದೆ ಎಂದು ಪ್ರಧಾನಿ ತಿಳಿಸಿದರು.
Friends,
If you like this post,kindly comment below the post and do share your
Response,
(Thanks for Reading....)
No comments:
Post a Comment