ವಿದೇಶಿ ಸಂಕ್ಷಿಪ್ತ ಸುದ್ದಿಗಳು...
* (8 Mar) ಐ.ಎಸ್ ಉಗ್ರರಿಂದ ಅಲ್‌ಬಾಗ್ದಾರಿ ಮರು ವಶ ಬಾಗ್ದಾದ್ (ಐಎಎನ್‌ಎಸ್): ಇರಾಕ್ ಭದ್ರತಾ ಪಡೆಗಳು ಇಸ್ಲಾಮಿಕ್ ಸ್ಟೇಟ್ (ಐ.ಎಸ್) ಉಗ್ರರೊಂದಿಗೆ ಸೆಣಸಾಡಿ ಅಲ್-ಬಾಗ್ದಾದಿ ನಗರವನ್ನು ಮರಳಿ ವಶಕ್ಕೆ ಪಡೆದಿದ್ದು,
* ಅನ್ಬರ್ ಪ್ರಾಂತ್ಯ ವಶಪಡಿಸಿಕೊಳ್ಳಲು ಹೋರಾಟ ನಡೆಸಿವೆ. ಇರಾಕ್ ಭದ್ರತಾ ಪಡೆಗಳು ಮತ್ತು ಅಮೆರಿಕ ನೇತೃತ್ವದ ಸಮ್ಮಿಶ್ರ ಮಿತ್ರಪಡೆಗಳ ಬೆಂಬಲದ ಶಿಯಾ ಮತ್ತು ಸುನ್ನಿ ಒಕ್ಕೂಟ ಸಂಘಟನೆ ಅಲ್ ಹಶೆದ್ ಅಲ್ ಶಾಬಿ ಜಂಟಿಯಾಗಿ ಕಾರ್ಯಾಚರಣೆ ನಡೆಸಿ, ಪೊಲೀಸ್ ಠಾಣೆ ಮತ್ತು ಸೇತುವೆಗಳನ್ನು ವಶಪಡಿಸಿಕೊಳ್ಳುವ ಮೂಲಕ ಅಲ್‌ಬಾಗ್ದಾದಿ ನಗರದ ಕೇಂದ್ರ ಪ್ರದೇಶವನ್ನು ಐ.ಎಸ್ ಉಗ್ರರಿಂದ ಮುಕ್ತಗೊಳಿಸುವಲ್ಲಿ ಯಶಸ್ವಿಯಾಗಿವೆ ಎಂದು ಮೂಲಗಳು ತಿಳಿಸಿವೆ.
* ಬಾಗ್ದಾದ್‌ನಲ್ಲಿ 32 ಮಂದಿ ಅಪಹರಣ ಬಾಗ್ದಾದ್ (ಐಎಎನ್‌ಎಸ್): ಇರಾಕ್‌ನ ಈ ರಾಜಧಾನಿ ನಗರದಲ್ಲಿ ಕನಿಷ್ಠ 32 ಜನರನ್ನು ಅವರ ಮನೆಗಳಿಂದ ಉಗ್ರರು ಅಪಹರಿಸಿದ್ದಾರೆ. ಕಪ್ಪು ಸೇನಾ ಸಮವಸ್ತ್ರ ಧರಿಸಿದ್ದ 30 ಬಂದೂಕುಧಾರಿ ಉಗ್ರರು 10 ವಾಹನಗಳಲ್ಲಿ ಬಂದು ಸದರ್ ನಗರದಲ್ಲಿನ ನೆರೆಮನೆಗಳಿಗೆ ನುಗ್ಗಿ ಮಹಿಳೆಯರು, ಮಕ್ಕಳು ಸೇರಿದಂತೆ 32 ಮಂದಿಯನ್ನು ಅಪಹರಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಸಿರಿಯಾದ ಕ್ರೈಸ್ತ ಗ್ರಾಮಗಳ ಮೇಲೆ ಉಗ್ರರ ದಾಳಿ ಬೈರೂತ್ (ಎಪಿ): ಸಿರಿಯಾದ ಈಶಾನ್ಯ ಭಾಗದಲ್ಲಿರುವ ಪ್ರಬಲ ಕ್ರೈಸ್ತ ಗ್ರಾಮಗಳ ಮೇಲೆ ಇಸ್ಲಾಮಿಕ್ ಸ್ಟೇಟ್
No comments:
Post a Comment