ಜೂನ್ ನಲ್ಲಿ ನಡೆದ ಕೆ.ಎ.ಎಸ್. ಪರೀಕ್ಷೆಯ ಎರಡು ಪ್ರಶ್ನೆಪತ್ರಿಕೆಗಳಿಗೆ ಮಾತ್ರ ಉತ್ತರಗಳನ್ನ ನೀಡಲಾಗಿದ್ದು, ಇನ್ನುಳಿದ ಪ್ರಶ್ನೆಪತ್ರಿಕೆಗಳನ್ನ ಬೆರಳಚ್ಚಿಸುವ ಕಾರ್ಯ ಭರದಿಂದ ಸಾಗಿದೆ.. ಶೀಘ್ರದಲ್ಲೇ ಈ ತಾಣ ಸಮಗ್ರವಾಗಲಿದೆ. ನಿಮ್ಮ ಸಹಕಾರ, ಪ್ರೋತ್ಸಾಹಕ್ಕೆ ಪ್ರಶ್ನೋತ್ತರ ತಂಡ ಕೃತಜ್ಞತೆ ಸಲ್ಲಿಸುತ್ತದೆ.

ಆತ್ಮೀಯ ಸ್ಪರ್ಧಾರ್ಥಿಗಳೇ, ಎಲ್ಲ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವಂತೆ ಮಾಹಿತಿ ನೀಡಲಾಗುತ್ತಿದೆ.https://t.me/kpsc2019 | General Knowledge in Kannada
https://www.highrevenuegate.com/dst1z9b3?key=96fa453e5c910a6715da3b114f6d9e35

RECENT POSTS

6

https://www.videosprofitnetwork.com/watch.xml?key=35286665df409d9f630563e3a619eb10

ಇತ್ತೀಚಿನ ಸುದ್ದಿ...Recent Notes

8

https://www.highrevenuegate.com/his7kbtc7?key=50a282e312a45be4aa549d301f853be2

Sunday, March 15, 2015

  Pundalik       Sunday, March 15, 2015
ಕನ್ನಡ ವ್ಯಾಕರಣ - ಒಂದಿಷ್ಟು ತಿಳಿಯೋಣ


ವ್ಯಾಕರಣ - 2 ಪದ ವಾಕ್ಯ 

ಪದ : ಅರ್ಥವನ್ನು ಕೊಡುವ ಅಕ್ಷರಗಳ ಗುಂಪು ಪದವಾಗುತ್ತದೆ
ಉದಾಹರಣೆ: ಮರ ರಾಮ ಪಕ್ಷಿ ಹುಲಿ ......

ಪೂರ್ಣ ಅರ್ಥವಾಗುವಂತೆ ಸೇರುವ ಪದಗಳ ಗುಂಪಿಗೆ ವಾಕ್ಯ ಅನ್ನುವರು
ಅರ್ಥವಿಲ್ಲದ ಅಕ್ಷರಗಳು ಸೇರಿ ಪದವಾಗಲಾರದು, ಹಾಗೆ ಇಷ್ಟ ಬಂದ ಪದಗಳೆಲ್ಲ ಸೇರಿ ವಾಕ್ಯ ಎನ್ನಲಾಗದು
ರಾಮನು ಪಾಠವನ್ನು ಓದುತ್ತಾನೆ
ಇಲ್ಲಿ ಮೂರು ಪದಗಳಿವೆ ,
’ರಾಮನ’ ಕೆಲಸಮಾಡುವವನ ಹೆಸರು ಸೂಚಿಸಿದರೆ,
ಹೀಗೆ ಕೆಲಸಮಾಡುವವನ ಹೆಸರನ್ನು ಸೂಚಿಸುವ ಪದಗಳಿಗೆ ’ಕರ್ತೃಪದ’ ವೆಂದು ಕರೆಯುವರು

'ಓದುತ್ತಾನೆ' ಎನ್ನುವುದು ಕೆಲಸವನ್ನು ಸೂಚಿಸುತ್ತದೆ

ಕರ್ತೃ ವು ಮಾಡುವ ಕೆಲಸವನ್ನು ಸೂಚಿಸುವ ಪದವನ್ನು ’ ಕ್ರಿಯಾಪದ” ಎಂದು ಕರೆಯುವರು
ಕ್ರಿಯೆ ಎಂದರೆ ಕೆಲಸ.

ರಾಮನು ಏನನ್ನು ಓದುತ್ತಾನೆ ? ಎಂದರೆ ’ಪಾಠವನ್ನು’ ,

ಪಾಠವನ್ನು ಅಂದರೆ ಕತೃವು ಮಾಡುತ್ತಿರುವ ಕೆಲಸದ ವಿವರಣೆಯನ್ನು ಕೊಡುವ ಪದ ಈ ಪದವನ್ನು
'ಕರ್ಮಪದ'ವೆಂದು ಕರೆಯುವರು
ಹೀಗೆ ಒಂದು ವಾಕ್ಯದಲ್ಲಿ ಕರ್ತೃ ಕ್ರಿಯಾ ಹಾಗು ಕರ್ಮಪದಗಳು ಸೇರಿ ಒಂದು ಅರ್ಥಪೂರ್ಣ ವಾಕ್ಯವಾಗುವುದು

ಕನ್ನಡ ವ್ಯಾಕರಣ - ಒಂದಿಷ್ಟು ತಿಳಿಯೋಣ

ವ್ಯಾಕರಣ – 2 [  ಮುಂದುವರಿಕೆ :    ಪದ – ವಾಕ್ಯ ]
ಸಾಮಾನ್ಯವಾಗಿ ಎಲ್ಲ ವಾಕ್ಯಗಳು ಕರ್ತೃ ಕರ್ಮ ಕ್ರಿಯಾ ಈ ಕ್ರಮದಲ್ಲಿಯೇ ರೂಡಿಯಲ್ಲಿದೆ, ಕೆಲವೊಮ್ಮೆ ವ್ಯತ್ಯಾಸವು ಆಗುವುದುಂಟು
ಕರ್ತೃ ಮಾಡುವ ಕೆಲಸ ಅಥವ ಕ್ರಿಯೆಯ ಅರ್ಥವನ್ನು ತಿಳಿಸುವ ಪದ ಕ್ರಿಯಾಪದ
ಹುಡುಗನು ಓಡುತ್ತಾನೆ
ಹುಡುಗಿ ನೆಗೆಯುತ್ತಾಳೆ
ಈ ವಾಕ್ಯಗಳಲ್ಲಿ ಓಡುತ್ತಾನೆ ನೆಗೆಯುತ್ತಾಳೆ ಇವು ಕ್ರಿಯಾಪದಗಳಾಗಿವೆ
ಈ ಪದಗಳಲ್ಲಿ ಓಡು , ನೆಗೆ ಎಂಬುವುದು ಕ್ರಿಯಾಪದದ ಮೂಲರೂಪಗಳು , ಕ್ರಿಯೆಯ ಮೂಲರೂಪದ ಪದಕ್ಕೆ ‘ಧಾತು’ ಎನ್ನುವರು
ಅಥವ ಕ್ರಿಯಾಪ್ರಕೃತಿ ಎಂದು ಕರೆಯುವರು .
ಈ ಧಾತುವಿಗೆ ಸೇರುವ  ಉತ್ತ, ಆನೆ ಆಳೆ  ಇವುಗಳನ್ನು ಪ್ರತ್ಯಯಗಳೆನ್ನುವರು , ‘ಉತ್ತ’ ಕಾಲಸೂಚಕ ಪ್ರತ್ಯಕವಾದರೆ, ಆನೆ ಆಳೆ ಇವುಗಳು ಅಖ್ಯಾತ ಪ್ರತ್ಯಯಗಳೆನಿಸುವುವು
ಓಡು + ಉತ್ತ + ಆನೆ = ಓಡುತ್ತಾನೆ      ನೆಗೆ + ಉತ್ತ +  ಆಳೆ = ನೆಗೆಯುತ್ತಾಳೆ
ನಾಮಪದ ಅಥವ ಅನುಕರಣ ಶಬ್ದಗಳಿಗೆ ‘ಇಸು’ ಪ್ರತ್ಯಯ ಸೇರಿದರೆ ಪ್ರತ್ಯಯಾಂತ ದಾತು ಎನಿಸುವುದು
ಉತ್ತರ+ಇಸು = ಉತ್ತರಿಸು  ನಗು+ಇಸು = ನಗಿಸು ಥಳಥಳ+ಇಸು = ಥಳಥಳಿಸು
ಈ ಪ್ರತ್ಯಯಾಂತ ದಾತುಗಳಿಗೆ ಅಖ್ಯಾತಪ್ರತ್ಯಯಗಳು ಸೇರಿದಲ್ಲಿ ಕ್ರಿಯಾಪದಗಳಾಗುವುದು
ಉತ್ತರಿಸು+ಉತ್ತ+ಆನೆ = ಉತ್ತರಿಸುತ್ತಾನೆ , ಥಳಥಳಿಸು + ಉತ್ತ + ಅದೆ = ಥಳಥಳಿಸುತ್ತದೆ
ಕ್ರಿಯಾಪದದ ಮೂಲರೂಪದ ದಾತುವಿನಲ್ಲಿ ಎರಡುವಿದ
ಅಕರ್ಮಕ ದಾತು = ಕರ್ಮಪದದ ಅಗತ್ಯವಿಲ್ಲದೆಯೂ ಉಪಯೋಗಿಸಲ್ಪಡುವ ಧಾತು
ಓಡುತ್ತದೆ   ಬೀಳುತ್ತದೆ ….
ಸಕರ್ಮಕ ಧಾತುಗಳೆಂದರೆ ಏನನ್ನು ಯಾರನ್ನು ಎನ್ನುವ ಉತ್ತರವಿರುವ ಧಾತುಗಳು
ತಿನ್ನುತ್ತಾನೆ,  ಕೊಡು, ತಿನ್ನು, ಮಾಡು, ಹಾಡು, ಇತ್ಯಾದಿಗಳು ಸಕರ್ಮಕ ಧಾತುಗಳು

ಕನ್ನಡ ವ್ಯಾಕರಣ - ಒಂದಿಷ್ಟು ತಿಳಿಯೋಣ

ವ್ಯಾಕರಣ – 3    <ಸಂಧಿಗಳು>
ಕನ್ನಡಸಂಧಿಗಳು:
ಎರಡು ಪದಗಳ ನಡುವೆ ಅಕ್ಷರಗಳು ಎಡಬಿಡದೆ ಒಂದಕ್ಕೊಂದು ಸೇರುವ ಕ್ರಿಯೆಗೆ ‘ಸಂಧಿ’ ಎನ್ನುವರು
ಅಕ್ಷರಗಳು ಹಾಗೆ ಸೇರುವಾಗ ಆಗುವ ಬದಲಾವಣೆಗೆ ‘ಸಂಧಿಕಾರ್ಯ’ ಎನ್ನುವರು

‘ನಾವು ಎಲ್ಲರೂ ಒಟ್ಟುಗೂಡಿ  ಮೆಟ್ಟಿಲು ಅನ್ನು ಹತ್ತೋಣ’  ಹೀಗೆ ಯಾರು ಹೇಳಲಾರರು
‘ನಾವೆಲ್ಲರೂ ಒಟ್ಟುಗೂಡಿ ಮೆಟ್ಟಿಲನ್ನು ಹತ್ತೋಣ’  ಎಂದು ನುಡಿಯುವರು

ಕನ್ನಡದಲ್ಲಿ ಸ್ವರಸಂಧಿ ಹಾಗು ವ್ಯಂಜನ ಸಂಧಿ ಎಂಬ ಎರಡು ಬಗೆಗಳಿವೆ

ಸ್ವರಸಂಧಿ : ಸ್ವರಕ್ಕೆ ಸ್ವರವೇ ಸೇರಿ ಆಗುವ ಸಂಧಿಯ ಬಗೆಗೆ ಸ್ವರಸಂಧಿ ಎನ್ನುವರು
ಸ್ವರಸಂಧಿಯಲ್ಲಿ ಎರಡು ವಿಧದ ಸಂಧಿಗಳಿವೆ  ೧)ಲೋಪ ಸಂಧಿ  ಹಾಗು ೨) ಆಗಮ ಸಂಧಿ

ವ್ಯಂಜನಸಂಧಿ : ಸ್ವರದ ಮುಂದು ವ್ಯಂಜನಗಳು , ಬಂದು ಸಂದಿಯಾಗುವ ಸಂಧಿಕಾರ್ಯಕ್ಕೆ ವ್ಯಂಜನ ಸಂಧಿ ಎನ್ನುವರು . ವ್ಯಂಜನಸಂಧಿಯಲ್ಲಿ ಒಂದೇ ಬಗೆ ೧)ಅದೇಶ ಸಂಧಿ

ಕನ್ನಡ ವ್ಯಾಕರಣ - ಒಂದಿಷ್ಟು ತಿಳಿಯೋಣ

ವ್ಯಾಕರಣ – 3 <ಸಂಧಿಗಳು> 

ಕನ್ನಡಸಂಧಿಗಳು: (ಸ್ವರಸಂಧಿಗಳು)
ಲೋಪಸಂಧಿ: ಎರಡು ಪದಗಳು ಕೂಡುವಾಗ ಸ್ವರದ ಎದುರಿಗೆ ಸ್ವರ ಬರುವಾಗ, ಪೂರ್ವಪದದ ಸ್ವರ ಬಿಟ್ಟುಹೋಗುವುದು. ಹೀಗೆ ಅಕ್ಷರ ಬಿಟ್ಟುಹೋಗುವುದೋ ಆ ಅಕ್ಷರದ ಹೆಸರನ್ನು ಸೂಚಿಸಿ ಸಂದಿ ಹೇಳುವುದು ರೂಢಿ 

ಮಾತು+ಅನ್ನು = ಮಾತನ್ನು (ಉಕಾರಲೋಪ ಸಂಧಿ) 
ಊರು+ಅನ್ನು = ಊರನ್ನು 
ಅವರು+ಎಲ್ಲ=ಅವರೆಲ್ಲ 
ಮೇಲೆ+ಒಂದು=ಮೇಲೊಂದು (ಎಕಾರಲೋಪ ಸಂಧಿ)
ಮೇಲೆ+ಇಡು=ಮೇಲಿಡು

ಆಗಮಸಂಧಿ :

ಎರಡು ಪದಗಳು ಸೇಋವಾಗ ಉತ್ತರ ಪದದಲ್ಲಿ ಪ್ರಾರಂಭದಲ್ಲಿರುವ ಅಕ್ಷರದ ಮೊದಲಿಗೆ ಹೊಸ ಅಕ್ಷರಒಂದು ಹೊಸದಾಗಿ ಬಂದು ಸೇಋವುದು ಇದನ್ನು ಆಗಮಸಂಧಿಎನ್ನುವರು . ಸಾಮಾನ್ಯವಾಗಿ ಹೊಸದಾಗಿ ಬರುವ ಅಕ್ಷರ 'ಯ' ಅಥವ 'ವ' ಆಗಿದ್ದು , ಯಕರಾಗಮ ಸಂಧಿ, ವಕಾರಾಗಮಸಂಧಿ ಎಂದು ಕರೆಯುವರು 

ಮನೆ+ಇಂದ=ಮನೆಯಿಂದ (ಯ ಕಾರ ಹೊಸದಾಗಿ ಸೇರಿದೆ)
ಮಗು+ಅನ್ನು=ಮಗುವನ್ನು (ವ ಕಾರ ಹೊಸದಾಗಿ ಸೇರಿದೆ)
ಹಾಗೆ ಇತರೆ ಉದಾಹರಣೆಗಳು
ದಾರಿಯನ್ನು,  ಹಣೆಯಲ್ಲಿ, ಕೈಯನ್ನು,ಕುರಿಯನ್ನು, ಹಣವನ್ನು, ಮಗುವಿಗೆ, ಹಸುವಿನ, ಹೂವಲ್ಲಿ 

ಕನ್ನಡ ವ್ಯಾಕರಣ - ಒಂದಿಷ್ಟು ತಿಳಿಯೋಣ
ವ್ಯಾಕರಣ – 3 <ಸಂಧಿಗಳು> 

ಕನ್ನಡಸಂಧಿಗಳು: ವ್ಯಂಜನಸಂಧಿ
ಆದೇಶಸಂಧಿ : 
ಮಳೆ+ಕಾಲ = ಮಳೆಗಾಲ
ಬೆಟ್ಟ+ತಾವರೆ =ಬೆಟ್ಟದಾವರೆ
ಹೂ+ಪುಟ್ಟಿ=ಹೂಬುಟ್ಟಿ
ಇಲ್ಲಿ ಉತ್ತರ ಪದಗಳ ಮೊದಲ ಅಕ್ಷರಕ್ಕೆ ಬದಲಾಗಿ ಮತ್ತೊಂದು ಅಕ್ಷರ ಅದೇಶವಾಗಿ ಬಂದಿವೆ. ವ್ಯಂಜನಾಕ್ಷರಕ್ಕೆ ಬದಲಾಗಿ ವ್ಯಂಜನಾಕ್ಷರೆವೆ ಹೊಸದಾಗಿ ಬಂದಿದೆ ಹಾಗಾಗಿ ಸಂಧಿಯು ವ್ಯಂಜನಸಂಧಿಯಾಗಿದ್ದು, ಇದನ್ನು ಅದೇಶಸಂಧಿ ಎನ್ನುವರು
ಕೆಲವೊಮ್ಮೆ ಕಾ ಕಾರವು ಉತ್ತರಪದದ ಆದಿಯಲ್ಲಿ ಇದ್ದರೂ ಸಹ ಸಂದಿಯಾಗುವದಿಲ್ಲ
ಉದಾಹರಣೇ: ತಲೆಕಟ್ಟು
ಪ್ರಕೃತಿಭಾವ : ಸ್ವರ ಸಂಧಿಗಳ ನಿಯಮಗಳು ಎಲ್ಲಕಡೆಗಳಲ್ಲೂ ಒಂದೇ ಬಗೆಯಾಗಿರುವದಿಲ್ಲ, ಅನ್ವಯವೂ ಆಗುವದಿಲ್ಲ 
ನಮ್ಮ ಊರು, ಮತ್ತು ನಮ್ಮೂರು ಎರಡು ಸಹ ಉಪಯೋಗದಲ್ಲಿದೆ ಇದನ್ನು ವಿಕಲ್ಪ ಎನ್ನುವರು
ಸಂಧಿಕಾರ್ಯ ಮಾಡುವಾಗ ಅರ್ಥ ವಿಕಲ್ಪವಾದಲ್ಲಿ ಸಂಧಿ ಮಾಡಬಾರದು 
ಅಪ್ಪ +ಇಲ್ಲಿ ಅನ್ನುವಾಗ ಅದನು ಅಪ್ಪಿಲ್ಲಿ ಎಂದು ಮಾಡಬಾರದು
ಸಂಭೋದನೆ, ಆಶ್ಚರ್ಯ, ಅವ್ಯಯಗಳ ಸ್ವರಗಳ ಮುಂದೆ ಸ್ವರ ಬಂದರು ಸಂಧಿಕಾರ್ಯವಾಗುವದಿಲ್ಲ
ಹಾಗೆಯೆ ಪ್ಲುತದ ಮುಂದೆ ಸ್ವರ ಬಂದಾಗಲು ಸಂಧಿಯಾಗುವದಿಲ್ಲ
ಹೀಗೆ ಪದದ ಮುಂದು ಪದಗಳು ಬಂದಾಗಲು ಸಂಧಿಕಾರ್ಯ ಆಗದಿರುವದಕ್ಕೆ ಪ್ರಕೃತಿಭಾವ ಎನ್ನುವರು

ಕನ್ನಡ ವ್ಯಾಕರಣ - ಒಂದಿಷ್ಟು ತಿಳಿಯೋಣ
ವ್ಯಾಕರಣ – 4
ಸಂಸ್ಕೃತ ಸಂಧಿಗಳು:
ಕನ್ನಡ ಬಾಷೆಯಲ್ಲಿ ಸಂಸ್ಕೃತಪದಗಳು ಹಾಸುಹೊಕ್ಕಾಗಿ ಬೆರೆತಿವೆ. ಹಾಗಾಗಿ ಕನ್ನಡ ವ್ಯಾಕರಣ ತಿಳಿಯುವಾಗ ಸಂಸ್ಕೃತ ಸಂಧಿಗಳನ್ನು ಸಹ ಅಭ್ಯಾಸಮಾಡಬೇಕಾಗಿರುತ್ತೆ.
ಎರಡು ಸಂಸ್ಕೃತ ಪದಗಳೇ ಎದುರಾಗಿ ಸಂಧಿಯಾದರೆ ಅದು ಸಂಸ್ಕೃತ ಸಂಧಿ ಎನಿಸಿಕೊಳ್ಳುತ್ತೆ
ಆದರೆ ಕನ್ನಡ ಪದದ ಜೊತೆ ಸಂಸ್ಕೃತ ಪದ ಪೂರ್ವದಲ್ಲಿ ಅಥವ ನಂತರದಲ್ಲಿ ಬಂದು ಸೇರಿ ಸಂಧಿಯಾದರೆ ಅದು ಕನ್ನಡ ಸಂಧಿ ಎಂದೆ ಕರೆಯಲ್ಪಡುತ್ತೆ
ಕನ್ನಡ ಸಂಧಿಯಲ್ಲಿದ್ದಂತೆ ಸಂಸ್ಕೃತ ಸಂಧಿಯಲ್ಲಿ ಸಹ ಸ್ವರ ಸಂಧಿ ಮತ್ತು ವ್ಯಂಜನ ಸಂಧಿ ಎಂಬ ಎರಡು ಬಗೆಯನ್ನು ಕಾಣಬಹುದು
ಸ್ವರಸಂಧಿ ಎಂದರೆ ಎರಡು ಪದಗಳು ಸೇರುವಾಗ ಪೂರ್ವಪದ ಕಡೆಯ ಅಕ್ಷರ ಹಾಗು ಉತ್ತರ ಪದದ ಮೊದಲ ಅಕ್ಷರ ಎರಡು ಸ್ವರಗಳೇ ಆಗಿದ್ದಾಗ ಸ್ವರಸಂಧಿ ಸಂಭವಿಸುತ್ತದೆ, ಅಂದರೆ ಸ್ವರದ ಎದುರಿಗೆ ಸ್ವರ ಬಂದಲ್ಲಿ ಅದು ಸ್ವರ ಸಂಧಿ ಎನಿಸುತ್ತದೆ
ವ್ಯಂಜನಸಂಧಿ ಎಂದರೆ ಎರಡು ಪದಗಳು ಸೇರುವಾಗ ಪೂರ್ವ ಹಾಗು ಉತ್ತರ ಪದದ ಎರಡು ಅಕ್ಷರಗಳು ವ್ಯಂಜನಗಳೆ ಆಗಿದ್ದು ಸಂಧಿಕಾರ್ಯ ನಡೆದಲ್ಲಿ ಅದುವ್ಯಂಜನಸಂಧಿ ಎನಿಸುತ್ತದೆ
ಸ್ವರಸಂಧಿಯಲ್ಲಿ ನಾಲಕ್ಕು ಬಗೆ 
೧.ಸವರ್ಣದೀರ್ಘಸಂಧಿ, ೨.ಗುಣಸಂಧಿ ೩.ವೃದ್ಧಿಸಂಧಿ ೪.ಯಣ್ ಸಂಧಿ
ವ್ಯಂಜನಸಂಧಿಗಳಲ್ಲಿ ಆರು ಬಗೆ 
೧.ಜಸ್ತ್ವಸಂಧಿ ೨.ಶ್ಚುತ್ವಸಂಧಿ ೩,ಷ್ಟುತ್ವಸಂಧಿ ೪.ಛತ್ವಸಂಧಿ ೫.ಅನುನಾಸಿಕ ಸಂಧಿ ಹಾಗು ೬.ವಿಸರ್ಗ ಸಂಧಿ
ಈ ಎಲ್ಲ ಸಂಧಿಗಳನ್ನು ಅಭ್ಯಾಸಮಾಡೋಣ.

ಕನ್ನಡ ವ್ಯಾಕರಣ - ಒಂದಿಷ್ಟು ತಿಳಿಯೋಣ
ವ್ಯಾಕರಣ – 4  ಸಂಸ್ಕೃತ ಸಂಧಿಗಳು - ಸ್ವರಸಂಧಿ
೧. ಸವರ್ಣದೀರ್ಘಸಂಧಿ : ಎರಡು ಪದಗಳು ಸೇಋವಾಗ ಪೂರ್ವಪದದ ಕಡೆಯಲ್ಲಿ ಅ ಆ ಇ ಈ ಉ ಊ ಸ್ವರಗಳಿದ್ದು ಉತ್ತರ ಪದದ ಆದಿಯಲ್ಲಿ ಅದೇ ಅಕ್ಷರ ಎದುರಾದ  ಎರಡು ಸ್ವರಗಳು ಸೇರಿ ಒಂದೇ ದೀರ್ಘಸ್ವರ ಬರುವುದು. ಸಂಧಿಕಾರ್ಯದಲ್ಲಿ ಸವರ್ಣಸ್ವರಗಳು ಸೇರುವದರಿಂದ ಇದನ್ನು ಸವರ್ಣದೀರ್ಘಸಂಧಿ ಎಂದು ಕರೆಯುವರು
ಉದಾಹರಣೆಗಳು :
ವಿದ್ಯಾ + ಅಭ್ಯಾಸ =  ವಿದ್ಯಾಭ್ಯಾಸ
ಶುಭ + ಆಶಯ = ಶುಭಾಶಯಗಳು
ಹರಿ + ಈಶ = ಹರೀಶ
ಗುರು + ಉಪದೇಶ = ಗುರೂಪದೇಶ

೨. ಗುಣಸಂಧಿ : ಪೂರ್ವಪದದ ಕಡೆಯಲ್ಲಿರುವ ಅ ಅ ಕಾರಗಳ ಮುಂದೆ ಇ ಈ ಕಾರಗಳು ಬಂದರೆ ಏಕಾರವು ,            ಉ,ಊ ಕಾರಗಳ ಮುಂದೆ ಓ ಕಾರವು , ೠ ಕಾರವು ಬಂದರೆ ಅರ್ ಎಂಬುದೂ ಆದೇಶವಾಗಿ ಬರುತ್ತದೆ
ಇದನ್ನು ಗುಣಸಂಧಿ ಎಂದು ಕರೆಯುವರು
ಉದಾಹರಣೆ
ಚಂದ್ರ + ಉದಯ = ಚಂದ್ರೋದಯ
ಮಹಾ +  ಈಶ್ವರ = ಮಹೇಶ್ವರ
ದೇವ + ಋಷಿ = ದೇವರ್ಷಿ

ಕನ್ನಡ ವ್ಯಾಕರಣ - ಒಂದಿಷ್ಟು ತಿಳಿಯೋಣ
ವ್ಯಾಕರಣ – 4 ಸಂಸ್ಕೃತ ಸಂಧಿಗಳು - ಸ್ವರಸಂಧಿ

.ವೃದ್ಧಿಸಂಧಿ 
ಪೂರ್ವಪದದ ಕೊನೆಯಲ್ಲಿನ ಅ ಆ ಕಾರಗಳ ಮುಂದೆ ಉತ್ತರಪದದ ಮೊದಲ ಅಕ್ಷರ ಎ ಏ ಐ ಕಾರಗಳು ಬಂದಾಗ ‘ಐ’ ಕಾರವು,
ಒ ಓ ಔ ಕಾರಗಳು ಬಂದಾಗ ‘ಔ’ ಕಾರವು ಆದೇಶವಾಗಿ ಬರುತ್ತದೆ.
ಇದನ್ನು ವೃದ್ಧಿ ಸಂಧಿ ಎಂದು ಕರೆಯುತ್ತಾರೆ
ಏಕ + ಏಕವೀರ = ಏಕೈಕವೀರ (ಅ+ಐ=ಐ)
ವನ+ಔಷದಿ = ವನೌಷದಿ (ಅ+ಔ=ಔ)
ಅಷ್ಟ+ಐಶ್ವರ್ಯ = ಅಷ್ಟೈಶ್ವರ್ಯ (ಅ+ಐ=ಐ) 

೪.ಯಣ್ ಸಂಧಿ :
ಪೂರ್ವಪದದ ಕಡೆಯ ಅಕ್ಷರ ಇ ಈ ಉ ಊ ಋ ಕಾರಗಳು ಇದ್ದು ,, ಮುಂದೆ, ಸವರ್ಣಸ್ವರಗಳು ಎದುರಾದರೆ ಆಗ
ಇ,ಈ ಕಾರಗಳಿಗೆ ‘ಯ’ ಕಾರವು ,
ಉ , ಊ ಕಾರಗಳಿ ‘ವ’ ಕಾರವು
ಋ ೠ ಕಾರಗಳಿಗೆ ‘ರ್ ‘ ಕಾರವು (ರೇಫವೂ) ಅದೇಶವಾಗಿ ಬರುತ್ತದೆ ,
ಇಂತಹ ಸಂಧಿಕಾರ್ಯಕ್ಕೆ ಯಣ್ ಸಂಧಿ ಎನ್ನುವರು.
( ಸಂಸ್ಕೃತದಲ್ಲಿ ಯ ರ ಲ ವ ಗಳಿಗೆ ‘ಯಣ್ ‘ ಎನ್ನುವ ಸಂಕೇತವಿದೆ )

ಉದಾಹರಣೆಗಳು :
ಪ್ರತಿ+ಉತ್ತರ = ಪ್ರತ್ಯುತ್ತರ
ಕೋಟಿ+ಅಧೀಶ್ವರ = ಕೋಟ್ಯಾಧೀಶ್ವರ
ಗುರು+ಆಜ್ಞೆ = ಗುರ್ವಾಜ್ಞೆ
ಅತಿ+ಉನ್ನತ = ಅತ್ಯುನ್ನತ


ಕನ್ನಡ ವ್ಯಾಕರಣ - ಒಂದಿಷ್ಟು ತಿಳಿಯೋಣ

ವ್ಯಾಕರಣ – 4 ಸಂಸ್ಕೃತ ಸಂಧಿಗಳು - ವ್ಯಂಜನ ಸಂಧಿ

ಮೊದಲೇ ತಿಳಿದಂತೆ ವ್ಯಂಜನಸಂಧಿಗಳೆಂದರೆ ವ್ಯಂಜಾನಕ್ಷರಗಳಿಗೆ ವ್ಯಂಜನಾಕ್ಷರಗಳು ಪರವಾಗಿ ಬಂದು ಸಂಧಿಯಾದರೆ ವ್ಯಂಜನಸಂಧಿ ಎಂದು ಕರೆಯುವರು.
ಅದರಲ್ಲಿ ಆರು ಬಗೆ ಗುರುತಿಸಬಹುದು ಜಸ್ತ್ವಸಂಧಿ, ಶ್ಚುತ್ವಸಂಧಿ ಷ್ಟುತ್ವಸಂಧಿ ಛತ್ವಸಂಧಿ ಅನುನಾಸಿಕ ಸಂಧಿ ಹಾಗು ವಿಸರ್ಗ ಸಂಧಿ

೧. ಜಸ್ತ್ವಸಂಧಿ
ಪೂರ್ವಪದದ ಕೊನೆಯಲ್ಲಿರುವ ಕ ಚ ಟ ತ ಪ ಗಳಿಗೆ ಕ್ರಮವಾಗಿ ಅದೇ ಗುಂಪಿನ ಮೂರನೆ ಅಕ್ಷರಗಳಾದ
ಗ ಜ ಡ ದ ಬ ಗಳು ಅದೇಶವಾಗಿ ಬಂದು ನಡೆಯುವ ಸಂಧಿಕಾರ್ಯಕ್ಕೆ ಜಸ್ತ್ವಸಂಧಿ ಎಂದು ಹೆಸರು
ವಾಕ್ + ದೇವಿ = ವಾಗ್ದೇವಿ
ವಾಕ್ + ಈಶ = ವಾಗೀಶ
ಜಗತ್ + ಗುರು = ಜಗದ್ಗುರು
ಅಚ್ + ಅಂತ = ಅಜಂತ
ಸತ್ = ಉದ್ಯೋಗ = ಸದುದ್ಯೋಗ
ಜಗತ್ + ಈಶ್ವರ = ಜಗದೀಶ್ವರ
ವಿರಾಟ್ + ರೂಪ = ವಿರಾಡ್ರೂಪ
ಚಿತ್ + ಆನಂದ = ಚಿದಾನಂದ
ಷಟ್ + ಆನನ = ಷಡಾನನ
ಸತ್ + ಆನಂದ = ಸದಾನಂದ

ಕನ್ನಡ ವ್ಯಾಕರಣ - ಒಂದಿಷ್ಟು ತಿಳಿಯೋಣ
ವ್ಯಾಕರಣ – 4  ಸಂಸ್ಕೃತ ಸಂಧಿಗಳು -  ವ್ಯಂಜನ ಸಂಧಿ

ಶ್ಚುತ್ವಸಂಧಿ :

ಸಂಧಿಕಾರ್ಯವು ನಡೆಯುವಾಗ ಪೂರ್ವಪದದ ಕಡೆಯಲ್ಲಿ
‘ಸ’ ಕಾರವಾಗಲಿ ಅಥವ ‘ತ’ ವರ್ಗದ ಯಾವುದೇ ವರ್ಣವಾಗಲಿ ಇದ್ದರೇ
ಆ ವರ್ಣಗಳಿಗೆ ‘ಶ’ ಕಾರ ಅಥವ ‘ಚ’ ವರ್ಗದ ಯಾವುದಾದರು ವರ್ಣ ಪರವಾದಾಗ  ,
‘ಸ’ ಕಾರಕ್ಕೆ  'ಶ' ಕಾರವು,
‘ತ’ವರ್ಗಕ್ಕೆ ‘ಚ’ವರ್ಗವೂ ಅದೇಶವಾಗಿ ಬರುವುದು.
ಈ ಸಂಧಿಗೆ ಶ್ಚುತ್ವಸಂಧಿ ಎನ್ನುವರು.
ಶ್ಚು – ಎಂದರೆ  ‘ಶ’ ಕಾರ ಹಾಗು ಚ-ವರ್ಗ ಅಂದರೆ ಚ ಛ ಜ ಝ ಞ್ ಗಳು , ಇವುಗಳು ಆದೇಶವಾಗಿ ಬರುವುದೇ ಶ್ಚುತ್ವ ಸಂಧಿ ಅನ್ನಿಸಿಕೊಳ್ಳುತ್ತವೆ

ಸತ್ + ಜನ =  ಸಜ್ಜನ    (ಸಜ್ ಜನ )
ಜಗತ್ + ಜ್ಯೋತಿ = ಜಗಜ್ಯೋತಿ (ಜಗಜ್  ಜ್ಯೋತಿ)
ಮನಸ್ + ಶುದ್ದಿ = ಮನಶ್ಯುದ್ಧಿ  (ಮನಶ್ ಶುದ್ದಿ)
ಮನಸ್ + ಚಂಚಲ = ಮನಶ್ಚಂಚಲ (ಮನಶ್ ಚಂಚಲ)
ಪಯಸ್ +  ಶಯನ = ಪಯಶ್ಶಯನ (ಪಹಶ್ ಶಯನ)
ಶರತ್+ಚಂದ್ರ=ಶತಚ್ಚಂದ್ರ(ಶರಚ್ ಚಂದ್ರ )
25

ಕನ್ನಡ ವ್ಯಾಕರಣ - ಒಂದಿಷ್ಟು ತಿಳಿಯೋಣ
ವ್ಯಾಕರಣ – 4  ಸಂಸ್ಕೃತ ಸಂಧಿಗಳು -  ವ್ಯಂಜನ ಸಂಧಿ

ವಿಸರ್ಗ ಸಂಧಿ:
ಪೂರ್ವಪದದ ಅಂತ್ಯಕ್ಕೆ ಬರುವ ರೇಫದ  (ರ್) ಮುಂದೆ ಕ ಖ ಪ ಫ ಕ್ಷ ಅಕ್ಷರಗಳು ಎದುರಾದಾಗ ರೇಫಕ್ಕೆ ವಿಸರ್ಗದ ಆದೇಶವಾಗುವುದು.  ಹಾಗೆ ಪೂರ್ವಪದದ ಅಂತ್ಯದಲ್ಲಿ ಬರುವ ‘ಸ್’ ನಿಂದ ಅಂತ್ಯವಾಗುವ ಶಬ್ಧಗಳ ಮುಂದೆ ವ್ಯಂಜನಾಕ್ಷರಗಳು ಎದುರಾದಾಗ ಓ ಕಾರ ಬರುತ್ತದೆ , ಈ ಸಂಧಿಕಾರ್ಯವನ್ನು ವಿಸರ್ಗಸಂಧಿಎನ್ನುವರು
ಉದಾಹರಣೆಗಳು
ಅಂತರ್ + ಕರಣ =ಅಂತಃಕರಣ
ಪುನರ್ + ಪರೀಕ್ಷೆ =ಪುನಃಪರೀಕ್ಷೆ
ಮನಸ್+ಖೇದ = ಮನಃ ಖೇದ
ತಪಸ್ + ಫಲ = ತಪಃಫಲ
ವಯಸ್ + ವೃದ್ಧ = ವ
logoblog

Thanks for reading

Previous
« Prev Post

No comments:

Post a Comment

Disclaimer

Disclaimer/ Notice: This all documents and PDF notes & Magazines (Only Education and Knowledge Propose) we are downloaded from the (whatsApp & Telegram Groups) internet. We are not responsible for any type of copyright issues. If we have any complaint regarding this content. We are trying to remove this content shorty. Contact: pyadavgk@gmail.com

Popular Posts

Followers

Contact Form

Name

Email *

Message *