ಬಾಳ ಪಯಣದ ಹಾದಿಯಲ್ಲಿ ಕಷ್ಟ– ಸುಖ,ನೋವು– ನಲಿವು ಎಲ್ಲವೂ ಇರುತ್ತದೆ ಬರುತ್ತವೆ.ಆದರೆ ಅದು ಯಾವುದು ಶಾಶ್ವತವಲ್ಲ. ಬದುಕಿನ ಹಾದಿಯಲ್ಲಿ ಸಂಕಷ್ಟಗಳು ತೊಂದರೆಗಳು ಎದುರಾದಾಗ ಮನುಷ್ಯ ವಿಚಲಿತನಾಗಬಾರದು.ಮಾನಸಿಕವಾಗಿ ಗಟ್ಟಿ ಮಾಡಲು ಎದುರಾದ ಪರೀಕ್ಷೆ ಅಂತಲೇ ಭಾವಿಸಬೇಕು.
ಹಣ, ಅಂತಸ್ತು, ಇತರ ಯಾವುದೇ ಸೌಲಭ್ಯವಿಲ್ಲದೇ ಇದ್ದರೂ ಧೈರ್ಯವಿದ್ದರೆ ಯಾವುದೂ ಅಸಾಧ್ಯವಾಗ ಲಾರದು. ಶಿವಾಜಿ ಮಹಾರಾಜ ಯುದ್ದದಲ್ಲಿ ಸೋತು ಕಂಗೆಟ್ಟು ಅಲ್ಲೇ ಗೋಡೆಯ ಮೇಲಿದ್ದ ಇರುವೆ ಯೊಂದು ಸುಮಾರು ಬಾರಿ ಮೇಲೆ ಏರಲು ಪ್ರಯತ್ನಿಸಿ ಕೆಳಗೆ ಬೀಳುತ್ತಿತ್ತು. ಹಲವೂ ಬಾರಿಯ ಪ್ರಯತ್ನದ ನಂತರ ಗೋಡೆ ಏರಿತು. ಅದು ಗೋಡೆ ಏರಲು ಸಾಧ್ಯವಾಗಿದ್ದು ಅದರ ಇಚ್ಛಾಶಕ್ತಿಯಿಂದಾಗಿ.ಹಾಗೆಯೇ ಹಲವೂ ಬಾರಿ ಏರಲು ಪ್ರಯತ್ನಿಸಿ ಬಿದ್ದಾಗ ಧೈರ್ಯ ಕಳೆದು ಕೊಳ್ಳಲಿಲ್ಲ. ಇದೇ ಶಿವಾಜಿ ಮಹಾರಾಜರಿಗೆ ಸ್ಫೂರ್ತಿಯಾಯಿತು. ಸೋತು ಸುಣ್ಣವಾಗಿದ್ದ ಶಿವಾಜಿ ಮರಳಿ ಯುದ್ದಕ್ಕೆ ಅಣಿಯಾಗಿ, ಹಲವಾರು ಪ್ರದೇಶಗಳನ್ನು ಗೆದ್ದುಕೊಂಡರು. ನಿಜ, ಬದುಕಲ್ಲಿ ಧೈರ್ಯವೊಂದಿದ್ದರೆ ಸವಾಲನ್ನೂ ಸುಲಭವಾಗಿ ಎದುರಿಸಬಹುದು.
ಅಬ್ರಹಾಂ ಲಿಂಕನ್ ಯಾರಿಗೆ ತಾನೇ ಗೊತ್ತಿಲ್ಲ.ಅಮೇರಿಕಾದ ಅಧ್ಯಕ್ಷನಾಗಿ ಅಪರೂಪದ ಸಾಧನೆ ಮಾಡಿದ ಮಹಾನ್ ವ್ಯಕ್ತಿ ಧೀಮಂತ ರಾಷ್ಟ್ರ ನಾಯಕ. ದೀಪದ ಬುಡದಲ್ಲಿ ಸದಾ ಕತ್ತಲು ಇರುತ್ತದೆ ಎನ್ನುವುದಕ್ಕೆ ಇವರೇ ಉತ್ತಮ ನಿದರ್ಶನ.ಅಬ್ರಹಾಂ ಲಿಂಕನ್ ತನ್ನ ಬದುಕಿನಲ್ಲಿ ನಡೆದ ಅನೇಕ ಕಾರ್ಯಗಳಲ್ಲಿ ಸೋಲು ಹಿನ್ನಡೆ ಅನುಭವಿಸಿದರು.ಅಲ್ಲದೇ ಸಾಕಷ್ಟು ಚುನಾವಣೆಗಳಲ್ಲಿ ಸೋತರು.ವ್ಯಾಪಾರದಲ್ಲಿ ನಷ್ಟ ಅನುಭವಿಸಿದರು. ಅಷ್ಟೇ ಯಾಕೆ ವೈಯಕ್ತಿಕ ಬದುಕಿನಲ್ಲಿ ಕಂಡು ನೋವು ಅನುಭವಿಸಿದರು. ತಮ್ಮ ಬದುಕಿನಲ್ಲಿ ಎಲ್ಲವನ್ನೂ ಕಳೆದುಕೊಂಡರೂ ದೈರ್ಯವನ್ನು ಮಾತ್ರ ಅವರು ಕಳೆದುಕೊಳ್ಳಲಿಲ್ಲ. ಆ ಧೈರ್ಯವೇ ಅವರನ್ನು ಅಮೇರಿಕಾದ ಅಧ್ಯಕ್ಷರನ್ನಾಗಿ ಮಾಡಿತು. ಬದುಕಲ್ಲಿ ಆರಂಭದಲ್ಲಿ ನೋವು ಅನುಭವಿಸಿದಾಗ, ನಿರಾಶೆ ಹೊಂದಿದಾಗ ದೈರ್ಯದಿಂದ ಮರಳಿ ಪ್ರಯತ್ನ ಮಾಡದಿದ್ದರೆ ಆ ಮಹಾನ್ ವ್ಯಕ್ತಿ ಅಮೇರಿಕಾದ ಅಧ್ಯಕ್ಷ ಆಗುತ್ತಿರಲಿಲ್ಲ
ನೀರಿನಲ್ಲಿ ಈಜುವಾತ, ಈಜುವುದರಲ್ಲಿ ಆತ ಪ್ರವೀಣನಿದ್ದರೂ, ಈಜುವಾಗ ಒಂದೇ ಕ್ಷಣ ಆತ ದೈರ್ಯ ಕಳೆದುಕೊಂಡರೆ ಅಪಾಯ ಕಟ್ಟಿಟ್ಟ ಬುತ್ತಿ.ದೈರ್ಯ ಎಲ್ಲಾ ಉನ್ನತ ಸ್ಪೂರ್ತಿ. ಎಲ್ಲಾ ಸಾಧನೆಗಳಿಗೆ ಆಧಾರ. ಆತ್ಮ ವಿಶ್ವಾಸ, ತಾಳ್ಮೆ, ಸಹನೆ,ಸಹಕಾರ ಈ ಎಲ್ಲ ಗುಣಗಳಿಗೆ ದೈರ್ಯ ಪೂರಕವಾದುದು.
ಕೆಲಸ ಮಾಡಲು, ಉತ್ತಮ ಬದುಕು ನಿರ್ವಹಿಸಲು,ಹಿಡಿದ ಕಾರ್ಯವನ್ನು ಪರಿಪೂರ್ಣವಾಗಿ ಮಾಡಲು ದೈರ್ಯ ಬೇಕೇ ಬೇಕು. ನಿರಾಶೆ ನಮ್ಮಿಂದ ಬಲು ದೂರ ಹೋಗಬೇಕು, ಅಸಡ್ಡೆ ಇಲ್ಲವಾಗಬೇಕು,ಸೋಮಾರಿತನ ಹತ್ತಿರವೂ ಸುಳಿಯಬಾರದು.ಬದುಕಿಗೆ ನೇರ ಗುರಿ ಇರಬೇಕು. ಆ ಗುರಿ ಸಾಧನೆಗೆ ದೈರ್ಯ ಬೇಕು. ದೈರ್ಯವಿಲ್ಲದೇ ಇದ್ದರೆ ಮಾನವನ ಬದುಕು ಸಾಧನೆ ಹಾದಿ ದುರ್ಗಮವಾಗುತ್ತದೆ.ಸಾಮಾನ್ಯರಲ್ಲಿ ಅತಿ ಸಾಮಾನ್ಯರಾಗಿ ಬದುಕುತ್ತೇವೆ.ಸ್ವಾಮಿ ವಿವೇಕಾನಂದರು ದೇಶ ಕಂಡ ಮಹಾನ್ ವ್ಯಕ್ತಿ. ಚಿಕ್ಕ ವಯಸ್ಸಿನಲ್ಲಿ ಅಪಾರ ಸಾಧನೆ ಮಾಡಲು ಅವರಿಗೆ ನೆರವಾದದ್ದು ಇದೇ ದೈರ್ಯ. ದೈರ್ಯಂ ಸರ್ವತ್ರಂ ಸಾಧನಂ.
Friends, If you like this post,kindly comment below the post and do share your Response, (Thanks for Reading....)
No comments:
Post a Comment