ಕಳೆದ ವರ್ಷ ಭಾರತದಲ್ಲಿ 8,02,000 ಮಕ್ಕಳು ಮೃತಪಟ್ಟಿರುವುದು ವರದಿಯಾಗಿದ್ದು, ಇದು ಐದು ವರ್ಷಗಳಲ್ಲಿ ಕಡಿಮೆ ಪ್ರಮಾಣದ ಸಾವಿನ ಪ್ರಕರಣಗಳಾಗಿವೆ ಎಂದು ಮಕ್ಕಳ ಸಾವು ಅಂದಾಜು ಕುರಿತ ವಿಶ್ವಸಂಸ್ಥೆಯ ಅಂತರ್ ಸಂಸ್ಥೆ ಸಮೂಹ(ಯುಎನ್‍ಐಜಿಎಂಇ) ಹೇಳಿದೆ.
ವಿವಿಧ ಪ್ರಕರಣಗಳಲ್ಲಿ ಶಿಶುಗಳ ಮರಣ ವಿವರಗಳನ್ನು ತಿಳಿಸಿರುವ ಯುಎನ್‍ಐಜಿಎಂಇ, 2017ರಲ್ಲಿ ಒಟ್ಟು 8.02,000 ಮಕ್ಕಳು ಸಾವಿಗೀಡಾಗಿದ್ದಾರೆ. ಇವರಲ್ಲಿ 6,05,000 ನವಜಾತ ಹಸುಳೆಗಳ ಸಾವು ಸಹ ಸೇರಿವೆ. 5 ರಿಂದ 14 ವರ್ಷ ವಯೋಮಾನದ 1,52,000 ಮಕ್ಕಳೂ ಅಸುನೀಗಿದ್ದಾರೆ ಎಂದು ಅಂಕಿ-ಅಂಶ ನೀಡಿದೆ.
ಆದರೆ ಕಳೆದ ಐದು ವರ್ಷಗಳಿಗೆ ಹೋಲಿಸಿದರೆ ಶಿಶುಗಳು ಮತ್ತು ಮಕ್ಕಳ ಸಾವಿನ ಪ್ರಮಾಣ ಕಡಿಮೆ ಎಂದು ಯುನಿಸೆಫ್ ಇಂಡಿಯಾ ಪ್ರತಿನಿಧಿ ಯಾಸ್ಮಿನ್ ಅಲಿ ಹಖ್ ತಿಳಿಸಿದ್ದಾರೆ.
- 2016ರಲ್ಲಿ 8.67 ಲಕ್ಷ ಶಿಶುಗಳು ಮತ್ತು ಮಕ್ಕಳು ಮೃತಪಟ್ಟಿದ್ದರು. ಆ ವರ್ಷದಲ್ಲಿ ಪ್ರತಿ 1,000 ಶಿಶುಗಳ ಜನನದಲ್ಲಿ 44 ಮಕ್ಕಳು ಮೃತಪಟ್ಟಿದ್ದರು.
- ಕಳೆದ ವರ್ಷ(2017ರಲ್ಲಿ) ಆ ಪ್ರಮಾಣ (39/1000) ಇಳಿದಿದೆ ಎಂದು ಅವರು ಹೇಳಿದ್ದಾರೆ.
ನವಜಾತ ಶಿಶುಗಳ ಸಾವಿನ ಸಂಖ್ಯೆಯನ್ನು ಕಡಿಮೆ ಮಾಡಲು ಅನೇಕ ಪೂರಕ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸಾಂಸ್ಥಿಕ (ಆಸ್ಪತ್ರೆಗಳಲ್ಲಿ) ಹೆರಿಗೆ, ರಾಷ್ಟ್ರವ್ಯಾಪಿ ನವಜಾತ ಶಿಶುಗಳ ವಿಶೇಷ ಆರೋಗ್ಯ ಘಟಕಗಳ ಸ್ಥಾಪನೆ ಹಾಗೂ ರೋಗ ಪ್ರತಿರೋಧಕ ವ್ಯವಸ್ಥೆ ಬಲಗೊಳಿಸುವಿಕೆಗೆ ಆದ್ಯತೆ ನೀಡಲಾಗಿದೆ ಎಂದು ಯಾಸ್ವಿನ್ ವಿವರಿಸಿದ್ದಾರೆ.
Friends,
If you like this post,kindly comment below the post and do share your
Response,
(Thanks for Reading....)
No comments:
Post a Comment