Prabhakara R
red spot on jupiter
ಗುರು ಗ್ರಹದ ಕಕ್ಷೆಯಲ್ಲಿ ಸುತ್ತುತ್ತಿರುವ ಜೂನೋ ಬಾಹ್ಯಾಕಾಶ ನೌಕೆ
ಎಚ್ ಎಸ್ ಟಿ ಸ್ವಾಮಿ
ನಮ್ಮ ಸೌರಮಂಡಲದ ಅತ್ಯಂತ ದೊಡ್ಡಗ್ರಹ ಗುರು. ತನ್ನದೇ ಆದ ವಿಶೇಷ ಲಕ್ಷಣಗಳನ್ನು ಹೊಂದಿದ್ದು, ನಾಸಾ ಪ್ರಕಾರ ಇನ್ನೊಂದು ಸೂರ್ಯನಂತಹ ನಕ್ಷತ್ರವಾಗುವುದನ್ನು ತಪ್ಪಿಸಿಕೊಂಡಿರುವ ಗ್ರಹ. ನಮ್ಮ ಭೂಮಿಗಿಂತಲೂ 120 ಪಟ್ಟು ಹೆಚ್ಚು ಗಾತ್ರವನ್ನು ಹೊಂದಿದ್ದು, ನಾನಾ ರೀತಿಯ ಅನಿಲಗಳಿಂದ ಕೂಡಿದೆ ಎಂಬುದು ನಮಗೆಲ್ಲಾ ಗೊತ್ತಿರುವ ವಿಷಯ. ಸೌರವ್ಯೂಹದ 5ನೇ ಗ್ರಹವಾಗಿರುವ ಇದು ಸೂರ್ಯನನ್ನು ಪರಿಭ್ರಮಣೆ ಮಾಡಲು ಸುಮಾರು 12 ವರ್ಷ ಬೇಕು. ಇಂತಹ ಗುರುಗ್ರಹದ ಅಂಗಳದಲ್ಲಿ ನೀರಿದೆ ಎಂದರೆ ಆಶ್ಚರ್ಯವಾಗುತ್ತದೆಯಲ್ಲವೇ!
ಇತ್ತೀಚೆಗೆ ನಾಸಾ ವಿಜ್ಞಾನಿಗಳು ಗುರುಗ್ರಹದ ಅಧ್ಯಯನದ ಸಂದರ್ಭದಲ್ಲಿ, ಗ್ರಹದ ಕೆಂಪುಮಚ್ಚೆಯ (RED SPOT) ಮೋಡಗಳಲ್ಲಿ ನೀರಿದೆ ಎಂಬುದನ್ನು ಪತ್ತೆ ಹಚ್ಚಿದ್ದಾರೆ. ಆಮ್ಲಜನಕದಿಂದ ಕೂಡಿದ ಅನಿಲ ಮತ್ತು ಕಾರ್ಬನ್ ಮೊನಾಕ್ಸೈಡ್‌ನ ಒತ್ತಡದಿಂದ ಈ ಗ್ರಹದಲ್ಲಿ ನೀರಿದೆ. ಸೂರ್ಯನಲ್ಲಿರುವ ಆಮ್ಲಜನಕಕ್ಕಿಂತ 2ರಿಂದ 9ಪಟ್ಟು ಹೆಚ್ಚು ಆಮ್ಲಜನಕ ಗುರುಗ್ರಹದಲ್ಲಿದೆ ಎಂದು ಖಗೋಳ ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಈ ಕುರಿತ ಮಾಹಿತಿ ಅಸ್ಟ್ರೋನಾಮಿಕಲ್ ಜರ್ನಲ್‌ನಲ್ಲಿ ಪ್ರಕಟಗೊಂಡಿದೆ.
ಗುರುಗ್ರಹದ ವಿಶೇಷ ಎಂದೇ ಹೇಳಲಾಗಿರುವ ಮಹಾ ಕೆಂಪು ಮಚ್ಚೆ ತೇವಭರಿತ ಮೋಡಗಳಿಂದ ಮುಚ್ಚಲ್ಪಟ್ಟಿರುತ್ತದೆ. ಆದರೆ ನೀರಿನ ಪ್ರಮಾಣ ಹೆಚ್ಚಿಲ್ಲದಿದ್ದರೂ, ತುಂಬಾ ಆಳದಲ್ಲಿ ನೀರಿರುವುದು ಗೋಚರವಾಗಿದೆ ಎಂದು ಗೊಡ್ಡಾಡ್ ಫ್ಲೈಡ್ ಸೆಂಟರ್‌ನ ಗ್ರೀನ್ ಬೆಲ್ಟ್ ಖಗೋಳ ವಿಜ್ಞಾನಿ ಗೋರ್ಡನ್ ಎಲ್. ಜಾರ್ಕರ್ ತಿಳಿಸಿದ್ದಾರೆ. ಜಾರ್ಕರ್ ಪ್ರಕಾರ ಗುರುಗ್ರಹದ ಸುತ್ತ ಸುತ್ತುವ ನಾಲ್ಕು ನೈಸರ್ಗಿಕ ಉಪಗ್ರಹಗಳಾದ ಗ್ಯಾನಿಮೆಡ್, ಐಯೋ, ಕ್ಯಾಲಿಸ್ಟೊ ಮತ್ತು ಯುರೋಪಾಗಳ ಕಕ್ಷೆಗಳಲ್ಲಿ ನೀರು ಬೇಕಾದಷ್ಟಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಗುರುಗ್ರಹದ ಅಧ್ಯಯನದಲ್ಲಿರುವ ನಾಸಾದ ಜೂನೋ ಬಾಹ್ಯಾಕಾಶ ನೌಕೆ ತೆಗೆದಿರುವ ಛಾಯಾಚಿತ್ರಗಳ ಪ್ರಕಾರ ಮತ್ತು ಹವಾಯ್ ಮಾನ್ ಕಿಯಾ ದೂರದರ್ಶಕದ ಮೂಲಕ ವೀಕ್ಷಿಸಿರುವ ಮಾಹಿತಿಯಲ್ಲಿ ಗುರುಗ್ರಹದ ಒಡಲಲ್ಲಿ ನೀರಿರುವ ಸಂಗತಿ ನಿಚ್ಚಳವಾಗಿದೆ. ಇಂತಹ ಅದೆಷ್ಟು ಬೇರೆ ಬೇರೆ ಆಕಾಶಕಾಯಗಳಲ್ಲಿ ನೀರಿದೆಯೋ, ಏನೋ, ಬಲ್ಲವರಾರು? ಒಟ್ಟಿನಲ್ಲಿ ಅಂತರಿಕ್ಷ ತನ್ನ ಅಂತರಾಳದಲ್ಲಿ ಏನೆಲ್ಲಾ ಅಡಗಿಸಿ ಇಟ್ಟುಕೊಂಡಿದೆಯೋ! ಭವಿಷ್ಯದಲ್ಲಿ ಮನುಕುಲಕ್ಕೆ ಒಳಿತಾದರೆ ಅಷ್ಟೇ ಸಾಕು.
Friends, If you like this post,kindly comment below the post and do share your Response, (Thanks for Reading....)
No comments:
Post a Comment