ಜೂನ್ ನಲ್ಲಿ ನಡೆದ ಕೆ.ಎ.ಎಸ್. ಪರೀಕ್ಷೆಯ ಎರಡು ಪ್ರಶ್ನೆಪತ್ರಿಕೆಗಳಿಗೆ ಮಾತ್ರ ಉತ್ತರಗಳನ್ನ ನೀಡಲಾಗಿದ್ದು, ಇನ್ನುಳಿದ ಪ್ರಶ್ನೆಪತ್ರಿಕೆಗಳನ್ನ ಬೆರಳಚ್ಚಿಸುವ ಕಾರ್ಯ ಭರದಿಂದ ಸಾಗಿದೆ.. ಶೀಘ್ರದಲ್ಲೇ ಈ ತಾಣ ಸಮಗ್ರವಾಗಲಿದೆ. ನಿಮ್ಮ ಸಹಕಾರ, ಪ್ರೋತ್ಸಾಹಕ್ಕೆ ಪ್ರಶ್ನೋತ್ತರ ತಂಡ ಕೃತಜ್ಞತೆ ಸಲ್ಲಿಸುತ್ತದೆ.

ಆತ್ಮೀಯ ಸ್ಪರ್ಧಾರ್ಥಿಗಳೇ, ಎಲ್ಲ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವಂತೆ ಮಾಹಿತಿ ನೀಡಲಾಗುತ್ತಿದೆ.https://t.me/kpsc2019 ಸಂವಿಧಾನದ ಕಗ್ಗೊಲೆಗೆ ಒಂದು ನೇಮಕ ಸಾಕು | General Knowledge in Kannada
https://www.highrevenuegate.com/dst1z9b3?key=96fa453e5c910a6715da3b114f6d9e35

RECENT POSTS

6

https://www.videosprofitnetwork.com/watch.xml?key=35286665df409d9f630563e3a619eb10

ಇತ್ತೀಚಿನ ಸುದ್ದಿ...Recent Notes

8

https://www.highrevenuegate.com/his7kbtc7?key=50a282e312a45be4aa549d301f853be2

Wednesday, September 12, 2018

ಸಂವಿಧಾನದ ಕಗ್ಗೊಲೆಗೆ ಒಂದು ನೇಮಕ ಸಾಕು

  Pundalik       Wednesday, September 12, 2018

ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯಾಗಿ ಕ್ಯಾವನಾಗ್‌ ಆಯ್ಕೆಗೆ ಟ್ರಂಪ್‌ ಕಾರ್ಯತಂತ್ರ

ಸಂವಿಧಾನದ ಕಗ್ಗೊಲೆಗೆ ಒಂದು ನೇಮಕ ಸಾಕು

ಬ್ರೆಟ್‍ ಕ್ಯಾವನಾಗ್‍ ಅವರನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಹುದ್ದೆಗೆ ಏರಿಸಲು ರಿಪಬ್ಲಿಕನ್‍ ಪಕ್ಷದ ಸಂಸದರು ನಡೆಸಿದ ಪ್ರಯತ್ನವು ತೆರಿಗೆ ಕಡಿತವನ್ನು ಅಂಗೀಕರಿಸಲು ಕಳೆದ ವರ್ಷ ಮಾಡಿದ ಪ್ರಯತ್ನವನ್ನೇ ಹೋಲುತ್ತದೆ. ಮೂಲದಲ್ಲಿ ಈ ಎರಡೂ ಪ್ರಯತ್ನಗಳಿಗೆ ಹೆಚ್ಚಿನ ವ್ಯತ್ಯಾಸ ಇಲ್ಲ. ಸಂಸತ್ತಿನಲ್ಲಿ ಚರ್ಚೆಗೆ ಬರಬೇಕಾಗಿದ್ದ ಬಹಳಷ್ಟು ಮಾಹಿತಿಯನ್ನು ರಿಪಬ್ಲಿಕನ್‍ ಮುಖಂಡರು ಅಲ್ಲಿ ಮಂಡಿಸಿಲ್ಲ. ಈ ಪ್ರಕರಣದಲ್ಲಿ ಈ ಮುಖಂಡರು ತೋರುವ ಆತುರವು ಅವರ ಪಕ್ಷಪಾತಿ ಧೋರಣೆಯನ್ನು ಅತ್ಯಂತ ಸ್ಪಷ್ಟವಾಗಿ ಬಯಲು ಮಾಡುತ್ತದೆ. ಈ ಪ್ರಕರಣದ ಫಲಿತಾಂಶವು ಮತ್ತೊಂದು ಬಾರಿ ಕುಲಪ್ರತಿಷ್ಠೆಯನ್ನು ಎತ್ತಿಹಿಡಿಯಲಿದೆ ಎಂಬಂತೆ ಕಾಣಿಸುತ್ತಿದೆ. ಕೊನೆಯ ಕ್ಷಣದಲ್ಲಾದರೂ ರಿಪಬ್ಲಿಕನ್‍ ಸಂಸದರ ಆತ್ಮಸಾಕ್ಷಿ ಎಚ್ಚರವಾಗದಿದ್ದರೆ ಅವರೆಲ್ಲರೂ ಪಕ್ಷದ ನಿಲುವಿಗೆ ಅನುಗುಣವಾಗಿ ಮತ ಹಾಕಲಿದ್ದಾರೆ. ಸಲಹೆ ಮತ್ತು ಸಮ್ಮತಿಯನ್ನು ಸೂಚಿಸುವುದು ತಮ್ಮ ಸಾಂವಿಧಾನಿಕ ಕರ್ತವ್ಯ ಎಂಬುದರ ಪೂರ್ಣ ಅರಿವಿದ್ದೂ ಅವರು ಅದನ್ನು ನಿರ್ಲಕ್ಷಿಸಲಿದ್ದಾರೆ.
ಕ್ಯಾವನಾಗ್‍ ಅವರ ನೇಮಕದ ವಿಚಾರ ಕಾಂಗ್ರೆಸ್‌ನಲ್ಲಿ (ಅಮೆರಿಕದ ಸಂಸತ್ತು) ಚರ್ಚೆಗಾದರೂ ಬಂದಿದೆ. ತೆರಿಗೆ ಕಡಿತ ಮಸೂದೆಯ ವಿಚಾರದಲ್ಲಿ ಇಂತಹ ಅವಕಾಶವೂ ಇರಲಿಲ್ಲ. ವಿಚಾರಣೆಯ ಸಂದರ್ಭದಲ್ಲಿ ಕೇಳಲಾದ ಬಹಳ ನೇರವಾದ ಪ್ರಶ್ನೆಗಳಿಗೂ ಕ್ಯಾವನಾಗ್‍ ಅವರು ಉತ್ತರಿಸಲು ನಿರಾಕರಿಸುತ್ತಿದ್ದಾರೆ; ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯೊಬ್ಬರಿಂದ ನಾವು ನಿರೀಕ್ಷಿಸುವ ಕನಿಷ್ಠ ಪ್ರಾಮಾಣಿಕತೆಯನ್ನೂ ಬದಿಗೆ ತಳ್ಳಿ ಸಂಪೂರ್ಣವಾಗಿ ನುಣುಚಿಕೊಳ್ಳುವಂತಹ ವರ್ತನೆಯನ್ನು ಅವರು ತೋರುತ್ತಿದ್ದಾರೆ.
ಕಳೆದ ವರ್ಷದ ತೆರಿಗೆ ಕಡಿತ ಮಸೂದೆ ಮತ್ತು ಈಗಿನ ಪ್ರಕರಣದ ನಡುವೆ ಗಂಭೀರವಾದ ವ್ಯತ್ಯಾಸ ಇದೆ. ತೆರಿಗೆ ಕಡಿತದ ಮಸೂದೆ ಕೆಲವು ಲಕ್ಷ ಕೋಟಿ ಡಾಲರ್‌ಗೆ ಸಂಬಂಧಿಸಿದ್ದು ಮಾತ್ರ. ಆದರೆ, ಕ್ಯಾವನಾಗ್‍ ಪ್ರಕರಣ ಅಮೆರಿಕದ ಗಣತಂತ್ರದ ಭವಿಷ್ಯಕ್ಕೆ ಸಂಬಂಧಿಸಿದ್ದಾಗಿದೆ. ಕ್ಯಾವನಾಗ್‍ ಅವರನ್ನು ನೇಮಕ ಮಾಡಿದರೆ ಸಾಂವಿಧಾನಿಕವಾದ ಹಲವು ಬಿಕ್ಕಟ್ಟುಗಳನ್ನು ದೇಶವು ಎದುರಿಸಬೇಕಾಗುತ್ತದೆ.
ಕ್ಯಾವನಾಗ್‍ ಅವರ ನೇಮಕ ನಡೆದರೆ ದೇಶದ ರಾಜಕಾರಣವು ಅತ್ಯಂತ ಪ್ರಕ್ಷುಬ್ಧವಾದ ಯುಗವನ್ನು ಹಾದು ಹೋಗಬೇಕಾಗುತ್ತದೆ. ಸುಪ್ರೀಂ ಕೋರ್ಟ್‌ನ ಎರಡು ಸ್ಥಾನಗಳನ್ನು ಕದ್ದೊಯ್ದಂತೆಯೇ ಆಗುತ್ತದೆ. ಮೊದಲಿಗೆ, ಅಧ್ಯಕ್ಷರಾಗಿದ್ದ ಬರಾಕ್‍ ಒಬಾಮ ಅವರು ನಾಮನಿರ್ದೇಶನ ಮಾಡಿದ್ದ ವ್ಯಕ್ತಿಯ ನಿಲುವುಗಳನ್ನು ಕೇಳುವುದಕ್ಕೂ ರಿಪಬ್ಲಿಕನ್‍ ಸಂಸದರು ಮನಸ್ಸು ಮಾಡಲಿಲ್ಲ. ನಂತರ, ಜನಮತದಲ್ಲಿ ಸೋತರೂ ವಿದೇಶಿ ಶತ್ರುವಿನ ನೆರವಿನೊಂದಿಗೆ ಜನಪ್ರತಿನಿಧಿಗಳ ಮತಗಳ ಆಧಾರದಲ್ಲಿ ಅಧ್ಯಕ್ಷರಾದ ವ್ಯಕ್ತಿಯು ಸುಪ್ರೀಂ ಕೋರ್ಟ್‌ನ ಎರಡು ಸ್ಥಾನಗಳಿಗೆ ನಾಮನಿರ್ದೇಶನ ಮಾಡಿದರು.
ಇಂತಹ ಕಳವಳಕಾರಿ ಸನ್ನಿವೇಶಕ್ಕೆ ಅಗತ್ಯವಾದ ಎಚ್ಚರಿಕೆಯ ನಡತೆಯನ್ನು ಕ್ಯಾವನಾಗ್‍ ಅವರು ತೋರಬ
ಹುದೇ? ವೈಯಕ್ತಿಕ ವಿಮೋಚನೆಯ ವಿಚಾರದಲ್ಲಿ ಪವಾಡ
ಗಳು ನಡೆದಿವೆ ಮತ್ತು ನಡೆಯುತ್ತವೆ. ಆದರೆ, ಈ ಸಂದ
ರ್ಭದಲ್ಲಿ ಅಂತಹ ಸಾಧ್ಯತೆ ಬಹಳ ಕಡಿಮೆ. ಒಂದು ವೇಳೆ ಕ್ಯಾವನಾಗ್‍ ಅವರು ನೇಮಕಗೊಂಡರೆ, ಅವರು ಮತ್ತು ಅವರ ಸಹೋದ್ಯೋಗಿ ನ್ಯಾಯಮೂರ್ತಿಗಳು ಎಲ್ಲ ಹಂತಗ
ಳಲ್ಲಿಯೂ ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳಬಹುದು ಎಂಬುದರ ಎಲ್ಲ ಸೂಚನೆಗಳೂ ಇವೆ.
ಆಗಲಿ, ಕ್ಯಾವನಾಗ್‍ ಬಗ್ಗೆ ನಮಗೆ ಎಷ್ಟು ಗೊತ್ತಿದೆ? ನಮಗೆ ಗೊತ್ತಿಲ್ಲದಿರುವ ವಿಚಾರಗಳೇ ಹೆಚ್ಚು. ಅವರ ಬಗೆಗಿನ ಸಾವಿರಾರು ಪುಟಗಳ ಮಾಹಿತಿ ಯಾರಿಗೂ ಸಿಗದಂತೆ ರಿಪಬ್ಲಿಕನ್‍ ಪಕ್ಷ ಮತ್ತು ಡೊನಾಲ್ಡ್ ಟ್ರಂಪ್‍ ಅವರ ಆಡಳಿತ ಗೋಡೆ ಕಟ್ಟಿ ಬಿಟ್ಟಿದೆ. ಈ ಸಾವಿರಾರು ಪುಟಗಳ ದಾಖಲೆಗಳಲ್ಲಿ ಇರುವ ವಿಚಾರಗಳು ನಿಜಕ್ಕೂ ಆತಂಕಕಾರಿಯೇ ಆಗಿರಬಹುದು. ಅವರ ಬಗ್ಗೆ ನಮಗೆ ಈಗಾಗಲೇ ಗೊತ್ತಿರುವ ವಿಚಾರಗಳೇ ಅವರು ಅಮೆರಿಕದ ಅತ್ಯುನ್ನತ ನ್ಯಾಯ ವ್ಯವಸ್ಥೆಯ ಭಾಗ ಆಗುವುದನ್ನು ತಡೆಯಲು ಸಾಕು.
ನೆನಪಿಸಿಕೊಳ್ಳಿ, ಅಮೆರಿಕದ ಮಾಜಿ ಅಧ್ಯಕ್ಷ ಬಿಲ್‍ ಕ್ಲಿಂಟನ್‍ ಅವರ ವಿರುದ್ಧದ ಆರೋಪಗಳ ವಿಚಾರಣೆ ನಡೆಸಿದ ಸ್ಟಾರ್ ತನಿಖಾ ತಂಡದಲ್ಲಿ ಕ್ಯಾವನಾಗ್‍ ಅವರೂ ಇದ್ದರು. ಏಳು ವರ್ಷ ನಡೆದ ತನಿಖೆಗೆ ಲಕ್ಷಾಂತರ ಡಾಲರ್ ವೆಚ್ಚವಾಗಿದೆ. ಅಪ್ಪಟ ದ್ವೇಷ ಸಾಧನೆಯ ಈ ಕಸರತ್ತಿನಲ್ಲಿಯೇ ಕ್ಯಾವನಾಗ್‍ ತಮ್ಮ ಪ್ರಾಥಮಿಕ ಪಾಠಗಳನ್ನು ಕಲಿತುಕೊಂಡರು. ಕೊನೆಗೆ ಸ್ಟಾರ್ ಸಮಿತಿಯು ಯಾವುದೇ ತಪ್ಪು ನಡೆದಿದ್ದಕ್ಕೆ ಪುರಾವೆಗಳಿಲ್ಲ ಎಂಬ ವರದಿ ಕೊಟ್ಟಿತು. ಶ್ವೇತಭವನದ ವಕೀಲನಾಗಿದ್ದ ವಿನ್ಸ್ ಫಾಸ್ಟರ್ ಆತ್ಮಹತ್ಯೆಯ ಹಿಂದಿನ ಪಿತೂರಿಯ ಹುಚ್ಚು ಕತೆಗಳನ್ನು ಹುಡುಕುತ್ತಾ ಕ್ಯಾವನಾಗ್‍ ಕೆಲವು ವರ್ಷ ಅಲೆದಾಡಿದ್ದರು.
ಬಳಿಕ, ಜಾರ್ಜ್ ಬುಷ್‍ ಅಧ್ಯಕ್ಷರಾಗಿದ್ದಾಗ ಕ್ಯಾವನಾಗ್‍ ಅವರು ಶ್ವೇತಭವನ ಸೇರಿಕೊಂಡರು. ಆ ಸರ್ಕಾರ ಚಿತ್ರಹಿಂಸೆಯನ್ನೇ ತನ್ನ ದೈನಂದಿನ ಕಾರ್ಯಾಚರಣೆ ನೀತಿಯ ಭಾಗವಾಗಿಸಿತ್ತು. ಆ ದಿನಗಳಲ್ಲಿ ತೆಗೆದುಕೊಂಡ ಯಾವುದೇ ನಿರ್ಧಾರಗಳಲ್ಲಿ ತಮ್ಮ ಪಾತ್ರ ಇಲ್ಲ ಎಂದು 2006ರಲ್ಲಿ, ಮೇಲ್ಮನವಿ ನ್ಯಾಯಾಲಯದ ನ್ಯಾಯಾಧೀಶ ಹುದ್ದೆಗೆ ನಡೆದ ಸಂದರ್ಶನದಲ್ಲಿ ಕ್ಯಾವನಾಗ್‍ ಹೇಳಿಕೊಂ
ಡಿದ್ದರು. ಅವರು ನಿಜ ಹೇಳಿದ್ದರೇ? ಟ್ರಂಪ್‍ ನೇತೃತ್ವದ ಸರ್ಕಾರ ಬಹಿರಂಗಪಡಿಸಲು ನಿರಾಕರಿಸುತ್ತಿರುವ ಸಾವಿರಾರು ಪುಟಗಳ ದಾಖಲೆಗಳಲ್ಲಿ ಸತ್ಯ ಅಡಗಿದೆ.
ಇದು ಬಹಳ ವಿಚಿತ್ರವಾಗಿದ್ದರೂ ವಾಸ್ತವ. ದೇಶದ ಅಧ್ಯಕ್ಷರನ್ನು ನ್ಯಾಯಾಂಗದ ಪರಾಮರ್ಶೆಗೆ ಒಳಪಡಿಸುವುದಕ್ಕೆ ಸಾಧ್ಯವಿಲ್ಲ ಎಂಬ ಚಿಂತನಕ್ರಮವನ್ನು ಕ್ಯಾವನಾಗ್‍ ರೂಪಿಸಿಕೊಂಡಿದ್ದಾರೆ.
ಮೇಲ್ಮನವಿ ನ್ಯಾಯಾಧೀಶರಾಗಿ ತಾವು ಏನು ಎಂಬುದನ್ನು ಅವರು ತೋರಿಸಿಕೊಟ್ಟಿದ್ದಾರೆ. ಪರಿಸರದಿಂದ ಕಾರ್ಮಿಕ ಕಾನೂನುವರೆಗೆ ಎಲ್ಲದರಲ್ಲಿಯೂ ಅವರು ಬಲಪಂಥೀಯ ಎಂಬುದು ಎಲ್ಲರಿಗೂ ಗೊತ್ತಿದೆ. ಅವರ ಕಾರ್ಮಿಕವಿರೋಧಿ ನಿಲುವು ಸಂಪ್ರದಾಯವಾದಿಗಳಿಗಿಂತಲೂ ತೀವ್ರವಾದುದು.
ಹಾಗಾದರೆ, ಬ್ರೆಟ್‍ ಕ್ಯಾವನಾಗ್‍ ಯಾರು? ಅವರು ಬಲಪಂಥೀಯ ಆ್ಯಪರಾಟ್‍ನ (ಸೋವಿಯತ್‍ ರಷ್ಯಾ ಮತ್ತು ಇತರ ಕಮ್ಯುನಿಸ್ಟ್ ಆಡಳಿತದ ದೇಶಗಳಲ್ಲಿ ಇದ್ದ ಕಠೋರವಾದಿ ಆಡಳಿತ ಯಂತ್ರ) ಸದಸ್ಯ ಮತ್ತು ಬಲಪಂಥೀಯ ಆ್ಯಪರಾಟ್‍ನ ಕಪಟ ಸದಸ್ಯನಂತೆ ಕಾಣಿಸುತ್ತಿದ್ದಾರೆ. ಅಂದರೆ, ಅವರು ಬಲಪಂಥೀಯ ಆ್ಯಪರಾಟ್‍ನ ಸದಸ್ಯ ಎಂಬುದು ಬಹುತೇಕ ಖಚಿತ. ಇದು ಅಮೆರಿಕದಲ್ಲಿ ಸಾಂವಿಧಾನಿಕ ಬಿಕ್ಕಟ್ಟಿಗೆ ಕಾರಣವಾಗುತ್ತದೆ.
ಡೊನಾಲ್ಡ್ ಟ್ರಂಪ್‍ ಅವರು ನ್ಯಾಯಾಂಗಕ್ಕೆ ಒಡ್ಡುತ್ತಿರುವ ಪ್ರತಿರೋಧ ಶೀಘ್ರವೇ ಅದರ ತುತ್ತತುದಿಗೆ ತಲುಪಲಿದೆ. ಈ ಪ್ರತಿರೋಧವನ್ನು ನ್ಯಾಯಾಂಗ ವ್ಯವಸ್ಥೆಯು ಹೇಗೆ ನಿರ್ವಹಿಸಲಿದೆ ಎಂಬುದು ಈಗಿನ ತಕ್ಷಣದ ಪ್ರಶ್ನೆ. ಕ್ಯಾವನಾಗ್‍ ಅವರು ಟ್ರಂಪ್‍ಗೆ ಸಂಪೂರ್ಣ ಬೆಂಬಲ ನೀಡದಿದ್ದರೆ ಅದರ ಅರ್ಥ ಅವರು ಪವಾಡಸದೃಶವಾಗಿ ಬದಲಾಗಿದ್ದಾರೆ ಎಂದು ಮಾತ್ರ.
ಇದಕ್ಕಿಂತ ಹೆಚ್ಚಾಗಿ ಇನ್ನೊಂದು ವಿಚಾರವೂ ಇದೆ. ಸಂಸತ್ತಿನಲ್ಲಿ ಮುಂದಿನ ದಿನಗಳಲ್ಲಿ ಡೆಮಾಕ್ರಟ್‌ ಪಕ್ಷವು ಬಹುಮತ ಪಡೆಯಬಹುದು. ಆ ಪಕ್ಷದವರೇ ಅಧ್ಯಕ್ಷರೂ ಆಗಬಹುದು. ಆಗ, ಅವರು ಎಡಪಂಥೀಯ ಒಲವಿನ ಕಾರ್ಯಸೂಚಿಯನ್ನು ಮುಂದಕ್ಕೆ ತರುತ್ತಾರಲ್ಲವೇ? ಆರೋಗ್ಯ ವಿಮೆ ಸೌಲಭ್ಯಗಳ ವಿಸ್ತರಣೆ ಮತ್ತು ಹೆಚ್ಚು ಆದಾಯದ ಜನರಿಗೆ ಹೆಚ್ಚು ತೆರಿಗೆಯಂತಹ ಕ್ರಮಗಳನ್ನು ಅವರು ಜಾರಿಗೆ ತರುತ್ತಾರೆ ಎಂಬುದು ನನ್ನ ಮಾತಿನ ಅರ್ಥ. ಇವು ತಾರ್ಕಿಕ ಕ್ರಮಗಳಲ್ಲ. ಆದರೆ, ಇವುಗಳಿಗೆ ವ್ಯಾಪಕ ಜನಬೆಂಬಲ ಇದೆ. 
ಚುನಾಯಿತ ಪ್ರತಿನಿಧಿಗಳು ಕೈಗೊಳ್ಳುವ ಪ್ರತಿ ನಿರ್ಧಾರವನ್ನೂ ಕ್ಯಾವನಾಗ್‌ ಅಂಥವರು ಇರುವ ನ್ಯಾಯಾಂಗ ವ್ಯವಸ್ಥೆಯು ವಜಾ ಮಾಡಬಹುದು ಎಂದು ಭಾವಿಸುವುದಕ್ಕೆ ಸಾಕಷ್ಟು ಕಾರಣಗಳಿವೆ. ನೀತಿಗಳಲ್ಲಿ ಎಷ್ಟು ಹುರುಳಿದೆ ಎಂಬುದು ಬೇರೆಯೇ ಚರ್ಚೆಯ ವಿಷಯ. ಆದರೆ ನಿರ್ಧಾರಗಳನ್ನು ರದ್ದುಪಡಿಸುವ ನ್ಯಾಯಾಂಗದ ಕ್ರಮ ಅದರ ನ್ಯಾಯಸಮ್ಮತತೆಯನ್ನೇ ನಾಶಪಡಿಸುತ್ತದೆ. ಯಾಕೆಂದರೆ, ಈ ಎರಡು ಹುದ್ದೆಗಳನ್ನು ಅಧಿಕಾರಬಲದಿಂದ ಅಪಹರಿಸಲಾಗಿತ್ತು ಮತ್ತು ಆ ಕಾರಣಕ್ಕಾಗಿಯೇ ನ್ಯಾಯಾಂಗವು ಪಕ್ಷಪಾತಿಯಾಗಿ ವರ್ತಿಸುತ್ತಿದೆ ಎಂಬುದು ಜನರಿಗೆ ಸ್ಪ‍ಷ್ಟವಾಗಿಬಿಡುತ್ತದೆ. ಏನೇ ಆದರೂ ಮುಂದೊಂದು ದಿನ ಹೀಗೆ ಆಗುವ ಸಾಧ್ಯತೆಯೇ ಹೆಚ್ಚು. 
ಸಂವಿಧಾನದ ಕಗ್ಗೊಲೆ ಮುಂದಿನ ವರ್ಷದ ಹೊತ್ತಿಗೆ ಆರಂಭವಾಗಿಬಿಡಬಹುದು. ಮಧ್ಯಂತರ ಚುನಾವಣೆಯಲ್ಲಿ ರಿಪಬ್ಲಿಕನ್‌ ಪಕ್ಷವು ಹೆಚ್ಚು ಸ್ಥಾನಗಳನ್ನು ಗಳಿಸಿದರೆ ಒಬಾಮಕೇರ್‌ (ಆರೋಗ್ಯ ವಿಮೆ ಸೌಲಭ್ಯ) ಯೋಜನೆಯನ್ನು ಅತ್ಯಂತ ತ್ವರಿತವಾಗಿ ಧ್ವಂಸ ಮಾಡಿಬಿಡುತ್ತಾರೆ. ಲಕ್ಷಾಂತರ ಜನರು ಆರೋಗ್ಯ ವಿಮೆ ಸೌಲಭ್ಯವನ್ನು ಕಳೆದುಕೊಳ್ಳುತ್ತಾರೆ. ಕ್ಯಾವನಾಗ್‌ ಅವರನ್ನು ನ್ಯಾಯಮೂರ್ತಿಯಾಗಿ ನೇಮಿಸಿದರೆ, ನ್ಯಾಯಾಂಗವು ಯಾವುದಾದರೂ ನೆಪ ಹುಡುಕಿ ಮಿತದರದಲ್ಲಿ ಆರೋಗ್ಯ ಸೇವೆ ಕಾಯ್ದೆಯು ಅಸಾಂವಿಧಾನಿಕ ಎಂದು ಹೇಳಬಹುದಲ್ಲವೇ? ಹಾಗಾಗಿ ಮಧ್ಯಂತರ ಚುನಾವಣೆಯಲ್ಲಿ ರಿಪಬ್ಲಿಕನ್‌ ಪಕ್ಷವು ಸಾಕಷ್ಟು ಸ್ಥಾನಗಳನ್ನು ಪಡೆಯದೇ ಇದ್ದರೂ ಆರೋಗ್ಯವಿಮೆ ಸೌಲಭ್ಯ ರದ್ದಾಗಬಹುದು. ಇಂತಹ ಸಾಧ್ಯತೆಯೇ ಬಹಳ ಹೆಚ್ಚು. 
ಹಾಗಾಗಿಯೇ, ರಿಪಬ್ಲಿಕನ್‌ ಸಂಸದರಲ್ಲಿ ನನ್ನದೊಂದು ಮನವಿ ಇದೆ. ಅಮೆರಿಕಕ್ಕೆ ಏನಾದರೂ ಭವಿಷ್ಯ ಇದ್ದರೆ, ಆ ಭವಿಷ್ಯದ ಬಗ್ಗೆ ನಿಮಗೆ ಕಾಳಜಿ ಇದ್ದರೆ ಕ್ಯಾವನಾಗ್‌ ನೇಮಕದ ಪರವಾಗಿ ಮತ ಹಾಕಲೇಬೇಡಿ. ಅವರ ಪರವಾಗಿ ಮತ ಹಾಕಿದರೆ ಪ್ರಜಾತಂತ್ರದಲ್ಲಿ ಉಳಿದಿರುವ ಕೊನೆಯ ಸಂಸ್ಥೆ ಕೂಡ ತನ್ನ ನ್ಯಾಯಸಮ್ಮತಿಯನ್ನು ಕಳೆದುಕೊಳ್ಳುತ್ತದೆ. 
ದಿ ನ್ಯೂಯಾರ್ಕ್‌ ಟೈಮ್ಸ್‌


Friends, If you like this post,kindly comment below the post and do share your Response, (Thanks for Reading....)
logoblog

Thanks for reading ಸಂವಿಧಾನದ ಕಗ್ಗೊಲೆಗೆ ಒಂದು ನೇಮಕ ಸಾಕು

Previous
« Prev Post

No comments:

Post a Comment

Disclaimer

Disclaimer/ Notice: This all documents and PDF notes & Magazines (Only Education and Knowledge Propose) we are downloaded from the (whatsApp & Telegram Groups) internet. We are not responsible for any type of copyright issues. If we have any complaint regarding this content. We are trying to remove this content shorty. Contact: pyadavgk@gmail.com

Popular Posts

Followers

Contact Form

Name

Email *

Message *