momo-challenge.jpg
ಮೊಮೊ
naveenkumar.G
ಬ್ಲ್ಯೂ ವೇಲ್
ನವದೆಹಲಿ (ಪಿಟಿಐ): ‘ಬ್ಲೂ ವೇಲ್ ಚಾಲೆಂಜ್’ ಮತ್ತು ‘ಮೊಮೊ ಚಾಲೆಂಜ್’ನಂತಹ ಅಪಾಯಕಾರಿ ಆಟಗಳಿಂದ ಮಕ್ಕಳನ್ನು ಪಾರು ಮಾಡಲು ಕೇಂದ್ರ ಸರ್ಕಾರ ತನ್ನದೇ ಆದ ‘ಸೈಬರ್ ಟ್ರಿವಿಯಾ’ ಎಂಬ ಹೊಸ ಗೇಮ್ ಆ್ಯಪ್ ಅಭಿವೃದ್ಧಿಪಡಿಸಿದೆ.
ಈ ಆ್ಯಪ್ನಲ್ಲಿ ಬಹು ಆಯ್ಕೆಯ ಪ್ರಶ್ನೆಗಳಿದ್ದು, ಮಕ್ಕಳು ತಾವು ನೀಡುವ ಉತ್ತರ ಆಧರಿಸಿ ಬಹುಮಾನವಾಗಿ ಅಂಕಗಳನ್ನು ಗಿಟ್ಟಿಸಲಿದ್ದಾರೆ. ಪ್ರಾಣಹಂತಕ ಆನ್ಲೈನ್ ಆಟಗಳಿಗೆ ಪ್ರತಿತಂತ್ರವಾಗಿ ರೂಪಿಸಿರುವ ಈ ಹೊಸ ಆ್ಯಪ್, ಮಕ್ಕಳು ಸೈಬರ್ ಅಪರಾಧಗಳಿಗೆ ಬಲಿಯಾಗುವುದನ್ನು ನಿಯಂತ್ರಿಸಲಿದೆ ಎಂದು ಮಕ್ಕಳ ಹಕ್ಕುಗಳ ರಕ್ಷಣೆಯ ರಾಷ್ಟ್ರೀಯ ಆಯೋಗ (ಎನ್ಸಿಪಿಸಿಆರ್) ಹೇಳಿದೆ.
‘ಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರಚೋದಿಸುವ ಅಪಾಯಕಾರಿ ಆನ್ಲೈನ್ ಆಟಗಳಿಗೆ ವಿಶ್ವದಾದ್ಯಂತ ಹಲವಾರು ಮಕ್ಕಳು ಬಲಿಯಾಗಿದ್ದಾರೆ. ಇದಕ್ಕೆ ಪರಿಹಾರೋಪಾಯವಾದ ‘ನಡವಳಿಕೆ ಪರಿವರ್ತನಾ ತಾಂತ್ರಿಕತೆ’ ಹೊಂದಿರುವ ‘ಸೈಬರ್ ಟ್ರಿವಿಯಾ’ ಸದ್ಯದಲ್ಲೇ ಆ್ಯಪ್ ಸ್ಟೋರ್ಗಳಲ್ಲಿ ಲಭ್ಯವಾಗಲಿದೆ ಎಂದು ಆಯೋಗದ ಸದಸ್ಯ ಯಶವಂತ್ ಜೈನ್ ತಿಳಿಸಿದ್ದಾರೆ.
ಅಂತರ್ಜಾಲದಲ್ಲಿ ಸಂಪರ್ಕಕ್ಕೆ ಬರುವ ಅಪರಿಚಿತರೊಂದಿಗೆ ಭಾವಚಿತ್ರ ಅಥವಾ ಮಾಹಿತಿ ಹಂಚಿಕೊಳ್ಳದಂತೆ ಮಕ್ಕಳಿಗೆ ತಿಳಿವಳಿಕೆ ಮೂಡಿಸುವ ಪ್ರಯತ್ನ ಇದು
ಯಶವಂತ್ ಜೈನ್, ಮಕ್ಕಳ ಹಕ್ಕುಗಳ ರಕ್ಷಣೆಯ ರಾಷ್ಟ್ರೀಯ ಆಯೋಗದ ಸದಸ್ಯ
Friends, If you like this post,kindly comment below the post and do share your Response, (Thanks for Reading....)
No comments:
Post a Comment