ರಾಮನಗರ: ಭಾರತೀಯ ಅಂಚೆ ಇಲಾಖೆಯು ಕಣ್ವಾ ಗ್ರಾಮವನ್ನು ಸಂಪೂರ್ಣ ಅಂಚೆ ಗ್ರಾಮವನ್ನಾಗಿ ಘೋಷಿಸಿ ಶನಿವಾರ ನಾಮಫಲಕ ಅನಾವರಣ ಮಾಡಿತು.
ಗ್ರಾಮವನ್ನು ‘ಸಂಪೂರ್ಣ ಸುಕನ್ಯ ಸಮೃದ್ಧಿ ಗ್ರಾಮ’, ‘ಸಂಪೂರ್ಣ ಗ್ರಾಮೀಣ ಅಂಚೆ ವಿಮೆ ಗ್ರಾಮ’, ‘ಸಂಪೂರ್ಣ ಉಳಿತಾಯ ಖಾತೆ ಗ್ರಾಮ’ ಹಾಗೂ ‘ಸಂಪೂರ್ಣ ಪ್ರಧಾನ ಮಂತ್ರಿ ಸುರಕ್ಷ ಬಿಮಾ ಯೋಜನೆ ಗ್ರಾಮ’ ಎಂದು ಘೋಷಸಲಾಯಿತು.
ಗ್ರಾಮದಲ್ಲಿ 121 ಮನೆಗಳಿದ್ದು, ಪ್ರತಿಯೊಂದು ಮನೆಯಲ್ಲೂ ಕನಿಷ್ಠ ಒಂದು ಉಳಿತಾಯ ಖಾತೆ ಇದೆ.
ಗ್ರಾಮದಲ್ಲಿ 121 ಮನೆಗಳಿದ್ದು, ಪ್ರತಿಯೊಂದು ಮನೆಯಲ್ಲೂ ಕನಿಷ್ಠ ಒಂದು ಉಳಿತಾಯ ಖಾತೆ ಇದೆ.
- ಉಳಿತಾಯ ಖಾತೆ ಹೊಂದಿರುವವರಿಗೆಲ್ಲಾ ಪ್ರಧಾನ ಮಂತ್ರಿ ಸುರಕ್ಷ ಭೀಮಾ ಯೋಜನೆ ಮಾಡಿಸಲಾಗಿದೆ.
- 95 ಮಂದಿಗೆ ಗ್ರಾಮೀಣ ಅಂಚೆ ಜೀವ ವಿಮೆ ಮಾಡಲಾಗಿದೆ ಎಂದು ಅಂಚೆ ಸಹಾಯಕ ಅಧೀಕ್ಷಕ ಎಂ.ಆರ್. ಹರ್ಷ ತಿಳಿಸಿದರು.
- ಗ್ರಾಮದಲ್ಲಿ 33 ಹೆಣ್ಣು ಮಕ್ಕಳು 10 ವರ್ಷದ ಒಳಗಿನವರಾಗಿದ್ದು ಎಲ್ಲ ಹೆಣ್ಣು ಮಕ್ಕಳಿಗೂ ಸುಕನ್ಯ ಸಮೃದ್ಧಿ ಖಾತೆ ತೆರೆಯಲಾಗಿದೆ. ಜನರಿಗೆ ಅಂಚೆ ಇಲಾಖೆಯ ಸೇವೆಗಳ ಬಗ್ಗೆ ತಿಳಿಸಿಕೊಡಲಾಗಿದೆ ಎಂದು ತಿಳಿಸಿದರು.
ಚನ್ನಪಟ್ಟಣ ಪ್ರಧಾನ ಅಂಚೆ ಕಚೇರಿಯ ಪೋಸ್ಟ್ ಮಾಸ್ಟರ್ ಸೌಭಾಗ್ಯಮ್ಮ, ಅಂಚೆ ಪರೀಕ್ಷಕರಾದ ಕೆ.ಎನ್. ಪ್ರೇಮ್‌ಕುಮಾರ್, ಕಣ್ವ ಗ್ರಾಮೀಣ ಅಂಚೆ ಪೋಸ್ಟ್ ಮಾಸ್ಟರ್ ಪ್ರಸನ್ನಕುಮಾರ್, ಅಂಚೆ ಸಿಬ್ಬಂದಿಯಾದ ಮಂಜು, ಸಿ.ಎಸ್. ಅಂಕುಗೌಡ ಇದ್ದರು.
Friends, If you like this post,kindly comment below the post and do share your Response, (Thanks for Reading....)
No comments:
Post a Comment