₹9,100 ಕೋಟಿ ರಕ್ಷಣಾ ಸಾಮಗ್ರಿ ಖರೀದಿಗೆ ಒಪ್ಪಿಗೆ
Friends,
If you like this post,kindly comment below the post and do share your
Response,
(Thanks for Reading....)
ಪ್ರಜಾವಾಣಿ ವಾರ್ತೆ
ನವದೆಹಲಿ: ಆಕಾಶ್ ವಾಯುಪ್ರದೇಶ ರಕ್ಷಣಾ ಕ್ಷಿಪಣಿಯ ಎರಡು ತುಕಡಿಗಳು ಸೇರಿ ಒಟ್ಟು ₹9,100 ಕೋಟಿ ಮೌಲ್ಯದ ರಕ್ಷಣಾ ಸಾಮಗ್ರಿಗಳ ಖರೀದಿಗೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದ ರಕ್ಷಣಾ ಖರೀದಿ ಮಂಡಳಿ (ಡಿಎಸಿ) ಮಂಗಳವಾರ ಒಪ್ಪಿಗೆ ಕೊಟ್ಟಿದೆ.
ದೇಶಿ ನಿರ್ಮಿತ ಆಕಾಶ್ ಕ್ಷಿಪಣಿ ವ್ಯವಸ್ಥೆಯು ಈಗಾಗಲೇ ಸೇನೆಗೆ ಸೇರ್ಪಡೆಯಾಗಿರುವ ಶಸ್ತ್ರಾಸ್ತ್ರ. ಹೊಸದಾಗಿ ಖರೀದಿಸಲು ಉದ್ದೇಶಿಸಿರುವ ಆವೃತ್ತಿ
ಯಲ್ಲಿ ಹಲವು ಸುಧಾರಣೆಗಳನ್ನು ಮಾಡ
ಲಾಗಿದೆ. ಪರಿಷ್ಕೃತ ಕ್ಷಿಪಣಿ ವ್ಯವಸ್ಥೆಯಲ್ಲಿ ಸೀಕರ್ ತಂತ್ರಜ್ಞಾನ (ಗುರಿಯ ನಿಖರತೆಯ ಮೇಲೆ ನಿಗಾ ಇರಿಸುವ ವ್ಯವಸ್ಥೆ), 360 ಡಿಗ್ರಿ ವ್ಯಾಪ್ತಿ ಮುಂತಾದ ಸೌಲಭ್ಯಗಳು ಇವೆ.
ಯಲ್ಲಿ ಹಲವು ಸುಧಾರಣೆಗಳನ್ನು ಮಾಡ
ಲಾಗಿದೆ. ಪರಿಷ್ಕೃತ ಕ್ಷಿಪಣಿ ವ್ಯವಸ್ಥೆಯಲ್ಲಿ ಸೀಕರ್ ತಂತ್ರಜ್ಞಾನ (ಗುರಿಯ ನಿಖರತೆಯ ಮೇಲೆ ನಿಗಾ ಇರಿಸುವ ವ್ಯವಸ್ಥೆ), 360 ಡಿಗ್ರಿ ವ್ಯಾಪ್ತಿ ಮುಂತಾದ ಸೌಲಭ್ಯಗಳು ಇವೆ.
ಸುಧಾರಿತ ಆಕಾಶ್ ಕ್ಷಿಪಣಿ ವ್ಯವಸ್ಥೆ ಭೂಸೇನೆಗೆ ಮುಖ್ಯವಾಗಿ ಬೇಕಾಗಿರುವ ಸಾಧನವಾಗಿದೆ. ಇದು ದೇಶದ ಮಹತ್ವದ ಕೇಂದ್ರಗಳಿಗೆ ರಕ್ಷಣೆ ಒದಗಿಸಲಿದೆ ಎಂದು ರಕ್ಷಣಾ ಸಚಿವಾಲಯ ಹೇಳಿದೆ.
ಟಿ–90 ಟ್ಯಾಂಕುಗಳಲ್ಲಿ ಬಳಸುವುದಕ್ಕಾಗಿ ನೀರಿನಡಿಯಲ್ಲಿ ಉಸಿರಾ
ಡಲು ನೆರವಾಗುವ ಸಾಧನಗಳ ವಿನ್ಯಾಸ ಮತ್ತು ಅಭಿವೃದ್ಧಿಗೆ ಒಪ್ಪಿಗೆ ಕೊಡಲಾ
ಗಿದೆ. ಡಿಫೆನ್ಸ್ ಬಯೊಎಂಜಿನಿಯರಿಂಗ್ ಅಂಡ್ ಎಲೆಕ್ಟ್ರೊಮೆಡಿಕಲ್ ಲ್ಯಾಬೊರೇಟರಿ ಈ ಸಾಧನ ಅಭಿವೃದ್ಧಿಪಡಿಸುತ್ತಿದೆ. ಜಲಾಂತರ್ಗಾಮಿಯಂತಹ ನೌಕೆಗಳಲ್ಲಿ ಕೆಲಸ ಮಾಡುವ ಸಿಬ್ಬಂದಿ ನೀರಿನಿಂದ ತಪ್ಪಿಸಿಕೊಳ್ಳುವ ತುರ್ತು ಸಂದರ್ಭಗಳಲ್ಲಿ ಈ ಸಾಧನ
ಬಳಕೆಯಾಗುತ್ತದೆ.

l ಭಾರತ್ ಡೈನಮಿಕ್ಸ್ ಲಿ.ನಿಂದ ಆಕಾಶ್ ಕ್ಷಿಪಣಿ ವ್ಯವಸ್ಥೆ ಖರೀದಿ
l ಈಗ ಖರೀದಿಸಲಾಗುವ ಎರಡೂ ತುಕಡಿಗಳು ಭೂಸೇನೆಗೆ ಸೇರ್ಪಡೆ
l ಪ್ರತಿ ತುಕಡಿಯಲ್ಲಿ ಆರು ಕ್ಷಿಪಣಿ ಉಡಾವಕಗಳಿರುತ್ತವೆ, ಪ್ರತಿ ಉಡಾವಕದಲ್ಲಿ ಮೂರು ಕ್ಷಿಪಣಿಗಳು
l ಕನಿಷ್ಠ 30 ಮೀಟರ್ನಿಂದ 20 ಕಿ.ಮೀ. ವರೆಗೆ ದಾಳಿ ಸಾಮರ್ಥ್ಯ
l ಏಕಕಾಲಕ್ಕೆ ಹಲವು ಗುರಿಗಳ ಮೇಲೆ ದಾಳಿ ನಡೆಸುವ ಶಕ್ತಿ
No comments:
Post a Comment