ನೂತನ ನಿಯಮ ಜಾರಿಗೆ ರೈಲ್ವೆ ರಕ್ಷಣಾ ಪಡೆ ಚಿಂತನೆ
ನವದೆಹಲಿ (ಪಿಟಿಐ): ರೈಲಿನಲ್ಲಿ ಮಹಿಳೆಯರನ್ನು ಶೋಷಿಸಿದರೆ ಅಂತಹವರಿಗೆ 3 ವರ್ಷ ಜೈಲು ಶಿಕ್ಷೆ ವಿಧಿಸುವ ಸಾಧ್ಯತೆ ಇದೆ. ರೈಲ್ವೆ ರಕ್ಷಣಾ ಪಡೆ (ಆರ್ಪಿಎಫ್) ಇಂತಹದ್ದೊಂದು ನೂತನ ನಿಯಮ ಜಾರಿಗೆ ತರಲು ಮುಂದಾಗಿದೆ.
ಕಾಯ್ದೆ ತಿದ್ದುಪಡಿ ಮಾಡುವ ಈ ಪ್ರಸ್ತಾವಿತ ನಿಯಮ ಅಂಗೀಕಾರವಾದಲ್ಲಿ, ಶಿಕ್ಷೆಯ ಪ್ರಮಾಣವು ಭಾರತೀಯ ದಂಡಸಂಹಿತೆ (ಐಪಿಸಿ) ಅಡಿಯಲ್ಲಿ ಇರುವುದಕ್ಕಿಂತಲೂ ಕಠಿಣ ರೂಪದ್ದಾಗಿರುತ್ತದೆ. ಜತೆಗೆ ₹2 ಲಕ್ಷಕ್ಕೂ ಹೆಚ್ಚು ಮೊತ್ತದ ದಂಡ ವಿಧಿಸುವ ಪ್ರಸ್ತಾವವೂ ಇದೆ. ಮಹಿಳೆಯರ ಗೌರವಕ್ಕೆ ಧಕ್ಕೆ ತರುವಂತಹ ಕೃತ್ಯ ಎಸಗಿದರೆ ಐಪಿಸಿ ಅಡಿಯಲ್ಲಿ 1 ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತಿದೆ.
ರೈಲುಗಳಲ್ಲಿ ಮಹಿಳೆಯರ ವಿರುದ್ಧ ಅಪರಾಧಗಳು ಹೆಚ್ಚುತ್ತಿರುವುದರಿಂದ, ಆರ್ಪಿಎಫ್ ಈ ಪ್ರಸ್ತಾವ ಇರಿಸಿದೆ. ಇದರಿಂದಾಗಿ, ಸರ್ಕಾರಿ ರೈಲ್ವೆ ಪೊಲೀಸರ (ಜಿಆರ್ಪಿ) ಸಹಾಯವಿಲ್ಲದೆ ಆರೋಪಿಗಳನ್ನು ಬಂಧಿಸಲು ಸಾಧ್ಯವಾಗುತ್ತದೆ. ಅಲ್ಲದೆ, ಮಹಿಳೆಯರ ಬೋಗಿಯಲ್ಲಿ ಪ್ರಯಾಣಿಸುವ ಪುರುಷರಿಗೆ ವಿಧಿಸುತ್ತಿದ್ದ ದಂಡವನ್ನು ₹500ರಿಂದ ₹1,000ಕ್ಕೆ ಹೆಚ್ಚಿಸುವುದಕ್ಕೂ ಶಿಫಾರಸು ಮಾಡಲಾಗಿದೆ.
‘2014–2016ರಲ್ಲಿ ರೈಲುಗಳಲ್ಲಿ ಮಹಿಳೆಯರ ವಿರುದ್ಧ 1,607 ಅಪರಾಧ ಪ್ರಕರಣಗಳು ದಾಖಲಾಗಿವೆ’ ಎಂದು ರಾಜ್ಯಸಭೆಗೆ ನೀಡಿದ್ದ ಲಿಖಿತ ಉತ್ತರದಲ್ಲಿ ರೈಲ್ವೆ ಸಚಿವಾಲಯ ಮಾಹಿತಿ ನೀಡಿತ್ತು.
Friends, If you like this post,kindly comment below the post and do share your Response, (Thanks for Reading....)
No comments:
Post a Comment