2020-21 ರ ವೇಳೆಗೆ ದೇಶದ ಸಂಪೂರ್ಣ ರೈಲ್ವೇ ಜಾಲವನ್ನು ವಿದ್ಯುದೀಕರಣ ಮಾಡುವ ಉದ್ದೇಶವನ್ನು ರೈಲ್ವೇ ಇಲಾಖೆ ಹೊಂದಿದೆ.
ಈ ಮೂಲಕ ಡೀಸೆಲ್ ಬೆಲೆ ಇಳಿಸಲು ಹಾಗು ರೈಲುಗಳ ವೇಗವನ್ನು ಹೆಚ್ಚಿಸುವ ಉದ್ದೇಶವನ್ನು ಈ ಮೆಗಾ ವಿದ್ಯುದೀಕರಣ ಯೋಜನೆ ಹೊಂದಿದೆ. ವಿದ್ಯುದೀಕರಣ ಯೋಜನೆ ಪೂರ್ಣಗೊಂಡ ಕೂಡಲೇ ರೈಲುಗಳ ವೇಗದಲ್ಲಿ 10-15%ನಷ್ಟು ವೃದ್ಧಿಯಾಗಲಿದೆ. ಅಲ್ಲದೇ ಸರಕು ಸಾಗಾಟದ ರೈಲುಗಳನ್ನು ನಿಗದಿತ ಕಾರಿಡರ್‌ಗಳಲ್ಲಿ ಓಡಿಸಲು ಚಿಂತನೆ ನಡೆದಿದೆ.
ಒಮ್ಮೆ ಈ ಕೆಲಸ ಪೂರ್ಣವಾದಲ್ಲಿ, ವಾಷಿರ್ಕ ಇಂಧನ ವೆಚ್ಚದಲ್ಲಿ 16,0000 ಕೋಟಿ ರುಗಳ ಉಳಿತಾಯವಾಗಲಿದೆ. ಸದ್ಯದ ಮಟ್ಟಿಗೆ ಭಾರತೀಯ ರೈಲ್ವೇಗೆ ವಾರ್ಷಿಕ 17,000 ಕೋಟಿ ರುಗಳು ತಗುಲುತ್ತಿದೆ. ಇದೇ ವೇಳೆ ಇಲಾಖೆಯ ವಿದ್ಯುತ್ ಬಿಲ್ ಸದ್ಯದ 9000 ಕೋಟಿ ರುಗಳಿಂದ 13000 ಕೋಟಿರುಗೆ ಏರಿಕೆಯಾಗುವ ಸಾಧ್ಯತೆ ಇದೆ.
ಈ ನಿಟ್ಟಿನಲ್ಲಿ ವಿದ್ಯುತ್‌ಅನ್ನು ಖರೀದಿ ಮಾಡುವ ವಿಚಾರವಾಗಿ ಸಂಬಂಧಪಟ್ಟ ರಾಜ್ಯ ಸರಕಾರಗಳ ಜತೆಯಲ್ಲಿ ರೈಲ್ವೇ ಇಲಾಖೆ ಸಂಪರ್ಕದಲ್ಲಿದೆ. ಮಹಾರಾಷ್ಟ್ರ, ಗುಜರಾತ್, ಮಧ್ಯ ಪ್ರದೇಶ, ಜಾರ್ಖಂಡ್, ರಾಜಸ್ಥಾನ, ಹರಿಯಾಣ ಹಾಗು ಕರ್ನಾಟಕ ರಾಜ್ಯಗಳಲ್ಲಿ ಮುಕ್ತ ಮೂಲಗಳಿಂದ ರೈಲ್ವೇ ಇಲಾಖೆ ವಿದ್ಯುತ್ ಖರೀದಿ ಮಾಡುತ್ತಿದೆ.
ತನ್ನಲ್ಲಿರುವ ಎಲ್ಲ 5,500 ಲೋಕೋಮೋಟಿವ್‌ಗಳನ್ನು ಡೀಸೆಲ್‌ನಿಂದ ವಿದ್ಯುತ್ ಚಾಲಿತವನ್ನಾಗಿ ಮಾಡಲು ರೈಲ್ವೇ ಇಲಾಖೆ ಮುಂದಾಗಿದೆ. 1000 ಡೀಸೆಲ್ ಇಂಜಿನ್‌ಗಳನ್ನು ತುರ್ತು ಪರಿಸ್ಥಿತಿ ನಿರ್ವಹಣೆಗೆ ಬಳಸಲಾಗುವುದು.
ಪ್ರತಿ ಡೀಸೆಲ್ ಇಂಜಿನ್‌ನ ಆಯುಷ್ಯ ವೃದ್ಧಿ ಹಾಗು ವಿದ್ಯುತ್ ಚಾಲಿತವನ್ನಾಗಿ ಮಾಡಲು ಐದು ಕೊಟಿ ರುಗಳು ಖರ್ಚಾಗವುದು. ಈ ಎಲ್ಲ ಪ್ರಕ್ರಿಯೆಗಳನ್ನು ಮೇಕ್ ಇನ್ ಇಂಡಿಯಾ ಅಡಿಯಲ್ಲಿ ಮಾಡಲಾಗುತ್ತಿದ್ದು ಇದೊಂದು ಹೆಮ್ಮೆಯ ವಿಷಯವಾಗಿದೆ ಎಂದು ರೈಲ್ವೇ ಮಂಡಳಿಯ ಘನ್‌ಶ್ಯಾಮ್ ಸಿಂಗ್ ಹೇಳಿದ್ದಾರೆ.
ಅದಾಗಲೇ ಭಾರತೀಯ ರೈಲ್ವೇಯ ವಾರಣಾಸಿ ಸೌಲಭ್ಯದಲ್ಲಿ ಎರಡು ಇಂಜಿನ್‌ಗಳ ಪರಿವರ್ತನಾ ಕಾರ್ಯ ಮಾಡಲಾಗಿದ್ದು, ಇನ್ನೆರಡರ ಕೆಲಸ ಪ್ರಗತಿಯಲ್ಲಿದೆ.
Friends, If you like this post,kindly comment below the post and do share your
Response,
(Thanks for Reading....)
No comments:
Post a Comment