ನವದೆಹಲಿ(ಪಿಟಿಐ): ವಿಶ್ವದ ಮೊದಲನೇ ಮಹಾಯುದ್ಧ ಗತಿಸಿ 10 ದಶಕಗಳುರುಳಿವೆ. ಯುದ್ಧದಲ್ಲಿ 74,187 ಭಾರತೀಯ ಸೈನಿಕರು ಪ್ರಾಣ ತೆತ್ತಿದ್ದು, ಅವರ ತ್ಯಾಗ, ಬಲಿದಾನದ ಅಂಗವಾಗಿ ಭಾರತೀಯ ಸೇನೆ ಪ್ರಸಕ್ತ ವಾರವನ್ನು ಸಂಸ್ಮರಣೆ ವಾರವನ್ನಾಗಿ ಆಚರಿಸುತ್ತಿದೆ.
1914-1918ರಲ್ಲಿ ನಡೆದ ಮೊದಲನೇ ಮಹಾಯುದ್ಧದ ಸ್ಮರಣಾರ್ಥ ಮಾರ್ಚ್ 10ರಿಂದ 14ರವರೆಗಿನ ಒಂದು ವಾರವನ್ನು ಸೇನೆ ಸಂಸ್ಮರಣಾ ವಾರವನ್ನಾಗಿ ಆಚರಿಸುತ್ತದೆ. ಯುದ್ಧದಲ್ಲಿ ಭಾರತದ 15 ಲಕ್ಷ ಸೈನಿಕರು ಪಾಲ್ಗೊಂಡಿದ್ದರು.
ಮಹಾಯುದ್ಧದ ಸ್ಮರಣಾರ್ಥ ದೆಹಲಿಯ ಇಂಡಿಯಾ ಗೇಟ್ ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮಲ್ಲಿ ಸೋಮವಾರ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ‘ಅಮರ ಜವಾನ್ ಜ್ಯೋತಿ’ ಸ್ಮಾರಕಕ್ಕೆ ಗೌರವ ನಮನ ಸಲ್ಲಿಸಿದರು.
No comments:
Post a Comment