ಇಂದು ನಮ್ಮ ದೇಶವು ಹಣ್ಣು ಮತ್ತು ತರಕಾರಿಗಳ ಉತ್ಪಾದನೆಯಲ್ಲಿ ಯೋಗ್ಯವಾದ ಮಟ್ಟ ತಲುಪಿದ್ದಲ್ಲದೇ, ಈ ಕ್ಷೇತ್ರದಲ್ಲಿ ದೊಡ್ಡ ಸಾಧಿಸಿದ್ದೇವೆ. ಜಾಗತಿಕವಾಗಿ ವಿಶ್ವದ ಎರಡನೇ ಅತಿದೊಡ್ಡ ಹಣ್ಣು ಹಾಗೂ ತರಕಾರಿ ಉತ್ಪಾದಕ ರಾಷ್ಟ್ರವಾಗಿರುವುದು ನಮ್ಮ ಹೆಮ್ಮೆ. ಸದ್ಯದ ವಸ್ತುಸ್ಥಿತಿಯೇನೆಂದರೆ, ಸುಮಾರು 90.2 ದಶಲಕ್ಷ ಟನ್‌ಗಳಷ್ಟು ಹಣ್ಣು ಮತ್ತು 169.1 ದಶಲಕ್ಷ ಟನ್‌ಗಳಷ್ಟು ತರಕಾರಿಗಳನ್ನು ಪ್ರತಿವರ್ಷ ಬೆಳೆಯುತ್ತಿದ್ದೇವೆ.
ಹಸಿರುಕ್ರಾಂತಿ ಹಾಗೂ ಇನ್ನಿತರ ತಂತ್ರಜ್ಞಾನಗಳ ಉಪಯೋಗದಿಂದ ಕ್ಷೇತ್ರವಾರು ಉತ್ಪಾದನೆಯಲ್ಲಿ ಪ್ರಗತಿ ಕಾಣುತ್ತಿದ್ದೇವೆ. ಒಂದು ಕಾಲದಲ್ಲಿ ಹಸಿವುನಿಂದ ಬಳಲುತಿದ್ದ ಭಾರತ, ಇಂದು ಸ್ವಾವಲಂಬಿಯಾಗುವುದರಲ್ಲಿದೆ. ರಫ್ತಿನಿಂದ ಅಪಾರ ಪ್ರಮಾಣದ ಆದಾಯವನ್ನು ಗಳಿಸುತ್ತಿದೆಯೆಂದು ನಾವು ತೃಪ್ತಿಪಟ್ಟರೆ ಸಾಧಿಸಿದ್ದು ಬೆಟ್ಟದಷ್ಟಿದ್ದರೆ, ಸಾಧಿಸಬೇಕಾದದ್ದು ಈ ಜಗತ್ತಿನಲ್ಲಿ ಹಿಮಾಲಯದಷ್ಟಿದೆ ಎಂದು ನಮಗೆ ತಿಳಿದುಬರುವ ಗಮನಾರ್ಹ ಸಂಗತಿಯಾಗಿದೆ. ದೇಶಕ್ಕೆ ಬೇಕಾಗುವಷ್ಟು ಆಹಾರ ಉತ್ಪಾದನೆ ಸಾಧಿಸಿ ದಶಕಗಳೇ ಕಳೆದಿವೆ. ಸದ್ಯದ ಪರಿಸ್ಥಿತಿಯಲ್ಲಿ ಬೇಕಾಗಿರುವುದು ಅಥವಾ ಗಮನಹರಿಸಬೇಕಿರುವುದು ಉತ್ಪಾದನೆಯ ಕಡೆಗೆ, ಆಹಾರ ಸಂಸ್ಕರಣೆಯ ಕಡೆಗೆ.
ಏನಿದು ಸಂಸ್ಕರಣೆ? ಏಕೆ ಬೇಕು?
ಬಹಳಷ್ಟು ಭಾರತೀಯರು ಕೇಳಿರದ, ಈಗ ಪ್ರಚಲಿತದಲ್ಲಿರುವ ಶಬ್ದವೆಂದರೆ ಅದು ‘ಸಂಸ್ಕರಣೆ’ ಇದು ತನ್ನದೇ ಆದ ಮಹತ್ವವನ್ನು ಗಳಿಸಿಕೊಂಡಿದೆ. ವಿಶ್ವದಲ್ಲಿ ಆರ್ಥಿಕವಾಗಿ ಬಲಿಷ್ಠ ರಾಷ್ಟ್ರವಾಗಿ ವಿಶ್ವದ ಯುವಶಕ್ತಿಯ ಖಜಾನೆಯಾಗಿರುವ ಭಾರತಕ್ಕೆ ಅತ್ಯವಶ್ಯಕವಾಗಿದೆ.
ಬಹಳಷ್ಟು ಭಾರತೀಯರು ಕೇಳಿರದ, ಈಗ ಪ್ರಚಲಿತದಲ್ಲಿರುವ ಶಬ್ದವೆಂದರೆ ಅದು ‘ಸಂಸ್ಕರಣೆ’ ಇದು ತನ್ನದೇ ಆದ ಮಹತ್ವವನ್ನು ಗಳಿಸಿಕೊಂಡಿದೆ. ವಿಶ್ವದಲ್ಲಿ ಆರ್ಥಿಕವಾಗಿ ಬಲಿಷ್ಠ ರಾಷ್ಟ್ರವಾಗಿ ವಿಶ್ವದ ಯುವಶಕ್ತಿಯ ಖಜಾನೆಯಾಗಿರುವ ಭಾರತಕ್ಕೆ ಅತ್ಯವಶ್ಯಕವಾಗಿದೆ.
ಏಕೆಂದರೆ ಕೇವಲ ಶೇ.2ಕ್ಕಿಂತ ಕಡಿಮೆ ಪ್ರಮಾಣದಲ್ಲಿ ಹಣ್ಣು ಹಾಗೂ ತರಕಾರಿಗಳನ್ನು ಸಂಸ್ಕರಿಸ ಲಾಗುತ್ತಿದ್ದು, ಶೇ.30-40ರಷ್ಟು ಉತ್ಪನ್ನಗಳು ಮಾರ್ಗ ಮಧ್ಯೆಯೇ ಕೆಟ್ಟು ಹೋಗುತ್ತಿದ್ದು, ಇತ್ತ ರೈತರ ಕಣ್ಣೀರನ್ನು ಒರೆಸದೇ, ಆ ಕಡೆ ಹಸಿದವರ ಬಾಯಿಗೂ ಸೇರದೇ ಚರಂಡಿಯ ಪಾಲಾಗುತ್ತಿರುವುದು ವಿಪರ್ಯಾಸದ ಸಂಗತಿ. ಅದೇ ಬೇರೆ ದೇಶಗಳಾದ ಮಲೇಷ್ಯಾ, ಶೇ.80ರಷ್ಟು, ಫಿಲಿಪೈನ್‌ಸ್ ಶೇ.78ರಷ್ಟು, ಹಾಗೂ ಚೀನಾ ಶೇ. 45ರಷ್ಟು ಸಂಸ್ಕರಣೆ ಮಾಡುವುದಲ್ಲದೇ, ಅವುಗಳನ್ನುಪ್ರತಿನಿತ್ಯ ಉಪಯೋಗಕ್ಕೆ ಬಳಸುತ್ತಿದೆ. ಉತ್ಪನ್ನಗಳ ರಫ್ತಿನಿಂದ ಬಹಳಷ್ಟು ಆದಾಯವನ್ನು ಗಳಿಸುತ್ತಿವೆ.
ಬೇರೆ ದೇಶಗಳಿಗೆ ಹೋಲಿಸಿ ಅಳತೆ ಮಾಡುವುದು ಸರಿಯಾದುದ್ದೇನಲ್ಲ. ಏಕೆಂದರೆ ಒಂದು ದೇಶವೆಂದ ಬಳಿಕ ಅದಕ್ಕೆ ತನ್ನದೇ ಆದ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ವಿಚಾರಗಳನ್ನು ಹೊಂದಿರುತ್ತದೆ. ಆದರೂ ಬೇರೆ ದೇಶಗಳಿಂದ ಕಲಿಯುವಂತಹದ್ದು ಬೇಕಾದಷ್ಟಿದೆ. ಉದಾಹರಣೆಗೆ, ನಮ್ಮ ಕರ್ನಾಟಕ ರಾಜ್ಯದಷ್ಟಿರುವ ಇಸ್ರೇಲ್ ಒಂದು ಮಾದರಿ ದೇಶ. ಸುತ್ತಲೂ ಶತ್ರುಗಳನ್ನು ಕಟ್ಟಿಕೊಂಡರೂ, ತನ್ನ ಪರಿಶ್ರಮದಿಂದ ಕೃಷಿ ಕ್ಷೇತ್ರದಲ್ಲಿ ಅತೀವ ಪ್ರಗತಿ ಸಾಧಿಸಿ, ವಿಶ್ವಕ್ಕೆ ಹನಿ ನೀರಾವರಿ ಪರಿಚಯಿಸಿದ ಖ್ಯಾತಿ ಅವರದ್ದು.
ನಮ್ಮ ಭಾರತೀಯ ಕೃಷಿಕರು ಕಷ್ಟ ಸಹಿಷ್ಣುಗಳಾಗಿದ್ದು, ಅಪಾರ ಪರಿಶ್ರಮದಿಂದ ದುಡಿಯುತ್ತಾರೆ. ಶಕ್ತಿಯ ಜತೆಗೆ ಯುಕ್ತಿಯೂ ಬೇಕಲ್ಲವೇ? ಈ ಆಧುನಿಕ ಜಗತ್ತಿನಲ್ಲಿ ಬೆಳೆದ ಆಹಾರ ಪದಾರ್ಥಗಳನ್ನು ಸಂಸ್ಕರಣೆ ಮಾಡಿ, ಕೆಡದಂತೆ ಸಂರಕ್ಷಿಸುವ ಅಗಾಧ ಜವಾಬ್ದಾರಿ ವಿದ್ಯಾವಂತ ನಾಗರಿಕರಾದ ನಮ್ಮ-ನಿಮ್ಮೆಲ್ಲರ ಮೇಲಿದೆ. ಪ್ರಮುಖ ಹಣ್ಣಿನ ಬೆಳೆಗಳಾದ, ಮಾವು, ಅನಾನಸ, ದಾಳಿಂಬೆ, ನಿಂಬೆ ಜಾತಿಯ ಹಣ್ಣು, ದ್ರಾಕ್ಷಿ ಹಾಗೂ ಟೊಮ್ಯಾಟೋ ಇನ್ನು ಅನೇಕ ತರಕಾರಿಗಳ ಕೆಡದಂತೆ ಸಂರಕ್ಷಿಸಬೇಕಾದ ತಂತ್ರಜ್ಞಾನಗಳನ್ನು
ಇನ್ನು ಉತ್ಪಾದನಾ ಘಟಕಗಳ ಮೇಲೆ ಒಂದು ಮೆಲುಕು ಹಾಕುವುದಾದರೆ ಬಹುತೇಕ ಘಟಕಗಳು ಸೂಕ್ತವಾದ ಆಧುನಿಕ ಉಪಕರಣಗಳ ಕೊರತೆಯನ್ನು ಭಾರಿ ಪ್ರಮಾಣದಲ್ಲಿ ಎದುರಿಸುತ್ತಿದೆ. ಇದು ಸಂಸ್ಕರಣಾ ಘಟಕಗಳ ಸ್ಥಾಪನೆಗೆ ಅಡಚಣೆಯಾಗಿ, ತೊಂದರೆ ಕೊಡಬಲ್ಲ ಹಲವಾರು ನೀತಿ-ನಿಯಮಗಳಿವೆ. ಹೊಸ ಉದ್ಯಮದ ಅಭಿವೃದ್ಧಿಗೆ ನೀತಿ-ನಿಯಮಗಳು ಮಾರಕವಾಗಿವೆ. ರಾಜಕೀಯವೂ ತನ್ನ ಪ್ರಭಾವ ಬೀರುತ್ತಿದೆ. ನವ್ಯ ಉದ್ಯಮಿಗಳಿಗೆ ಪೂರಕವಾದ ವಾತಾವರಣ ಇಲ್ಲವೆಂದೇ ಹೇಳಬಹುದು. ಸಹಾಯಧನ, ಸಾಲ ಹಾಗೂ ಇನ್ನಿತರ ಸೌಲಭ್ಯಗಳ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲದೇ ಒಂದು ಸಮಸ್ಯೆಯೇ ಸರಿ. ಕಚ್ಚಾ ವಸ್ತುಗಳ ಲಭ್ಯತೆಯಲ್ಲಿನ ಏರುಪೇರು, ಬಂಡವಾಳದ ಕೊರತೆ, ನೂರಿತ ಕೆಲಸಗಾರರ ಅಭಾವ, ತಂತ್ರಜ್ಞಾನದ ಅಳವಡಿಕೆಯಲ್ಲಿ ಸರಿಯಾದ ಮಾಹಿತಿ ಇಲ್ಲದಿರುವುದು, ಹೇಗೋ ಎಲ್ಲ ಸಮಸ್ಯೆಗಳನ್ನು ಪರಿಹರಿಸಿಕೊಂಡು ಮಾರುಕಟ್ಟೆ ತಲುಪಿದರೆ, ಅಲ್ಲಿಯದೇ ಇನ್ನೊಂದು ಪೀಕಲಾಟ ಆರಂಭವಾಗುತ್ತದೆ. ಹೊಸ ಉತ್ಪನ್ನಗಳಿಗೆ ಕೇಳುವವರೇ ಇಲ್ಲದಂತಾಗಿರುತ್ತದೆ. ನಮ್ಮ ಭಾರತದ ಬಹುತೇಕ ಜನರು ಒಂದೇ ಕಂಪನಿಯ ಒಂದು ವಸ್ತುವನ್ನು ನೆಚ್ಚಿಕೊಂಡಿರುತ್ತಾರೆ. ನೂರು ರುಪಾಯಿ ಕಳೆದರೂ ಬೇಜರಾಗುವ ನಾವು, ಸಾಲ ಮಾಡಿ ಕಟ್ಟಿಬೆಳೆಸಿದ ಆಹಾರ ಘಟಕ ಅಭಿವೃದ್ಧಿ ಸಾಧಿಸಲಾಗದಿದ್ದರೆ ಯಾವ ಉದ್ಯಮಿ ತಾನೆ ಉದ್ಯಮ ಸ್ಥಾಪಿಸಲು ಮುಂದೆ ಬರುತ್ತಾನೆ? ನೀವೇ ಯೋಚಿಸಿ ನೋಡಿ.
ಹೊಸ ಕಂಪನಿಯ ಉತ್ಪನ್ನಗಳಾದ ಆಹಾರ ಸಂಸ್ಕರಣಾ ವಸ್ತುಗಳು ಜನಪ್ರಿಯತೆ ಸಾಧಿಸುವುದು ತುಂಬಾ ದುಸ್ತರವಾಗಿದೆ. ಆಲೂಗಡ್ಡೆ ಸಂಸ್ಕರಣೆಯಲ್ಲಿ ನಿರ್ದಿಷ್ಟ ಗುರಿಯನ್ನು ಸಾಧಿಸಿದ್ದೇವೆ. ಇವುಗಳೇ ದೇಶದ 70ರಷ್ಟು ಸಂಸ್ಕರಣಾ ಕ್ಷೇತ್ರವನ್ನು ವ್ಯಾಪಿಸಿಕೊಂಡಿವೆ. ನಮ್ಮ ದೇಶದಲ್ಲಿ ಮೂರು ವಿಧದ ಪರಿಸರ ಹೊಂದಿದ್ದ ಬಹುತೇಕ ಎಲ್ಲ ವಿಧದ ಆಹಾರ ಪದಾರ್ಥಗಳನ್ನು ಬೆಳೆಯುತ್ತೇವೆ. ಆದರೆ ಅವುಗಳ ಕೊಯ್ಲಿನ ಏನು ಮಾಡಬೇಕು, ಹೇಗೆ ಮತ್ತು ಏನು ಮಾಡಿದರೆ ಸೂಕ್ತ ಎಂಬುದು ಬಹುತೇಕ ಜನರಿಗೆ ತಿಳಿದಿಲ್ಲ. ನಮ್ಮ ದೇಶದ ರೈತರು ಅಮಾಯಕರಾಗಿದ್ದು, ದಲ್ಲಾಳಿಗಳ ಮೋಸದ ಮಾತಿಗೆ ಬಹಳ ಬೇಗ ಬಲಿಯಾಗುತ್ತಾರೆ.
ಭಾರತವು ಆಹಾರ ಸಂಸ್ಕರಣೆ ಕ್ಷೇತ್ರದಲ್ಲಿ ಬಹಳಷ್ಟು ತೊಂದರೆಗಳನ್ನು ಎದುರಿಸುತ್ತಿದೆ. ಅವುಗಳೆಂದರೆ, ಕೃಷಿ ಕ್ಷೇತ್ರದಲ್ಲಿ ಬೆಳೆಯಲಾಗುತ್ತಿರುವ ಬಹುತೇಕ ಆಹಾರ ಉತ್ಪನ್ನಗಳು ಸಂಸ್ಕರಣೆಗೆ ಯೋಗ್ಯವಾದವುಗಳಲ್ಲ. ಉದಾಹರಣೆಗೆ ದ್ರಾಕ್ಷಿ, ಒಣದ್ರಾಕ್ಷಿಗೆ ಯೋಗ್ಯವಾದದ್ದು. ಅದರಿಂದ ಮದ್ಯ ತಯಾರಿಕೆಯಲ್ಲಿ ಯಶಸ್ಸು ಗಳಿಸುವುದು ಕಷ್ಟ. ಇಂತಹ ಸಮಸ್ಯೆಗಳನ್ನು ಕೃಷಿ ಹಾಗೂ ತೋಟಗಾರಿಕೆ ಬೆಳೆಗಳು ವಿಶ್ವವಿದ್ಯಾಲಯಗಳಲ್ಲಿ ಶ್ರಮಿಸುತ್ತಿರುವುದು. ಆಶದಾಯಕವಾಗಿದೆ. ಭಾರತವು ಹಳ್ಳಿಗಳ ದೇಶವಾಗಿದ್ದು ಇಲ್ಲಿನ ರೈತರು ಸಣ್ಣ ಹಿಡುವಳಿದಾರರಾಗಿದ್ದಾರೆ. ಬೆಳೆದ ಬೆಳೆಗಳ ಮಾರಾಟದ ಬಗ್ಗೆ ತಿಳಿವಳಿಕೆ ತುಂಬ ಕಡಿಮೆ. ಸಣ್ಣ ರೈತರು ಉತ್ಪನ್ನಗಳನ್ನು ಶೇಖರಿಸಿಕೊಂಡು ಸಂಸ್ಕರಣಾ ಘಟಕಕ್ಕೆ ಸಾಗಿಸುವುದು ಒಂದು ಸಾಹಸವೇ ಸರಿ. ಅದನ್ನು ನಾನು ಹೇಳಬೇಕಾಗಿಲ್ಲ, ದಾರಿಗಳೇ ಹೇಳುತ್ತವೆ. ಆದರೆ ಈಗ ಪರಿಸ್ಥಿತಿ ಸ್ವಲ್ಪ ಬದಲಾಗಿದೆ ಎಂದೇ ಹೇಳಬಹುದು.
‘ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ’ಯಿಂದಾಗಿ ಹಳ್ಳಿಗಳ ಈಗೀಗ ಡಾಂಬರೀಕರಣ ಸಾಧ್ಯವಾಗಿದೆ. ಸಂಸ್ಕರಣಾ ವೆಚ್ಚ ತಗ್ಗಿಸಲು ಕಚ್ಚಾ ವಸ್ತುಗಳನ್ನು ಕಡಿಮೆ ದರದಲ್ಲಿ ಖರೀದಿಸುತ್ತಿವೆ. ಆದರೆ ಆ ದರಕ್ಕೆ ತಕ್ಕಂತೆ ಕಚ್ಚಾ ವಸ್ತುಗಳ ಲಭ್ಯತೆ ಇಲ್ಲದಿರುವುದೂ ಒಂದು ಸಮಸ್ಯೆ.
ಹೀಗಾಗಿ ಆಹಾರ ಸಂಸ್ಕರಣೆ ಕ್ಷೇತ್ರದಲ್ಲಿ ಉದ್ಯಮ ಸ್ಥಾಪಿಸಲು ಯಾರೂ ಮುಂದೆ ಬರುತ್ತಿಲ್ಲ ಎಂಬುದು ಸತ್ಯ. ಭಾರತದ ನಾಗರಿಕ ಸಮಾಜದ ಆಹಾರ ಪದ್ಧತಿ ಹಾಗೂ ಅವರ ಆದಾಯವೂ ಸಹ ಆಹಾರ ಸಂಸ್ಕರಣೆಯ ಮೇಲೆ ಪರಿಣಾಮ ಬೀರುತ್ತದೆ.ಇನ್ನೂ ಸಹ ಶೇ.22ರಷ್ಟು ಜನ ರೇಖೆಗಿಂತ ಕೆಳಗಿದ್ದಾರೆಂದು ಅಂದಾಜಿಸಲಾಗಿದೆ. ಸಂಸ್ಕರಣೆಗೊಂಡ ಆಹಾರ ಉತ್ಪನ್ನಗಳ ಸ್ವಲ್ಪ ದುಬಾರಿಯಾಗಿರುವುದು ಸಹ ಒಂದು ಸಮಸ್ಯೆಯಾಗಿದೆ.
ಭಾರತದ ನೂರಾರು ಸವಾಲುಗಳ ನಡುವೆ ಕೆಲವು ಸಕಾರಾತ್ಮಕ ಅಂಶಗಳು ಆಹಾರ ಉತ್ಪನ್ನಗಳ ಸಂಸ್ಕರಣೆಗೆ ಪ್ರೋತ್ಸಾಹ ನೀಡುತ್ತವೆ. ಅವುಗಳೆಂದರೆ ಬದಲಾದ ಜೀವನ ಪದ್ಧತಿ, ಸಂಸ್ಕರಣೆಗೊಂಡ ಆಹಾರಗಳನ್ನು ಸುಲಭವಾಗಿ ಉಪಯೋಗಿಸಬಹುದಾದ್ದರಿಂದ ನಗರ ಜನರ ಜೀವನದಲ್ಲಿ ಅತಿಮುಖ್ಯವಾಗಿದೆ. ಸರಕಾರದ ಕಟ್ಟುನಿಟ್ಟಿನ ನೀತಿಗಳ ಸರಳೀಕರಣ ಸಂಸ್ಕರಣಾ ಕ್ಷೇತ್ರದಲ್ಲಿ ಬದಲಾವಣೆ ತರುವುದು ಬಹಳವಿದೆ. ಇದಕ್ಕೆ ನಮ್ಮ-ನಿಮ್ಮೆಲ್ಲರ ಸಹಕಾರ ಅತ್ಯಗತ್ಯವಾಗಿದೆ.
No comments:
Post a Comment