‘ಬಬ್ಬರ್ ಖಾಲ್ಸಾ ಪ್ರತ್ಯೇಕತಾವಾದಿ’
ವಾಷಿಂಗ್ಟನ್(ಪಿಟಿಐ): ಪ್ರತ್ಯೇಕವಾದಿ ಚಳವಳಿಗಳ ಮೂಲಕ ದೇಶದ ಹಿತಾಸಕ್ತಿಗೆ ಬೆದರಿಕೆಯೊಡ್ಡುತ್ತಿರುವ ಸಂಘನೆಗಳ ಪಟ್ಟಿಗೆ ಸಿಖ್ ಭಯೋತ್ಪಾದಕ ಸಂಘಟನೆ ಬಬ್ಬರ್ ಖಾಲ್ಸಾವನ್ನು ಅಮೆರಿಕ
ಸೇರಿಸಿದೆ. ಇಂತಹ ಸಂಘಟನೆಗಳು ಬಾಂಬ್ ದಾಳಿ ಮೊದಲಾದ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸುವ ಮೂಲಕ ಆರ್ಥಿಕ, ರಾಜಕೀಯ ಮತ್ತು ಸಾಮಾಜಿಕ ಹಿತಾಸಕ್ತಿಗಳ ಮೇಲೂ ಪರಿಣಾಮ ಬೀರುತ್ತಿವೆ ಎಂದಿದೆ.
ಸೇರಿಸಿದೆ. ಇಂತಹ ಸಂಘಟನೆಗಳು ಬಾಂಬ್ ದಾಳಿ ಮೊದಲಾದ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸುವ ಮೂಲಕ ಆರ್ಥಿಕ, ರಾಜಕೀಯ ಮತ್ತು ಸಾಮಾಜಿಕ ಹಿತಾಸಕ್ತಿಗಳ ಮೇಲೂ ಪರಿಣಾಮ ಬೀರುತ್ತಿವೆ ಎಂದಿದೆ.
ಸೋಲ್ (ಎಎಫ್‌ಪಿ): ಭ್ರಷ್ಟಾಚಾರ ಪ್ರಕರಣದಲ್ಲಿ ದಕ್ಷಿಣ ಕೊರಿಯಾದ ಮಾಜಿ ಅಧ್ಯಕ್ಷ ಲೀ ಮ್ಯುಂಗ್–ಬಾಕ್ ಅವರಿಗೆ 15 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.
76 ವರ್ಷದ ಬಾಕ್ ಅವರು 2008ರಿಂದ 2013ರ ತನಕ ದಕ್ಷಿಣ ಕೊರಿಯಾದ ಅಧ್ಯಕ್ಷರಾಗಿದ್ದರು. ಭ್ರಷ್ಟಾಚಾರ ಹಾಗೂ ಹಣ ದುರುಪಯೋಗಪಡಿಸಿಕೊಂಡ ಆರೋಪದಲ್ಲಿ ಸೋಲ್ ಜಿಲ್ಲಾ ನ್ಯಾಯಾಲಯವು 15 ವರ್ಷ ಜೈಲು ಮತ್ತು ₹ 85 ಕೋಟಿ (11.5 ಮಿಲಿಯನ್ ಡಾಲರ್) ದಂಡ ವಿಧಿಸಿದೆ.
‘ಎಲ್ಲ ವಿಚಾರಗಳನ್ನು ಪರಿಗಣಿಸಿ, ಅಪರಾಧಿಗೆ ಗರಿಷ್ಠ ಶಿಕ್ಷೆ ವಿಧಿಸುವುದು ಅನಿವಾರ್ಯ’ ಎಂದು ನ್ಯಾಯಾಧೀಶರು ತಿಳಿಸಿದರು.
ಅನಾರೋಗ್ಯದ ಕಾರಣ ಲೀ ಅವರು ಶುಕ್ರವಾರ ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ.
No comments:
Post a Comment