ಬೆಳಗಾವಿಯ ಮುಚ್ಚಂಡಿ ಗ್ರಾಮದಲ್ಲಿ ಹಳೆ ವಿದ್ಯಾರ್ಥಿಗಳು, ಎಸ್‌ಡಿಎಂಸಿ ಸದಸ್ಯರ ಸಾಹಸ
ಸರ್ಕಾರಿ ಶಾಲೆಯಲ್ಲಿ ಇಂಗ್ಲಿಷ್ ಕಲಿಕೆ

ಮುಚ್ಚಂಡಿ ಶಾಲೆಯ ಮಕ್ಕಳಿಗೆ ಇತ್ತೀಚೆಗೆ ಕಲಿಕಾ ಕಿಟ್ ವಿತರಿಸಲಾಯಿತು
ಎಂ. ಮಹೇಶ
ಬೆಳಗಾವಿ: ತಾಲ್ಲೂಕಿನ ಮುಚ್ಚಂಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಹಾಗೂ ಮರಾಠಿ ಮಾಧ್ಯಮ ಶಾಲೆ
ಯಲ್ಲಿ ಹಳೆಯ ವಿದ್ಯಾರ್ಥಿಗಳು ಹಾಗೂ ಎಸ್‌ಡಿಎಂಸಿ ಸದಸ್ಯರು ಎಲ್‌ಕೆಜಿ, ಯುಕೆಜಿ ತರಗತಿಗಳನ್ನು ಆರಂಭಿಸಿ ಮಕ್ಕಳನ್ನು ಆಕರ್ಷಿಸುತ್ತಿದ್ದಾರೆ.

ಕಾನ್ವೆಂಟ್ ಮಾದರಿಯಲ್ಲಿ ಇಂಗ್ಲಿಷ್ ಕಲಿಕೆಗೆ ಬೇಕಾದ ವ್ಯವಸ್ಥೆಯನ್ನು ಕಲ್ಪಿಸಿದ್ದಾರೆ. ಈ ಮೂಲಕ ತಮ್ಮ ಶಾಲೆಯನ್ನು ಸಬಲಗೊಳಿಸುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಇದು ಶಿಕ್ಷಣ ಇಲಾಖೆ ಅಧಿಕಾರಿಗಳ ಮೆಚ್ಚುಗೆಗೂ ಪಾತ್ರವಾಗಿದೆ.
ನಗರದಿಂದ 15 ಕಿ.ಮೀ. ದೂರದಲ್ಲಿ ಈ ಶಾಲೆ ಇದೆ. ವಿವಿಧೆಡೆ ಕೆಲಸ ಮಾಡುತ್ತಿರುವ ಹಳೆಯ ವಿದ್ಯಾರ್ಥಿಗಳು ದಾನಿಗಳಿಂದ ದೇಣಿಗೆ ಸಂಗ್ರಹಿಸಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯುವಂತೆ ಮಾಡಿದ್ದಾರೆ. ಇಲ್ಲಿ ಇಂಗ್ಲಿಷ್‌ನೊಂದಿಗೆ ಮಾತೃಭಾಷೆಯ (ಕನ್ನಡ ಹಾಗೂ ಮರಾಠಿ) ಶಿಕ್ಷಣವನ್ನೂ ನೀಡಲಾಗುತ್ತಿದೆ.
ಮೂರು ತರಗತಿಗಳು: ಕನ್ನಡ ಮಾಧ್ಯಮ
ದಲ್ಲಿ 40 ಮಕ್ಕಳು ಕಲಿಯುತ್ತಿದ್ದಾರೆ. ಇವರಿಗೆ ಒಬ್ಬರು ಕನ್ನಡ ಶಿಕ್ಷಕಿ, ಇನ್ನೊಬ್ಬರು ಇಂಗ್ಲಿಷ್ ಶಿಕ್ಷಕಿ ಹಾಗೂ ಸಹಾಯಕಿ ಇದ್ದಾರೆ. ಮರಾಠಿ ಮಾಧ್ಯಮದಲ್ಲಿ ಎಲ್‌ಕೆಜಿಯೊಂದಿಗೆ ಯುಕೆಜಿಯೂ ಇದೆ. ಇಲ್ಲೂ ಮರಾಠಿ, ಇಂಗ್ಲಿಷ್‌ಗೆ ತಲಾ ಒಬ್ಬರು ಶಿಕ್ಷಕಿಯರಿದ್ದಾರೆ. ಇಬ್ಬರು ಸಹಾಯಕಿಯರು ಇದ್ದಾರೆ. ಇಲ್ಲಿ 42 ಮಕ್ಕಳು ಕಲಿಯುತ್ತಿದ್ದಾರೆ. ಶಿಕ್ಷಕಿಯರು ಹಾಗೂ ಆಯಾಗಳ ವೇತನವನ್ನೂ ಹಳೇ ವಿದ್ಯಾರ್ಥಿಗಳೇ ಕೊಡುತ್ತಿದ್ದಾರೆ. ಊರಿನ ಶಾಲೆ ಉಳಿಸಿಕೊಳ್ಳಲು ನೂರಕ್ಕೂ ಹೆಚ್ಚು ಹಳೆಯ ವಿದ್ಯಾರ್ಥಿಗಳು ತಲಾ ₹1 ಸಾವಿರ ಮೂಲಧನ ನೀಡಿದ್ದಾರೆ.

ಮಾದರಿ ಕಾರ್ಯ: ‘ಈ ಶಾಲೆಯ ಹಳೆಯ ವಿದ್ಯಾರ್ಥಿಗಳು ಶ್ಲಾಘನೀಯ ಕೆಲಸ ಮಾಡಿದ್ದಾರೆ. ಅವರಿಗೆ ಎಸ್‌ಡಿ
ಎಂಸಿಯವರು ಬೆಂಬಲ ನೀಡಿ
ದ್ದಾರೆ. ಮಕ್ಕಳಿಗೆ ಸಮವಸ್ತ್ರ, ಶೂ, ಸಾಕ್ಸ್, ಪುಸ್ತಕ, ಲೇಖನ ಸಾಮಗ್ರಿ, ಬ್ಯಾಗ್, ಸ್ವೆಟರ್, ಬೆಲ್ಟ್‌ಗಳನ್ನು ಉಚಿತವಾಗಿ ಕೊಟ್ಟಿದ್ದಾರೆ. ಇದು ಸರ್ಕಾರಿ ಶಾಲೆಯೇ ಎನ್ನುವ ಅನುಮಾನ ಮೂಡುತ್ತದೆ. ಪೀಠೋ
ಪಕರಣ, ಎರಡು ಕಂಪ್ಯೂಟರ್
ಗಳ ವ್ಯವಸ್ಥೆಯನ್ನೂ ಮಾಡಿದ್ದಾರೆ. ಒಬ್ಬರು ಧ್ವನಿವರ್ಧಕ ದೇಣಿಗೆ ನೀಡಿದ್ದಾರೆ. ಮಕ್ಕಳು ಇಂಗ್ಲಿಷ್ ಕಲಿಯು
ತ್ತಿರುವುದನ್ನು, ಮಾತನಾಡುವುದನ್ನು ನೋಡಿದರೆ ಖುಷಿಯಾಗುತ್ತದೆ. ಇಲಾಖೆ
ಯಿಂದಲೂ ಪ್ರೋತ್ಸಾಹ ಕೊಡುತ್ತಿದ್ದೇವೆ’ ಎಂದು ಬಿಇಒ ಲೀಲಾವತಿ ಹಿರೇಮಠ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಾನ್ವೆಂಟ್‌ಗೆ ಮೊದಲ ವರ್ಷವೇ ಒಳ್ಳೆಯ ಪ್ರತಿಕ್ರಿಯೆ ಬಂದಿದೆ. ಕನ್ನಡ, ಮರಾಠಿ ಕಲಿಕೆಯೊಂದಿಗೆ ಇಂಗ್ಲಿಷ್ ಕೂಡ ಬೋಧಿಸಲಾಗುತ್ತಿದೆ. ಖಾಸಗಿ ಕಾನ್ವೆಂಟ್‌ಗೆ ಹೋಗುತ್ತಿದ್ದ ಕೆಲವು ಮಕ್ಕಳನ್ನೂ ಇಲ್ಲಿ ದಾಖಲಿಸಲಾಗಿದೆ. ಕಾನ್ವೆಂಟ್‌ಗಳ ರೀತಿಯೇ ಇಲ್ಲೂ ಉತ್ತಮ ಕಲಿಕೆ ಸಾಧ್ಯ ಎನ್ನುವುದನ್ನು ಪೋಷಕರಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಹಲವರ ಸಹಕಾರದಿಂದ ಇದು ಸಾಧ್ಯವಾಗಿದೆ' ಎಂದು ಹಳೆಯ ವಿದ್ಯಾರ್ಥಿಗಳ ಗುಂಪಿನ ಸಂತೋಷ್ ಚೌಗುಲೆ ಹಾಗೂ ರಾಜು ವಾಲಿಶೆಟ್ಟಿ
ಪ್ರತಿಕ್ರಿಯಿಸಿದರು.
ಪ್ರತಿಕ್ರಿಯಿಸಿದರು.
ವಾಟ್ಸ್ ಆ್ಯಪ್ ಗ್ರೂಪ್ ರಚನೆ
‘ಸರ್ಕಾರವೇ ಎಲ್ಲವನ್ನೂ ಮಾಡ
ಲಾಗದು. ಸ್ಥಳೀಯರು ಸಹಕರಿಸಿ
ದರೆ ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸಬಹುದು ಎನ್ನುವುದಕ್ಕೆ ಮುಚ್ಚಂಡಿ ಶಾಲೆ ಉದಾಹರಣೆಯಾಗಿದೆ. ಇದರಿಂದ ಪ್ರೇರಣೆ ಪಡೆದು ಗ್ರಾಮೀಣ ವಲಯದ ಪ್ರತಿ ಶಾಲೆಗಳ ಹಿರಿಯ ವಿದ್ಯಾರ್ಥಿಗಳ ಮೊಬೈಲ್ ಸಂಖ್ಯೆ ಸಂಗ್ರಹಿಸಿ ವಾಟ್ಸ್‌ಆ್ಯಪ್ ಗ್ರೂಪ್ ರಚಿಸುತ್ತಿದ್ದೇವೆ' ಎಂದು ಲೀಲಾವತಿ ಮಾಹಿತಿ ನೀಡಿದರು.

‘ಮುಚ್ಚಂಡಿಯಂತಹ
ಸಕ್ಸಸ್ ಸ್ಟೋರಿಗಳನ್ನು ಗ್ರೂಪ್
ಗಳಲ್ಲಿ ಹಂಚಿಕೊಳ್ಳಲಾಗುವುದು. ಸರ್ಕಾರಿ ಶಾಲೆಗಳ ಮಹತ್ವ ತಿಳಿಸಿ
ಕೊಡಲಾಗುವುದು. ಶಾಲೆ ಅಭಿವೃದ್ಧಿಗೆ ಮುಂದೆ ಬರುವಂತೆ ಪ್ರೇರೇಪಿಸಲಾಗುವುದು. ಈಗಾ
ಗಲೇ ಹಿಂಡಲಗಾ, ಬಸ್ತವಾಡ ಶಾಲೆಯ ಗ್ರೂಪ್ ರಚನೆಯಾಗಿದೆ’ ಎಂದು ವಿವರಿಸಿದರು.

No comments:
Post a Comment