ಪ್ರಸಕ್ತ ಸಾಲಿನ ನೊಬೆಲ್ ಶಾಂತಿ ಪ್ರಶಸ್ತಿ ಪ್ರಕಟವಾಗಿದ್ದು, ಲೈಂಗಿಕ ದೌರ್ಜನ್ಯ ವಿರುದ್ಧ ಹೋರಾಟ ನಡೆಸಿರುವ ಕಾಂಗೊದ ಸ್ತ್ರೀ ರೋಗ ತಜ್ಞ ಹಾಗೂ ಇರಾಕಿನ ಮಾನವ ಹಕ್ಕು ಹೋರಾಟಗಾರ್ತಿ ನಾಡಿಯಾ ಮುರಾದ್ ಅವರ ಮುಡಿಗೆ ಈ ಪ್ರತಿಷ್ಠಿತ ಗರಿ ಲಭಿಸಿದೆ.
ಡೆನಿಸ್ ಮುನ್ಚೆಜ್ ಅವರು ಖ್ಯಾತ ಸ್ತ್ರೀರೋಗ ತಜ್ಞರಾಗಿದ್ದು, ಲೈಂಗಿಕ ದೌರ್ಜನ್ಯ ಸಂತ್ರಸ್ತೆಯರಿಗೆ ನೆರವು ನೀಡುತ್ತಾ ಬಂದಿದ್ದಾರೆ. ಲೈಂಗಿಕ ದೌರ್ಜನ್ಯದಿಂದ ಮಹಿಳೆಯರ ರಕ್ಷಣೆಗೂ ಇವರು ಶ್ರಮಿಸಿದ್ದು, ಇವರ ಈ ಮಹಾನ್ ಕಾರ್ಯಕ್ಕೆೆ ಸೂಕ್ತ ಮನ್ನಣೆ ಸಿಕ್ಕಿದೆ.
ಇನ್ನು 2014ರಲ್ಲಿ ಇರಾಕ್‌ನಲ್ಲಿ ಐಸಿಸ್ ಉಗ್ರರ ಕೈಗೆ ಸೆರೆ ಸಿಕ್ಕಿ ನಿರಂತರವಾಗಿ ಅತ್ಯಾಚಾರಕ್ಕೆೆ ಒಳಗಾಗಿದ್ದ ಯಾಜಿದಿ ಮಹಿಳೆ ನಾಡಿಯಾ ಮುರಾದ್, ಉಗ್ರರ ಕೈಯಿಂದ ತಪ್ಪಿಸಿಕೊಂಡು ಬಂದು ಮಾನವ ಹಕ್ಕಿಗಾಗಿ ಹೋರಾಟ ಆರಂಭಿಸಿದ್ದರು.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್ ಅವರು ಕೊರಿಯಾದಲ್ಲಿ ಶಾಂತಿ ಸ್ಥಾಪನೆಗೆ ಶ್ರಮಿಸಿದ್ದಕ್ಕಾಗಿ ಈ ಬಾರಿಯ ನೊಬೆಲ್ ಶಾಂತಿ ಪ್ರಶಸ್ತಿ ರೇಸ್‌ನಲ್ಲಿದ್ದರು. ಇವರ ಜತೆಗೆ ದಕ್ಷಿಣ ಕೊರಿಯಾ ಅಧ್ಯಕ್ಷ ಮೂನ್ ಅವರೂ ಇದ್ದರು. ಇನ್ನು 20 ವರ್ಷಗಳ ನಂತರ ಎರಿಟ್ರಿಯಾ ಹಾಗೂ ಇಥಿಯೋಪಿಯಾ ರಾಷ್ಟ್ರಗಳ ಮಧ್ಯೆ ಸ್ನೇಹ ಸಂಬಂಧ ಬೆಳೆಸಿ ಸಾಮರಸ್ಯ ಮೂಡಿಸಲು ಶ್ರಮಿಸಿದ ಇಥಿಯೋಪಿಯಾ ಪ್ರಧಾನಿ ಅಬಿಯ್ ಅಹ್ಮದ್ ಅವರ ಹೆಸರೂ ಸಹ ಈ ಪ್ರಶಸ್ತಿಗಾಗಿ ಕೇಳಿ ಬಂದಿತ್ತು.

No comments:
Post a Comment