ದೈಹಿಕ ಸಮಸ್ಯೆಗಿಂತ ಪ್ರತಿ ದಿನ ಅಗತ್ಯಗಳೇ ಹೆಚ್ಚು ಸವಾಲು
ನವದೆಹಲಿ (ಪಿಟಿಐ): ದೇಶದಲ್ಲಿನ ಬಹುತೇಕ ಹಿರಿಯ ನಾಗರಿಕರು ಸಾಮಾಜಿಕ ಜೀವನ ಮತ್ತು ಪ್ರತಿ ದಿನದ ಅಗತ್ಯತೆಗಳ ಬಗ್ಗೆಯೇ ಹೆಚ್ಚು ಆತಂಕ ಎದುರಿಸುತ್ತಿದ್ದಾರೆ ಎನ್ನುವುದು ಸಮೀಕ್ಷೆಯಿಂದ ತಿಳಿದು ಬಂದಿದೆ.
ವಾರಾಂತ್ಯದಲ್ಲಿ ಸಾಮಾಜಿಕ ಚಟುವಟಿಕೆ ಅಥವಾ ಮನರಂಜನೆ ಚಟುವಟಿಕೆಯಲ್ಲಿ ಕಳೆಯುವ ಯುವ ಸಮುದಾಯ ತಮ್ಮ ಪೋಷಕರು ಅದೇ ರೀತಿಯ ಕಾರ್ಯಗಳಲ್ಲಿ ಭಾಗವಹಿಸುವುದನ್ನು ಇಷ್ಟಪಡುವುದಿಲ್ಲ ಎನ್ನುವ ಅಚ್ಚರಿಯ ಮಾಹಿತಿಯು ಗೊತ್ತಾಗಿದೆ.
‘ವೆಲ್‌ನೆಸ್ ಹೆಲ್ತ್ ಆ್ಯಂಡ್ ಯು’ ಸಹಭಾಗಿತ್ವದಲ್ಲಿ ’ಐವಿಎಚ್ ಸಿನಿಯರ್‌ಕೇರ್’ ಸಂಸ್ಥೆ ಈ ಬಗ್ಗೆ ಸಮೀಕ್ಷೆ ನಡೆಸಿದೆ. ’ಜುಗ್ ಜುಗ್ ಜಿಯೇಂಗೆ’ ಹೆಸರಿನಲ್ಲಿ ಹಿರಿಯ ನಾಗರಿಕರ ಆಶಯಗಳು ಮತ್ತು ಅವರ ಮಕ್ಕಳ ಕುರಿತು ಅಧ್ಯಯನ ನಡೆಸಲಾಗಿದೆ.
ಪೋಷಕರಿಗೆ ಬೇಕಾದ ಅಗತ್ಯತೆ
ಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ಮಕ್ಕಳು ವಿಫಲರಾಗಿದ್ದಾರೆ ಎನ್ನುವುದು ಸಮೀಕ್ಷೆ ಪ್ರಮುಖ ಅಂಶವಾಗಿದೆ.
ಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ಮಕ್ಕಳು ವಿಫಲರಾಗಿದ್ದಾರೆ ಎನ್ನುವುದು ಸಮೀಕ್ಷೆ ಪ್ರಮುಖ ಅಂಶವಾಗಿದೆ.
ಶೇಕಡ 67ರಷ್ಟು ಮಕ್ಕಳು ತಮ್ಮ ವೃದ್ಧ ಪೋಷಕರಿಂದ ದೂರವಿದ್ದರೂ, ಅವರ ಆರೋಗ್ಯ ಬಗ್ಗೆ ಹೆಚ್ಚು ಆತಂಕ ವ್ಯಕ್ತಪಡಿಸಿದ್ದಾರೆ. ಆದರೆ, ಕೇವಲ ಶೇಕಡ 18ರಷ್ಟು ಮಕ್ಕಳು ಮಾತ್ರ ಅವರ ಪೋಷಕರ ಸಾಮಾಜಿಕ ಜೀವನ ಮತ್ತು ಪ್ರತಿ ದಿನದ ಅಗತ್ಯತೆಗಳ ಬಗ್ಗೆ ಕಾಳಜಿ ವ್ಯಕ್ತಪಡಿಸಿದ್ದಾರೆ. ‘ಆರೋಗ್ಯ ಎನ್ನುವುದು ಮಾನಸಿಕ ಮತ್ತು ದೈಹಿಕ ಆರೋಗ್ಯ ಸ್ಥಿತಿಗೆ ಸಂಬಂಧಿಸಿದ್ದು.ಮಕ್ಕಳಿಂದ ದೂರವಾಗಿ ಸಾಮಾಜಿಕ ಚಟುವಟಿಕೆಗಳಿಲ್ಲದೆ ಜೀವನ ನಡೆಸುವುದು ಕಷ್ಟಸಾಧ್ಯವಾಗುತ್ತದೆ. ಒಂಟಿತನದ ವಾತಾವರಣದಿಂದ ಕೆಲವು ದಿನಗಳ ಬಳಿಕ ಖಿನ್ನತೆಗೆ ಒಳಗಾಗುತ್ತಾರೆ’ ಎಂದು ಹಿರಿಯ ನಾಗರಿಕರ ತಜ್ಞ ಡಾ.ಜಿ.ಎಸ್. ಗ್ರೆವಾಲ್ ತಿಳಿಸಿದ್ದಾರೆ.
ಸಮೀಕ್ಷೆ ವಿಧಾನ
l ಕಳೆದ ಐದು ವರ್ಷಗಳಿಂದ ಮಕ್ಕಳಿಂದ ದೂರವಾಗಿ ಒಂಟಿಯಾಗಿ
ವಾಸಿಸುತ್ತಿರುವವರ ಮುಖಾಮುಖಿ ಸಂದರ್ಶನ
ವಾಸಿಸುತ್ತಿರುವವರ ಮುಖಾಮುಖಿ ಸಂದರ್ಶನ
l ದೆಹಲಿ, ಪಂಜಾಬ್, ಹರಿಯಾಣ, ಚಂಡಿಗಡ, ಉತ್ತರ ಪ್ರದೇಶ, ಮಹಾರಾಷ್ಟ್ರ, ಆಂಧ್ರಪ್ರದೇಶ, ಪಶ್ಚಿಮ ಬಂಗಾಳ, ಕರ್ನಾಟಕ
ರಾಜ್ಯಗಳಲ್ಲಿ ತಲಾ ಒಂದು ಸಾವಿರ ಹಿರಿಯ ನಾಗರಿಕರ ಮಾಹಿತಿ ಸಂಗ್ರಹ
ರಾಜ್ಯಗಳಲ್ಲಿ ತಲಾ ಒಂದು ಸಾವಿರ ಹಿರಿಯ ನಾಗರಿಕರ ಮಾಹಿತಿ ಸಂಗ್ರಹ
l ಮಕ್ಕಳ ಜತೆ ಇ–ಮೇಲ್, ದೂರವಾಣಿ ಸಂದರ್ಶನ
ಸ್ನೇಹಿತರ ಭೇಟಿಗೆ ಆಸಕ್ತಿ
l ಶೇಕಡ 79ರಷ್ಟು ಮಂದಿ ಹೊರಗಿನ ಸಮಾಜಕ್ಕೆ ತೆರೆದುಕೊಳ್ಳಲು ಬಯಸುತ್ತಾರೆ. ತಮ್ಮ ಸ್ನೇಹಿತರು ಮತ್ತು ಸಂಬಂಧಿಕರನ್ನು ಭೇಟಿಯಾಗಲು ಇಚ್ಛಿಸುತ್ತಾರೆ.
l ಶೇಕಡ 10ರಷ್ಟು ಹಿರಿಯ ನಾಗರಿಕರಿಗೆ ಮಾತ್ರ ದೈಹಿಕ ಆರೋಗ್ಯ ಪ್ರಮುಖ ಸಮಸ್ಯೆಯಾಗಿ ಕಾಡುತ್ತಿದೆ. ಆದರೆ ಶೇಕಡ 66ರಷ್ಟು ಮಂದಿಗೆ ಸಾಮಾಜಿಕ ಜೀವನವೇ ಹೆಚ್ಚು ಸವಾಲಾಗಿದೆ.
l ಶೇಕಡ 96ರಷ್ಟು ಮಕ್ಕಳು ಹಿರಿಯ ನಾಗರಿಕರಾಗಿರುವ ತಮ್ಮ ಪೋಷಕರು ಮನೆಯಲ್ಲಿಯೇ ಇರಬೇಕು ಎಂದು ಬಯಸುತ್ತಾರೆ.
No comments:
Post a Comment